Inspirational Story: ಹಸಿವು ಅನ್ನೋದು ಎಲ್ಲ ಕನಸುಗಳನ್ನು ನುಂಗ್ಬಿಡುತ್ತೆ! ಈ ಯುವತಿ ಕಥೆ ನೋಡಿ ಗೊತ್ತಾಗುತ್ತೆ..

ರೈತರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ಚೆನ್ನಾಗಿ ಓದಿ ನೀಟ್ ಅಂತಹ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಯಶಸ್ಸು ಪಡೆಯುತ್ತಾರೆ. ಆದರೆ ಹಣಕಾಸಿನ ಅನುಕೂಲತೆ ಇಲ್ಲದೆ ಅವರು ಓದನ್ನು ಅರ್ಧಕ್ಕೆ ನಿಲ್ಲಿಸಿ ಹೊಟ್ಟೆ ಪಾಡಿಗಾಗಿ ದುಡಿಯುವ ಪರಿಸ್ಥಿತಿ ಬಂದೊದಗುತ್ತದೆ.

ಥಂಗಾಪಾಚಿ

ಥಂಗಾಪಾಚಿ

  • Share this:
ಮೊನ್ನೆ ತಾನೇ ನಾವು ಒಬ್ಬ ಹಿರಿಯ ನಿವೃತ್ತ ಶಿಕ್ಷಕ(Teacher)ರೊಬ್ಬರು ತಮ್ಮ ಕನಸಿನ ಬೆನ್ನತ್ತಿ ನೀಟ್(NEET) ಪರೀಕ್ಷೆಯನ್ನು ಬರೆದು ಪಾಸಾ(Pass)ದರೂ ಸಹ ಅವರು ಪಡೆಯುವ ವೈದ್ಯಕೀಯ ಸೀಟು(Medical Seat) ಒಬ್ಬ ಬಡ ಬುದ್ದಿವಂತ ಯುವಕನಿಗೆ ಅದು ಸಿಕ್ಕರೆ ತುಂಬಾ ಒಳ್ಳೆಯದಾಗುತ್ತೆ ಎಂದು ಆಲೋಚಿಸಿ ಅವರಿಗೆ ಸಿಕ್ಕ ವೈದ್ಯಕೀಯ ಸೀಟನ್ನು ಬಿಟ್ಟುಕೊಡುವ ಆಲೋಚನೆಯಲ್ಲಿರುವುದನ್ನು ಒಂದು ಸುದ್ದಿಯಲ್ಲಿ ನಾವು ನೋಡಿದ್ದೆವು. ಹೀಗೆ ಅನೇಕ ಜನರಿಗೆ ಓದಲು ಸರಿಯಾಗಿ ಹಣ(Money)ಕಾಸು ಇರುವುದಿಲ್ಲ ಮತ್ತು ಚೆನ್ನಾಗಿ ಹಣ ಇದ್ದವರ ಮಕ್ಕಳು ಅಷ್ಟಾಗಿ ಓದುವುದಿಲ್ಲ. ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ಪಡೆದರೂ ಸಹ ಅವರ ಪೋಷಕ(Parents)ರ ಬಳಿ ಅವರನ್ನು ಮುಂದಕ್ಕೆ ಓದಿಸಲು ಹಣವಿರದೇ ಅರ್ಧಕ್ಕೆ ಓದನ್ನು ನಿಲ್ಲಿಸಿ ಬಿಡುವುದನ್ನು ನಾವು ನೋಡುತ್ತಿರುತ್ತೇವೆ ಮತ್ತು ಅನೇಕ ಘಟನೆಗಳನ್ನು ನಾವು ಕೇಳಿರುತ್ತೇವೆ.

ಅನೇಕ ಸಮಸ್ಯೆಗಳ ಮಧ್ಯೆ ಬೆಳೆದಿರುವ ಮಕ್ಕಳು ತುಂಬಾ ಚೆನ್ನಾಗಿ ಓದುವುದನ್ನು ನಾವು ಈಗಾಗಲೇ ನೋಡಿದ್ದೇವೆ. ರೈತರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ಚೆನ್ನಾಗಿ ಓದಿ ನೀಟ್ ಅಂತಹ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಯಶಸ್ಸು ಪಡೆಯುತ್ತಾರೆ. ಆದರೆ ಹಣಕಾಸಿನ ಅನುಕೂಲತೆ ಇಲ್ಲದೆ ಅವರು ಓದನ್ನು ಅರ್ಧಕ್ಕೆ ನಿಲ್ಲಿಸಿ ಹೊಟ್ಟೆ ಪಾಡಿಗಾಗಿ ದುಡಿಯುವ ಪರಿಸ್ಥಿತಿ ಬಂದೊದಗುತ್ತದೆ.

ಆರ್ಥಿಕ ಸಹಾಯ ಕೋರಿ ಸರ್ಕಾರಕ್ಕೆ ಮನವಿ!

ಆರ್ಥಿಕ ಅಡೆತಡೆಗಳ ಹೊರತಾಗಿಯೂ ನೀಟ್ ಅನ್ನು ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ಪಾಸ್ ಮಾಡಿದ ತಮಿಳುನಾಡಿನ ಮಧುರೈನ ಪನಮೂಪ್ಪಾನಪಾಟಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ತನ್ನ ಆರ್ಥಿಕ ಸಂಕಷ್ಟಗಳನ್ನು ತಗ್ಗಿಸಲು ಸಹಾಯ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಸಹಾಯ ಕೋರಿದ್ದಾಳೆ.

‘ಹೊಟ್ಟೆ ಪಾಡಿಗಾಗಿ ಓದುವದನ್ನು ನಿಲ್ಲಿಸಬೇಕಾಯಿತು’

"ಆದರೆ ನನ್ನ ಮನವಿಗೆ ಸಹಕರಿಸಿದ ಸರ್ಕಾರವು ಬರೀ ನನ್ನ ವೈದ್ಯಕೀಯ ಶಿಕ್ಷಣದ ಬೋಧನಾ ಶುಲ್ಕವನ್ನು ಮಾತ್ರ ಪಾವತಿಸುತ್ತಿದೆ ಮತ್ತು ವಸತಿ, ಊಟ ಮತ್ತು ಇನ್ನಿತರೆ ವೆಚ್ಚಗಳಿಗೆ ನನ್ನ ಬಳಿ ಅಥವಾ ನನ್ನ ಪೋಷಕರ ಬಳಿ ಹಣವಿಲ್ಲ. ಅಂತಹ ಸಂದರ್ಭದಲ್ಲಿ, ನಾನು ಮುಂದೆ ಓದುವುದನ್ನು ಇಲ್ಲಿಗೆ ಬಿಟ್ಟು ಹೊಟ್ಟೆ ಪಾಡಿಗಾಗಿ ನಾನು ಕೃಷಿಯನ್ನು ಪುನಾರಂಭ ಮಾಡಬೇಕಾಯಿತು" ಎಂದು ಥಂಗಾಪಾಚಿ ಹೇಳಿದ್ದಾಳೆ.

ನೀಟ್​ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಥಂಗಪಾಚಿ!

2021 ಮತ್ತು 2022ರ ಶೈಕ್ಷಣಿಕ ವರ್ಷದಲ್ಲಿ ನಡೆದ ನೀಟ್ ಪರೀಕ್ಷೆಗಳನ್ನು ಸತತವಾಗಿ ಎರಡು ವರ್ಷವೂ ಥಂಗಪಾಚಿ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಪಾಸ್ ಮಾಡಿದ್ದಾಳೆ. ಒಬ್ಬ ಬಡ ರೈತರಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೂ ಅವಳ ತಂದೆ ತನ್ನ ನಾಲ್ಕು ಮಕ್ಕಳಿಗೆ ತಕ್ಕ ಮಟ್ಟಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ. ಅವರಲ್ಲಿ, ಥಂಗಪಾಚಿ ಹಿರಿಯವಳು, ಅವಳು ವಿಕ್ರಮಂಗಲಮ್ ಕಲ್ಲರ್ ಪ್ರೌಢ ಶಾಲೆಯಿಂದ 2020ರಲ್ಲಿ ತನ್ನ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ ಮತ್ತು 2021 ಮತ್ತು 2022ರಲ್ಲಿ ನೀಟ್ ಪ್ರವೇಶ ಪರೀಕ್ಷೆಯನ್ನು ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಪಾಸ್ ಮಾಡಿದ್ದಾಳೆ.

ಶಿಕ್ಷಣ ವೆಚ್ಚ ಭರಿಸಲಾಗದೇ ಕೃಷಿ ಮಾಡುತ್ತಿರುವ ಥಂಗಾಪಾಚಿ!

ಥಂಗಾಪಾಚಿಗೆ ಕನ್ಯಾಕುಮಾರಿಯ ಮೂಕಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ಅವಕಾಶ ಸಿಕ್ಕಿತು, ಆದರೆ ಅದರ ಹೊರತಾಗಿಯೂ, ತನ್ನ ಕುಟುಂಬವು ತನ್ನ ಶಿಕ್ಷಣ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಅವಳು ಇನ್ನೂ ಹೊಲದಲ್ಲಿ ಕೃಷಿ ಮಾಡುತ್ತಿದ್ದಾಳೆ. ಆದ್ದರಿಂದಲೇ ಈ ಬಡ ವಿದ್ಯಾರ್ಥಿನಿ ತನ್ನ ವೈದ್ಯಕೀಯ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಆಗದೆ, ತನ್ನ ಓದನ್ನು ಅಲ್ಲಿಗೆ ನಿಲ್ಲಿಸಿ ಜಮೀನಿನಲ್ಲಿ ಕೃಷಿಕಳಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: