Metaverseನಲ್ಲಿ ಮದುವೆ Reception ಮಾಡಲು ತಮಿಳುನಾಡು ಜೋಡಿ ಸಿದ್ಧತೆ! ವಿಡಿಯೋ ನೋಡಿ...

ವಿವಾಹದ ಆರತಕ್ಷತೆಯಲ್ಲಿ, ಅತಿಥಿಗಳು ತಮ್ಮ ಅವತಾರ್‌ಗಳಿಗಾಗಿ ಭಾರತೀಯ ಸಾಂಪ್ರದಾಯಿಕದಿಂದ ಪಾಶ್ಚಿಮಾತ್ಯ ಉಡುಪುಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಜಿಪೇ ಇಲ್ಲವೇ ಕ್ರಿಪ್ಟೋ ಮೂಲಕ ದಂಪತಿಗಳಿಗೆ ಉಡುಗೊರೆ ನೀಡಬಹುದು

ತಮಿಳುನಾಡಿನ ದಂಪತಿ

ತಮಿಳುನಾಡಿನ ದಂಪತಿ

  • Share this:
ಕೋವಿಡ್-19 ರನಂತರ ಅನೇಕ ಸಮಾರಂಭಗಳು(Ceremonies) ಸೀಮಿತ ಜನರನ್ನು ಒಳಗೊಂಡು ಇದೀಗ ಬರೇ ಮನೆಗಳಿಗೆ ಮಾತ್ರವೇ ಸೀಮಿತವಾಗಿದೆ. ಮೊದಲೆಲ್ಲಾ 1000 ಜನರನ್ನೊಳಗೊಂಡ ಎಷ್ಟೋ ಸಮಾರಂಭಗಳು ಹಾಲ್‌ಗಳಲ್ಲಿ ನಡೆಯುತ್ತಿತ್ತು. ಇದೀಗ ನಿಬಂಧನೆಗಳಿಗೆ (Regulations) ಅನುಸಾರವಾಗಿ ಅದೆಷ್ಟೋ ಕಾರ್ಯಕ್ರಮಗಳು ನಡೆಯುತ್ತಿದ್ದು ಅದೆಷ್ಟೋ ಸ್ಥಳಗಳಲ್ಲಿ ಆನ್‌ಲೈನ್‌ ವಿವಾಹಗಳು ನಡೆದಿದ್ದು ಕಾನ್ಫರೆನ್ಸ್ ಸಂವಾದಗಳಲ್ಲಿ ವಿವಾಹಗಳು ನಡೆದಿದೆ. ಇದೀಗ ಇನ್ನೂ ಸ್ವಲ್ಪ ಮುಂದುವರೆದ ತಮಿಳುನಾಡಿನ ದಂಪತಿಗಳು (Tamil Nadu couples) ವಿವಾಹ ಆರತಕ್ಷತೆಯನ್ನು ಮೆಟಾವರ್ಸ್‌ನಲ್ಲಿ(Metaverse) ನಡೆಸಲು ಸಿದ್ಧರಾಗಿದ್ದಾರೆ.

ಮೆಟಾವರ್ಸ್‌ನಲ್ಲಿ ಆರತಕ್ಷತೆ:

ತಮಿಳುನಾಡಿನ ದಂಪತಿಗಳು ತಮ್ಮ ವಿವಾಹದ ಆರತಕ್ಷತೆಯನ್ನು ಮೆಟಾವರ್ಸ್‌ನಲ್ಲಿ ನಡೆಸಲು ಸಿದ್ಧರಾಗಿದ್ದಾರೆ, ಪ್ರಪಂಚದಾದ್ಯಂತದ ಅತಿಥಿಗಳು ವಾಸ್ತವಿಕವಾಗಿ ಲಾಗ್ ಇನ್ ಆಗಲಿದ್ದಾರೆ. ದಿನೇಶ್ ಎಸ್‌ಪಿ ಮತ್ತು ಜನಗನಂದಿನಿ ರಾಮಸ್ವಾಮಿ ಅವರ ರಿಸೆಪ್ಶನ್ ಹಾಗ್ವಾರ್ಟ್ಸ್ ಕ್ಯಾಸಲ್‌ನ ವರ್ಚುವಲ್ ಹೆಡ್‌ಕ್ವಾಟರ್‌ನಲ್ಲಿ ನಡೆಯುತ್ತದೆ ನಿಖರವಾಗಿ ಹೇಳಬೇಕೆಂದರೆ ಇದು ಮೆಟಾವರ್ಸ್‌ನ ಊಟದ ಕೋಣೆ ಎಂದೇ ಹೇಳಬಹುದು.

ವರ್ಚುವಲ್ ಅವತಾರ್ ಹೇಗೆ ಭೇಟಿಯಾಗುತ್ತವೆ:

ದಂಪತಿಗಳ ವರ್ಚುವಲ್ ಅವತಾರ್ ಮೆಟಾವರ್ಸ್ ನಿಗದಿತ ಸ್ಥಳದಲ್ಲಿ ಅತಿಥಿಗಳನ್ನು ಭೇಟಿಯಾಗುತ್ತವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ, ಈ ಕಾರ್ಯಕ್ರಮದಲ್ಲಿ ವಧುವಿನ ದಿವಂಗತ ತಂದೆಯ ಅವತಾರ್‌ ಅಧ್ಯಕ್ಷತೆ ವಹಿಸುತ್ತದೆ. ಫೆಬ್ರವರಿ 6 ರಂದು ದಂಪತಿಗಳು ವಿವಾಹವಾಗಲಿದ್ದಾರೆ.

ಇದನ್ನೂ ಓದಿ: Wedding Insurance: ಮದುವೆ ಕ್ಯಾನ್ಸಲ್ ಆದ್ರೆ ಡೋಂಟ್ ವರಿ, ಖರ್ಚಾದ ಅಷ್ಟೂ ಹಣ ವಾಪಸ್ ಕೊಡುತ್ತೆ ವಿಮಾ ಕಂಪೆನಿ!

ಜನಗನಂಧಿನಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದರೆ, ದಿನೇಶ್ ಐಐಟಿ ಮದ್ರಾಸ್‌ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ಶಿವಲಿಂಗಪುರಂ ಗ್ರಾಮದಲ್ಲಿ ಇವರ ಮದುವೆ ನಡೆಯಲಿದೆ. ಮದುವೆಯ ಆರತಕ್ಷತೆಯನ್ನು ಮೆಟಾವರ್ಸ್‌ನಲ್ಲಿ ನಡೆಸುವ ಆಲೋಚನೆಯೊಂದಿಗೆ ಬಂದವರು ದಿನೇಶ್ ಮತ್ತು, ಸಹಜವಾಗಿ, ಜನಗನಂದಿನಿಯ ಒಪ್ಪಿಗೆಯನ್ನು ಪಡೆದುಕೊಂಡಿದ್ದರು.

ವಿಡಿಯೋ ನೋಡಿ:ಕಳೆದ ಒಂದು ವರ್ಷದಿಂದ ಎಥೆರಿಯಮ್ ಅನ್ನು ಅಧ್ಯಯನ ಮಾಡುತ್ತಿದ್ದು, ಸ್ವಲ್ಪ ಸಮಯದವರೆಗೆ ಕ್ರಿಪ್ಟೋಕರೆನ್ಸಿ ಮತ್ತು ಬ್ಲಾಕ್‌ಚೈನ್ ಉತ್ಸಾಹಿಯಾಗಿದ್ದೆ ಎಂದು ದಿನೇಶ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು. ವರ್ಚುವಲ್ ಪ್ರಪಂಚದ ಹಿಂದಿನ ಮೂಲಭೂತ ತತ್ತ್ವದಲ್ಲಿ ಬ್ಲಾಕ್‌ಚೈನ್‌ನಿಂದಾಗಿ ತನ್ನ ಮದುವೆಯ ರಿಸೆಪ್ಶನ್ ಅನ್ನು ಮೆಟಾವರ್ಸ್‌ನಲ್ಲಿ ನಡೆಸುವ ಆಲೋಚನೆಗೆ ಇದು ಕಾರಣವಾಯಿತು ಎಂದು ಅವರು ಹೇಳಿದರು. ದಂಪತಿಗಳು ಮೂಲತಃ ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾದ ಕಾರಣ ಜನಗಣಂದಿನ್ ಕೂಡ ತಮ್ಮ ಮದುವೆಗೆ ಇದು ಸೂಕ್ತ ಮಾರ್ಗವೆಂದು ಭಾವಿಸಿದರು. ಕೋವಿಡ್-19 ಪ್ರಕರಣಗಳಲ್ಲಿ ಜಾಗತಿಕ ಉಲ್ಬಣವನ್ನು ಅವರು ಗಣನೆಗೆ ತೆಗೆದುಕೊಂಡಿದ್ದಾರೆ.

ಕ್ರಿಪ್ಟೋ ಮೂಲಕ ದಂಪತಿಗಳಿಗೆ ಉಡುಗೊರೆ

ಜನರು ಭೇಟಿಯಾಗಿ ಆಟವಾಡುವ ಟಾರ್ಡೈವರ್ಸ್ ವಿನ್ಯಾಸ ಮಾಡುತ್ತಿದ್ದ ಕ್ವಾಟಿಕ್ಸ್ ಟೆಕ್ ನ ವಿಘ್ನೇಶ್ ಸೆಲ್ವರಾಜ್ ಅವರನ್ನು ದಿನೇಶ್ ಸಂಪರ್ಕಿಸಿದ್ದರು. ದಿನೇಶ್ ಮತ್ತು ಜನಗನಂಧಿನಿಯ ವಿವಾಹದ ಆರತಕ್ಷತೆಯಲ್ಲಿ, ಅತಿಥಿಗಳು ತಮ್ಮ ಅವತಾರ್‌ಗಳಿಗಾಗಿ ಭಾರತೀಯ ಸಾಂಪ್ರದಾಯಿಕದಿಂದ ಪಾಶ್ಚಿಮಾತ್ಯ ಉಡುಪುಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಜಿಪೇ ಇಲ್ಲವೇ ಕ್ರಿಪ್ಟೋ ಮೂಲಕ ದಂಪತಿಗಳಿಗೆ ಉಡುಗೊರೆ ನೀಡಬಹುದು ಎಂಬುದಾಗಿ ದಂಪತಿಗಳು ತಿಳಿಸಿದ್ದಾರೆ.

ಕಳೆದ ವರ್ಷ, ಯುಎಸ್‌ನ ದಂಪತಿಗಳು ಮೆಟಾವರ್ಸ್‌ನಲ್ಲಿ ಮದುವೆಯಾದ ಮೊದಲಿಗರಾಗಿದ್ದರು. ಅದಾಗ್ಯೂ, ಈ ವಿವಾಹ ಭೌತಿಕವಾಗಿ ನಡೆದಿದೆ. ಟ್ರಾಸಿ ಮತ್ತು ಡೇವ್ ಗಗ್ನಾನ್ ಅವರ ಡಿಜಿಟಲ್ ಅವತಾರಗಳನ್ನು ಯುಎಸ್ ಮೂಲದ ಕಂಪನಿ ವಿರ್ಬೆಲಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಅದು ಕೆಲಸ, ಕಲಿಕೆ ಮತ್ತು ಈವೆಂಟ್‌ಗಳಿಗೆ ವರ್ಚುವಲ್ ಪರಿಸರವನ್ನು ಒದಗಿಸುತ್ತದೆ.

ಇದನ್ನೂ ಓದಿ: ಬಡ ಹೆಣ್ಣುಮಕ್ಕಳಿಗೆ ವಿವಾಹದ ಉಡುಪುಗಳನ್ನು ಒದಗಿಸಲು ಡ್ರೆಸ್ ಬ್ಯಾಂಕ್ ನಡೆಸುವ ಕೇರಳದ ಪರೋಪಕಾರಿ ವ್ಯಕ್ತಿ

ಅವರ ಡಿಜಿಟಲ್ ಅವತಾರಗಳು ಮತ್ತು ಅತಿಥಿಗಳನ್ನು ಒಳಗೊಂಡ ಈ ವರ್ಚುವಲ್ ಸಮಾರಂಭವು ಅವರ ಭೌತಿಕ ವಿವಾಹದ ಸಮಯದಲ್ಲಿಯೇ ನಡೆಯಿತು. ದಂಪತಿಗಳು ಸೆಪ್ಟೆಂಬರ್ 4 ರಂದು ಅಮೇರಿಕದ ನ್ಯೂ ಹ್ಯಾಂಪ್‌ಶೈರ್‌ನ ಅಟ್ಕಿನ್ಸನ್ ರೆಸಾರ್ಟ್ ಮತ್ತು ಕಂಟ್ರಿ ಕ್ಲಬ್‌ನಲ್ಲಿ ವೈಯಕ್ತಿಕವಾಗಿ ವಿವಾಹವಾದರು, ಅದೇ ಸಮಯದಲ್ಲಿ ವಿರ್ಬೆಲಾ ರಚಿಸಿದ ಮಾತವರ್ಸ್‌ನಲ್ಲಿ ವರ್ಚುವಲ್ ಸಮಾರಂಭವನ್ನು ಆಯೋಜಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
Published by:vanithasanjevani vanithasanjevani
First published: