• Home
 • »
 • News
 • »
 • trend
 • »
 • Nose Surgery: ಕೈ ಮೇಲೆ ಮೂಗನ್ನು ಬೆಳೆಸಿ, ಮಹಿಳೆಯ ಮುಖಕ್ಕೆ ಕಸಿ ಮಾಡಿದ ವೈದ್ಯರು!

Nose Surgery: ಕೈ ಮೇಲೆ ಮೂಗನ್ನು ಬೆಳೆಸಿ, ಮಹಿಳೆಯ ಮುಖಕ್ಕೆ ಕಸಿ ಮಾಡಿದ ವೈದ್ಯರು!

ಮೂಗನ್ನೇ ಕಸಿ ಮಾಡಿದ ವೈದ್ಯರು

ಮೂಗನ್ನೇ ಕಸಿ ಮಾಡಿದ ವೈದ್ಯರು

ಫ್ರಾನ್ಸ್ ನ ಶಸ್ತ್ರಚಿಕಿತ್ಸಕರು ಒಬ್ಬ ಮಹಿಳೆಯ ಮುಂಗೈ ಮೇಲೆ ಮೂಗನ್ನು ಬೆಳೆಸಿ, ನಂತರ ಆ ಮೂಗನ್ನು ಆಕೆಯ ಮುಖದ ಮೇಲೆ ಕಸಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

 • Share this:

  ವೈದ್ಯಲೋಕದಲ್ಲಿ ನಡೆಯುವ ಹೊಸ ಹೊಸ ಸಂಶೋಧನೆಗಳು ಮತ್ತು ಅಸಾಧ್ಯವಾದ ಶಸ್ತ್ರಚಿಕಿತ್ಸೆಗಳು (Surgery) ನಡೆಯುತ್ತಿರುವ ಬಗ್ಗೆ ನಾವೆಲ್ಲಾ ದಿನ ಬೆಳಗಾದರೆ ಕೇಳುತ್ತಲೇ ಮತ್ತು ನೋಡುತ್ತಲೇ ಇರುತ್ತೇವೆ. ಈಗಂತೂ ಮನುಷ್ಯನಿಗೆ ಯಾವ ಅಂಗಾಂಗಗಳಿರುವುದಿಲ್ಲವೋ ಅವುಗಳನ್ನೆಲ್ಲವನ್ನು ಕಸಿ (Transplant) ಮಾಡುವ ಮೂಲಕ ವ್ಯಕ್ತಿಗಳಿಗಿದ್ದ ಅಂಗಾಂಗಗಳ ಕೊರತೆಯನ್ನು ನೀಗಿಸುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಸಾವನ್ನಪ್ಪಿದ ವ್ಯಕ್ತಿಯು ದಾನ ಮಾಡಿದ ಅಂಗಾಂಗಗಳನ್ನು ವೈದ್ಯರ ತಂಡವು ಕೂಡಲೇ ಆ ಅಂಗಾಂಗಗಳನ್ನು ಸಂರಕ್ಷಿಸುವ ವ್ಯವಸ್ಥೆಯನ್ನು ಮಾಡುವುದನ್ನು, ಬಳಿಕ ಆ ಸಂರಕ್ಷಿಸಿಟ್ಟ ಅಂಗಾಂಗಗಳ ಅವಶ್ಯಕತೆ ಇರುವ ಜನರಿಗೆ ಕಸಿ ಮಾಡುವ ಮೂಲಕ ಅಂಗ ವೈಫಲ್ಯತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಹೊಸ ಜೀವನ ನೀಡುವ ಮಹತ್ತರವಾದ ಕೆಲಸ ವೈದ್ಯರಿಂದ ನಡೆಯುತ್ತಿದೆ ಅಂತ ಹೇಳಬಹುದು.


  ಇದನ್ನೂ ಓದಿ: ಅಬ್ಬಬ್ಬಾ, ಈ ಮಹಿಳೆಯ ಕಣ್ಣಲ್ಲಿತ್ತಂತೆ 23 ಕಾಂಟ್ಯಾಕ್ಟ್‌ ಲೆನ್ಸ್! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ


  ಇಲ್ಲಿಯೂ ಸಹ ಫ್ರಾನ್ಸ್ ನ ಶಸ್ತ್ರಚಿಕಿತ್ಸಕರು ಒಬ್ಬ ಮಹಿಳೆಯ ಮುಂಗೈ ಮೇಲೆ ಮೂಗನ್ನು ಬೆಳೆಸಿ, ನಂತರ ಆ ಮೂಗನ್ನು ಆಕೆಯ ಮುಖದ ಮೇಲೆ ಕಸಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.


  ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಮಹಿಳೆಗೆ ಏನಾಗಿತ್ತು?


  ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ತನ್ನ ಮುಖದ ಮೇಲಿದ್ದ ಮೂಗಿನ ಹೆಚ್ಚಿನ ಭಾಗವನ್ನು ಕಳೆದುಕೊಂಡ ನಂತರ ಫ್ರಾನ್ಸ್ ನ ಶಸ್ತ್ರಚಿಕಿತ್ಸಕರು ಆ ಮಹಿಳೆಯ ಮುಂಗೈಯ ಮೇಲೆ ಮೂಗನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ ಮತ್ತು ನಂತರ ಆ ಮೂಗನ್ನು ಅವಳ ಮುಖದ ಮೇಲೆ ಕಸಿ ಮಾಡಿದ್ದಾರೆ ನೋಡಿ.


  2013 ರಲ್ಲಿ ರೇಡಿಯೋಥೆರಪಿ ಮತ್ತು ಕೀಮೋಥೆರಪಿಯೊಂದಿಗೆ ಮೂಗಿನ ಕುಹರದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದ ನಂತರ ಟೌಲೌಸ್ ನ ಮಹಿಳೆ ತನ್ನ ಮೂಗಿನ ಒಂದು ಭಾಗವನ್ನು ಕಳೆದುಕೊಂಡಿದ್ದಳು. ಪುನರ್ ನಿರ್ಮಾಣದ ಪ್ರಯತ್ನಗಳು ಮತ್ತು ಪ್ರಾಸ್ಥೆಟಿಕ್ಸ್ ವೈಫಲ್ಯಗಳ ಹೊರತಾಗಿಯೂ ಅವಳು ಆ ಪೂರ್ಣವಾದ ಅಂಗವಿಲ್ಲದೆ ಅನೇಕ ವರ್ಷಗಳ ಕಾಲ ಬದುಕಿದಳು. ಆದರೆ ಈಗ, ವೈದ್ಯಕೀಯ ಕಾರ್ಯವಿಧಾನದಿಂದಾಗಿ, ಅವಳು ಹೊಸ ಮೂಗನ್ನು ಪಡೆಯಲು ಸಾಧ್ಯವಾಯಿತು, ಅದೂ ಅವಳ ತೋಳಿನ ಮೇಲೆ ಬೆಳೆಸಿದ್ದು ಅಂತ ಹೇಳಲಾಗುತ್ತಿದೆ.


  ಮಹಿಳೆಗಾಗಿ ಮೂಗನ್ನು ಹೇಗೆ ಬೆಳೆಸಲಾಯಿತು ನೋಡಿ..


  ಈವ್ನಿಂಗ್ ಸ್ಟ್ಯಾಂಡರ್ಡ್ ಪ್ರಕಾರ, ಮೃದ್ವಸ್ಥಿಯನ್ನು ಬದಲಾಯಿಸಲು 3ಡಿ-ಮುದ್ರಿತ ಬಯೋಮೆಟೀರಿಯಲ್ ನಿಂದ ತಯಾರಿಸಿದ ಕಸ್ಟಮ್ ಮೂಗನ್ನು ಅವಳಿಗಾಗಿ ತಯಾರಿಸಲಾಯಿತು. ಇದನ್ನು ಆಕೆಯ ಮುಂಗೈಗೆ ಅಳವಡಿಸಲಾಯಿತು. ನಂತರ ವೈದ್ಯರು ಬದಲಿ ಮೂಗನ್ನು ಮುಚ್ಚಲು ಅವಳ ದೇಹದಿಂದ ಚರ್ಮದ ಕಸಿಯನ್ನು ಬಳಸಿದರು. ಅಪೆಂಡೇಜ್ ಅನ್ನು ಎರಡು ತಿಂಗಳವರೆಗೆ ಬೆಳೆಯಲು ಬಿಡಲಾಯಿತು, ನಂತರ ಅದನ್ನು ಅವಳ ಮುಖಕ್ಕೆ ಕಸಿ ಮಾಡಲಾಯಿತು.


  ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ ತನ್ನ ಫೇಸ್‌ಬುಕ್ ನಲ್ಲಿ ಮುಂಗೈಯ ಮೇಲೆ ಮೂಗು ಬೆಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ಹೊಸ ಮೂಗನ್ನು ಮಹಿಳೆಯ ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಆಸ್ಪತ್ರೆ ಮಂಗಳವಾರ ಘೋಷಿಸಿದೆ.


  ಇದನ್ನೂ ಓದಿ: ಇರುವೆಯ ಮುಖದ ಫೋಟೋಗೆ ಸಿಕ್ತು ಮೊದಲ ಬಹುಮಾನ: ಇದು ಸಾಮಾನ್ಯ ಚಿತ್ರವಲ್ಲ!


  "ಇಂದು, ಕಸಿ ಯಶಸ್ವಿಯಾಗಿ ನೆರವೇರಿದೆ. ಎರಡು ತಿಂಗಳುಗಳ ಕಾಲ ಮುಂಗೈಯಲ್ಲಿ ಇರಿಸಿದ ನಂತರ ಈಗ  ಮುಖದಲ್ಲಿರುವ ಮೂಗಿನ ಭಾಗಕ್ಕೆ ಕಸಿ ಮಾಡಲಾಗಿದೆ. ರಕ್ತನಾಳಗಳ ಅನಸ್ಟೋಮೋಸ್ ಗಳಿಂದ ಸೂಕ್ಷ್ಮ-ಶಸ್ತ್ರಚಿಕಿತ್ಸೆಯನ್ನು ಬಳಸಿಕೊಂಡು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ ಎಂದು ಹೇಳಿದ್ದಾರೆ.


  ಕಸಿ ಮಾಡಿಸಿಕೊಂಡ ನಂತರ ಮಹಿಳೆ ಆರೋಗ್ಯ ಹೇಗಿದೆ?


  ಕಸಿ ನಂತರ ಮಹಿಳೆ ಆರೋಗ್ಯವಾಗಿ ಇದ್ದಾರೆ ಮತ್ತು ಮೇಲ್ವಿಚಾರಣೆಯನ್ನು ಸಹ ಮುಂದುವರಿಸಿದ್ದೇವೆ ಎಂದು ಫೇಸ್‌ಬುಕ್ ನಲ್ಲಿ ಇರುವ ಪೋಸ್ಟ್‌ ಉಲ್ಲೇಖಿಸಿದೆ.


  ಈವ್ನಿಂಗ್ ಸ್ಟ್ಯಾಂಡರ್ಡ್ ಪ್ರಕಾರ, ವೈದ್ಯರು ಮೈಕ್ರೋ ಸರ್ಜರಿ ಮತ್ತು ತೋಳಿನ ಚರ್ಮದಲ್ಲಿರುವ ರಕ್ತನಾಳಗಳನ್ನು ಮಹಿಳೆಯ ಮುಖದ ರಕ್ತನಾಳಗಳಿಗೆ ಸಂಪರ್ಕಿಸಿದರು. "ಆಸ್ಪತ್ರೆಗೆ ದಾಖಲಾದ 10 ದಿನಗಳು ಮತ್ತು ಮೂರು ವಾರಗಳ ಆಂಟಿಬಯೋಟಿಕ್ ಗಳ ನಂತರ, ರೋಗಿಯು ತುಂಬಾ ಉತ್ತಮವಾಗಿ ಸ್ಪಂದಿಸುತ್ತಿದ್ದಾಳೆ" ಎಂದು ವೈದ್ಯರು ತಿಳಿಸಿದ್ದಾರೆ.


  "ಈ ರೀತಿಯ ಅಂಗಗಳ ಪುನರ್ ನಿರ್ಮಾಣವನ್ನು ಮತ್ತು ಕಸಿ ಮಾಡಿರುವುದು ಇದೇ ಮೊದಲು ಮತ್ತು ಇದು ಮೂಳೆಗಳ ಪುನರ್ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಬೆಲ್ಜಿಯಂನ ವೈದ್ಯಕೀಯ ಸಾಧನಗಳ ತಯಾರಕರಾದ ಸೆರ್ಹಮ್ ಕಂಪನಿಯೊಂದಿಗೆ ವೈದ್ಯಕೀಯ ತಂಡಗಳ ಸಹಯೋಗದಿಂದಾಗಿ ಸಾಧ್ಯವಾಗಿದೆ" ಎಂದು ಹೇಳಿದರು.

  Published by:Precilla Olivia Dias
  First published: