ಈ ಭೂಮಿ ಎಂಬುದು ಹಲವಾರು ವಿಸ್ಮಯಗಳ ತಾಣವಾಗಿದೆ. ದಿನದಿನವೂ ಹೊಸ ಆವಿಷ್ಕಾರಗಳನ್ನು ನಮ್ಮ ಮುಂದಿಡುತ್ತಿರುವ ಭೂಮಂಡಲ ವಿಜ್ಞಾನಿಗಳಿಗೆ ಕೌತುಕಮಯವಾಗಿರುವ ಹೊಸತನವನ್ನು ಪ್ರಸ್ತುತಪಡಿಸುತ್ತದೆ. ತಂತ್ರಜ್ಞಾನದ ಸುಧಾರಣೆಯೊಂದಿಗೆ ಕೆಲವೊಂದು ಆವಿಷ್ಕಾರಗಳಲ್ಲೂ ಮಾರ್ಪಡಿಕೆ ಉಂಟಾಗುತ್ತಿದ್ದು ಇದರಿಂದ ಭೂಮಿಗೆ ಉಂಟಾಗುವ ಅಪಾಯ ಹಾಗೂ ಇನ್ನಿತರ ಅಂಶಗಳನ್ನು ಶೀಘ್ರದಲ್ಲೇ ಇದೀಗ ತಿಳಿದುಕೊಳ್ಳಬಹುದಾಗಿದೆ. ಇದೀಗ ಬಂದಿರುವ ಸುದ್ದಿಯ ಪ್ರಕಾರ ಭೂಮಿಯ ಮೇಲಿನ ಜೀವಿಗಳ ಜೀವನವೇ ದುರ್ಬಲವಾಗಿದ್ದು ಖಗೋಳಶಾಸ್ತ್ರಜ್ಞರು ಈಗ ಗ್ರಹಕ್ಕೆ ಹೊಸ ಅಪಾಯವನ್ನು ಗುರುತಿಸಿದ್ದಾರೆ.
ಗ್ರಹಗಳ ಮೇಲಿನ ಅಪಾಯವನ್ನು ಗುರುತಿಸಿದ ಖಗೋಳಶಾಸ್ತ್ರಜ್ಞರು
ಚಂದ್ರ ಎಕ್ಸ್-ರೇ ವೀಕ್ಷಣಾಲಯ ಮತ್ತು ಇತರ ದೂರದರ್ಶಕಗಳನ್ನು ಬಳಸುವ ಖಗೋಳಶಾಸ್ತ್ರಜ್ಞರು ಸ್ಫೋಟಗೊಂಡ ನಕ್ಷತ್ರಗಳಿಂದ ಉತ್ಪತ್ತಿಯಾಗುವ ಎಕ್ಸ್-ಕಿರಣಗಳು ಭೂಮಿ ಸೇರಿದಂತೆ 100 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ರಹಗಳ ಮೇಲೆ ಪರಿಣಾಮ ಬೀರಬಹುದು ಎಂಬ ಅಪಾಯವನ್ನು ಗುರುತಿಸಿದ್ದಾರೆ. ಸ್ಫೋಟಗೊಂಡ ನಕ್ಷತ್ರಗಳು ಇದೀಗ ಇನ್ನಷ್ಟು ಅಪಾಯಕಾರಿಯಾಗಿದ್ದು ಗ್ರಹಗಳ ಮೇಲೆ ಸಾಕಷ್ಟು ಅಪಾಯವನ್ನೆಸಗುತ್ತವೆ ಎಂದು ತಿಳಿದು ಬಂದಿದೆ.
ಎಕ್ಸ್ ಕಿರಣಗಳ ಉತ್ಪಾದನೆ
ಸ್ಫೋಟಗೊಳ್ಳುವ ನಕ್ಷತ್ರಗಳಿಂದ ಉಂಟಾಗುವ ಬ್ಲಾಸ್ಟ್ ತರಂಗದಲ್ಲಿ ಗ್ರಹಗಳ ಮೇಲೆ ಪರಿಣಾಮ ಬೀರುವ ಅಪಾಯಗಳನ್ನು ಗುರುತಿಸಲಾಗಿದ್ದು ದೊಡ್ಡ ಪ್ರಮಾಣದಲ್ಲಿ ಎಕ್ಸ್ ಕಿರಣಗಳನ್ನು ಉತ್ಪಾದಿಸುತ್ತವೆ ಎಂಬುದಾಗಿ ಅಧ್ಯಯನ ತಿಳಿಸಿದೆ.
ಸ್ಫೋಟಗೊಂಡ ಹಲವಾರು ತಿಂಗಳು ಹಾಗೂ ವರ್ಷಗಳ ನಂತರ ಭೂಮಿಯಂತಹ ಗ್ರಹಗಳನ್ನು ತಲುಪುತ್ತವೆ ಹಾಗೂ ಹಲವಾರು ವರ್ಷಗಳವರೆಗೆ ಪರಿಣಾಮವನ್ನುಂಟು ಮಾಡುತ್ತವೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಈ ಕಿರಣಗಳಿಂದ ಉಂಟಾಗುವ ಅಪಾಯವೇನು?
ಎಕ್ಸ್‌ಕಿರಣಗಳ ಪರಿಣಾಮವು ಹತ್ತಿರದ ಗ್ರಹದ ಮೇಲೆ ಪರಿಣಾಮ ಬೀರಿದರೆ ವಿಕಿರಣವು ಗ್ರಹದ ವಾತಾವರಣದ ರೂಪವನ್ನೇ ತೀವ್ರವಾಗಿ ಬದಲಾಯಿಸುತ್ತದೆ. ಭೂಮಿಯಂತಹ ಗ್ರಹದ ಮೇಲೆ ಈ ಪರಿಣಾಮವು ಓಝೋನ್‌ನ ಗಮನಾರ್ಹ ಭಾಗವನ್ನೇ ಅಳಿಸಿಹಾಕಿಬಿಡುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: 700 ವರ್ಷಗಳಷ್ಟು ಹಳೆಯ ಕಲ್ಲಿನ ಗುಹೆ ಮನೆಗಳಿವು! ಇಲ್ಲಿ ಇನ್ನೂ ಜನರು ವಾಸಿಸುತ್ತಾರಂತೆ!
ಖಗೋಳಶಾಸ್ತ್ರಜ್ಞರು ಆಳವಾದ ಬಾಹ್ಯಾಕಾಶದಲ್ಲಿ 31 ಸೂಪರ್‌ನೋವಾಗಳನ್ನು ವೀಕ್ಷಿಸಿದ್ದಾರೆ ಮತ್ತು ಗ್ರಹಗಳು ಸುಮಾರು 160 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ವಿಕಿರಣದ ಮಾರಕ ಪ್ರಮಾಣಗಳಿಗೆ ಒಳಗಾಗಬಹುದು ಎಂದು ಬಹಿರಂಗಪಡಿಸಿದ್ದಾರೆ.
ತಂಡವು ಸೂಪರ್ನೋವಾ 1979C, SN 1987A, SN 2010jl, ಮತ್ತು SN 1994I ನಲ್ಲಿ ದೂರದರ್ಶಕಗಳನ್ನು ಬಳಸಿ ಮಾಹಿತಿ ಕಲೆಹಾಕಿ ವರದಿ ಬಹಿರಂಗಪಡಿಸಿದೆ. ಸೂಪರ್ನೋವಾದ ಪರಸ್ಪರ ಕ್ರಿಯೆಯಿಂದ ಮಾರಣಾಂತಿಕ ಎಕ್ಸ್- ಕಿರಣದ ಒಡ್ಡುವಿಕೆ ವರ್ಷಗಳ ನಂತರ ಮತ್ತು ಭೂಮಿಯಂತಹ ಗ್ರಹದ ನೇರಳಾತೀತ ವಿಕಿರಣದ ಪ್ರಭಾವದ ನಂತರ, ಹೆಚ್ಚಿನ ಪ್ರಮಾಣದ ಸಾರಜನಕ ಡೈಆಕ್ಸೈಡ್ ಅನ್ನು ಉತ್ಪಾದಿಸಬಹುದು, ಇದು ವಾತಾವರಣದಲ್ಲಿ ಕಂದು ಮಬ್ಬನ್ನು ಉಂಟುಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಮುಂದಕ್ಕೆ ಅಪಾಯವಿದೆ ಎಂಬುದನ್ನು ಖಾತ್ರಿಪಡಿಸಿರುವ ತಂಡ
ಈ ರೀತಿಯ ಘಟನೆಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲ, ಏಕೆಂದರೆ ಎಕ್ಸ್-ರೇ ಅಪಾಯದ ವಲಯದಲ್ಲಿ ಯಾವುದೇ ಸಂಭಾವ್ಯ ಸೂಪರ್ನೋವಾಗಳಿಲ್ಲ. ಆದಾಗ್ಯೂ, ಅಂತಹ ಘಟನೆಗಳು ಭೂಮಿಯ ಭೂತಕಾಲದಲ್ಲಿ ಯಾವುದಾದರೂ ರೀತಿಯ ಪರಿಣಾಮವನ್ನು ಬೀರಬಹುದು ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಳಿ ಮೊದಲಾ, ಮೊಟ್ಟೆ ಮೊದಲಾ? ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!
ಸುಮಾರು ಎರಡರಿಂದ ಎಂಟು ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಸಮೀಪದಲ್ಲಿ ಸೂಪರ್ನೋವಾಗಳು ಸಂಭವಿಸಿವೆ ಎಂದು ಹಿಂದಿನ ಸಂಶೋಧನೆಯು ತೀರ್ಮಾನಿಸಿದೆ, ಅದು ಭೂಮಿಯಿಂದ 65 ಮತ್ತು 500 ಬೆಳಕಿನ ವರ್ಷಗಳ ದೂರದಲ್ಲಿದ್ದರೂ ಇನ್ನೂ ಗ್ರಹಕ್ಕೆ ಅಪ್ಪಳಿಸಲಿದೆ ಎಂದು ತಂಡವು ತಿಳಿಸಿದೆ.
ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳಬಹುದು
"ಸೂಪರ್ನೋವಾಗಳಿಂದ ಎಕ್ಸ್-ಕಿರಣಗಳ ಮೇಲಿನ ಹೆಚ್ಚಿನ ಸಂಶೋಧನೆಯು ನಕ್ಷತ್ರಗಳ ಜೀವನ ಚಕ್ರವನ್ನು ಅರ್ಥಮಾಡಿಕೊಳ್ಳಲು ಮೌಲ್ಯಯುತವಾಗಿದೆ, ಆದರೆ ಖಗೋಳವಿಜ್ಞಾನ, ಪ್ಯಾಲಿಯಂಟಾಲಜಿ, ಮತ್ತು ಭೂಮಿ ಮತ್ತು ಗ್ರಹಗಳ ವಿಜ್ಞಾನಗಳಂತಹ ಕ್ಷೇತ್ರಗಳ ಮೇಲೆ ಪರಿಣಾಮಗಳನ್ನು ಹೊಂದಿದೆ" ಎಂದು ಇಲಿನಾಯ್ಸ್ ವಿಶ್ವವಿದ್ಯಾಲಯದ ಸಹ-ಲೇಖಕ ಬ್ರಿಯಾನ್ ಫೀಲ್ಡ್ಸ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ