• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Taj Mahal: ಬೆಳದಿಂಗಳಲ್ಲಿ ತಾಜ್‌ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕಾ? ಈಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

Taj Mahal: ಬೆಳದಿಂಗಳಲ್ಲಿ ತಾಜ್‌ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕಾ? ಈಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ತಾಜ್​ ಮಹಲ್​

ತಾಜ್​ ಮಹಲ್​

ವಿಶೇಷವಾಗಿ ದೇಶ-ವಿದೇಶದ ವಿವಿಧ ಭಾಗಗಳಿಂದ ಬರುವವರಿಗೆ ಯಾವುದೇ ತೊಂದರೆಯಿಲ್ಲದೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.

  • Share this:

ರಾತ್ರಿ ಸಮಯದಲ್ಲಿ ತಾಜ್ ಮಹಲ್ (Taj Mahal) ಸೌಂದರ್ಯವನ್ನು ಆನಂದಿಸಲು ಬಯಸುವ ಜನರು ಈಗ ರಾತ್ರಿ ವೀಕ್ಷಣೆಯ ಟಿಕೆಟ್‌ಗಳನ್ನು ಆನಲೈನಿನಲ್ಲಿ ಬುಕ್ ಮಾಡಬಹುದು. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಸೋಮವಾರ (Monday) ಆನ್‌ಲೈನ್ ಟಿಕರ್ ಬುಕಿಂಗ್ ಸೌಲಭ್ಯವನ್ನು ತನ್ನ ವೆಬ್‌ಸೈಟ್- asi.paygov.org.in ನಲ್ಲಿ ಲಭ್ಯಗೊಳಿಸಿದೆ. ಇದರಿಂದ ದೇಶ-ವಿದೇಶಗಳ ಎಲ್ಲ ಪ್ರವಾಸಿಗರಿಗೂ ತುಂಬಾ ಅನುಕೂಲ ಆಗಲಿದೆ. ತಾಜಮಹಲ್ ವಿಶ್ವಪ್ರಸಿದ್ಧವಾಗಿದ್ದು ಇದನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಈ ಭವ್ಯ ಸ್ಮಾರಕವನ್ನು ಷಹಜಹಾನ್ (Shah Jahan) 1653 ರಲ್ಲಿ ನಿರ್ಮಿಸಿದನು.ಈ ಬೆಳವಣಿಗೆಯನ್ನು ದೃಢೀಕರಿಸಿದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ, ಆಗ್ರಾ ವೃತ್ತದ ರಾಜ್‌ಕುಮಾರ್ ಪಟೇಲ್, “ರಾತ್ರಿ ವೀಕ್ಷಣೆಗಾಗಿ ಟಿಕೆಟ್ ಕಾಯ್ದಿರಿಸುವ ಆಫ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು.


ವಿಶೇಷವಾಗಿ ದೇಶ-ವಿದೇಶದ ವಿವಿಧ ಭಾಗಗಳಿಂದ ಬರುವವರಿಗೆ ಯಾವುದೇ ತೊಂದರೆಯಿಲ್ಲದೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಹಗಲಿನ ಭೇಟಿಗಳಿಗಾಗಿ ಬುಕ್ಕಿಂಗ್ ಟಿಕೆಟ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮೊದಲಿನಂತೆಯೇ ಲಭ್ಯವಿರುತ್ತವೆ.


ಇಲ್ಲಿಯವರೆಗೆ, ತಾಜ್‌ ಮಹಲ್ ರಾತ್ರಿ ವೀಕ್ಷಣೆಗೆ ಟಿಕೆಟ್‌ಗಳನ್ನು ಭೇಟಿಗೆ ಒಂದು ದಿನ ಮೊದಲು ಎಎಸ್‌ಐ ಕಚೇರಿಯಲ್ಲಿನ ಕೌಂಟರ್‌ನಿಂದ ಖರೀದಿಸಬೇಕಾಗಿತ್ತು.


ಆದಾಗ್ಯೂ, ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತನ್ನ 2004 ರ ಆದೇಶವನ್ನು ಮಾರ್ಪಡಿಸಿತು ಮತ್ತು 2019 ರಲ್ಲಿ ನಾಗರಿಕ ವೇದಿಕೆಯಾದ ಆಗ್ರಾ ಡೆವಲಪ್‌ಮೆಂಟ್ ಫೌಂಡೇಶನ್ (ಎಡಿಎಫ್) ನಿಂದ ಮಧ್ಯಂತರ ಅರ್ಜಿಯನ್ನು ಭರ್ತಿ ಮಾಡಿದ ನಂತರ 17 ನೇ ಶತಮಾನದ ಈ ಸಮಾಧಿಯ ರಾತ್ರಿ ವೀಕ್ಷಣೆಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಿತು.


ತಾಜ್ ಮಹಲ್ ಅನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ಮಹಲ್ ಳ ಮರಣದ ನಂತರ ನಿರ್ಮಿಸಿದ ಈ ಬಿಳಿ ಅಮೃತಶಿಲೆಯ ಸಮಾಧಿಯನ್ನು ಶಾಶ್ವತ ಪ್ರೀತಿಯ ಸ್ಮಾರಕವೆಂದು ಪರಿಗಣಿಸಲಾಗಿದ್ದು ಇದು ವಿಶ್ವದೆಲ್ಲೆಡೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.


ತಾಜ್ ಮಹಲ್‌ನ ರಾತ್ರಿ ವೀಕ್ಷಣೆಯು ತಿಂಗಳಲ್ಲಿ ಐದು ದಿನಗಳು ಅಂದರೆ ಹುಣ್ಣಿಮೆಯ ರಾತ್ರಿ ಮತ್ತು ಹುಣ್ಣಿಮೆಯ ಹಿಂದಿನ ಎರಡು ರಾತ್ರಿಗಳು ಮತ್ತು ಹುಣ್ಣಿಮೆಯ ನಂತರದ ಎರಡು ರಾತ್ರಿಗಳಲ್ಲಿ ಲಭ್ಯವಿದೆ. ತಾಜ್ ಮಹಲ್‌ನ ರಾತ್ರಿ ವೀಕ್ಷಣೆಯನ್ನು ಪ್ರತಿ ಶುಕ್ರವಾರ ಮತ್ತು ರಂಜಾನ್ ತಿಂಗಳಲ್ಲಿ ಮುಚ್ಚಲಾಗುತ್ತದೆ.


ಇದನ್ನೂ ಓದಿ: ತನ್ನ ಮುಂದೆ ಪೋಸ್ ಕೊಟ್ಟ ಹುಡುಗಿಯನ್ನು ಎತ್ತಿ ಬಿಸಾಡಿದ ಆನೆ! ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ


ಹಿರಿಯ ವಕೀಲ ಮತ್ತು ಎಡಿಎಫ್ ಕಾರ್ಯದರ್ಶಿ ಕೆಸಿ ಜೈನ್ ಅವರ ಪ್ರಕಾರ “ತಾಜಮಹಲ್ ರಾತ್ರಿ ವೀಕ್ಷಣೆಗಾಗಿ ಮಾಡಿರುವ ಹೊಸ ಆನ್‌ಲೈನ್ ವ್ಯವಸ್ಥೆಯು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಈ ಯೋಜನೆಯು ಎಎಸ್‌ಐ ಆದಾಯವನ್ನು ಹೆಚ್ಚಿಸುತ್ತದೆ.


ಇದರಿಂದ ತಾಜಮಹಲ್ ಸಂದರ್ಶಿಸಲು ಬಯಸುವ ಸಂದರ್ಶಕರು ಅಡ್ವಾನ್ಸ್ಡ್ ಬುಕಿಂಗ್‌ಗಳಿಗಾಗಿ ಆಗ್ರಾದಲ್ಲಿ ಹೆಚ್ಚು ಉಳಿಯದೆ ಮತ್ತು ಎ ಎಸ್ ಐ ಕೌಂಟರ್‌ನಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲದೆ ಟಿಕೇಟಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ.


ತಾಜ್ ಮಹಲ್‌ನ ರಾತ್ರಿ ವೀಕ್ಷಣೆಯು ತಿಂಗಳಲ್ಲಿ ಐದು ದಿನಗಳು ಲಭ್ಯವಿದೆ, ಅಂದರೆ ಹುಣ್ಣಿಮೆಯ ರಾತ್ರಿ ಮತ್ತು ಹುಣ್ಣಿಮೆಯ ರಾತ್ರಿಯ ಹಿಂದಿನ ಎರಡು ರಾತ್ರಿಗಳು ಮತ್ತು ನಂತರದ ಎರಡು ರಾತ್ರಿಗಳು ಲಭ್ಯವಿದೆ.


ಇದನ್ನೂ ಓದಿ: ಕಾಡಿನ ದಾರಿಯಲ್ಲಿ ಹೋಗುವಾಗ ನಿಮ್ಮ ಸ್ಪೀಡ್​ ಮೇಲೆ ಕಂಟ್ರೋಲ್ ಇರಲಿ, ಏಕೆ ಅಂತೀರಾ? ಈ ವಿಡಿಯೋ ನೋಡಿ


ಪೂರ್ವನಿರ್ಧರಿತ ಭದ್ರತಾ ಪ್ರೋಟೋಕಾಲ್ ಪ್ರಕಾರ, 8.30 ರಿಂದ 12.30 ರವರೆಗೆ 50 ಪ್ರವಾಸಿಗರನ್ನು ಎಂಟು ಬ್ಯಾಚ್‌ಗಳಾಗಿ ವಿಂಗಡಿಸಲಾದ 400 ಜನರಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ.


top videos



    ಪ್ರತಿ ಸ್ಲಾಟ್ 30 ನಿಮಿಷಗಳ ಅವಧಿಯಾಗಿರುತ್ತದೆ. ಪ್ರವಾಸಿಗರು ಭದ್ರತಾ ತಪಾಸಣೆಗಾಗಿ ತಮ್ಮ ಟಿಕೆಟ್‌ನಲ್ಲಿ ನಮೂದಿಸಿರುವ ವೀಕ್ಷಣೆ ಸಮಯಕ್ಕಿಂತ ಅರ್ಧ ಘಂಟೆಯ ಮೊದಲು ಶಿಲ್ಪಗ್ರಾಮ್‌ಗೆ ಬರಬೇಕು. ನೀವು ಈಗಲೇ ನಿಮ್ಮ ಕುಟುಂಬದವರನ್ನು ತಾಜಮಹಲ್ ವೀಕ್ಷಣೆಗೆ ಕರೆದುಕೊಂಡು ಹೋಗಿ ಮತ್ತು ಅವರೊಂದಿಗೆ ನಿಮ್ಮ ಉತ್ತಮ ಸಮಯವನ್ನು ಕಳೆಯಿರಿ.

    First published: