ಪ್ಲಾಸ್ಟಿಕ್​ನಿಂದ ತಯಾರಾಗುತ್ತಿದೆ ಟಿ-ಶರ್ಟ್​; ರೈಲ್ವೆ ಇಲಾಖೆಯಿಂದ ಹೊಸ ಚಿಂತನೆ

ಕಸದಿಂದ ರಸ ಎಂಬ ಮಾತಿನಂತೆ ಪ್ಲಾಸ್ಟಿಕ್ ಬಾಟಲಿಗಳಿಂದ ಟೀ-ಶರ್ಟ್​, ಟೋಪಿ ತಯಾರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಹಾಗಾಗೀ, ಎಲ್ಲೆಂದರಲ್ಲಿ ಬಿಸಾಕಿರುವ ಖಾಲಿ ನೀರಿನ ಬಾಟಲಿ ಸಂಗ್ರಹಕ್ಕೂ ಮುಂದಾಗಿದೆ. ರೈಲ್ವೆ ಇಲಾಖೆ ಖಾಲಿ ನೀರಿನ ಬಾಟಲಿ ನೀಡಿದವರಿಗೆ ಪ್ರತಿ ಬಾಟಲಿಗೆ 5 ರೂ. ನೀಡಲು ನಿರ್ಧರಿಸಿದೆ.

news18
Updated:August 2, 2019, 7:27 AM IST
ಪ್ಲಾಸ್ಟಿಕ್​ನಿಂದ ತಯಾರಾಗುತ್ತಿದೆ ಟಿ-ಶರ್ಟ್​; ರೈಲ್ವೆ ಇಲಾಖೆಯಿಂದ ಹೊಸ ಚಿಂತನೆ
ಪ್ಲಾಸ್ಟಿಕ್ ಬಾಟಲಿ
  • News18
  • Last Updated: August 2, 2019, 7:27 AM IST
  • Share this:
ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್​ ಬಳಕೆ ಹೆಚ್ಚಾಗುತ್ತಿದೆ. ವಿಪರೀತ ಪ್ಲಾಸ್ಟಿಕ್​ ಬಳಕೆಯಿಂದ ಪರಿಸರವು ಹಾಳಾಗುತ್ತಿದೆ. ಪ್ಲಾಸ್ಟಿಕ್​ ಮುಕ್ತ ಭಾರತವನ್ನಾಗಿಸಲು ಮತ್ತು ಅದರ ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ಅಂದೋಲನ ನಡೆಯುತ್ತಿದೆ. ಆದರೂ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ಬಳಕೆ ಕಮ್ಮಿಯಾಗಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ರೈಲ್ವೆ ಇಲಾಖೆ ಹೊಸ ಚಿಂತನೆ ನಡೆಸಿದೆ.

ಕಸದಿಂದ ರಸ ಎಂಬ ಮಾತಿನಂತೆ ಪ್ಲಾಸ್ಟಿಕ್ ಬಾಟಲಿಗಳಿಂದ ಟೀ-ಶರ್ಟ್​, ಟೋಪಿ ತಯಾರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಹಾಗಾಗೀ, ಎಲ್ಲೆಂದರಲ್ಲಿ ಬಿಸಾಕಿರುವ ಖಾಲಿ ನೀರಿನ ಬಾಟಲಿ ಸಂಗ್ರಹಕ್ಕೂ ಮುಂದಾಗಿದೆ. ರೈಲ್ವೆ ಇಲಾಖೆ ಖಾಲಿ ನೀರಿನ ಬಾಟಲಿ ನೀಡಿದವರಿಗೆ ಪ್ರತಿ ಬಾಟಲಿಗೆ 5 ರೂ. ನೀಡಲು ನಿರ್ಧರಿಸಿದೆ.

ಇನ್ನು ಪಾಟ್ನ ಜಂಕ್ಷನ್​, ರಾಜೇಂದ್ರನಗರ್​, ಪಾಟ್ನ ಸಾಹಿಬ್​, ದನಪುರ್​ ಸ್ಟೇಷನ್​ನಲ್ಲಿ ರಿವರ್ಸ್​ ವೆಂಡಿಂಗ್​ ಯಂತ್ರವನ್ನು ಸ್ಥಾಪಿಸಿದೆ. ಈ ಯಂತ್ರದ ಮೂಲಕ ಪ್ಲಾಸಿಕ್​ ಬಾಟಲಿಗಳನ್ನು ಸಡಿಲಗೊಳಿಸಿ ಟೀ ಶರ್ಟ್ ಮತ್ತು ಟೋಪಿ ತಯಾರಿಸುತ್ತಿದೆ.  ಅಂತೆಯೇ, ಪ್ಲಾಸ್ಟಿಕ್​ನಿಂದ ತಯಾರಾಗುವ ಟೀ-ಶರ್ಟ್​ ಎಲ್ಲಾ ಕಾಲದಲ್ಲೂ ಧರಿಸಬಹುದಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಪ್ಲಾಸ್ಟಿಕ್​ನಿಂದ ತಯಾರಿಸುತ್ತಿರುವ ಟೀ-ಶರ್ಟ್​ ಹಾಗೂ ಟೋಪಿ ತಯಾರಿಕೆಯಿಂದ ನಗರಗಳು ಸ್ವಚ್ಚವಾಗಲಿದೆ. ಅಂತೆಯೇ, ರೈಲ್ವೆ ನಿಲ್ದಾಣಗಳಲ್ಲೂ ಮತ್ತು ರೈಲ್ವೆ ಬೋಗಿಗಳು ಸ್ವಚ್ಛವಾಗಲಿದೆ.
First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...