Cancer Patient: ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದ ಬಾಲಕ ಆಸ್ಪತ್ರೆ ಆವರಣದಲ್ಲೇ ಭಾವುಕನಾದ! ವಿಡಿಯೋ ವೈರಲ್

ಆಟ-ಪಾಠ ಅಂತಾ ಓಡಾಡಿಕೊಂಡಿರಬೇಕಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಕಳೆಯುವಂತಾದರೆ ಹೇಗಿರುತ್ತೆ ಹೇಳಿ? ಮಾಹಾಮರಿ ರೋಗಗಳಿಗೆ ತುತ್ತಾಗಿರುವ ಮಕ್ಕಳಿಗೆ ಕೇವಲ ಔಷಧಿ, ಆಸ್ಪತ್ರೆ, ವೈದ್ಯರೇ ಪ್ರಪಂಚವಾಗಿರುತ್ತಾರೆ. ಆದರೆ ಇಲ್ಲೊಬ್ಬ ಬಾಲಕನ ಹುಟ್ಟುಹಬ್ಬದಂದು ಸಿಬ್ಬಂದಿಗಳು ನೀಡಿದ ಸುರ್ಪ್ರೈಸ್ ಹೇಗಿತ್ತು ಗೊತ್ತಾ ನೀವೇ ನೋಡಿ

ಮಹಾಮಾರಿ ಕಾಯಿಲೆಗೆ ತುತ್ತಾದ ಬಾಲಕ

ಮಹಾಮಾರಿ ಕಾಯಿಲೆಗೆ ತುತ್ತಾದ ಬಾಲಕ

  • Share this:
ಕೆಲವೊಮ್ಮೆ ಪುಟ್ಟ ಪುಟ್ಟ ಮಕ್ಕಳು (Children) ಯಾವುದೋ ಒಂದು ಕಾಯಿಲೆಯಿಂದ (Disease) ಬಳಲುತ್ತಾ ಆಸ್ಪತ್ರೆಯ (Hospital) ಬೆಡ್ ಮೇಲೆ ಮಲಗಿರುವುದನ್ನು ನೋಡಿದರೆ ಎಂಥವರ ಕರುಳು ಸಹ ಚುರುಕ್ ಎನ್ನುತ್ತದೆ. ‘ಏನಪ್ಪಾ ಇಂತಹ ಚಿಕ್ಕ ವಯಸ್ಸಿನ (Small Age) ಮಕ್ಕಳಿಗೂ ಈ ಮಹಾಮಾರಿ ಕಾಯಿಲೆಗಳು ಬಿಡುತ್ತಿಲ್ಲವಲ್ಲ, ಪಾಪ’ ಎಂದು ಜಗತ್ತನ್ನೇ ನೋಡಿರದ ಆ ಪುಟ್ಟ ಮಕ್ಕಳನ್ನು ನೋಡಿ ಅನೇಕ ಸಾರಿ ಅಂದು ಕೊಂಡಿರುತ್ತೇವೆ. ಆಟ-ಪಾಠ ಅಂತಾ ಓಡಾಡಿಕೊಂಡಿರಬೇಕಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಕಳೆಯುವಂತಾದರೆ ಹೇಗಿರುತ್ತೆ ಹೇಳಿ? ಮಾಹಾಮರಿ ರೋಗಗಳಿಗೆ ತುತ್ತಾಗಿರುವ ಮಕ್ಕಳಿಗೆ ಕೇವಲ ಔಷಧಿ (Medicine), ಆಸ್ಪತ್ರೆ, ವೈದ್ಯರೇ ಪ್ರಪಂಚವಾಗಿರುತ್ತಾರೆ.

ಇಂತಹ ಸಂದರ್ಭದಲ್ಲಿ ಅವರಿಗೆ ಬೇರೆ ಖುಷಿ ನೀಡುವ ಏನನ್ನಾದರು ಮಾಡಿದರೆ ಮಕ್ಕಳ ಸಂತೋಷಕ್ಕೆ ಪಾರವೇ ಇಲ್ಲದಂತಾಗುತ್ತದೆ. ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ನಾವೇನಾದರೂ ಸರ್‌ಪ್ರೈಸ್ ನೀಡಿದರೆ ಸಾಕು ಅವರ ಮುಖದಲ್ಲಿ ಮೂಡುವ ಆ ಸಂತೋಷಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ .

ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೆ ಆಸ್ಪತ್ರೆಯಲ್ಲಿ ಇರುವವರಿಗಾಗಿ ಅಲ್ಲಿನ ಸಿಬ್ಬಂದಿಗಳು ಏನಾದರೊಂದು ಸರ್‌ಪ್ರೈಸ್ ನೀಡಿ ಅವರನ್ನು ಸಂತೋಷ ಪಡಿಸುತ್ತಿರುವುದನ್ನು ನಾವು ವೀಡಿಯೋಗಳಲ್ಲಿ ನೋಡಿರುತ್ತೇವೆ.

ಬಾಲಕನ ಹುಟ್ಟುಹಬ್ಬದ ದಿನಕ್ಕೆ ಸರ್‌ಪ್ರೈಸ್

ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಜಸ್ಟಿನ್ ಎಂಬ 11 ವರ್ಷದ ಪುಟ್ಟ ಬಾಲಕನ ಹುಟ್ಟುಹಬ್ಬದ ದಿನವಾಗಿತ್ತು ಮತ್ತು ಆತನಿಗೆ ಇದು ಎಂದಿನಂತೆ ಸಾಮಾನ್ಯ ದಿನವಾಗಿತ್ತು ಎಂದು ಹೇಳಬಹುದು.

ಅವರ ಜನ್ಮ ದಿನದಂದು ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಒಂದು ಸರ್‌ಪ್ರೈಸ್ ಅನ್ನು ಅವರು ಪಡೆಯುತ್ತಾರೆ ಎಂದು ಬಾಲಕ ಊಹಿಸಿರಲಿಲ್ಲ ಅಂತ ಕಾಣುತ್ತೆ. ಹೌದು..ಆಸ್ಪತ್ರೆಯ ಸಿಬ್ಬಂದಿಯವರು ನೀಡಿದ ಈ ಸರ್‌ಪ್ರೈಸ್ನಿಂದ ಆ ಪುಟ್ಟ ಬಾಲಕ ಎಷ್ಟು ಪ್ರಭಾವಿತನಾದನೆಂದರೆ ಅವನು ನಿಂತ ಸ್ಥಳದಲ್ಲಿಯೇ ಕುಸಿದು ಬಿದ್ದನು.

ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್

ವೈದ್ಯಕೀಯ ತಂಡವು ತನ್ನ ಹುಟ್ಟುಹಬ್ಬದ ದಿನ ಕೇಕ್ ಮತ್ತು ಉಡುಗೊರೆಗಳೊಂದಿಗೆ ಸರ್‌ಪ್ರೈಸ್ ನೀಡಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿರುವ ಗುಡ್ ನ್ಯೂಸ್ ಮೂವ್ಮೆಂಟ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅಲ್ಲಿ ಇದು ಸುಮಾರು 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸುಮಾರು 1.37 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಸಹ ಇದು ಗಳಿಸಿದೆ.

ಇದನ್ನೂ ಓದಿ: Bride and Groom: ಅನಕ್ಷರಸ್ಥ ವರ ಬೇಡ ಅಂತ ಮಂಟಪದಲ್ಲೇ ಹಾರ ಕಿತ್ತೆಸದ ವಧು! ವಿಡಿಯೋ ವೈರಲ್

ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಜಸ್ಟಿನ್ ತನ್ನ ನಿಯಮಿತ ತಪಾಸಣೆಗಾಗಿ ಆಸ್ಪತ್ರೆಯಲ್ಲಿದ್ದಾಗ ವೈದ್ಯಕೀಯ ತಂಡವು ಕೇಕ್ ಮತ್ತು ಉಡುಗೊರೆಗಳೊಂದಿಗೆ ಅವರನ್ನು ಆಶ್ಚರ್ಯಚಕಿತಗೊಳಿಸಿತು. ಅವರು ತನ್ನ ದಿನವನ್ನು ವಿಶೇಷವಾಗಿಸಲು ಹೇಗೆ ಪ್ರಯತ್ನಿಸಿದರು ಎಂಬುದನ್ನು ನೋಡಿ ಅವನು ಅಲ್ಲಿಯೇ ಕುಸಿದು ಬಿದ್ದನು. ಜಸ್ಟಿನ್ ನಿರೀಕ್ಷೆಗಿಂತ ಹೆಚ್ಚಿನ ಸುತ್ತಿನ ಚಿಕಿತ್ಸೆಯನ್ನು ಪಡೆದಿದ್ದರು ಮತ್ತು ಆಸ್ಪತ್ರೆ ಅವರ ಎರಡನೇ ಮನೆಯಾಗಿತ್ತು. ಇದು ವೈದ್ಯಕೀಯ ತಂಡವು ತೋರಿಸಿದ ಹೃದಯಸ್ಪರ್ಶಿ ಸನ್ನೆಯಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ವೀಡಿಯೋ ನೋಡಿ ವೀಕ್ಷಕರ ಕಣ್ಣಲ್ಲಿ ನೀರು

"ನೀವು ರೋಗಕ್ಕೆ ಚಿಕಿತ್ಸೆ ನೀಡುತ್ತೀರಿ, ನೀವು ಕೆಲವೊಮ್ಮೆ ಗೆಲ್ಲುತ್ತೀರಿ, ಸೋಲುತ್ತೀರಿ. ನೀವು ಒಬ್ಬ ವ್ಯಕ್ತಿಯನ್ನು ಉಪಚರಿಸುತ್ತೀರಿ, ನಾನು ನಿಮಗೆ ಭರವಸೆ ನೀಡುತ್ತೇನೆ, ನೀವು ನಿಜವಾಗಿಯೂ ಈ ಬಾರಿ ಗೆಲ್ಲುತ್ತೀರಿ, ಫಲಿತಾಂಶ ಏನೇ ಇರಲಿ" ರಾಬಿನ್ ವಿಲಿಯಮ್ಸ್ - ಪ್ಯಾಚ್ ಆಡಮ್ಸ್. ಹುಟ್ಟು ಹಬ್ಬದ ಶುಭಾಶಯ ಜಸ್ಟಿನ್, ನಾವು ನಿಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ ಗೆಳೆಯ" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:  Singer Ajay Warriar: ಡ್ರೈನ್ ಹೋಲ್​ಗೆ ಬಿದ್ದು ಕಾಲು ಮುರಿದುಕೊಂಡ ಗಾಯಕ ಅಜಯ್ ವಾರಿಯರ್

ಈ ವೀಡಿಯೋ ನೋಡಿದ ಬಹುತೇಕ ನೆಟ್ಟಿಗರ ಕಣ್ಣಲ್ಲಿ ನೀರು ತುಂಬಿದ್ದಂತೂ ನಿಜ. "ಪೆಡಿ ರೇಡಿಯಾಲಜಿಯಲ್ಲಿ ನನ್ನ ವೃತ್ತಿ ಜೀವನ ಮುಗಿದಿದ್ದರೂ ಸಹ ನಾನು ಇಂತಹ ಮಕ್ಕಳ ವೀಡಿಯೋಗಳನ್ನು ತುಂಬಾನೇ ಇಷ್ಟ ಪಡುತ್ತೇನೆ. ಒಬ್ಬ ಅದ್ಭುತ 5 ವರ್ಷದ ಕ್ಯಾನ್ಸರ್ ರೋಗಿಯು ನನ್ನ ವೃತ್ತಿಜೀವನದ ಆರಂಭದಲ್ಲಿ "ನನಗೆ ಈ ಜೀವನವನ್ನು ಇಷ್ಟ ಪಡಲು ಸಾಕಷ್ಟು ಒಳ್ಳೆಯ ಭಾವನೆಯನ್ನು ಮೂಡಿಸಿ ಎಂದು ಹೇಳಿದ್ದರು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ನಾನು ಈ ವೀಡಿಯೋ ನೋಡಿ ಅಳುತ್ತಿಲ್ಲ” ಅಂತ ಬರೆದುಕೊಂಡು ಅಳುವ ಮುಖದ ಎಮೋಜೀಗಳನ್ನು ಕಾಮೆಂಟ್ ವಿಭಾಗದಲ್ಲಿ ಹಾಕಿಕೊಂಡಿದ್ದಾರೆ.
Published by:Ashwini Prabhu
First published: