HOME » NEWS » Trend » TAMILNADU COP STOP AND ASKED MANGLORE BIKER TO CHASE BUS RETURN MEDICINES TO LADY WHO ACCIDENTALLY DROPPED THEM STG HG

ಮಹಿಳೆ ಬೀಳಿಸಿಕೊಂಡಿದ್ದ ಔಷಧಿಯನ್ನು ನೀಡಲು ಬಸ್‌ ಛೇಸ್‌ ಮಾಡುವಂತೆ ಬೈಕ್‌ ಸವಾರನಿಗೆ ಹೇಳಿದ ಪೊಲೀಸ್‌..!

ಮಂಗಳೂರು ಮೂಲದವರಾಗಿರುವ ಅರುಣ್ ಕುಮಾರ್ ಮೂಲ್ಯ ಅವರು ಬೆಂಗಳೂರಿನ ಐಟಿ ವೃತ್ತಿಪರಾಗಿದ್ದಾರೆ. ಇವರು ತಮಿಳುನಾಡಿನಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ತಡೆದರು.

news18-kannada
Updated:March 27, 2021, 1:13 PM IST
ಮಹಿಳೆ ಬೀಳಿಸಿಕೊಂಡಿದ್ದ ಔಷಧಿಯನ್ನು ನೀಡಲು ಬಸ್‌ ಛೇಸ್‌ ಮಾಡುವಂತೆ ಬೈಕ್‌ ಸವಾರನಿಗೆ ಹೇಳಿದ ಪೊಲೀಸ್‌..!
ಮಂಗಳೂರು ಮೂಲದವರಾಗಿರುವ ಅರುಣ್ ಕುಮಾರ್ ಮೂಲ್ಯ ಅವರು ಬೆಂಗಳೂರಿನ ಐಟಿ ವೃತ್ತಿಪರಾಗಿದ್ದಾರೆ. ಇವರು ತಮಿಳುನಾಡಿನಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ತಡೆದರು.
  • Share this:
ಬೈಕ್‌ ಸವಾರರನ್ನು ಪೊಲೀಸರು ಹಿಡಿದು ನಿಲ್ಲಿಸಿದರು ಎಂದರೆ ವಾಹನ ಸವಾರರಿಗೆ ಢವ ಢವ ಎಂದಿರುತ್ತೆ. ಯಾಕೆಂದರೆ, ಹೆಲ್ಮೆಟ್‌, ಮಾಸ್ಕ್‌, ಡಿಎಲ್‌, ವಾಹನದ ಎಲ್ಲ ದಾಖಲೆಗಳು ಇದ್ದರೂ ಯಾವುದಾದರೊಂದು ನೆಪ ಹೇಳಿ ದಂಡ ಹಾಕುತ್ತಾರೆಂಬುದು ಹಲವರ ಆಕ್ರೋಶ. ಈ ಹಿನ್ನೆಲೆ ಪೊಲೀಸರು ದೂರದಲ್ಲಿ ಕಂಡರೂ ಆ ರೋಡಲ್ಲಿ ಹೋಗೋದು ಬಿಟ್ಟು ಬೇರೆ ಮಾರ್ಗಗಳನ್ನ ಹಿಡಿಯುವ ಜನರೂ ಇದ್ದಾರೆ. ಇದೇ ರೀತಿ, ತಮಿಳುನಾಡಿನಲ್ಲೂ ಕರ್ನಾಟಕ ಮೂಲಕ ಮೋಟಾರು ವಾಹನ ಸವಾರನನ್ನು ಅಲ್ಲಿನ ಟ್ರಾಫಿಕ್‌ ಪೊಲೀಸರು ನಿಲ್ಲಿಸಿದ್ದಾರೆ. ಆದರೆ, ಪೊಲೀಸರು ಈ ರೀತಿ ಆತನನ್ನು ನಿಲ್ಲಿಸಿದ್ದಕ್ಕೆ ಒಳ್ಳೆಯ ಕಾರಣವಿದೆ. ಈ ಹಿನ್ನೆಲೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮಂಗಳೂರು ಮೂಲದವರಾಗಿರುವ ಅರುಣ್ ಕುಮಾರ್ ಮೂಲ್ಯ ಅವರು ಬೆಂಗಳೂರಿನ ಐಟಿ ವೃತ್ತಿಪರಾಗಿದ್ದಾರೆ. ಇವರು ತಮಿಳುನಾಡಿನಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ತಡೆದರು. ಬೈಕ್‌ ನಿಲ್ಲಿಸಿದ ನಂತರ, ಅದೇ ಮಾರ್ಗದಲ್ಲಿ ಸರ್ಕಾರಿ ಬಸ್‌ನಲ್ಲಿದ್ದ ಮಹಿಳೆಗೆ ಕೆಲವು ಔಷಧಿಗಳನ್ನು ಹಿಂದಿರುಗಿಸುವಂತೆ ಅರುಣ್ ಅವರನ್ನು ಕೋರಲಾಯಿತು. ಈ ಬಗ್ಗೆ ಯುಟ್ಯೂಬ್ ಚಾನೆಲ್ ಆ್ಯನ್ನಿ ಅರುಣ್‌ (AnnyArun) ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ನೀವು ಕರ್ನಾಟಕದವರೇ ಎಂದು ಪೊಲೀಸರು ಮೊದಲು ಅವರನ್ನು ಕೇಳಿದ್ದಾರೆ. ಇದಕ್ಕೆ ಹೌದು ಎಂದು ಬೈಕರ್ ಅರುಣ್‌ ಉತ್ತರಿದಿದ ಬಳಿಕ, ಅದೇ ಮಾರ್ಗದಲ್ಲಿ ಮುಂದೆ ಹೋಗುತ್ತಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತನ್ನ ಔಷಧಿ ಬಾಟಲಿಯನ್ನು ಬೀಳಿಸಿದ್ದಾರೆ ಎಂದು ಪೊಲೀಸ್‌ ಹೇಳಿದ್ದು, ಆ ಬಾಟಲಿಯನ್ನು ಹಿಂತಿರುಗಿಸಲು ಬಸ್‌ ಅನ್ನು ಛೇಸ್‌ ಮಾಡುವಂತೆಯೂ ಬೈಕರ್‌ಗೆ ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ
10 ವರ್ಷಗಳಿಂದ ತನ್ನ ಯುಟ್ಯೂಬ್ ಚಾನೆಲ್ ಮತ್ತು ದೇಶಾದ್ಯಂತ ಬೈಕ್‌ ಸವಾರಿ ಮಾಡುತ್ತಿರುವ ಅರುಣ್‌ ಹೇಳಿಕೊಂಡಿದ್ದಾರೆ.









View this post on Instagram






A post shared by AnnyArun (@anny.arun)






''ನಾನು ಪೊಲೀಸರು ತಡೆದ ವಿಡಿಯೋಗಳನ್ನು ಮಾಡುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಆದರೆ, ಇದು ತುಂಬಾ‘ಅನಿರೀಕ್ಷಿತ’! ಪೋಸ್ಟ್‌ ಮಾಡದೆ ತಡೆ ಹಿಡಿಯಲು ಆಗಲಿಲ್ಲ ” ಎಂದು ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋಗೆ ಡಿಸ್ಕ್ರಿಪ್ಷನ್‌ ನೀಡಲಾಗಿದೆ.

ಗುಜರಾತ್, ರಾಜಸ್ಥಾನ, ಲೇಹ್, ಲಡಾಖ್ ಮತ್ತು ಹಿಮಾಲಯದಾದ್ಯಂತ ಪ್ರವಾಸ ಮಾಡಿದ ಅರುಣ್, ತಾನು ಬೈಕಿಂಗ್ ಮಾಡುವಾಗಲೆಲ್ಲಾ ರಾಜ್ಯಗಳ ಜನರೊಂದಿಗೆ ತನ್ನ ಸಂವಹನಗಳನ್ನು ದಾಖಲಿಸುತ್ತಾನೆ ಮತ್ತು ಅದನ್ನು ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಅಪ್ಲೋಡ್‌ ಮಾಡುವುದಾಗಿ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ, ಟ್ರಾಫಿಕ್‌ ಪೊಲೀಸ್‌ ಹೇಳಿದಂತೆ ಆ ಬಸ್‌ ಅನ್ನು ಹಿಡಿಯಲು ಬೈಕನ್ನು ವೇಗವಾಗಿ ಓಡಿಸುವುದನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ. ಕೊನೆಗೆ ಅವರು ಬಸ್ ನಿಲ್ಲಿಸಿ ಬಾಟಲಿ ಬಾಟಲಿಯನ್ನು ಮಹಿಳೆಗೆ ಹಸ್ತಾಂತರಿಸುತ್ತಾನೆ.

ಘಟನೆ ನಡೆದಾಗ ಅರುಣ್ ತೆಂಕಶಿಗೆ ತೆರಳುತ್ತಿದ್ದ. ವಿಷಯಗಳ ಬಗ್ಗೆ ಜಾಗರೂಕರಾಗಿರಲು, ತಾನು ಪೊಲೀಸ್‌ ಜತೆಗಿನ ಮಾತುಕತೆಯನ್ನು ರೆಕಾರ್ಡ್ ಮಾಡಿದೆ. ಆದರೆ, ಇದು ತನಗೆ ಅಂತಹ ವಿಶಿಷ್ಟ ಅನುಭವವಾಗಿದೆ ಎಂದು ಕರ್ನಾಟಕ ಮೂಲದ ಅರುಣ್‌ ಹೇಳಿದರು.

ಇನ್ನು, ಈ ವಿಡಿಯೋಗೆ ಅನೇಕ ಜನರು ಉತ್ತೇಜಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ನಿಮಗೆ ಮತ್ತು ಪೊಲೀಸರಿಗೆ ಅಪಾರ ಗೌರವ… ಅರುಣ್ ..” ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. “ನೀವಿಬ್ಬರೂ (ನೀವು ಮತ್ತು ಪೊಲೀಸ್) ಮಾನವೀಯತೆಗೆ ನ್ಯಾಯ ಒದಗಿಸಿದ್ದಿರಿ. ಸಮಯೋಚಿತ ಸಹಾಯ. ನಿಮ್ಮಿಬ್ಬರಿಗೂ ಹ್ಯಾಟ್ಸ್ ಆಫ್, ” ಎಂದು ಮತ್ತೊಬ್ಬರು ಹೇಳಿದರು.



“ನಿಮ್ಮ ಬಗ್ಗೆ ಹೆಮ್ಮೆ ಅಣ್ಣ! ಆ ಪೊಲೀಸ್ ಕೂಡ ತುಂಬಾ ಪ್ರಾಮಾಣಿಕರು. ತಮಿಳುನಾಡಿನಿಂದ ನಿಮ್ಮ ಯೂಟ್ಯೂಬ್‌ ಚಾನೆಲ್‌ ಅನ್ನು ದೀರ್ಘಕಾಲದಿಂದ ನೋಡುತ್ತಿರುವ ವೀಕ್ಷಕ!'' ಎಂದು ಒಬ್ಬರು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
Published by: Harshith AS
First published: March 27, 2021, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories