Squid Game ವೆಬ್ ಸೀರೀಸ್‌ನಿಂದ ಡಾಲ್ಗೋನಾ ಕ್ಯಾಂಡಿ ಹೇಗೆ ಪ್ರಸಿದ್ಧಿ ಪಡೆದುಕೊಂಡಿತು..? ಇಲ್ಲಿದೆ ವಿವರ

Dalgona candy: ಡಾಲ್ಗೋನಾ ಕಡಿಮೆ ಬೆಲೆಯ, ಅನಾರೋಗ್ಯಕರವಾದ ಹಾಗೂ ಮಕ್ಕಳಿಗೆ ಈ ಆಟವು ಒಂದು ವ್ಯಸನದಂತೆ ಮಾರ್ಪಟ್ಟಿತ್ತು. ಇದರಲ್ಲಿ ನಾನು ಭಾಗಿಯಾಗಿದ್ದೆ ಎಂದು ಪಾರ್ಕ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

Dalgona Candy

Dalgona Candy

 • Share this:
  Squid Game And Dalgona candy: ಡಾಲ್ಗೋನಾ ಕಾಫಿ ಕೊರೋನಾ ಸಮಯದಲ್ಲಿ ಮನೆ ಮನೆಗಳಲ್ಲೂ ಖ್ಯಾತಿ ಗಳಿಸಿದ್ದ ಒಂದು ಕ್ರೀಮ್ ಭರಿತ ಪಾನೀಯವಾಗಿತ್ತು. ಡಾಲ್ಗೋನಾ ಕಾಫಿ ತಯಾರಿಯ ಅದೆಷ್ಟೋ ವಿಡಿಯೋಗಳು ಇಂದಿಗೂ ಸಾಮಾಜಿಕ ತಾಣದಲ್ಲಿ ದೊರೆಯುತ್ತವೆ. ಪ್ರತಿಯೊಬ್ಬರೂ ಈ ಕಾಫಿಯನ್ನು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ್ದರು. ಹಾಗೂ ಮಾಡುವ ವಿಧಾನ ಜೊತೆಗೆ ಪೋಟೋಗಳನ್ನು ತಾಣದಲ್ಲಿ ಹಂಚಿಕೊಂಡಿದ್ದರು.ಡಾಲ್ಗೋನಾ ಕಾಫಿಗಿಂತ ಮೊದಲು ಡಾಲ್ಗೋನಾ ಕ್ಯಾಂಡಿ ದಕ್ಷಿಣ ಕೊರಿಯಾದಲ್ಲಿ (South Korea) ಜನಪ್ರಿಯವಾಗಿತ್ತು. ಆದರೆ ಆಧುನಿಕ ಕ್ಯಾಂಡಿಗಳು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತಿದ್ದಂತೆ ಜೊತೆಗೆ ಕ್ಯಾಂಡಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ತೆರೆಮರೆಗೆ ಸರಿದಂತೆ ಕ್ಯಾಂಡಿ ತನ್ನ ಖ್ಯಾತಿ ಕಳೆದುಕೊಂಡಿತು. ಆದರೆ ಈ ಕ್ಯಾಂಡಿ ಪುನಃ ಜನಪ್ರಿಯತೆ ಗಳಿಸಿಕೊಂಡಿರುವುದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಸ್ಕ್ವಿಡ್ ಗೇಮ್ ಎಂಬ ವೆಬ್ ಸೀರೀಸ್‌ (Web Series)ನಿಂದ. ಈ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

  ಸ್ಟ್ರೀಟ್‌ ಫುಡ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಡಾಲ್ಗೋನಾ ಕ್ಯಾಂಡಿಯ ನೆನಪುಗಳನ್ನು ಕೊರಿಯಾದವರಾದ ಮ್ಯಾಡಿ ಪಾರ್ಕ್ ಹಂಚಿಕೊಂಡಿದ್ದು, ದಕ್ಷಿಣ ಕೊರಿಯಾದ ಸಿಯೋಲ್‌ನ ತನ್ನ ಪ್ರಾಥಮಿಕ ಶಾಲೆಯ ಮುಂದೆ ವ್ಯಾಪಾರಿಗಳು ಕ್ಯಾಂಡಿ ಮಾರಾಟ ಮಾಡುತ್ತಿದ್ದ ನೆನಪುಗಳನ್ನು ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ. ಕ್ಯಾಂಡಿ ತಯಾರಕರು ಸಕ್ಕರೆ ಕರಗಿಸಿ ಚಿಟಿಕೆ ಅಡಿಗೆ ಸೋಡಾ ಬೆರೆಸಿ ಡಾಲ್ಗೋನಾ ಕ್ಯಾಂಡಿ ತಯಾರಿಸುತ್ತಿದ್ದರು. ನಂತರ ಮಿಶ್ರಣವನ್ನು ಸಮತಟ್ಟಾಗಿ ಒತ್ತಿ ಅದರ ಮೇಲೆ ವೃತ್ತ, ತ್ರಿಕೋನ, ಚೌಕ, ನಕ್ಷತ್ರ, ಛತ್ರಿ ಹೀಗೆ ಬೇರೆ ಬೇರೆ ಆಕಾರಗಳ ಅಚ್ಚನ್ನು ಒತ್ತುತ್ತಾರೆ ಎಂಬುದನ್ನು ಪಾರ್ಕ್ ನೆನಪಿಸಿಕೊಳ್ಳುತ್ತಾರೆ.

  ಹೀಗೆ ಅಚ್ಚೊತ್ತಿದ್ದ ಬೇರೆ ಬೇರೆ ಆಕಾರಗಳ ಕ್ಯಾಂಡಿಗಳನ್ನು ಹಾಗೆಯೇ ಮುರಿಯದೆಯೇ ತೆಗೆಯುವುದು ಒಂದು ಆಟವಾಗಿದ್ದು ಪಿಪೊಪ್ಗಿ (ppopgi) ಎಂದು ಕರೆಯಲಾಗಿದೆ. ಅದೇ ಆಕಾರಗಳ ಸ್ವರೂಪದಲ್ಲಿ ಕ್ಯಾಂಡಿಯನ್ನು ತೆಗೆದುಕೊಂಡಲ್ಲಿ ಡಾಲ್ಗೋನಾ ಕ್ಯಾಂಡಿಯನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದರು ಎಂಬುದಾಗಿ ಪಾರ್ಕ್ ಹೇಳುತ್ತಾರೆ.

  ಡಾಲ್ಗೋನಾ ಕಡಿಮೆ ಬೆಲೆಯ, ಅನಾರೋಗ್ಯಕರವಾದ ಹಾಗೂ ಮಕ್ಕಳಿಗೆ ಈ ಆಟವು ಒಂದು ವ್ಯಸನದಂತೆ ಮಾರ್ಪಟ್ಟಿತ್ತು. ಇದರಲ್ಲಿ ನಾನು ಭಾಗಿಯಾಗಿದ್ದೆ ಎಂದು ಪಾರ್ಕ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

  ಪಾರ್ಕ್ ಹಂಚಿಕೊಂಡ ಡಾಲ್ಗೋನಾ ಕ್ಯಾಂಡಿಯ ನೆನಪುಗಳಲ್ಲಿ ppopgi ಎಂದು ಕರೆಯಲಾದ ಆಟವೂ ಇದೆ. ಈ ಸಮಯದಲ್ಲಿ ನೆನಪಾಗುವುದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ “ಸ್ಕ್ವಿಡ್ ಗೇಮ್” ವೆಬ್ ಸೀರೀಸ್ ಆಗಿದೆ. ಜಾಕ್‌ಪಾಟ್ ಗೆಲ್ಲುವುದಕ್ಕಾಗಿ ಬಾಲ್ಯದ ಆಟಗಳನ್ನು ಆಡಿ ಸಾಯಲು ಸಿದ್ಧರಾಗಿರುವ ಜನರ ಗುಂಪನ್ನು ಇದು ಪ್ರತಿನಿಧಿಸುತ್ತದೆ.

  Ppopgi ಡಾಲ್ಗೋನಾ ಆಟದ ಕುರಿತು ಕೊರಿಯಾದ ಫುಡ್ ಬ್ಲಾಗರ್ ಜಿನ್‌ಜೂ ಲೀ ತಮ್ಮದೇ ವಿಚಾರಗಳನ್ನು ಮಂಡಿಸಿದ್ದು, ಈ ಆಟವು ಸ್ಕ್ವಿಡ್ ಗೇಮ್‌ನಂತೆಯೇ ಇದೆ. ಆದರೆ ಇಲ್ಲಿ ಸಾವು ಹಾಗೂ ಬದುಕುವ ಅಂಶವಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಡಾಲ್ಗೋನಾ ಕ್ಯಾಂಡಿಯ ರೆಸಿಪಿಯನ್ನು 2018ರಲ್ಲಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು ಹಾಗೂ ಕಳೆದ ಕೆಲವು ದಿನಗಳಲ್ಲಿ ಈ ಪೋಸ್ಟ್ 30% ಹೆಚ್ಚಳ ಪಡೆದುಕೊಂಡಿದೆ. ಇದೇ ರೀತಿಯ ಅನೇಕ ಸಿಹಿ ತಿಂಡಿಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿವೆ. ಆದರೆ ಅವುಗಳಿಗೆ ಬೇರೆ ಬೇರೆ ಹೆಸರುಗಳಿವೆ ಎಂದು ಜಿನ್‌ಜೂ ತಿಳಿಸುತ್ತಾರೆ.

  ಅಮೆರಿಕ ಸೈನಿಕರು ನೀಡುತ್ತಿದ್ದ ಉಚಿತ ಚಾಕೊಲೇಟ್‌ಗಳಿಗೆ ಒಗ್ಗಿಕೊಂಡಿದ್ದ ದಕ್ಷಿಣ ಕೊರಿಯಾದಲ್ಲಿನ ಮಕ್ಕಳು ಯುದ್ಧದ ನಂತರ ಡಾಲ್ಗೋನಾ ಕ್ಯಾಂಡಿಗೆ ದಾಸರಾದರು ಎಂಬುದು ಕ್ಯಾಲಿಫೋರ್ನಿಯಾದ ಕ್ಲಾರೆಮಾಂಟ್ ಮೆಕೆನ್ನಾ ಕಾಲೇಜಿನಲ್ಲಿ ಕೊರಿಯಾದ ಇತಿಹಾಸದಲ್ಲಿ ಪರಿಣತಿ ಹೊಂದಿರುವ ಸಹಾಯಕ ಪ್ರಾಧ್ಯಾಪಕ ಆಲ್ಬರ್ಟ್ ಪಾರ್ಕ್ ತಿಳಿಸುತ್ತಾರೆ. ಡಾಲ್ಗೋನಾ ಕಡಿಮೆ ಬೆಲೆಯಾದ್ದರಿಂದ ಖರೀದಿಸುತ್ತಿದ್ದರು ಎಂದು ಹೇಳುತ್ತಾರೆ.

  ಕಚ್ಚಾ ಸಕ್ಕರೆಯು ದುಬಾರಿಯಾದ್ದರಿಂದ ಮೊದಲು ಸಕ್ಕರೆಯ ಬದಲಿಗೆ ಗ್ಲೂಕೋಸ್ ಬಳಸುತ್ತಿದ್ದರು ಎಂಬುದಾಗಿ ಅಲ್ಬರ್ಟ್ ತಿಳಿಸುತ್ತಾರೆ. ಕೊರಿಯಾ ಯುದ್ಧದ ನಂತರ ವ್ಯಾಪಾರಿಗಳು ಸಕ್ಕರೆ ಬಳಸಲು ಪ್ರಾರಂಭಿಸಿದರು. ಏಕೆಂದರೆ ಕಂಪನಿಗಳು ಈ ಸಮಯದಲ್ಲಿ ಕಚ್ಚಾ ಸಕ್ಕರೆ ಸಂಸ್ಕರಿಸಲು ಆರಂಭಿಸಿದ್ದವು ಎಂದು ತಿಳಿಸುತ್ತಾರೆ. ಟಾಫಿ ಬಣ್ಣದ ಹನಿಕೋಂಬ್ ಕ್ಯಾಂಡಿ 1960ರಲ್ಲಿ ಹೆಚ್ಚು ಸಾಮಾನ್ಯವಾಗಿತ್ತು, ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಆಟಿಕೆಗಳ ಅಂಗಡಿಗಳ ಹೊರಗೆ ಇದನ್ನು ಮಾರುತ್ತಿದ್ದರು.

  ಅಲ್ಬರ್ಟ್ ಪಾರ್ಕ್ ಹೇಳುವಂತೆ ಡಾಲ್ಗೋನಾ ವ್ಯಾಪಾರಿಗಳು 2000ದ ಆರಂಭದಲ್ಲಿ ಆನ್‌ಲೈನ್ ಶಾಪಿಂಗ್ ಕಾಲಿಡುತ್ತಿರುವಂತೆಯೇ ಕ್ರಮೇಣ ಮರೆಯಾಗತೊಡಗಿದರು ಹಾಗೂ ಆಟಿಕೆಗಳ ಅಂಗಡಿಗಳು ಕ್ರಮೇಣ ಮುಚ್ಚತೊಡಗಿದವು. ದಕ್ಷಿಣ ಕೊರಿಯಾದ ಪ್ರವರ್ಧಮಾನಕ್ಕೆ ಬರುತ್ತಿದ್ದ ಕ್ಯಾಂಡಿ ಉದ್ಯಮವು, ಇತರ ಅಗ್ಗದ ಕ್ಯಾಂಡಿಗಳ ಪರಿಚಯ ಮಾಡಿಸಿದವು ಹೀಗಾಗಿ ಡಾಲ್ಗೋನಾ ಕ್ಯಾಂಡಿ ತೆರೆಮರೆಗೆ ಸರಿಯಿತು ಎಂದು ಆಲ್ಬರ್ಟ್ ಹೇಳುತ್ತಾರೆ.

  ಆದರೆ “ಸ್ಕ್ವಿಡ್ ಗೇಮ್” ಜನಪ್ರಿಯತೆಯ ನಂತರ ಡಾಲ್ಗೋನಾ ಕ್ಯಾಂಡಿ ಪುನಃ ಪ್ರಸಿದ್ಧತೆ ಗಳಿಸಿಕೊಂಡಿದೆ ಹಾಗೂ ಅತ್ಯದ್ಭುತ ಸಿಹಿತಿಂಡಿಯಾಗಿ ಜನಪ್ರಿಯತೆ ಗಳಿಸಿದೆ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಕೊರಿಯಾದ ಯುವ ಜನರಿಗೆ ಈ ಕ್ಯಾಂಡಿ ಇಲ್ಲಿನದ್ದು ಎಂಬುದು ತಿಳಿದಿಲ್ಲ ಹೀಗಾಗಿ ತಮ್ಮ ಇತಿಹಾಸ ನೆನಪಿಸಿಕೊಳ್ಳಲು ಈ ಕ್ಯಾಂಡಿಗಿಂತ ಬೇರೆ ಇತಿಹಾಸದ ಪುಸ್ತಕದ ಅವಶ್ಯಕತೆ ಇಲ್ಲ ಎಂದು ಆಲ್ಬರ್ಟ್ ತಿಳಿಸುತ್ತಾರೆ.

  ಸಾಮಾಜಿಕ ಮಾಧ್ಯಮ ಕೂಡ ಈ ಕ್ಯಾಂಡಿಯ ಪ್ರಚಾರವನ್ನು ಅತಿಯಾಗಿಯೇ ವರ್ಣಿಸಿದ್ದು ಇದರಿಂದ ದಕ್ಷಿಣ ಕೊರಿಯಾದ ಹೊರಗಿನವರಿಗೂ ಈ ಕ್ಯಾಂಡಿಯ ಪರಿಚಯವಾಗಿದೆ ಎಂದು ಆಲ್ಬರ್ಟ್ ತಿಳಿಸುತ್ತಾರೆ. ಇನ್ನು ಡಾಲ್ಗೋನಾದ ಪ್ರಚಾರ ಹೆಚ್ಚು ಗಮನಸೆಳೆಯುವಂತೆ ಮಾಡಿದ್ದು ಕೊರೋನಾ ವೈರಸ್‌ನ ಸಾಂಕ್ರಾಮಿಕದ ಸಂದರ್ಭಗಳಲ್ಲಿ.

  Read Also: Live Video: ತಾಯಿಯ ಸ್ನಾನದ ವಿಡಿಯೋ ಲೈವ್ ಮಾಡಿದ ಮಗಳು! ಮಕ್ಕಳ ಕೈಗೆ ಮೊಬೈಲ್ ಕೊಟ್ರೆ ಹೀಗೆಲ್ಲಾ ಆಗ್ಬಹುದು

  ಕ್ರೀಮ್ ಭರಿತ ಕಾಫಿಯಾಗಿ ಡಾಲ್ಗೋನಾ ಕಾಫಿ ಅಮೆರಿಕದ ಮನೆಮನೆಗಳಲ್ಲಿ ಜನಪ್ರಿಯತೆ ಗಳಿಸಿಕೊಂಡಿತು. ಜನವರಿ 2020ರಲ್ಲಿ ನಟ ಜುಂಗ್ ‘ಟಾಪ್ ರೆಸಿಪಿ ಎಟ್ ಫನ್-ಸ್ಟಾರೆಂಟ್’ ಎಂಬ ದಕ್ಷಿಣ ಕೊರಿಯಾದ ಟಿವಿ ಕಾರ್ಯಕ್ರಮವೊಂದರಲ್ಲಿ ಇದನ್ನು ತಯಾರಿಸಿದರು. ಹೀಗಾಗಿ ಡಾಲ್ಗೋನಾ ಪಾನೀಯ ವಿಶ್ವಖ್ಯಾತಿ ಪಡೆದುಕೊಂಡಿತು. ಈ ಪಾನೀಯ ಅವರಿಗೆ ಡಾಲ್ಗೋನಾ ಕ್ಯಾಂಡಿಯ ನೆನಪನ್ನು ತರಿಸಿದೆ ಎಂಬುದನ್ನು ತಿಳಿಸಿದ್ದರು. ತದನಂತರ ದಕ್ಷಿಣ ಕೊರಿಯಾದ ಕಾಫಿ ಶಾಪ್‌ಗಳಲ್ಲಿ ಹಾಗೂ ಯುಎಸ್‌ಗಳಲ್ಲಿ ಡಾಲ್ಗೋನಾ ಕಾಫಿ ಮನೆಮಾತಾಯಿತು.

  ಕ್ಯಾಂಡಿಯು ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿರುವುದು ಅದರ ಕಹಿ, ಸಿಹಿ ರುಚಿಗಾಗಿದೆ. ಇದರ ಸುವಾಸನೆಯು ನಿಮಗೆ ಬಹಳ ಮೆಚ್ಚುಗೆಯಾಗುತ್ತದೆ ಎಂದು ಜರ್ಮನಿಯ 46ರ ಹರೆಯದ ಅನ್ನಿಯೂ ಹೇಳುತ್ತಾರೆ. ದಕ್ಷಿಣ ಕೊರಿಯಾದ ನೆನಪುಗಳಲ್ಲಿ ಈ ಕ್ಯಾಂಡಿ ಕೂಡ ಸೇರಿದೆ ಎಂಬುದನ್ನು ನೆನಪಿಸುತ್ತಾರೆ. ಡಾಲ್ಗೋನಾ ಕ್ಯಾಂಡಿ ಸವಿಯುವುದಕ್ಕಾಗಿ ಕೊಳಕು ರಸ್ತೆಗಳಲ್ಲಿ ನಡೆದು ಮಾರಾಟಗಾರರಿಂದ ಕ್ಯಾಂಡಿಯನ್ನು ಪಡೆದುಕೊಳ್ಳುತ್ತಿದ್ದುದನ್ನು ಯೂ ನೆನಪಿಸಿಕೊಳ್ಳುತ್ತಾರೆ.

  ಸ್ಕ್ವಿಡ್ ಗೇಮ್‌ನ ಸರಣಿಯ ಯೂಟ್ಯೂಬ್ ವಿಡಿಯೋ ಒಂದರಲ್ಲಿ ಸೀರೀಸ್‌ನ ಆರ್ಟ್ ಡೈರೆಕ್ಟರ್ ಚೇ ಕಂಗ್ ಸನ್, ಈ ಕ್ಯಾಂಡಿಯು ಅತ್ಯಂತ ಕುತಂತ್ರ ಮೂಲವಾಗಿದ್ದು ಚಿತ್ರೀಕರಣದ ಸಮಯದಲ್ಲಿ ಕ್ಯಾಂಡಿ ತಯಾರಿಸುವ ವೃತ್ತಿಪರರ ಇದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಕ್ಯಾಂಡಿ ಆಟವನ್ನು ಆಡಿದವರು ವಿಭಿನ್ನ ತಂತ್ರಗಳೊಂದಿಗೆ ಸೀರೀಸ್‌ನಲ್ಲಿ ಆಟವನ್ನು ಸಮೀಪಿಸುತ್ತಾರೆ. ಸೀರೀಸ್‌ನ ಬರಹಗಾರ ಹಾಗೂ ನಿರ್ದೇಶಕ ಹ್ವಾಂಗ್ ಡಾಂಗ್ ತಮ್ಮದೇ ಕೆಲವೊಂದು ನೆನಪುಗಳನ್ನು ಸೀರೀಸ್‌ನಲ್ಲಿ ಸೇರಿಸಿಕೊಂಡಿದ್ದಾರೆ. ಇದರ ಮುಖ್ಯ ಪಾತ್ರವಾದ ಸಿಯೊಂಗ್ ಛತ್ರಿ ಆಕಾರವನ್ನು ಸ್ಟಿಕ್‌ನಿಂದ ಬಿಡಿಸುವುದಕ್ಕಾಗಿ ಕ್ಯಾಂಡಿ ನೆಕ್ಕುವ ದೃಶ್ಯವಿದೆ. ಹ್ವಾಂಗ್ ಡಾಂಗ್ ಕೂಡ ಎಳವೆಯಲ್ಲಿ ಉಚಿತ ಕ್ಯಾಂಡಿಗಳನ್ನು ಪಡೆಯಲು ಹೀಗೆಯೇ ಮಾಡುತ್ತಿದ್ದರು. ಆ ನೆನಪುಗಳನ್ನು ವೆಬ್ ಸೀರೀಸ್‌ನಲ್ಲಿ ಕೂಡ ಸೇರಿಸಿದ್ದಾರೆ.
  First published: