ಈ ಪ್ರೀತಿ (Love) ಅನ್ನೋದು ಒಂದು ರೀತಿಯಲ್ಲಿ ಮಾಯೆ ಇದ್ದಂತೆ. ಏಕೆಂದರೆ ಈ ಪ್ರೀತಿ ಹೇಗೆ? ಯಾವಾಗ? ಯಾರ ಜೊತೆ? ಆಗುತ್ತೆ ಅಂತ ಬಹುಶಃ ಯಾರಿಂದಲೂ ಸಹ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ನಾವು ಏಕೆ ಪ್ರೀತಿಸಿದ್ದೇವೆ ಮತ್ತು ಇಷ್ಟಪಟ್ಟಿದ್ದೇವೆ ಅಂತ ಹೇಳುವುದಕ್ಕೆ ಕಾರಣಗಳು ಇರುವುದಿಲ್ಲ. ದಿನ ಬೆಳಗಾದರೆ ಈ ಮಾಧ್ಯಮಗಳಲ್ಲಿ, ಮೊಬೈಲ್ಗಳಲ್ಲಿ (Mobile) ಪ್ರೀತಿ ಮಾಡಿದವರು ಮನೆ ಬಿಟ್ಟು ಓಡಿ ಹೋದ ಸುದ್ದಿ, ಪ್ರೀತಿಗಾಗಿ ನಡೆದ ಕೊಲೆಗಳ ಬಗ್ಗೆ, ಪ್ರೀತಿಗಾಗಿ ತಮ್ಮ ಹೆತ್ತವರನ್ನೆ ಬಿಟ್ಟು ಬಂದಿರುವ ಅನೇಕ ರೀತಿಯ ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ.
ಭಾರತೀಯ ಸಂಪ್ರದಾಯದಂತೆ ತಮಿಳುನಾಡು ಯುವಕನನ್ನು ಮದುವೆಯಾದ ಮೆಕ್ಸಿಕನ್ ವಧು
ಎಷ್ಟೋ ವಿದೇಶಿ ಮಹಿಳೆಯರಿಗೆ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯ ಇಷ್ಟವಾಗಿ, ಇಲ್ಲಿನ ಯುವಕರನ್ನು ಪ್ರೀತಿಸಿ ಮದುವೆಯಾಗಿರುವುದನ್ನು ನಾವು ನೋಡಿರುತ್ತೇವೆ. ಹಾಗೆಯೇ ಅನೇಕ ವಿದೇಶಿಯರು ಭಾರತ ದೇಶವೇ ಬೆಸ್ಟ್ ಅಂತ ಬಂದು ಇಲ್ಲೇ ನೆಲೆಸಿರುವ ಉದಾಹರಣೆಗಳು ಬೇಕಾದಷ್ಟಿವೆ. ಆದರೆ ಇಲ್ಲೊಂದು ಮೆಕ್ಸಿಕನ್ ಮಹಿಳೆ ಭಾರತದ ಸಂಪ್ರದಾಯದಂತೆಯೇ ತಮಿಳುನಾಡು ಯುವಕನ್ನು ಮದುವೆಯಾಗಿದ್ದಾಳೆ.
ತಮಿಳು ಯುವಕನನ್ನು ಪ್ರೀತಿಸಿ ಮದುವೆಯಾದ ಮೆಕ್ಸಿಕೋದ ಮಹಿಳೆ
ದೂರದ ಮೆಕ್ಸಿಕೋ ದೇಶದ ಮಹಿಳೆಯೊಬ್ಬರು ತಮಿಳುನಾಡಿನ ಯುವಕನನ್ನು ಮನಸಾರೆ ಪ್ರೀತಿ ಮಾಡಿ, ಈಗ ತನ್ನ ಕುಟುಂಬದೊಂದಿಗೆ ತಮಿಳುನಾಡಿನಲ್ಲಿ ತನ್ನ ಗೆಳೆಯ ಸಾವಿತ್ರಿ ರಾಜ್ ಅವರನ್ನು ಮದುವೆಯಾಗಲು ತನ್ನ ದೇಶದಿಂದ ಬಂದಿದ್ದರು.
ಇದನ್ನೂ ಓದಿ: ನಾಗರ ಹಾವಿನ ತಲೆಯ ಮೇಲೆ ನಾಗಮಣಿ! ಇದು ಕಂಡಿದ್ದೆಲ್ಲಿ?
ತಮಿಳುನಾಡಿನ ಕುಪ್ಪುಚಿಪುದೂರ್ ಪೊಲ್ಲಾಚಿ ನಿವಾಸಿ ಸಾವಿತ್ರಿ ರಾಜ್ ಮೆಕ್ಸಿಕೋದಲ್ಲಿ ಓದುತ್ತಿದ್ದಾಗ ಪರಿಚಯವಾದ ಮೆಕ್ಸಿಕನ್ ಮಹಿಳೆಯನ್ನು ಮದುವೆಯಾಗಿದ್ದಾರೆ. ಕುಪ್ಪುಚಿಪುದೂರ್ ಪೊಲ್ಲಾಚಿಯ ಚಹಾ ಅಂಗಡಿ ಮಾಲೀಕನ ಮಗನಾದ ರಾಜ್, ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಮೆಕ್ಸಿಕೋದಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದನು. ಅಲ್ಲಿ ಕೆಲಸ ಮಾಡುವಾಗ ಅವರು ಡೇನಿಯೆಲಾ ಅವರನ್ನು ಪ್ರೀತಿಸಿದರು, ಅದರ ನಂತರ ಈ ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದರಂತೆ.
ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಇಷ್ಟಪಟ್ಟ ವಿದೇಶಿ ಸೊಸೆ
ಸಾಂಪ್ರದಾಯಿಕ ಭಾರತೀಯ ವಿವಾಹಗಳ ಮೇಲಿನ ಪ್ರೀತಿಯು ವಧು ಡೇನಿಯೆಲಾ ಮತ್ತು ಅವಳ ಕುಟುಂಬವನ್ನು ಸಾವಿತ್ರಿ ರಾಜ್ ಅವರ ಗ್ರಾಮಕ್ಕೆ ಕರೆದುಕೊಂಡು ಬಂದಿತು. ಇದನ್ನು ನೋಡಿದ ಇಡೀ ಗ್ರಾಮದ ಜನತೆಯು ತುಂಬಾನೇ ಸಂತೋಷಪಟ್ಟರು. ಅಷ್ಟೇ ಅಲ್ಲದೆ ಈ ಮದುವೆಯನ್ನು ಅಷ್ಟೇ ಅದ್ದೂರಿಯಾಗಿ ರಾಜ್ ಕುಟುಂಬದವರು ಗ್ರಾಮಸ್ಥರ ಜೊತೆಗೂಡಿ ನಡೆಸಿಕೊಟ್ಟರು.
ವಧುವಿನ ಕುಟುಂಬವು ಮದುವೆಯ ಸಮಯದಲ್ಲಿ ಸಾಂಪ್ರದಾಯಿಕ ತಮಿಳು ಆಚರಣೆಗಳನ್ನು ಅನುಸರಿಸಿತು ಮತ್ತು ತಮಿಳುನಾಡಿನ 'ನಳಂಗು' ಸಂಪ್ರದಾಯದಲ್ಲೂ ಭಾಗವಹಿಸಿದರು. ಈ ದಂಪತಿಗಳು ಹೂಮಾಲೆಗಳನ್ನು ಬದಲಾಯಿಸಿಕೊಂಡರು ಮತ್ತು ತಮಿಳು ಮೇಳಂಗೆ ಸ್ಟೆಪ್ಸ್ ಸಹ ಹಾಕಿದ್ರಂತೆ. ಇವುಗಳ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಈ ಹಿಂದೆ ಸಹ ಇಂತಹದೇ ಒಂದು ಮದುವೆ ನಡೆದಿತ್ತು
ಕಳೆದ ವರ್ಷ ಜರ್ಮನಿಯ ಮಹಿಳೆಯೊಬ್ಬರು ಬಿಹಾರದ ನವಾಡಾ ಮೂಲದ ವ್ಯಕ್ತಿಯನ್ನು ದೇಸಿ ರೀತಿಯಲ್ಲಿ ವಿವಾಹವಾಗಿದ್ದರು. ಅವರ ಕನಸಿನ ವಿವಾಹ ಸಮಾರಂಭದ ಸುಂದರವಾದ ಫೋಟೋಗಳು ಆನ್ಲೈನ್ ನಲ್ಲಿ ತುಂಬಾನೇ ವೈರಲ್ ಆಗಿದ್ದವು.
ಲಾರಿಸಾ ಬೆಲ್ಚ್ ಎಂಬ ಹೆಸರಿನ ಜರ್ಮನಿ ಮಹಿಳೆಯೊಬ್ಬರು ಬಿಹಾರದ ನವಾಡಾ ಮೂಲದ ಸತ್ಯೇಂದ್ರ ಕುಮಾರ್ ಅವರನ್ನು ವಿವಾಹವಾಗಿದ್ದರು. ಈ ಇಬ್ಬರೂ ಸ್ವೀಡನ್ ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿದ್ದಾಗ ಪ್ರೀತಿ ಹುಟ್ಟಿತ್ತಂತೆ. ಈ ಇಬ್ಬರು ಆಸೆ ಪಟ್ಟಂತೆ ಭಾರತದಲ್ಲಿಯೇ ಸಂಪ್ರದಾಯಿಕವಾಗಿ ಮದುವೆಯಾದರು.
ಲಾರಿಸಾ ಭಾರತೀಯ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿದ್ದರು. ಏಕೆಂದರೆ ಜರ್ಮನಿ ಮತ್ತು ಭಾರತದ ಸಂಸ್ಕೃತಿಗಳ ನಡುವೆ ತುಂಬಾನೇ ವ್ಯತ್ಯಾಸವಿದೆ ಅಂತ ಅವರು ಹೇಳಿದ್ದರು. ಅವರು ಸಹ ಭಾರತೀಯ ಆಚರಣೆಗಳು ಮತ್ತು ಪದ್ಧತಿಗಳ ಪ್ರಕಾರ ಮದುವೆಯಾಗಲು ಬಯಸಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ