Viral Video: ಮದುವೆಯಲ್ಲಿ ಅತ್ತಿಗೆಯರ ವರ್ತನೆಯಿಂದ ವರನಿಗೆ ಆಶ್ಚರ್ಯ: ವೈರಲ್‌ ವಿಡಿಯೋ ನೋಡಿ

Viral Video: ವರನನ್ನು ಸ್ವಾಗತಿಸುವ ಸಂಪೂರ್ಣ ವಿಭಿನ್ನ ಮತ್ತು ಆಸಕ್ತಿದಾಯಕ ಮಾರ್ಗವನ್ನು ತೋರಿಸುವ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೈರಲ್​ ವಿಡಿಯೋ

ವೈರಲ್​ ವಿಡಿಯೋ

  • Share this:

ಕೊರೊನಾ ವೈರಸ್‌ ಭೀತಿ ಹಿನ್ನೆಲೆ ಮದುವೆಗೆ ಹೆಚ್ಚು ಜನರನ್ನು ಆಹ್ವಾನಿಸುವುದು ಹಾಗೂ ಬರುವುದು ಕಡಿಮೆಯಾಗುತ್ತಿದೆ. ಜನಸಂದಣಿ ಕಡಿಮೆಯಾಗಿದ್ದರೂ ಮದುವೆಗಳಲ್ಲಿ ಸಂಭ್ರಮಕ್ಕೇನೂ ಕೊರತೆ ಇಲ್ಲ. ಇನ್ನೊಂದೆಡೆ, ಮದುವೆಗಳಲ್ಲಿ ಇತ್ತೀಚೆಗೆ ವಿಡಿಯೋಗಳು ವೈರಲ್‌ ಆಗುವುದೇ ಒಂದು ಟ್ರೆಂಡಿಂಗ್ ಆಗಿದೆ. ಇದು ಮದುವೆ ಸೀಸನ್ ಆಗಿರುವ ಹಿನ್ನೆಲೆ ಇಂಟರ್‌ನೆಟ್‌ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಮದುವೆಯ ವಿಡಿಯೋಗಳನ್ನು ಕಾಣಬಹುದು. ಅಂತಹ ವಿಡಿಯೋಗಳ ಪೈಕಿ ಕೆಲವು ನೋಡಲು ಮಜವಾಗಿದ್ದರೆ ಇನ್ನು ಕೆಲವು ಬಹಳ ಭಯಂಕರವಾಗಿಯೂ, ಆಶ್ಚರ್ಯಕರವಾಗಿಯೂ ಇರುತ್ತದೆ. ಭಾರತೀಯ ಮದುವೆಗಳು ಈಗಲೂ ವರನನ್ನು ಕುದುರೆಯ ಮೇಲೆ ಮದುವೆಯ ಮಂಟಪಕ್ಕೆ ಬಂದಾಗ ಸ್ವಾಗತಿಸುವ ಸಂಪ್ರದಾಯವನ್ನು ಬಯಸುತ್ತದೆ. ಕುದುರೆ ಮೇಲೆ ಅಲ್ಲದಿದ್ದರೂ ವರನನ್ನು ವಧುವಿನ ಕುಟುಂಬದವರು ವಿಶಿಷ್ಟವಾಗಿ ಸ್ವಾಗತ ಮಾಡುತ್ತಾರೆ. ಹಾಗೆ, ವಧುವಿನ ಕುಟುಂಬವು ವರ ಮತ್ತು ಆತನ ಕುಟುಂಬದ ಆರತಿ, ತಿಲಕ ಇತ್ಯಾದಿಗಳಿಂದಲೂ ಸ್ವಾಗತ ಮಾಡುತ್ತಾರೆ. ನಿಮ್ಮ ಮನಸ್ಥಿತಿಯನ್ನು ಬೆಳಗಿಸುವ ಇನ್ನೊಂದು ವಿವಾಹದ ಹೊಸ ವಿಡಿಯೋ ಇಲ್ಲಿದೆ.


ವರನನ್ನು ಸ್ವಾಗತಿಸುವ ಸಂಪೂರ್ಣ ವಿಭಿನ್ನ ಮತ್ತು ಆಸಕ್ತಿದಾಯಕ ಮಾರ್ಗವನ್ನು ತೋರಿಸುವ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಲ್ಲಿ ಆರತಿ ಅಥವಾ ತಿಲಕಕ್ಕೆ ಬದಲಾಗಿ, ವರನ ಭಾವಿ ಅತ್ತಿಗೆಯರು ವರ ಮತ್ತು ಆತನ ಕುಟುಂಬವನ್ನು ಸ್ವಾಗತಿಸಲು ನೃತ್ಯ ಪ್ರದರ್ಶಿಸಿದ್ದಾರೆ. ವಧುವಿನ ಕುಟುಂಬದವರು ವರನನ್ನು ಸ್ವಾಗತಿಸಿರುವ ಪರಿ ಮದುವೆ ಗಂಡಿಗೇ ಆಶ್ಚರ್ಯ ತಂದಿದ್ದು, ಆ ಖುಷಿಯಲ್ಲಿ ಅವರೂ ಕೆಲ ಹೆಜ್ಜೆಗಳನ್ನು ಹಾಕಿದ್ದಾರೆ.


ಈಗ, ಸಹೋದರ ಮತ್ತು ಅತ್ತಿಗೆಯ ಸಂಬಂಧವನ್ನು ತುಂಬಾ ತಮಾಷೆಯಾಗಿ ಮತ್ತು ಸುಂದರವಾಗಿ ಪರಿಗಣಿಸಲಾಗಿದೆ. ಇದು ಪರಸ್ಪರ ಪ್ರೀತಿ, ಗೌರವ ಮತ್ತು ದಯೆಯನ್ನು ಒಳಗೊಂಡಿರುತ್ತದೆ. ವಿಡಿಯೋದಲ್ಲಿ, ವರನು ವಿವಾಹದ ಸ್ಥಳವನ್ನು ತಲುಪಿದ ತಕ್ಷಣ ಆತನ ಇಬ್ಬರು ಸೊಸೆಯಂದಿರು ಅದ್ಭುತ ನೃತ್ಯ ಪ್ರದರ್ಶನದಿಂದ ಅವರನ್ನು ಸ್ವಾಗತಿಸುತ್ತಾರೆ.

ವರನ ಇಬ್ಬರು ಅತ್ತಿಗೆಯರು ತಮ್ಮ 'ಜಿಜಾಜಿ' ಯನ್ನು ಸ್ವಾಗತಿಸಲು 'ಓ ಮೇರೆ ಜಿಜಾಜಿ' ಹಾಡಿಗೆ ಅದ್ಭುತ ಲೆಹೆಂಗಾಗಳನ್ನು ತೊಟ್ಟು ನೃತ್ಯ ಮಾಡಿದ್ದಾರೆ. ಆ ಇಬ್ಬರ ಅದ್ಭುತ ನೃತ್ಯವನ್ನು ನೋಡಿ ವರನಿಗೆ ಖುಷಿ, ಆಶ್ಚರ್ಯವಾಗಿದ್ದು, ವರನು ನಿಂತುಕೊಂಡೇ ಕೆಲವು ಹೆಜ್ಜೆ ಹಾಕಿರುವುದನ್ನೂ ಈ ವೈರಲ್‌ ವಿಡಿಯೋದಲ್ಲಿ ನೋಡಬಹುದಾಗಿದೆ.






'ದ ಭಂಡಾರಿ ಪ್ಯಾಲೇಸ್‌' ಹೆಸರಿನ ಅಕೌಂಟ್‌ನಲ್ಲಿ ಇನ್ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಉತ್ತರಾಖಂಡದ ಪ್ರಖ್ಯಾತ ಪ್ರವಾಸಿ ತಾಣ ಹಾಗೂ ತೀರ್ಥ ಕ್ಷೇತ್ರವಾದ ರಿಷಿಕೇಶದಲ್ಲಿ ಈ ಅದ್ಧೂರಿ ವಿವಾಹ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು, ಈ ವಿಡಿಯೋವನ್ನು ಈವ ರೆಗೆ 10 ಲಕ್ಷಕ್ಕೂ ಹೆಚ್ಚು ಅಂದರೆ ಒಂದು ಮಿಲಿಯನ್‌ಗೂ ಹೆಚ್ಚು ಮಂದಿ ನೋಡಿದ್ದು, ಹಲವು ನೆಟ್ಟಿಗರು ಲೈಕ್‌ ಮಾಡಿದ್ದಾರೆ. ಹಾಗೂ ಕಮೆಂಟ್‌ಗಳ ಮೂಲಕ ಪ್ರತಿಯೊಬ್ಬರೂ ಸಹೋದರ ಸಹೋದರಿಯರ ಚೈತನ್ಯ ಮತ್ತು ನೃತ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.


Published by:Sharath Sharma Kalagaru
First published: