Viral Video: ಮಾರ್ಜಾಲಕ್ಕೂ ಸೀಮಂತ ಮಾಡಿಸಿಕೊಳ್ಳುವ ಯೋಗ, ತಮಿಳುನಾಡಿನಲ್ಲಿ ಒಂದು ವಿಚಿತ್ರ ಕಾರ್ಯಕ್ರಮ
Cat baby shower: ಒಬ್ಬ ಮಹಿಳೆಯ ಗರ್ಭಿಣಿಯಾದಾಗ ಹೇಗೆ ಆಕೆಗೆ ಹೊಸ ಬಟ್ಟೆ ಹೊಸ ಒಡವೆ ಹಾಕಿ ಅಲಂಕಾರ ಮಾಡಲಾಗುತ್ತದೋ ಅದೇ ರೀತಿ ತಮಿಳುನಾಡಿನ ಉಮಾಮಹೇಶ್ವರನ್ ಅವರು ತಮ್ಮ ಮನೆಯಲ್ಲಿನ ಬೆಕ್ಕುಗಳಿಗೂ ಅಲಂಕಾರ ಮಾಡಿದ್ದರು. ಸಂಪ್ರದಾಯಬದ್ಧವಾಗಿ ಪೆಟ್ ಕ್ಲಿನಿಕ್ ಒಂದರಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ , ಸೀಮಂತದ ದಿನ ಹೆಣ್ಮಕ್ಕಳನ್ನು ಅಲಂಕರಿಸುವಂತೆ ಈ ಬೆಕ್ಕುಗಳಿಗೂ ಹೊಸ ಬಟ್ಟೆ ತೊಡಿಸಲಾಗಿತ್ತು
ಮನೆಯಲ್ಲಿ ಸಾಕುವ ಬೆಕ್ಕು(Cat) ನಾಯಿ(Dog) ಹಸು(Cow) ಎಲ್ಲರಿಗೂ ಪ್ರೀತಿ(Love).. ಹೀಗಾಗಿ ಬಹುತೇಕ ಮನೆಗಳಲ್ಲಿ ಸಾಕು ಪ್ರಾಣಿಗಳಾದ ಬೆಕ್ಕು ನಾಯಿ ಹಸುವನ್ನು ಮನೆಯ ಮಕ್ಕಳಂತೆ(Childrens) ಸಾಕುತ್ತಾರೆ..ಸಾಕುಪ್ರಾಣಿಗಳಿಗೆ ಮನೆಯಲ್ಲಿನ ಎಲ್ಲಾ ಸದಸ್ಯರಂತೆ ಬೇಕಾಗುವ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತದೆ.. ಅದರಲ್ಲೂ ಹಸು ನಾಯಿ-ಬೆಕ್ಕು ಹೆಣ್ಣಾಗಿದ್ದು ಒಂದು ವೇಳೆ ಅವು ಗರ್ಭಿಣಿಯಾದರೆ(Pregnant) ಮನುಷ್ಯರಿಗೆ(Human) ಮಾಡುವಂತೆ ಸೀಮಂತ(Baby Shower)ಮಾಡುವ ಅನೇಕ ಉದಾಹರಣೆಗಳು ಕೂಡ ಇವೆ.. ಹಸುವನ್ನು ಹಿಂದೂ ಧರ್ಮದಲ್ಲಿ ದೇವರಂತೆ ಕಾಣುವುದರಿಂದ ಹಸು ಗರ್ಭಿಣಿಯಾದಾಗ ಅದಕ್ಕೆ ಸಕಲ ರೀತಿಯ ಪೂಜೆ ಸಲ್ಲಿಕೆ ಮಾಡಲಾಗುತ್ತದೆ.. ಆದರೆ ತಮಿಳುನಾಡಿನಲ್ಲಿ ಕುಟುಂಬವೊಂದು ತಾವು ಮುದ್ದಾಗಿ ಸಾಕಿದ್ದ ಬೆಕ್ಕು ಗರ್ಭಿಣಿಯಾಗಿದೆ ಎನ್ನುವ ಕಾರಣಕ್ಕೆ ಅದ್ದೂರಿಯಾಗಿ ಸೀಮಂತ ಮಾಡಿದ್ದಾರೆ.
ಮಾರ್ಜಾಲಕ್ಕೆ ಸೀಮಂತ ಮಾಡಿ ನೆಂಟರಿಷ್ಟರಿಗೆ ಊಟ ಬಡಿಸಿ ಸಂಭ್ರಮ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಉಮಾಮಹೇಶ್ವರ ಎಂಬುವವರು ತಮ್ಮ ಮನೆಯಲ್ಲಿ ಎರಡು ಪರ್ಷಿಯನ್ ಬೆಕ್ಕುಗಳನ್ನು ಸಾಕಿದ್ದಾರೆ.. ಆ ಬೆಕ್ಕುಗಳಿಗೆ ಮುದ್ದಾಗಿ ಕ್ಷೀರ ಹಾಗೂ ಐರಿಶ್ ಎನ್ನುವ ಹೆಸರುಗಳನ್ನು ಕೂಡ ಇಟ್ಟಿದ್ದಾರೆ. ಈಗ ಎರಡು ಬೆಕ್ಕುಗಳು ಗರ್ಭಿಣಿಯಾಗಿದ್ದು ಮರಿಹಾಕಲು ಸಿದ್ಧವಾಗಿದೆ.. ಹೀಗಾಗಿಯೇ ಉಮಾಮಹೇಶ್ವರನ ಅವರ ಕುಟುಂಬ ಬೇಕುಗಳಿಗೆ ಮಹಿಳೆಯರಿಗೆ ಸೀಮಂತ ಮಾಡುವಂತೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
ಒಬ್ಬ ಮಹಿಳೆಯ ಗರ್ಭಿಣಿಯಾದಾಗ ಹೇಗೆ ಆಕೆಗೆ ಹೊಸ ಬಟ್ಟೆ ಹೊಸ ಒಡವೆ ಹಾಕಿ ಅಲಂಕಾರ ಮಾಡಲಾಗುತ್ತದೋ ಅದೇ ರೀತಿ ತಮಿಳುನಾಡಿನ ಉಮಾಮಹೇಶ್ವರನ್ ಅವರು ತಮ್ಮ ಮನೆಯಲ್ಲಿನ ಬೆಕ್ಕುಗಳಿಗೂ ಅಲಂಕಾರ ಮಾಡಿದ್ದರು. ಸಂಪ್ರದಾಯಬದ್ಧವಾಗಿ ಪೆಟ್ ಕ್ಲಿನಿಕ್ ಒಂದರಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ , ಸೀಮಂತದ ದಿನ ಹೆಣ್ಮಕ್ಕಳನ್ನು ಅಲಂಕರಿಸುವಂತೆ ಈ ಬೆಕ್ಕುಗಳಿಗೂ ಹೊಸ ಬಟ್ಟೆ ತೊಡಿಸಲಾಗಿತ್ತು. , ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಸರ ಹಾಕಿ ಶೃಂಗಾರ ಮಾಡಲಾಗಿತ್ತು. ಸೀಮಂತದ್ದು ತಯಾರಿಸುವಂತೆ ಬೆಕ್ಕುಗಳಿಗೂ ವಿಶೇಷ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು.
ಇನ್ನುಸೀಮಂತ ನಡೆದ ಸ್ಥಳವನ್ನೂ ಕೂಡ ಬೆಲೂನ್ಗಳನ್ನು ಕಟ್ಟಿ ಲೈಟಿಂಗ್ಗಳನ್ನು ಹಾಕಿ ಚೆಂದಗೊಳಿಸಲಾಗಿದೆ. ಜೊತೆಗೆ ತರಹೇವಾರಿ ತಿನಿಸು ಹಣ್ಣು ಹಂಪಲುಗಳನ್ನು ತಂದಿರಿಸಿದ್ದಾರೆ. ಬಿಳಿ ಹಾಗೂ ಕಪ್ಪು ಬಣ್ಣದ ಈ ಎರಡು ಬೆಕ್ಕುಗಳಿಗೆ ಕೆಂಪು ಬಣ್ಣದ ಹೂವಿನ ಮಾಲೆಯನ್ನು ಹಾಕಿದ್ದಾರೆ. ಬಳಿಕ ಈ ಎರಡು ಬೆಕ್ಕುಗಳನ್ನು ತಮಗೆ ಬೇಕಾದನ್ನು ತಿನ್ನಲು ಬಿಟ್ಟಿದ್ದಾರೆ.
ಬಂಧುಮಿತ್ರರ ಸಮ್ಮುಖದಲ್ಲಿ ನಡೆದ ಸೀಮಂತ ಕಾರ್ಯಕ್ರಮ
ಸಾಮಾನ್ಯವಾಗಿ ಬೆಕ್ಕುಗಳ ಗರ್ಭಾವಸ್ಥೆಯ ಅವಧಿ 62 ದಿನಗಳಾಗಿವೆ.. ಸದ್ಯ ಈಗ ಉಮಾಮಹೇಶ್ವರನ ಅವರು ಸೀಮಂತ ಮಾಡಿರುವ ಬೆಕ್ಕುಗಳಿಗೆ ಕ್ರಮವಾಗಿ 50 ಹಾಗೂ 35ನೇ ದಿನವಾಗಿದೆ.. ಹೀಗಾಗಿ ಪೆಟ್ ಕ್ಲಿನಿಕ್ ವೈದ್ಯರು ಸೇರಿದಂತೆ ಉಮಾಮಹೇಶ್ವರನ ಅವರ ಕುಟುಂಬಸ್ಥರು ಬಂಧುಮಿತ್ರರ ಸಮ್ಮುಖದಲ್ಲಿ ಎರಡು ಬೆಕ್ಕುಗಳಿಗೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಗಿದೆ.
ಇನ್ನು ಈ ಅಪರೂಪದ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಉಮಾ ಮಹೇಶ್ವರನ್, ಮನುಷ್ಯರಿಗೆ ಮಾಡಿದಂತೆ ನಾವು ನಮ್ಮಬೆಕ್ಕುಗಳಿಗೆ ಸೀಮಂತ ಮಾಡಿದ್ದೇವೆ. ಈ ಎರಡು ಬೆಕ್ಕುಗಳು ನಮ್ಮ ಮನೆಯ ಸದಸ್ಯರಯ. ಕ್ಲಿನಿಕ್ನಲ್ಲಿ ಡಾಕ್ಟರ್ಗಳ ಜೊತೆಗೂಡಿ ಈ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆವು ಎಂದು ಹೇಳಿದರು. ಅಲ್ಲದೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಅವರು ಸಂತಸ ಕೂಡ ವ್ಯಕ್ತ ಪಡಿಸಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ