ಗರ್ಭಿಣಿ ನಾಯಿಗೆ ಸೀಮಂತ, ಬಳೆ ಶಾಸ್ತ್ರ ಮಾಡಿದ ಪೊಲೀಸ್: ಹೀಗೊಬ್ಬ ಶ್ವಾನಪ್ರೇಮಿ
ನೆಚ್ಚಿನ ನಾಯಿ ಸೂಜಿಗೆ ಹೂವಿನ ಹಾರ ಹಾಕಲಾಯಿತು ಮತ್ತು ಬಳೆ ಶಾಸ್ತ್ರಕ್ಕೆ ಬಂದಿದ್ದ ನೆರೆಯ ಮಹಿಳೆಯರೆಲ್ಲಾ ಸೇರಿ ಅದರ ಕಾಲುಗಳಿಗೆ ಬಳೆಗಳನ್ನು ತೊಡಿಸಿದರು. ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ 5 ರೀತಿಯ ತಿನಿಸುಗಳುಳ್ಳ ಭೋಜನ ಬಡಿಸಲಾಯಿತು.
ಪ್ರಾಣಿ ಪ್ರಿಯರು ತಮ್ಮ ಮುದ್ದಿನ ಸಾಕು ಪ್ರಾಣಿಗಳ ಬಗೆಗಿನ ಪ್ರೀತಿ(Pet Loves) ವ್ಯಕ್ತಪಡಿಸಲು ಕೆಲವೊಮ್ಮೆ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅವರ ಅಂತಹ ಕೆಲಸಗಳು ಕೆಲವೊಮ್ಮೆ ವಿಲಕ್ಷಣವೆನಿಸಿದರೆ, ಇನ್ನು ಕೆಲವೊಮ್ಮೆ ಅದ್ಭುತ ಎನಿಸುವುದುಂಟು, ಮತ್ತೆ ಕೆಲವೊಮ್ಮೆ ಅಚ್ಚರಿ ಉಂಟು ಮಾಡುತ್ತವೆ ಕೂಡ. ತಮಿಳುನಾಡಿನ ಶಕ್ತಿವೇಲು (Shakthivel)ಎಂಬವರು ಅಂತಹ ಪ್ರಾಣಿ ಪ್ರಿಯರಲ್ಲಿ ಒಬ್ಬರು. ಮಧುರೈ ಜಿಲ್ಲೆಯಲ್ಲಿ (Tamil Nadu’s Madurai) ಸಬ್ ಇನ್ಸ್ಪೆಕ್ಟರ್ (Sub-inspector)ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಗರ್ಭಿಣಿಯಾಗಿರುವ ತನ್ನ ಸಾಕು ನಾಯಿ ಸೂಜಿಗಾಗಿ ಬಳೆ ಶಾಸ್ತ್ರ ಏರ್ಪಡಿಸಿದ್ದರು. ಅವರ ಮನೆಯಲ್ಲಿ ನಡೆದ ಆ ಬಳೆ ಶಾಸ್ತ್ರವನ್ನು(Bangle ceremony) ಊರ ಮಂದಿ ಅಚ್ಚರಿ ಮತ್ತು ಕುತೂಹಲದಿಂದ ವೀಕ್ಷಿಸಿದರು.
ಬಳೆ ಶಾಸ್ತ್ರಕ್ಕೆ ಬಂದ ಮಹಿಳೆಯರು
ಮಧುರೈನ ಜೈಹಿಂದ್ಪುರಂನ ನಿವಾಸಿಯಾಗಿರುವ ಶಕ್ತಿವೇಲುವಿಗೆ ತನ್ನ ನಾಯಿ ಸೂಜಿ ಎಂದರೆ ಪಂಚಪ್ರಾಣ, ಅದನ್ನು ಅವರು ತನ್ನ ಕುಟುಂಬ ಸದಸ್ಯೆ ಎಂದೇ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಗರ್ಭಿಣಿಯರ ಗೌರವಾರ್ಥ ನಡೆಸುವ ಬಳೆ ಶಾಸ್ತ್ರದಲ್ಲಿ ಯಾವೆಲ್ಲ ವಿಧಿ ವಿಧಾನಗಳನ್ನು ನಡೆಸುತ್ತಾರೋ, ಸೂಜಿಯ ಬಳೆ ಶಾಸ್ತ್ರದಲ್ಲಿ ಅವೆಲ್ಲವನ್ನೂ ನಡೆಸಲಾಯಿತು. ಸೂಜಿಗೆ ಹೂವಿನ ಹಾರ ಹಾಕಲಾಯಿತು ಮತ್ತು ಬಳೆ ಶಾಸ್ತ್ರಕ್ಕೆ ಬಂದಿದ್ದ ನೆರೆಯ ಮಹಿಳೆಯರೆಲ್ಲಾ ಸೇರಿ ಅದರ ಕಾಲುಗಳಿಗೆ ಬಳೆಗಳನ್ನು ತೊಡಿಸಿದರು. ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ 5 ರೀತಿಯ ತಿನಿಸುಗಳುಳ್ಳ ಭೋಜನ ಬಡಿಸಲಾಯಿತು.
ಉತ್ತಮ ರೀತಿಯಲ್ಲಿ ಆರೈಕೆ
“ಸೂಜಿ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬಳು ಮತ್ತು ಅವಳಿಗೆ ನಾವು ಒಳ್ಳೆಯ ಆಹಾರ ನೀಡುತ್ತಿದ್ದೇವೆ ಹಾಗೂ ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿದ್ದೇವೆ.ಅವಳು ಗರ್ಭಿಣಿಯಾಗಿದ್ದು ನಮಗೆ ಸಂತೋಷ ತಂದಿದೆ ಮತ್ತು ನಮ್ಮ ಸಂಸ್ಕೃತಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮಾಡುವಂತಹ ಬಳೆ ಶಾಸ್ತ್ರ ಮಾಡಲು ನಾವು ನಿರ್ಧರಿಸಿದೆವು” ಎಂದು ಶಕ್ತಿವೇಲು ತಿಳಿಸಿದ್ದಾರೆ. ಸಾಕು ನಾಯಿಗಳಿಗೆ ಅದರ ಮಾಲೀಕರು ತೋರುವ ಪ್ರೀತಿ ಮತ್ತು ಪ್ರತಿಯಾಗಿ ಅವು ತಮ್ಮ ಮಾಲೀಕರಿಗೆ ತೋರುವ ಪ್ರೀತಿಗೆ ಬೇರೇನೂ ಸಾಟಿಯಿಲ್ಲ. ತಮ್ಮ ಮುದ್ದು ನಾಯಿಗಳನ್ನು ಸಾಧ್ಯವಾದಷ್ಟು ಚೆನ್ನಾಗಿ ನೋಡಿಕೊಳ್ಳಲು ಜನ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಬದಲಿಗೆ ಅವು ಕೂಡ ಮಾಲೀಕರ ಜೀವ ಉಳಿಸುವುದರಿಂದ ಹಿಡಿದು ತಮ್ಮ ಪ್ರೀತಿ ವ್ಯಕ್ತಪಡಿಸಲು ವಿಭಿನ್ನ ಸಾಹಸಗಳನ್ನು ಮಾಡಲು ಹಿಂಜರಿಯುವುದಿಲ್ಲ.
ಅಪ್ಪು ಎಂಬ ಹೆಸರಿನ ನಾಯಿ
ನವೆಂಬರ್ 17ರಂದು ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ನಾಯಿಗಳು ಯಾವ ರೀತಿ ಜೀವ ರಕ್ಷಕ ಎಂಬುದನ್ನು ಸಾಬೀತು ಪಡಿಸಿವೆ. ಒಂದು ನಾಯಿ ಕೇವಲ ಒಬ್ಬರನ್ನಲ್ಲ, ಬದಲಿಗೆ ಅಪಾರ್ಟ್ಮೆಂಟ್ ಒಂದರ ಎಲ್ಲಾ ಜನರ ಜೀವ ಉಳಿಸಿದೆ. ಅಪ್ಪು ಎಂಬ ಹೆಸರಿನ ಗೋಲ್ಡನ್ ರಿಟ್ರೀವರ್ ನಾಯಿ ಮರಿ ಸುಮಾರು 150 ಜನರ ಜೀವ ಉಳಿಸಿತು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಂಪಿಗೆ ನಗರದ ವಸುಂಧರ ಲೇಔಟ್ನಲ್ಲಿ ವಿಎಂಎಕೆಎಸ್ ಶಾಲೆಟ್ ಅಪಾರ್ಟ್ಮೆಂಟ್ನ ಒಂದು ಫ್ಲಾಟ್ನಲ್ಲಿ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಅವಘಡ ಸಂಭವಿಸಿತ್ತು.
2.5 ಲಕ್ಷಕ್ಕೂ ಹೆಚ್ಚು ಹಣ ಖರ್ಚು
ನಾಯಿ ಪ್ರೀತಿಯ ಇನ್ನೊಂದು ಪ್ರಕರಣ ಹೀಗಿದೆ; ವ್ಯಕ್ತಿಯೊಬ್ಬರು ತಮ್ಮ 2 ನಾಯಿಗಳನ್ನು ಮುಂಬೈನಿಂದ ಚೆನ್ನೈಗೆ ಕರೆದೊಯ್ಯಲು ಏರ್ ಇಂಡಿಯಾದ ಇಡೀ ಬುಸಿನೆಸ್ ಕ್ಲಾಸ್ ಬುಕ್ ಮಾಡಿದ್ದರು. ಈ ಹಿಂದೆಯೂ ನಾಯಿಗಳು ಈ ರೀತಿ ಐಷಾರಾಮಿ ಕ್ಯಾಬಿನ್ಗಳಲ್ಲಿ ಪ್ರಯಾಣ ಮಾಡಿವೆ.
ಆದರೆ ಈ ಪ್ರಕರಣ ಕೊಂಚ ಭಿನ್ನ , ಇಲ್ಲಿ ಮಾಲೀಕರು ತನ್ನ ಕೇವರ 2 ನಾಯಿಗಳ ಪ್ರಯಾಣಕ್ಕೆಂದೇ ಇಡೀ ಬುಸಿನೆನ್ ಕ್ಲಾಸ್ ಬುಕ್ ಮಾಡಲು ಸುಮಾರು 2.5 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. “ನಾಯಿಗಳನ್ನು ಅತ್ಯಂತ ಹೆಚ್ಚು ಪ್ರೀತಿಸುವ ವ್ಯಕ್ತಿ” ಎಂಬ ಪ್ರಶಸ್ತಿಯನ್ನು ಈ ವ್ಯಕ್ತಿಗೆ ಕೊಡಬಹುದು ಅಲ್ಲವೇ..?
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ