Great Driver: ತನಗೆ ಹೃದಯಾಘಾತವಾದರೂ ಬಸ್‌ನಲ್ಲಿದ್ದ 30 ಮಂದಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ

ಅರುಮುಗಮ್ ಅವರು ಟಿಎನ್ಎಸ್ ಟಿಸಿ ಯಲ್ಲಿ ಚಾಲಕನಾಗಿ 12 ವರ್ಷಗಳ ಅನುಭವ ಹೊಂದಿದ್ದರು ಮತ್ತು ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿದ್ದರಿಂದ 30 ಪ್ರಯಾಣಿಕರ ಪ್ರಾಣ ಉಳಿದಿದೆ ಮತ್ತು ಇದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಬ್ಬ ಚಾಲಕನ ಮೇಲೆ ಎಷ್ಟೊಂದು ಜನರ ಪ್ರಾಣದ ಜವಾಬ್ದಾರಿ ಇರುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹ ವಿಚಾರವೇ, ಆದರೆ ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು ಸುಲಭದ ಮಾತಂತು ಅಲ್ಲವೇ ಅಲ್ಲ. ತಮಿಳುನಾಡಿನಲ್ಲಿ (Tamil Nadu) ನಡೆದ ಒಂದು ಘಟನೆಯಲ್ಲಿ ಒಬ್ಬ ಬಸ್ ಚಾಲಕ ಹೇಗೆ ತನಗೆ ಹೃದಯಾಘಾತವಾದರೂ(Heart attack) ತನ್ನ ಬಸ್ ನಲ್ಲಿದ್ದ 30 ಪ್ರಯಾಣಿಕರ ಪ್ರಾಣವನ್ನು ಕಾಪಾಡಿದ್ದಾರೆ ನೀವೇ ನೋಡಿ. 44 ವರ್ಷದ ಅರುಮುಗಮ್ ಅವರು 30 (30 passengers)ಪ್ರಯಾಣಿಕರೊಂದಿಗೆ ಅರಪ್ಪಲಾಯಂನಿಂದ ಕೊಡೈಕೆನಾಲ್ ( Kodaikanal) ಗೆ ಟಿಎನ್ಎಸ್ ಟಿಸಿ ಬಸ್(TNSTC) ಓಡಿಸುತ್ತಿದ್ದರು. ಬಸ್ ಅರಪ್ಪಲಾಯಂದಿಂದ(Arappalayam) ಬೆಳಿಗ್ಗೆ 6 ಗಂಟೆ 20 ನಿಮಿಷಕ್ಕೆ ಹೊರಡುತ್ತಿದ್ದಂತೆ ಚಾಲಕನಿಗೆ ತೀವ್ರ ಎದೆ ನೋವು ಆಗುತ್ತಿದೆ ಎಂದು ದೂರು ನೀಡಿದರು ಮತ್ತು ಅವರು ಎದೆ ನೋವಿನಿಂದ (chest pain) ಕೆಳಕ್ಕೆ ಕುಸಿಯುವ ಮೊದಲು ಹೇಗೋ ವಾಹನವನ್ನು ರಸ್ತೆ ಬದಿಯಲ್ಲಿ (Roadside) ತಂದು ನಿಲ್ಲಿಸಿದರು. ಬಸ್ ಕಂಡಕ್ಟರ್ (conductor) ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿದನು, ಆದರೆ ಅದು ಬರುವ ಹೊತ್ತಿಗೆ, ಚಾಲಕ ಅರುಮುಗಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಪ್ರಯಾಣಿಕರ ಪ್ರಾಣ ಉಳಿದಿದೆ
ಮಧುರೈನ ಟಿಎನ್ಎಸ್ ಟಿಸಿ ಡೆಪ್ಯುಟಿ ಮ್ಯಾನೇಜರ್ ಯುವರಾಜ್ ಅವರು "ಅರುಮುಗಮ್ ಅವರು ಟಿಎನ್ಎಸ್ ಟಿಸಿ ಯಲ್ಲಿ ಚಾಲಕನಾಗಿ 12 ವರ್ಷಗಳ ಅನುಭವ ಹೊಂದಿದ್ದರು ಮತ್ತು ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿದ್ದರಿಂದ 30 ಪ್ರಯಾಣಿಕರ ಪ್ರಾಣ ಉಳಿದಿದೆ ಮತ್ತು ಇದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.

ಇದನ್ನೂ ಓದಿ: Viral News: ₹2 ಚಿಲ್ಲರೆಗಾಗಿ ಹೋರಾಡಿ ಗೆದ್ದ ವ್ಯಕ್ತಿ, ಬಸ್ ಕಂಡಕ್ಟರ್​ಗೆ ಇನ್ಮೇಲೆ ಖಂಡಿತಾ ಹೀಗೆ ಮಾಡಲ್ಲ ಬಿಡಿ

ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಕರಿಮೆಡು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಶವವನ್ನು ಜಿಆರ್ ಎಚ್ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಅರುಮುಗಮ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರೆ ಘಟನೆ
ಇನ್ನೂ ಬೇರೆ ಘಟನೆಯಲ್ಲಿ, ಟ್ರಕ್ ಅನ್ನು ಹಿಮ್ಮುಖವಾಗಿ 3 ಕಿಲೋ ಮೀಟರ್ ಓಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದೆ ವೈರಲ್ ಆಗಿತ್ತು. ವರದಿಗಳ ಪ್ರಕಾರ, ಚಾಲಕ ತನ್ನ ಬೃಹತ್ ವಾಹನದ ಬ್ರೆಕ್ ವಿಫಲವಾದ ನಂತರ ಹಿಮ್ಮುಖವಾಗಿ ಓಡಿಸಿದ್ದಾನೆ.

ಅಂತಿಮವಾಗಿ, ರಸ್ತೆಯ ಮೇಲೆ ಓಡಾಡುವ ಯಾರಿಗೂ ತೊಂದರೆ ಆಗದಂತೆ ನೋಡಿಕೊಂಡು ಹೋಗಿ ಟ್ರಕ್ ನಿಲ್ಲಿಸುವಲ್ಲಿ ಯಶಸ್ವಿಯಾದರು. ಮಹಾರಾಷ್ಟ್ರದ ಜಾಲ್ನಾ ಮತ್ತು ಸಿಲೋಡ್ ರಸ್ತೆಯಲ್ಲಿ ನಡೆದ ವಿಲಕ್ಷಣ ಘಟನೆಯನ್ನು ಟ್ರಾನ್ಸ್ ಪೋರ್ಟ್ ಲೈವ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿದೆ. ಟ್ರಕ್ ಸ್ಥಿರ ಸ್ಥಿತಿಯಲ್ಲಿಲ್ಲದ ಕಾರಣ ಚಾಲಕನಿಗೆ ಮೊದಲ ಅಥವಾ ಎರಡನೇ ಗೇರ್ ಅನ್ನು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿ ಸೂಚಿಸಿದೆ.

ಇದನ್ನೂ ಓದಿ: ಈ ಬಸ್‌ಗಳಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಜೀವಮಾನ ಪ್ರಯಾಣಿಸಲು ಉಚಿತ ಪಾಸ್

ಇದರ ಪರಿಣಾಮವಾಗಿ, ದೋಷಪೂರಿತ ಟ್ರಕ್ ಅನ್ನು ತಡೆಯಲು ಸುರಕ್ಷಿತ ಸ್ಥಳವನ್ನು ಕಂಡು ಕೊಳ್ಳುವವರೆಗೆ ಅವನು ನಿಧಾನವಾಗಿ ವಾಹನವನ್ನು ರಿವರ್ಸ್ ಗೇರ್ ನಲ್ಲಿ ಓಡಿಸಿದನು ಎಂದು ಹೇಳಲಾಗಿದೆ. ಅಂತಿಮವಾಗಿ, ಇದು ಜಮೀನಿನಲ್ಲಿ ಸಮತಟ್ಟಾದ ಜಾಗದಲ್ಲಿ ಟ್ರಕ್ ಅನ್ನು ನಿಲ್ಲಿಸಲು ಸಾಧ್ಯವಾಯಿತು.

ಸರ್ಕಾರಿ ಬಸ್ ನಲ್ಲಿ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇತ್ತೀಚೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದ ಪೋಟೊ ವೈರಲ್‌ ಆಗಿತ್ತು. ತಮ್ಮ ಬಸ್ ನಲ್ಲಿ ಮುಖ್ಯಮಂತ್ರಿಗಳನ್ನು ಕಂಡ ಸಾರ್ವಜನಿಕರು ಮತ್ತು ಸಾರಿಗೆ ಸಿಬ್ಬಂದಿ ಸಹ ಒಂದು ಕ್ಷಣ ಶಾಕ್ ಆಗಿದ್ದರು. ಚೆನ್ನೈನಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಉಚಿತ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಂದ ಯೋಜನೆಯ ಅನುಕೂಲತೆ ಬಗ್ಗೆ ತಿಳಿದುಕೊಂಡರು. ಜೊತೆಗೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಆರನೇ ಕೊರೊನಾ ಲಸಿಕಾಕರಣ ಅಭಿಯಾನದ ಭಾಗವಾಗಿ ಕನ್ನಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸ್ಟಾಲಿನ್ ಬಸ್ ನಲ್ಲಿಯೇ ಪ್ರಯಾಣಿಸಿದ್ದರು.
Published by:vanithasanjevani vanithasanjevani
First published: