ಈಗಂತೂ ನಮ್ಮಲ್ಲಿ ಹಿಂದೂ-ಮುಸ್ಲಿಂ (Hindu Muslim) ಜನರ ಮಧ್ಯೆ ಜಗಳ ಹಚ್ಚಿ ಮಜಾ ನೋಡುವವರೆ ಹೆಚ್ಚಾಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ದೇಶದಲ್ಲಿನ (Nation) ಶಾಂತಿ (Peace) ಸುವ್ಯವಸ್ಥೆಯನ್ನು ಹದಗೆಡಿಸುವುದೇ ಕೆಲವರ ಮುಖ್ಯ ಗುರಿಯಾಗಿರುತ್ತದೆ (Aim) ಅಂತ ಹೇಳಿದರೆ ಸುಳ್ಳಲ್ಲ. ಹೌದು ಆಗಾಗ್ಗೆ ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಂ ಜನರ ಮಧ್ಯೆ ಇರುವ ಬಾಂಧವ್ಯ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಅಥವಾ ಯಾರೋ ಮೂರನೆಯವರು ಮಧ್ಯೆ ಬಂದು ಜಗಳ ಹಚ್ಚುವುದು ಮಾಡುತ್ತಲೇ ಇರುತ್ತಾರೆ.
ಕಿಡಿಗೇಡಿಗಳು ಹೊತ್ತಿಸಿದ ಚಿಕ್ಕ ಕಿಡಿ ಕಾಳ್ಗಿಚ್ಚಿನಂತೆ ಹೇಗೆ ಸಮಾಜದಲ್ಲಿರುವ ಜನರ ಮಧ್ಯೆ ಬೆಂಕಿಯನ್ನು ಹಬ್ಭಿಸುತ್ತದೆ ಮತ್ತು ಆ ಬೆಂಕಿ ಸಾಮಾನ್ಯ ಜನರ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದರ ಸ್ವಲ್ಪವೂ ಅರಿವು ಅಂತಹ ಕಿಡಿಗೇಡಿಗಳಿಗಿರುವುದಿಲ್ಲ ಅಂತ ಹೇಳಬಹುದು.
ಏನಿದು ‘ಸುರೇಶ್-ಅಬ್ದುಲ್’ ವಿಡಿಯೋ?
ಇಲ್ಲಿಯೂ ಸಹ ಅಂತಹದೇ ಒಂದು ಕಿಡಿಯನ್ನು ಒಂದು ವಿಡಿಯೋ ಹೊತ್ತಿಸಬಹುದು ಅಂತ ಕಾಂಗ್ರೆಸ್ ಪಕ್ಷದ ನಾಯಕಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ ನೋಡಿ.
ಪಾಟ್ನಾದ ಪ್ರಸಿದ್ಧ ಖಾನ್ ಸರ್ ಅವರ ಹಳೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅಂತಹ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಖಾನ್ ಸರ್ ಅವರು 'ಸುರೇಶ್' ಎಂಬ ಹೆಸರನ್ನು 'ಅಬ್ದುಲ್' ಎಂದು ಬದಲಾಯಿಸಿದಾಗ ವಾಕ್ಯದ ಅರ್ಥವು ಹೇಗೆ ಬದಲಾಗುತ್ತದೆ ಎಂಬುದಕ್ಕೆ ಉದಾಹರಣೆ ನೀಡುತ್ತಿದ್ದರು. ಈ ವೀಡಿಯೋ ಈ ಹಿಂದೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
"ವ್ಯಕ್ತಿಯನ್ನು ಬಂಧಿಸಬೇಕು ಮತ್ತು ಈ ಅಶ್ಲೀಲ ಅಸಂಬದ್ಧತೆಯನ್ನು ಕೇಳಿದ ನಂತರ ನಗುತ್ತಿರುವವರು ಸ್ವಲ್ಪ ಯೋಚಿಸಬೇಕು. ನಾವು ಏನಾಗುತ್ತಿದ್ದೇವೆ ಎಂದು ಅವರು ಯೋಚಿಸಬೇಕು" ಎಂದು ಸುಪ್ರಿಯಾ ಶ್ರಿನಾಟೆ ಲೇಖಕ ಅಶೋಕ್ ಕುಮಾರ್ ಪಾಂಡೆ ಅವರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಖಾನ್ ಸರ್ ಏನು ಕಲಿಸಿದ್ದಾರೆ ನೋಡಿ..
ವಿಡಿಯೋದಲ್ಲಿ, ಖಾನ್ ಸರ್ ದ್ವಂದ್ವ ಸಮಾಸ ಅನ್ನು ಕಲಿಸುತ್ತಿದ್ದರು ಮತ್ತು "ಕೆಲವು ಪದಗಳು ಹೇಗೆ ಎರಡು ಅರ್ಥಗಳನ್ನು ಹೊಂದಿವೆ ಎಂದು ಹೇಳಿದ್ದಾರೆ. ಸುರೇಶ್ ವಿಮಾನವನ್ನು ಹಾರಿಸಿದ ಎಂದು ನೀವು ಹೇಳಿದರೆ, ಅದರ ಅರ್ಥ ಒಂದು ರೀತಿಯಾಗಿರುತ್ತದೆ ಮತ್ತು ಅಬ್ದುಲ್ ವಿಮಾನವನ್ನು ಹಾರಿಸಿದ ಎಂದು ನೀವು ಹೇಳಿದರೆ, ಅದರ ಅರ್ಥ ಇನ್ನೊಂದು ಬೇರೆಯೇ ಆಗಿರುತ್ತದೆ" ಎಂದು ಹೇಳಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷೆಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಿಹಾರ ಪೊಲೀಸರು ಖಾನ್ ಸರ್ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಖಾನ್ ಸರ್ ಈ ವರ್ಷದ ಆರಂಭದಲ್ಲಿ ಸುದ್ದಿಯಲ್ಲಿದ್ದರು.
इसे नीचता की हद कहते हैं। ऐसे लोग शिक्षा का धंधा करते हुए समाज में नफरत फैलाने वाले घटिया धंधेबाज हैं।
इस आदमी को तुरंत गिरफ्तार होना चाहिए। pic.twitter.com/9sX6PIvVuO
— Ashok Kumar Pandey अशोक اشوک (@Ashok_Kashmir) December 4, 2022
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತರಗತಿಯೊಳಗೆ ನಡೆದ ಘಟನೆ ಬೆಳಕಿಗೆ ಬಂದ ನಂತರ ಸುರೇಶ್-ಅಬ್ದುಲ್ ವಿಡಿಯೋ ಮತ್ತೆ ವೈರಲ್ ಆಗಿದೆ. ಮುಸ್ಲಿಮರನ್ನು 'ಭಯೋತ್ಪಾದಕರು' ಎಂದು ಕರೆದಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ತನ್ನ ಪ್ರಾಧ್ಯಾಪಕರನ್ನು ಹಾಗೆಯೇ ಕರೆದನು, ನಂತರ ಶಿಕ್ಷಕ ಕ್ಷಮೆಯಾಚಿಸಿದನು.
ಮತ್ತೊಂದು ಘಟನೆಯಲ್ಲಿ ಇತಿಹಾಸ ತರಗತಿಯೊಂದರಲ್ಲಿ ಪಕ್ಷಪಾತದ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತನ್ನ ಪ್ರೊಫೆಸರ್ ಅನ್ನು ಟೀಕಿಸಿದ ನಂತರ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಬೆದರಿಕೆಗಳನ್ನು ಎದುರಿಸುತ್ತಿದ್ದಾಳೆ ಎಂದು ಹೇಳಲಾಗಿದೆ. ಈ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಇದನ್ನೂ ಓದಿ: Trending Video: ಹಳೆಯ ಸ್ಕೂಟರ್ ಅನ್ನು ವಿಭಿನ್ನವಾಗಿ ಬದಲಾಯಿಸಿದ ವ್ಯಕ್ತಿ, ಐಡಿಯಾ ಸೂಪರ್ ಎಂದ ಆನಂದ್ ಮಹೀಂದ್ರಾ
ಆದಾಗ್ಯೂ, ಖಾನ್ ಸರ್ ವಿಡಿಯೋ ನೋಡಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಖಾನ್ ಸರ್ ಅವರ ಕಾಮೆಂಟ್ ನಿಜವಾಗಿಯೂ ವ್ಯಂಗ್ಯವಾಗಿದೆ ಮತ್ತು ವೀಡಿಯೋದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ