Damodaran: 3 ದಶಕದಲ್ಲಿ 6 ಲಕ್ಷ ಶೌಚಾಲಯ ನಿರ್ಮಿಸಿ ಸ್ವಚ್ಛ ಭಾರತದ ರಾಯಭಾರಿಯಾದ ದಾಮೋದರನ್

3 Decades 6 Lakh toilet: ದಾಮೋದರನ್ ಅವರು ಸ್ಥಾಪಿಸಿದ NGO ಕಳೆದ 3 ದಶಕಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಮನೆ ಶೌಚಾಲಯಗಳು ಮತ್ತು 500 ಶಾಲಾ ಶೌಚಾಲಯಗಳನ್ನು ನಿರ್ಮಿಸಿದೆ. ದಾಮೋದರನ್ ಅವರ ಗ್ರಾಮಾಲಯದ ಮೂಲಕ ನಿರ್ಮಿಸಲಾದ ನೈರ್ಮಲ್ಯ ಸೌಲಭ್ಯಗಳು ದಕ್ಷಿಣದ ರಾಜ್ಯಗಳಾದ್ಯಂತ 30 ಲಕ್ಷಕ್ಕೂ ಹೆಚ್ಚು ಜನರ ಸ್ವಚ್ಛತೆಯ ಅಭ್ಯಾಸದ ಮೇಲೆ ಇವರೆಗೂ ಪರಿಣಾಮ ಬೀರಿವೆ.

ದಾಮೋದರನ್

ದಾಮೋದರನ್

  • Share this:
    ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ (mahatma gandhi) ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ವಚ್ಛ ಭಾರತ ಅಭಿಯಾನಕ್ಕೆ(Swachh Bharat Abhiyan) ಕರೆಕೊಟ್ಟು ಇಂದು ಬಯಲು ಶೌಚಾಲಯ(Toilet) ಮುಕ್ತ ದೇಶವನ್ನಾಗಿ ಭಾರತವನ್ನು(India) ಮಾಡಲು ಮುಂದಾಗಿದ್ದಾರೆ.. ಹೀಗಾಗಿ ದೇಶದ ಎಲ್ಲಾ ಹಳ್ಳಿಗಳಲ್ಲೂ ಬಯಲು ಮುಕ್ತ ಶೌಚಾಲಯವಾಗಿದೆ.. ಆದರೆ ಇದಕ್ಕೂ ಮೊದಲು ದೇಶದ ಬಹುಭಾಗಗಳಲ್ಲಿ ಜನರು ಶೌಚಾಲಯಗಳ ಬಳಕೆ ಮಾಡುವ ಬದಲು ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಿದ್ರು.. ಇದು ಕಾಲರಾ, ಯಕೃತ್ತಿನ ಉರಿಯೂತ, ಟೈಫಾಯಿಡ್‌ ಮತ್ತಿತರ ಕಾಯಿಲೆಗಳು ಹರಡಲು ಕಾರಣವಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲೂ ತಿಳುವಳಿಕೆ ಹಾಗೂ ಕೇಂದ್ರ ಸರ್ಕಾರದ ಅಭಿಯಾನದಿಂದಾಗಿ ಇಂದು ದೇಶದ ಬಹುತೇಕ ಹಳ್ಳಿಗಳು ಬಯಲು ಮುಕ್ತ ಶೌಚಾಲಯವಾಗಿವೆ.. ಆದರೆ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡುವ ಮೊದಲೇ ತಮಿಳುನಾಡಿನ ವ್ಯಕ್ತಿಯೊಬ್ಬ ಹಳ್ಳಿ ಹಳ್ಳಿಗಳ ಜನರಿಗೆ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡುವ ಕೆಲಸಕ್ಕೆ ಸದ್ದಿಲ್ಲದೆ ಮುಂದಾಗಿದ್ರು.

    35 ವರ್ಷಗಳ ಹಿಂದೆಯೇ ಪ್ರಾರಂಭವಾಯಿತು ಸ್ವಚ್ಛ ಅಭಿಯಾನ

    ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಕಾಲೇಜೊಂದರಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಸದಸ್ಯರಾಗಿದ್ದಾಗ ಸಾಯಿ ದಾಮೋದರನ್, ನೈರ್ಮಲ್ಯ ಸೌಲಭ್ಯಗಳು ಮತ್ತು ನೈರ್ಮಲ್ಯ ಮತ್ತು ಶುಚಿತ್ವದ ಮಹತ್ವದ ಬಗ್ಗೆ ಅರಿವಿನ ಜನರಲ್ಲಿದ್ದ ಅರಿವಿನ ಕೊರತೆಯನ್ನು ಗಮನಿಸಿ, ಜನರಿಗೆ ಸ್ವಚ್ಛತೆ ಬಗ್ಗೆ ಹಳ್ಳಿ ಹಳ್ಳಿಗಳಿಗೆ ತೆರಳಿ ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ತಿಳುವಳಿಕೆ ನೀಡುವ ನಿರ್ಧಾರವನ್ನು ಮಾಡಿದ್ರು.. ಹೀಗಾಗಿ 1987 ರಲ್ಲಿ, ದಾಮೋದರನ್ ಗ್ರಾಮಾಲಯ ಎಂಬ ಸರ್ಕಾರೇತರ ಸಂಸ್ಥೆಯನ್ನು (NGO) ಸ್ಥಾಪಿಸಿ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಸ್ವಚ್ಛತೆ ಹಾಗೂ ನೈರ್ಮಲ್ಯದ ಜಾಗೃತಿ ಮೂಡಿಸುವುದರ ಜೊತೆಗೆ ಜನರು ಆರೋಗ್ಯದ ಕಡೆ ಗಮನ ನೀಡುವಂತೆ ತಿಳುವಳಿಕೆ ಮಾಡಲು ಮುಂದಾದರು..

    ಇದನ್ನೂ ಓದಿ :ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವ ಮನ್ನಣೆ; ಪ್ರಧಾನಿ ಮೋದಿಗೆ 'ಗ್ಲೋಬಲ್ ಗೋಲ್​ಕೀಪರ್' ಪ್ರಶಸ್ತಿ ಪ್ರದಾನ

    3 ದಶಕಗಳಲ್ಲಿ 6 ಲಕ್ಷ ಶೌಚಾಲಯ ನಿರ್ಮಾಣ: 

    ಗ್ರಾಮಾಲಯ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಂಡ ಸಾಯಿ ದಾಮೋದರನ್, ಇಂದು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ,ಕೇರಳ ಮತ್ತು ಪುದುಚೇರಿ, ತೆಲಂಗಾಣಗಳಲ್ಲಿ 1,000 ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಹಲವಾರು ನಗರ ಪ್ರದೇಶಗಳಲ್ಲಿ ವಾಸಿಸುವವ ಜನರಿಗೆ ಅಗತ್ಯವಿರುವ ನೀರು ನೈರ್ಮಲ್ಯ ಸೇವೆಯನ್ನು ಒದಗಿಸಲು ಮುಂದಾಗಿದ್ದಾರೆ.

    ಅಲ್ಲದೆ ಆ ದಮೋದರನ್ ಅವರು ಸ್ಥಾಪಿಸಿದ NGO ಕಳೆದ 3 ದಶಕಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಮನೆ ಶೌಚಾಲಯಗಳು ಮತ್ತು 500 ಶಾಲಾ ಶೌಚಾಲಯಗಳನ್ನು ನಿರ್ಮಿಸಿದೆ. ದಾಮೋದರನ್ ಅವರ ಗ್ರಾಮಾಲಯದ ಮೂಲಕ ನಿರ್ಮಿಸಲಾದ ನೈರ್ಮಲ್ಯ ಸೌಲಭ್ಯಗಳು ದಕ್ಷಿಣದ ರಾಜ್ಯಗಳಾದ್ಯಂತ 30 ಲಕ್ಷಕ್ಕೂ ಹೆಚ್ಚು ಜನರ ಸ್ವಚ್ಛತೆಯ ಅಭ್ಯಾಸದ ಮೇಲೆ ಇವರೆಗೂ ಪರಿಣಾಮ ಬೀರಿವೆ.

    ಭಾರತದ ಮೊದಲ ಬಯಲು ಶೌಚ ಮುಕ್ತ ಗ್ರಾಮದ ಹಿಂದೆ ದಾಮೋದರನ್

    ತಿರುಚಿರಾಪಳ್ಳಿ ಸಿಟಿ ಮುನ್ಸಿಪಲ್ ಕಾರ್ಪೊರೇಶನ್ ಅಡಿಯಲ್ಲಿ ಬರುವ ಕಲ್ಮಂಧೈಯನ್ನ ಸಂಪೂರ್ಣ ಬಯಲು ಕೊಳಗೇರಿ ಎಂದು ಘೋಷಿಸಲಾಯಿತು..ಆದ್ರೆ ಈ ಘೋಷಣೆಯ ಹಿಂದೆ ಶ್ರಮಿಸಿದ್ದು ಮಾತ್ರ ಗ್ರಾಮಾಲಯ ಸೇವಾ ಸಂಸ್ಥೆಯ ಸದಸ್ಯರೊಂದಿಗೆ ಹಳ್ಳಿಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಮುಂದಾದ ದಾಮೋದರಂ ಅವರು.

    ಇನ್ನು 2003 ರಲ್ಲಿ, ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ 62 ಮನೆಗಳ ವಾಸಸ್ಥಾನವಾದ ತಾಂಡವಂಪಟ್ಟಿಯನ್ನು ಭಾರತದ ಮೊದಲ ಬಯಲು ಮುಕ್ತ ಶೌಚಾಲಯ ಗ್ರಾಮ ಎಂದು ಘೋಷಿಸಲಾಯಿತು.. ಇದರ ಹಿಂದೆಯೂ ಸಹ ಗ್ರಾಮಾಲಯದ ಸದಸ್ಯರ ಪರಿಶ್ರಮ ಹಾಗೂ ದಾಮೋದರನ್ ಅವರ ಪರಿಶ್ರಮವಿತ್ತು..

    ಅಲ್ಲದೆ ಇಲ್ಲಿಯವರೆಗೆ ದಾಮೋದರನ್ ಅವರ ಗ್ರಾಮಾಲಯವು ತಂಡವು ದಕ್ಷಿಣ ಭಾರತದ 200ಕ್ಕೂ ಹೆಚ್ಚು ಕೊಳೆಗೇರಿ ಪ್ರದೇಶಗಳು ಮತ್ತು 300 ಕ್ಕೂ ಹೆಚ್ಚು ಹಳ್ಳಿಗಳನ್ನು ಹಲವು ವರ್ಷಗಳಿಂದ ಬಯಲು ಶೌಚ ಮುಕ್ತ ಗ್ರಾಮಗಳನ್ನ ಮಾಡಲು ನಿರಂತರವಾಗಿ ಶ್ರಮಿಸಿವೆ.

    ಕಡಿಮೆ ವೆಚ್ಚದ ಶೌಚಾಲಯ ಮಾದರಿಗಳನ್ನು ನಿರ್ಮಿಸಿರುವ ದಾಮೋದರನ್

    ದಾಮೋದರನ್ ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಈವರೆಗೂ ಕಡಿಮೆ ವೆಚ್ಚದ 24 ಶೌಚಾಲಯ ಮಾದರಿಗಳು, ಹಾಗೂ ಶೌಚಾಲಯ ತಂತ್ರಜ್ಞಾನ ಮಾದರಿ &ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ..

    ಇನ್ನು 2013 ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಗ್ರಾಮಾಲಯವನ್ನು ದಕ್ಷಿಣ ಭಾರತದ ರಾಜ್ಯಗಳಾದ್ಯಂತ ಸರ್ಕಾರಿ ಅಧಿಕಾರಿಗಳು ಮತ್ತು ಎನ್‌ಜಿಒಗಳಿಗೆ ನೀರು ಮತ್ತು ನೈರ್ಮಲ್ಯದ ಕುರಿತು ತರಬೇತಿ ನೀಡಲು ರಾಷ್ಟ್ರೀಯ ಪ್ರಮುಖ ಸಂಪನ್ಮೂಲ ಕೇಂದ್ರಗಳಲ್ಲಿ ಒಂದಾಗಿ ಅನುಮೋದಿಸಿದೆ..

    ಇದನ್ನೂ ಓದಿ : ಬೈಕ್ ಜಾಥಾ ಮೂಲಕ ಲೆಕ್ಕ ಪರಿಶೋಧಕರಿಂದ ಸ್ವಚ್ಛ ಭಾರತ ಅಭಿಯಾನ

    ಕೇಂದ್ರ ಸರ್ಕಾರದ ಸ್ವಚ್ಛತಾ ಯೋಜನೆಗಳಲ್ಲೂ ಸಕ್ರಿಯವಾಗಿರುವ ದಾಮೋದರನ್

    ತಮ್ಮ ಜೀವನದುದ್ದಕ್ಕೂ ಸ್ವಚ್ಛತೆ, ನೈರ್ಮಲ್ಯ ಕುಡಿಯುವ ನೀರು, ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿರುವ ದಾಮೋದರನ್ ಅವರು ಮನೆಯ ಶೌಚಾಲಯ ಬಳಕೆ ಮತ್ತು ನೈರ್ಮಲ್ಯ ಶಿಕ್ಷಣದ ಮೂಲಕ ಸಾವಿರಾರು ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಸಬಲಗೊಳಿಸಿದ್ದಾರೆ.ಇಷ್ಟೇ ಅಲ್ಲದೆ 1980 lರ ದಶಕದಲ್ಲಿ ಪರಿಚಯಿಸಲಾದ ಸಿಆರ್‌ಎಸ್‌ಪಿ, 1990 ರ ಟಿಎಸ್‌ಸಿ, 2000ದ ಎನ್‌ಬಿಎ ಮತ್ತು 2014 ರಲ್ಲಿ ಪ್ರಾರಂಭಿಸಲಾದ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಂತಹ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ..

    ' ಟಾಯ್ಲೆಟ್ ಟೈಟಾನ್ ಪ್ರಶಸ್ತಿ' ಪ್ರಶಸ್ತಿಗೆ ಪಾತ್ರರಾಗಿರುವ ದಾಮೋದರನ್

    ಇದುವರೆಗೂ ಹಲವಾರು ಹಳ್ಳಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿ ನೂರಾರು ಗ್ರಾಮಗಳನ್ನು ಬಯಲು ಮುಕ್ತ ಶೌಚಾಲಯ ಗ್ರಾಮಗಳನ್ನಾಗಿ ಮಾಡಿ, ಸಾವಿರಾರು ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಶ್ರಮಿಸಿರುವ ದಾಮೋದರನ್ ಅವರಿಗೆ ಅಕ್ಟೋಬರ್ 2, 2017 ರಂದು, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ‘ಟಾಯ್ಲೆಟ್ ಟೈಟಾನ್ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.

    ಇನ್ನು ಎಲ್ಲರಿಗೂ ಶುದ್ಧ ನೀರು, ಸುರಕ್ಷಿತ ನೈರ್ಮಲ್ಯ ಮತ್ತು ನೈರ್ಮಲ್ಯದ ಪ್ರವೇಶದ ಕಡೆಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ನ್ಯೂಸ್ 18 ಮತ್ತು ಹಾರ್ಪಿಕ್ ಇಂಡಿಯಾದ ರೂಪಿಸಿರುವ ಮಿಷನ್ ಪಾನಿ ಕಾರ್ಯಕ್ರಮದಲ್ಲಿ ದಾಮೋದರನ್ ಸಹ ಭಾಗಿಯಾಗಲಿದ್ದಾರೆ.. ಸುರಕ್ಷಿತ ನೈರ್ಮಲ್ಯ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ಒದಗಿಸುವ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ..
    Published by:ranjumbkgowda1 ranjumbkgowda1
    First published: