Health Benefits: ಸಂಸ್ಕ್ರತದಲ್ಲಿ 'ಪನಸ' ಎಂದು ಕರೆಯುವ ಹಲಸಿನ ಹಣ್ಣಿಗೆ ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರಿದೆ. ಇಂಗ್ಲಿಷ್ ಅಲ್ಲಿ ಜಾಕ್ ಫ್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ಣಿನ ಪ್ರಾಮುಖ್ಯತೆ ಅಪಾರ. ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಸುಮಾರು 10 - 12 ಮೀಟರ್ಗಳಷ್ಟು ಎತ್ತರಕ್ಕೆ ಹಲಸಿನ ಮರ ಬೆಳೆಯುತ್ತವೆ.
1)ಉತ್ತಮ ಆರೋಗ್ಯಕ್ಕಾಗಿ ಹಲಸಿನ ಹಣ್ಣಿನ ಬೀಜ
ನಾವು ಅಂತರರಾಷ್ಟ್ರೀಯ ಆಹಾರ ಪದ್ಧತಿಗಳನ್ನು ಮಾನ್ಯತೆ ನೀಡಲು, ಅನುಕರಿಸಲು ನಿರತರಾಗಿರಾಗಿದ್ದು , ಎಲ್ಲೋ ನಮ್ಮ ಸ್ಥಳೀಯ ಭಾರತೀಯ ಆಹಾರಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಅವುಗಳಿಂದ ನಮಗೆ ಸಿಗಬಹುದಾದ ರೋಗನಿರೋಧಕ ಶಕ್ತಿಯಿಂದ ವಂಚಿತರಾಗುತ್ತಿದ್ದೇವೆ. ಇತ್ತೀಚೆಗೆ, ಪ್ರಸಿದ್ಧ ಪೌಷ್ಟಿಕತಜ್ಞೆ ಮತ್ತು ಲೇಖಕಿ ರುಜುಟಾ ದಿವೇಕರ್, ತನ್ನ ಗುರುತನ್ನು ಕಳೆದುಕೊಂಡಿರುವಂತಹ ಒಂದು ಆಹಾರ ಪದಾರ್ಥದ ಚಿತ್ರವನ್ನು ಶೇರ್ ಮಾಡಿದ್ದಾರೆ. ಅದುವೇ ‘ಹಲಸಿನ ಹಣ್ಣಿನ ಬೀಜಗಳು’.
ಅವರ ಪ್ರಕಾರ, ಈ ಸಮಯವು ನಾವು ನಮ್ಮ ಮೂಲಗಳಿಗೆ ಮರಳುವುದ್ದಾಗಿದೆ. ಈ ಪ್ರಯಾಣವು ಸವಾಲಿನದ್ದೇ ಆಗಿರಬಹುದು. ಆದರೆ ಇದರಿಂದ ಸಿಗುವು ಲಾಭವು ಅಧಿಕ. ನಾವು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟರೆ, ಕಳೆದುಹೋದ ನಮ್ಮ ಆಹಾರಾಭ್ಯಾಸಗಳನ್ನು ಪುನಃ ಪಡೆದುಕೊಳ್ಳಬಹುದು.
“ಹಲಸಿನ ಹಣ್ಣಿನ ಬೀಜಗಳನ್ನು ಇನ್ನಿತರೆ ಸೊಪ್ಪು ಅಥವಾ ತರಕಾರಿಯಂತೆ ಬೇಯಿಸಿ ಅನ್ನದೊಂದಿಗೆ ತಿನ್ನಬಹುದು. ಬೀಜಗಳನ್ನು ಸ್ವಲ್ಪ ಉಪ್ಪು ಮತ್ತು ಮೆಣಸಿನಕಾಯಿಯೊಂದಿಗೆ ಬೇಯಿಸಿ ಅಥವಾ ಹುರಿದು ರುಚಿಕರವಾದ ತಿಂಡಿ ಸವಿಯಬಹುದು. ಸತು, ಜೀವಸತ್ವಗಳು ಮತ್ತು ನಾರಿನಂತಹ ಖನಿಜಗಳಿಂದ ಸಮೃದ್ಧವಾಗಿರುವ ಅವು ನಿಮ್ಮ ಅಂಗಾಂಶಗಳಿಗೆ ಶಕ್ತಿ, ಆಹಾರಕ್ರಮಕ್ಕೆ ವೈವಿಧ್ಯತೆ ಮತ್ತು ರುಚಿಯನ್ನು ಸೇರಿಸುತ್ತವೆ ಎಂದು ಜಾಕ್ಫ್ರೂಟ್ ಬೀಜಗಳ ಪ್ರಯೋಜನಗಳ ಬಗ್ಗೆ ತಿಳಿಸುತ್ತಾರೆ.
2)ಜೀರ್ಣಕ್ರಿಯೆ ಸುಧಾರಣೆ
ತಜ್ಞರ ಪ್ರಕಾರ, ಹಲಸಿನ ಬೀಜಗಳು ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಲ್ಲವು. ಅವುಗಳಲ್ಲಿ ನಾರಿನಂಶ ಮೃದ್ಧವಾಗಿದ್ದು, ಇದು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅತಿಸಾರಕ್ಕೂ ಚಿಕಿತ್ಸೆ ನೀಡುತ್ತದೆ.
3)ಕಣ್ಣಿನ ದೃಷ್ಟಿಯ ವರ್ಧನೆ
ಈ ಬೀಜಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ, ಇದು ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಕ್ಷೀಣತೆಯನ್ನು ತಡೆಯುತ್ತದೆ.
4)ಆರೋಗ್ಯಪೂರ್ಣ ಲೈಂಗಿಕತೆ
ಹಲಸಿನ ಬೀಜಗಳಲ್ಲಿನ ಕಬ್ಬಿಣದ ಅಂಶವು ಲೈಂಗಿಕ ಆನಂದವನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಈ ಬೀಜಗಳನ್ನು ಲೈಂಗಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಏಷ್ಯಾದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ ಎಂದು ಸಾಬೀತಾಗಿದೆ.
5)ಸ್ನಾಯು ನಿರ್ಮಾಣ ಕ್ರಿಯೆ
ಪ್ರೋಟೀನ್ ಅಂಶದಿಂದ ಸಮೃದ್ಧವಾಗಿರುವ ಈ ಬೀಜಗಳು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮ್ಮ ನಿಯಮಿತ ಪ್ರೋಟೀನ್ ಸೇವನೆಯೊಂದಿಗೆ ಈ ಬೀಜಗಳನ್ನು ಬಳಕೆ ಮಾಡಿದ್ದಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಬಹುದು ಎಂದು ತಜ್ಞರು ಸೂಚಿಸುತ್ತಾರೆ.
6)ಚರ್ಮ ಸುಕ್ಕುಗಟ್ಟುವುದರ ನಿಯಂತ್ರಣ
ಹಲಸಿನ ಬೀಜಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಅಂಶವು ಅಕಾಲಿಕ ವಯಸ್ಸಾಗುವಿಕೆ, ಚರ್ಮ ಸುಕ್ಕುಗಳಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಬೀಜಗಳನ್ನು ತಣ್ಣನೆಯ ಹಾಲಿನೊಂದಿಗೆ ಪುಡಿಮಾಡಿ ಮತ್ತು ಪೇಸ್ಟ್ ಅನ್ನು ದಿನಕ್ಕೆ ಒಮ್ಮೆ 15-20 ದಿನಗಳವರೆಗೆ ಹಚ್ಚಿ.
7).ಕೂದಲು ಬೆಳೆಯುವಿಕೆ
ಪ್ರೋಟೀನ್ ಮತ್ತು ಕಬ್ಬಿಣದ ಅಂಶವು ಕೂದಲಿನ ಆರೋಗ್ಯವನ್ನು ವರ್ಧಿಸುತ್ತದೆ. ಕಬ್ಬಿಣದ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸಿದರೆ, ವಿಟಮಿನ್ ಎ ಕೂದಲಿಗೆ ಹಾನಿಯಾಗದಂತೆ ತಡೆಯುತ್ತದೆ.
8)ರಕ್ತಹೀನತೆ ತಡೆಗಟ್ಟುವಿಕೆ
ಕಬ್ಬಿಣದ ಅಂಶದಿಂದ ಸಮೃದ್ಧವಾಗಿರುವ ಈ ಬೀಜಗಳು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇತರ ರಕ್ತದ ಕಾಯಿಲೆಗಳನ್ನು ಎದುರಿಸಲು ಸಹ ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ