HOME » NEWS » Trend » SUPREME COURT EQUATES FARMERS PROTEST WITH TABLIGHI JAMAAT EVENT SESR

ತಬ್ಲಿಘಿ ಜಮಾತ್​ ಘಟನೆ ಪುನರ್​ಸೃಷ್ಟಿ ಸಾಧ್ಯತೆ; ಕೋವಿಡ್​ನಿಂದ ರೈತರ ರಕ್ಷಣೆಗೆ ಯಾವ ಕ್ರಮ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರನ್ನು ಕೊರೋನಾ ಸೋಂಕಿನಿಂದ ರಕ್ಷಿಸಲಾಗುತ್ತಿದೆಯೇ?

news18-kannada
Updated:January 7, 2021, 4:51 PM IST
ತಬ್ಲಿಘಿ ಜಮಾತ್​ ಘಟನೆ ಪುನರ್​ಸೃಷ್ಟಿ ಸಾಧ್ಯತೆ; ಕೋವಿಡ್​ನಿಂದ ರೈತರ ರಕ್ಷಣೆಗೆ ಯಾವ ಕ್ರಮ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ದೆಹಲಿಯಲ್ಲಿನ ರೈತ ಹೋರಾಟ.
  • Share this:
ನವದೆಹಲಿ (ಜ.7): ಕೇಂದ್ರದ ನೂತನ ಕೃಷಿ ಕಾನೂನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೇಶದ ರಾಜಧಾನಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಸುಪ್ರೀಂ ಕೋರ್ಟ್​ ಆತಂಕ ವ್ಯಕ್ತಪಡಿಸಿದೆ. ರೈತರ ಪ್ರತಿಭಟನೆಯನ್ನು ಕಳೆದ ಮಾರ್ಚ್​ನಲ್ಲಿ ನಡೆದ ತಬ್ಲಿಘಿ ಜಮಾತ್​ ಘಟನೆಯೊಂದಿಗೆ ಹೋಲಿಕೆ ಮಾಡಿದ ಸರ್ವೋಚ್ಛ ನ್ಯಾಯಪೀಠ ಅದೇ ರೀತಿ ಕೊರೋನಾ ಸೋಂಕು ಹರಡುವಿಕೆಗೆ ಕಾರಣವಾಗಲಿದೆಯೇ ಎಂದು ಕಳವಳ ವ್ಯಕ್ತಪಡಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರನ್ನು ಕೊರೋನಾ ಸೋಂಕಿನಿಂದ ರಕ್ಷಿಸಲಾಗುತ್ತಿದೆಯೇ ಎಂಬ ಬಗ್ಗೆ ತಿಳಿಸಬೇಕು ಎಂದು ಕೂಡ ನ್ಯಾಯಮೂರ್ತಿ ಎಸ್​ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಸಾಲಿಸಿಟರ್​ ಜನರಲ್​ ಮೆಹ್ತಾ ಅವರಿಗೆ ತಿಳಿಸಿದೆ.

ಕೋವಿಡ್​ ಸಂದರ್ಭದಲ್ಲಿ ಹೇರಲಾಗಿದ್ದ ಆರೋಗ್ಯ ತುರ್ತು ಪರಿಸ್ಥಿತಿ ಮರೆತು ಕಳೆದ ಮಾರ್ಚ್​ನಲ್ಲಿ ಅಂತರಾಷ್ಟ್ರೀಯ ಮುಸ್ಲಿಂ ಮಿಷನರಿ ಗುಂಪುಗಳು ಸಮಾವೇಶ ನಡೆಸಿದ ಪರಿಣಾಮ ಕೊರೋನಾ ಸೋಂಕು ಹರಡಲು ಕಾರಣವಾಗಿತ್ತು. ಈ ಘಟನೆ ಇಸ್ಲಾಮೋಫೋಬಿಕ್​ ಪ್ರಚಾರಕ್ಕೆ ಕೂಡ ಕಾರಣವಾಗಿತ್ತು. ಕೇಂದ್ರ ಸರ್ಕಾರ ಕೂಡ 950ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಈಗ ಮತ್ತೆ ಅದೇ ರೀತಿ ಸಾವಿರಾರು ಸಂಖ್ಯೆಯ ರೈತರು ಒಟ್ಟಿಗೆ ಸೇರಿದ್ದು ಈ ಘಟನೆ ಪುನರ್​ಸೃಷ್ಟಿಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈ ಹಿನ್ನಲೆ ಇದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಲಾಗಿದೆ.

ಇದೇ ವೇಳೆ ರೈತರ ಪ್ರತಿಭಟನೆ ಬಗ್ಗೆ ಕಾಳಜಿವಹಿಸಿರುವ ನ್ಯಾಯಪೀಠ, ಪ್ರತಿಭಟನೆ ಇನ್ನು ಉಲ್ಭಣವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಕೋವಿಡ್​ ಹರಡದಂತೆ ತಡೆಗಟ್ಟಲು ಯಾವ ಮಾರ್ಗಸೂಚಿ ಅನುಸರಿಸಲಾಗುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ತಿಳಿಸಿದೆ.
ಸಾಂಕ್ರಾಮಿಕ ರೋಗ ಇನ್ನು ಮುಗಿದಿಲ್ಲ. ಈ ಹಿನ್ನಲೆ ಮುನ್ನೆಚ್ಚರಿಕೆವಹಿಸುವಂತೆ ಎಸ್​ಎಸ್​ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್​ ಒಳಗೊಂಡ ಪೀಠ ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಾಲಿಸಿಟರ್​ ಜನರಲ್​ ಮೆಹ್ತಾ, ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ. ಏನು ಮಾಡಬೇಕಿದೆ ಎಂಬ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೂ ಗೊತ್ತಿಲ್ಲ; ಸಚಿವ ಭೈರತಿ ಬಸವರಾಜ್​

ರಾಜಧಾನಿಯ ಆನಂದ್​ ವಿಹಾರ್​ ಬಸ್​ ಟರ್ಮಿನಲ್​ ಮತ್ತು ನಿಜಾಮುದ್ದೀನ್​ ಮಾರ್ಕಾರ್ಜ್ನ ತಬ್ಲಿಘಿ ಜಮಾತ್​ ಸಭೆಗೆ ಹಾಜರಾದ ಹಲವರು ಸಿಬಿಐ ತನಿಖೆ ಎದುರಿಸುತ್ತಿದ್ದು, ವಿವಿಧ ಪರಿಹಾರ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.

ನಿಜಾಮುದ್ದೀನ್​ ಮಾರ್ಕಾಜ್​ ಮುಖ್ಯಸ್ಥ ಮೌಲಾನ ಸಾದ್​ ಇನ್ನು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಜನರನ್ನು ನಿಯಂತ್ರಿಸುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಲಾಯರ್​ ಸುಪ್ರಿಯಾ ಪಂಡಿತಾ ಮನವಿಯನ್ನು ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಹಾಜರಾದ ವಕೀಲ ಪ್ರಕಾಶ್​ ಪರಿಹಾರ ಮಾತನಾಡಿ, ಮೌಲಾನಾ ಸಾದ್​ ಇರುವ ಸ್ಥಳದ ಬಗ್ಗೆ ಕೇಂದ್ರದಿಂದ ಯಾವುದೇ ಹೇಳಿಕೆ ಲಭ್ಯವಾಗಿಲ್ಲ ಎಂದರು. ಈ ವೇಳೆ ಕೋವಿಡ್​ ಸಮಸ್ಯೆಯಲ್ಲಿ ಜಗತ್ತಿರುವಾಗ ಒಬ್ಬ ವ್ಯಕ್ತಿ ಬಗ್ಗೆ ಏಕೆ ಆಸಕ್ತಿ ಹೊಂದಿದ್ದೀರಾ? ನೀವು ಈ ವಿವಾದವನ್ನು ಏಕೆ ಬಯಸುತ್ತಿದ್ದೀರಾ ಎಂದು ಪೀಠ ಪ್ರಶ್ನಿಸಿದೆ. ಅಲ್ಲದೇ ನಮ್ಮ ಮುಖ್ಯ ಉದ್ದೇಶ ಕೋವಿಡ್ ಮಾರ್ಗಸೂಚಿ ಅನುಸರಿಸಬೇಕು ಎಂಬುದು ಎಂದು ಪೀಠ ತಿಳಿಸಿದೆ.
Published by: Seema R
First published: January 7, 2021, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories