ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆಯನ್ನ ಟಾಟಾ ಗ್ರೂಪ್ ಖರೀದಿ ಮಾಡಿದೆ. ಇದರ ಬೆನ್ನಲ್ಲೇ ಈಗ ತಾಜ್ ಹೋಟೆಲ್‌ಗೂ ಹೊಸ ಲುಕ್ ಬಂದಿದೆ. ದೆಹಲಿಯಲ್ಲಿರುವ ಟಾಟಾ ಗ್ರೂಪ್‌ಗೆ (Ta Ta Group) ಸೇರಿದ ಹಳೆಯ ತಾಜ್‌ಮಹಲ್ ಹೋಟೆಲ್‌ಗೆ ಮತ್ತಷ್ಟು ಲಕ್ಷುರಿತನ ಬಂದಿದೆ. ಏರ್‌ಇಂಡಿಯಾದ ಹೆಮ್ಮೆಯ ಗುರುತಾದ ಮೀಸೆ ಮತ್ತು ಬಾಂಬೆ ಕೋಟ್ ತಾಜ್ ಹೋಟೆಲ್ ಅನ್ನು ಆವರಿಸಿಕೊಳ್ಳುತ್ತಿದೆ. ಹೌದು, ಏರ್ ಇಂಡಿಯಾ ಪ್ರಯಾಣಿಕರನ್ನ ಸೆಳೆಯಲು ತಾಜ್‌ಹೋಟೆಲ್ (Taj Hotel) ಅನ್ನೂ ಕೂಡ ಟಾಟಾ ಸಂಸ್ಥೆ ಸಜ್ಜುಗೊಳಿಸಿದೆ. ದೆಹಲಿಯ ತಾಜ್ ಹೋಟೆಲ್ ಅನ್ನ ಮತ್ತಷ್ಟು ಐಷಾರಾಮಿಯಾಗಿ ಬದಲಾಯಿಸಲಾಗಿದೆ. ಮಹಾರಾಜ ಮಾದರಿಯ ರೂಮ್‌ಗಳನ್ನ ತಾಜ್‌ಹೋಟೆಲ್‌ನಲ್ಲಿ ನವೀಕರಣಗೊಳಿಸಲಾಗಿದೆ. ಮಾಸ್ಟರ್ ಬೆಡ್‌ರೂಂ, ಊಟದ ರೂಮ್, ಬಾಲ್ಕನಿ, ಓದುವ ಕೋಣೆಯನ್ನೂ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ರೂಂನಲ್ಲಿರುವ ಪ್ರತಿ ವಸ್ತುಗಳು ಕೂಡ ಕಂಗೊಳಿಸುವಂತೆ, ವಿಶೇಷವಾಗಿ ನವೀಕರರಿಸಲಾಗಿದೆ. ಪೀಠೋಪಕರಣಗಳು, ಬಾಗಿಲು ಕಿಟಿಕಿ ಮೇಲೂ ಆಕರ್ಷಕವಾದ ಕಲಾಕೃತಿಗಳನ್ನ ರಚಿಸಲಾಗಿದೆ ಅಂತ ಟಾಟಾ ಗ್ರೂಪ್‌ನ ಸಂಸ್ಥೆಯಾಗಿರುವ ತಾಜ್ ಹೋಟೆಲ್ ನಿರ್ವಹಣೆ ಮಾಡುತ್ತಿರುವ ಐಹೆಚ್‌ಸಿಎಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜ್‌ಹೋಟೆಲ್‌ಗೆ ನೂರು ವರ್ಷದ ಇತಿಹಾಸವಿದ್ದು, ಆಗಿಂದಾಗಲೇ ಹೊಸ ರೀತಿಯಲ್ಲಿ ನವೀಕರಣ ಮಾಡಲಾಗುತ್ತಿರುತ್ತದೆ. ಇದೀಗ ತಾಜ್ ಹೋಟೆಲ್‌ಗೂ ಮಹಾರಾಜ ಮಾದರಿಯನ್ನ ಪರಿಚಯ ಮಾಡಿಸುತ್ತಿರುವುದು ಹೆಮ್ಮೆ ಮೂಡಿಸುತ್ತಿದೆ ಅಂತ ಐಹೆಚ್‌ಸಿಎಲ್ ಸಂಸ್ಥೆಯ ಎಂಡಿ-ಸಿಇಓ ಆಗಿರುವ ಪುನೀತ್ ಚೌತಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಈ ರೆಸ್ಟೋರೆಂಟ್ಗೆ ಹೋಗ್ಬೇಕಾದ್ರೆ ಬಟ್ಟೆ ತೆಗಿಲೇಬೇಕು! ತೂಕ ಹೆಚ್ಚಿದ್ರೂ ಎಂಟ್ರಿ ಇಲ್ವಂತೆ ಗುರೂ
ಇನ್ನು ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಐಕಾನಿಕ್ ಹೋಟೆಲ್, ಮಹಾರಾಜ ಪರಂಪರೆ ಜತೆ ಇರುವಂತದ್ದು. ಇದೀಗ ತಾಜ್ ಹೋಟೆಲ್‌ಗೂ ಮಹಾರಾಜನ ಆಗಮನವಾಗಿದೆ. ಇದು ಏರ್‌ಇಂಡಿಯಾದ ಇತಿಹಾಸವನ್ನ ಮತ್ತಷ್ಟು ಸಧೃಡಗೊಳಿಸುತ್ತದೆ ಅಂತ ಏರ್ ಇಂಡಿಯಾದ ಎಂಡಿ-ಸಿಇಒ ಆಗಿರುವ ಕ್ಯಾಂಪ್‌ಬೆಲ್ ವಿಲ್ಸನ್ ತಿಳಿಸಿದ್ದಾರೆ.
ಅಂದಹಾಗೇ, ಬಾಬಿ ಮುಖರ್ಜಿ ಅಂಡ್ ಟೀಂ ದೆಹಲಿಯಲ್ಲಿರುವ ತಾಜ್ ಹೋಟೆಲ್ ಅನ್ನು ಮರು ವಿನ್ಯಾಸಗೊಳಿಸಿದೆ. ಹೋಟೆಲ್‌ಗೆ ಮಹಾರಾಜ ಮಾದರಿಯ ಲುಕ್ ಕೊಟ್ಟಿದೆ.
70 ವರ್ಷದ ಬಳಿಕ ಟಾಟಾಗೆ ಮರಳಿರುವ ಏರ್ ಇಂಡಿಯಾ!
ಅಂದಹಾಗೇ, 1932 ರಲ್ಲಿ ಜೆಆರ್‌ಡಿ ಟಾಟಾ ಆವರು ಏರ್ ಇಂಡಿಯಾ ಸಂಸ್ಥೆಯನ್ನ ಹುಟ್ಟುಹಾಕಿದ್ರು. ಬಳಿಕ ಸಂಸ್ಥೆಯನ್ನು ಭಾರತ ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು.
ಭಾರತದ ವಾಯುಸಾರಿಗೆಯಲ್ಲಿ ಹತ್ತಾರು ಏರು-ಪೇರುಗಳನ್ನ ಏರ್ ಇಂಡಿಯಾ ಸಂಸ್ಥೆ ಕಂಡಿದೆ. ಸುಮಾರು 70 ವರ್ಷಗಳ ಕಾಲ ಸರ್ಕಾರ ಏರ್ ಇಂಡಿಯಾವನ್ನು ಮುನ್ನಡೆಸಿತು.
ಆದರೆ ಒಂದು ಕಾಲದಲ್ಲಿ ಲಾಭದ ಹಾದಿಯಲ್ಲಿದ್ದ ಏರ್ ಇಂಡಿಯಾ ದಿನಗಳು ಕಳೆದಂತೆ ನಷ್ಟದ ಹಾದಿಗೆ ತಲುಪಿತು. ಕೊನೆಗೆ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಯನ್ನ 2022 ಜನವರಿಯಲ್ಲಿ ಮರಳಿ ಟಾಟಾ ಗ್ರೂಪ್ ಖರೀದಿ ಮಾಡಿತು.
ಇದನ್ನೂ ಓದಿ: ಮಗನ ಪಾಸ್‌ಪೋರ್ಟ್‌ನಿಂದ ಅಪ್ಪನ ಹೆಸರನ್ನು ತೆಗೆಸುವಲ್ಲಿ ಯಶಸ್ವಿಯಾದ ಮಹಿಳೆ, ಕೇಸ್ ಗೆದ್ದ ಸಿಂಗಲ್ ಮದರ್!
ಇದೀಗ ಏರ್ ಇಂಡಿಯಾದ ಪ್ರಯಾಣಿಕರನ್ನ ಸೆಳೆಯೋಕೆ ತನ್ನದೇ ಅಂಗಸಂಸ್ಥೆಯಾದ ತಾಜ್ ಹೋಟೆಲ್ ಅನ್ನೂ ಕೂಡ ನವೀಕರಣಗೊಳಿಸಲಾಗಿದೆ.
ಒಂದು ರಾತ್ರಿ ವಾಸ್ತವ್ಯಕ್ಕೆ 7 ಲಕ್ಷ!!!
ತಾಜ್ ಹೋಟೆಲ್‌ಗೆ ಈಗ ಹೊಸ ಲುಕ್ ಬಂದಿದೆ. ಮಹಾರಾಜ ಶೈಲಿಯಲ್ಲಿ ಹೋಟೆಲ್ ಅನ್ನ ನವೀಕರಿಸಲಾಗಿದೆ. ತಾಜ್ ಹೋಟೆಲ್‌ನ ಪ್ರತಿ ರೂಂಗಳಿಗೆಲ್ಲ ಐಷಾರಾಮಿ ಕಳೆ ಬಂದಿದೆ.
ಆದರೆ ಈ ಹೋಟೆಲ್‌ನ ರೂಂನಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ ಬಾಡಿಗೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಿ.. ಹೌದು, ತಾಜ್ ಹೋಟೆಲ್‌ನಲ್ಲಿ ಸದ್ಯ ಒಂದು ರಾತ್ರಿ ವಾಸ್ತವ್ಯಕ್ಕೆ ಇರುವ ಬಾಡಿಗೆ ಬರೋಬ್ಬರಿ 7 ಲಕ್ಷ ರೂಪಾಯಿ. ಹೊಸದಾಗಿ ನವೀಕರಿಸಿರುವ ಈ ಮಹಾರಾಜ ಮಾದರಿಯ ರೂಮ್‌ಗಳಿಗೆ ಇಷ್ಟು ಮೊತ್ತದ ಬಾಡಿಗೆಯನ್ನ ಫಿಕ್ಸ್ ಮಾಡಿದ್ದಾರೆ.
ಮತ್ತೊಂದು ಸಂಗತಿ ಏನಂದ್ರೆ, ಟಾಟಾ ಗ್ರೂಪ್‌ನ ಅಡಿಯಲ್ಲಿರುವ ಐಹೆಚ್‌ಸಿಎಲ್ ಭಾರತದ ಅತಿದೊಡ್ಡ ಹೋಟೆಲ್ ಉದ್ಯಮ ನಡೆಸುವ ಅಂಗಸಂಸ್ಥೆಯಾಗಿದೆ.
ವಿಶ್ವದ ನಾಲ್ಕು ಖಂಡಗಳಲ್ಲಿ ಅನೇಕ ಹೋಟೆಲ್‌ಗಳನ್ನ ಐಹೆಚ್‌ಸಿಎಲ್ ಮುನ್ನಡೆಸುತ್ತಿದೆ. 263 ಹೋಟೆಲ್‌ಗಳನ್ನ ಸದ್ಯ ಹೊಂದಿದ್ದು, 75 ಹೋಟೆಲ್‌ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ತಾಜ್, ಸೆಲ್‌ಕ್ವೆಶ್ಚನ್, ವಿವಾಂತ ಮತ್ತು ಜಿಂಜರ್ ನಂತರ ಪ್ರಖ್ಯಾತ ಹೋಟೆಲ್‌ಗಳನ್ನ ಐಹೆಚ್‌ಸಿಎಲ್ ಸಂಸ್ಥೆ ಮುನ್ನಡೆಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ