• Home
  • »
  • News
  • »
  • trend
  • »
  • Sunday Special Fish Kabab: ಚಿಕನ್​, ಮಟನ್​ ಬೋರ್ ಆಯ್ತಾ? ಹಾಗಾದ್ರೆ ಬೋನ್​ಲೆಸ್ ಫಿಶ್ ಕಬಾಬ್ ಟ್ರೈ ಮಾಡಿ

Sunday Special Fish Kabab: ಚಿಕನ್​, ಮಟನ್​ ಬೋರ್ ಆಯ್ತಾ? ಹಾಗಾದ್ರೆ ಬೋನ್​ಲೆಸ್ ಫಿಶ್ ಕಬಾಬ್ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sunday Special Recipe Fish kabab ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಮೀನಿನ ಆಹಾರ ಪದಾರ್ಥಗಳು ಜಾಸ್ತಿ. ಇನ್ನು ಫಿಶ್ ಕಬಾಬ್ ಮಾಡುವುದು ಬಹಳ ಅಪರೂಪ. ಬೋನ್ ಲೆಸ್ ಫಿಶ್ ಕಬಾಬ್  ಅಂದರೆ ಸಾಕು ಹಲವರಿಗೆ ಖುಷಿಯೋ ಖುಷಿ.  ಈ ಫಿಶ್ ಕಬಾಬ್   ಗರಿಗರಿಯಾಗಿ,ಮಸಾಲೆಯುಕ್ತವಾಗಿ ಮತ್ತು ಮೃದುವಾಗಿರುವುದರಿಂದ  ಪ್ರತಿಯೊಬ್ಬರೂ  ಈ ಆಹಾರವನ್ನು ಇಷ್ಟಪಡುತ್ತಾರೆ.

ಮುಂದೆ ಓದಿ ...
  • Share this:

Sunday Special recipe: ಭಾನುವಾರ ಅನ್ನೋದು ನಾನ್ ವೆಜ್​ ಪ್ರಿಯರ ಫೇವರೇಟ್ ದಿನ. ಯಾಕಂದ್ರೆ ಬಿಡುವಿನ ಸಮಯದಲ್ಲಿ ನಾನ್ ವೆಜ್ ಮಾಡಿ ತಿನ್ನುವ ಆ ಅನುಭವವೇ ಬೇರೆ.  ಅದರಲ್ಲೂ ಸಂಡೇ ಬಂತು ಅಂದ್ರೆ ಏನಾದ್ರು special  ಟ್ರೈ ಮಾಡುವ ಅನ್ನೋ ಆಲೋಚನೆ ಹಲವರಿಗೆ ಇರುತ್ತದೆ. ಒಂದು ಸಲ ಚಿಕನ್ ಅಲ್ಲಿ ವೆರೈಟಿ ಮಾಡಿದ್ರೆ, ಇನ್ನೊಮ್ಮೆ ಮಟನ್, ಇನ್ನೊಮ್ಮೆ ಫಿಶ್ ಹೀಗೆ. ಚಿಕನ್ ಮತ್ತು ಮಟನ್​ಗಳಲ್ಲಿ ಹೀಗುವ variety ಗಿಂತ ಫಿಶ್​ನಲ್ಲಿ ಹೆಚ್ಚು ಹೀಗುತ್ತದೆ. ಬಂಗಡೆ ಮೀನು, ಗೆಂಡೆ ಮೀನು ಹೀಗೆ. ಒಂದೊಂದು ಮೀನಿನಲ್ಲಿ ಒಂದೊಂದು ಆಹಾರ ಪದಾರ್ಥ ರುಚಿಯಾಗಿರುತ್ತದೆ. ಮೀನಿನಲ್ಲಿ ಸಹ ಸಾಂಬಾರ್, ಫ್ರೈ, ಬಿರಿಯಾನಿ, ಫಿಶ್ ರೈಸ್ , ಕಬಾಬ್ ಹೀಗೆ ಮಾಡಬಹುದು. ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಮೀನಿನ ಆಹಾರ ಪದಾರ್ಥಗಳು ಜಾಸ್ತಿ. ಇನ್ನು ಫಿಶ್ ಕಬಾಬ್ (Fish Kabab) ಮಾಡುವುದು ಬಹಳ ಅಪರೂಪ. ಬೋನ್ ಲೆಸ್ ಫಿಶ್ ಕಬಾಬ್  ಅಂದರೆ ಸಾಕು ಹಲವರಿಗೆ ಖುಷಿಯೋ ಖುಷಿ.  ಈ ಫಿಶ್ ಕಬಾಬ್  ಗರಿಗರಿಯಾಗಿ,ಮಸಾಲೆಯುಕ್ತವಾಗಿ ಮತ್ತು ಮೃದುವಾಗಿರುವುದರಿಂದ  ಪ್ರತಿಯೊಬ್ಬರೂ  ಈ ಆಹಾರವನ್ನು ಇಷ್ಟಪಡುತ್ತಾರೆ. ಹಾಗಾದ್ರೆ ಈ ಸಂಡೇ ಫಿಶ್ ಕಬಾಬ್ ಮಾಡಿ, ಮನೆಯವರ ಮನ ಗೆಲ್ಲಿ.


ಫಿಶ್  ಕಬಾಬ್‌ ಮಾಡಲು ಬೇಕಾಗುವ ಸಾಮಾಗ್ರಿಗಳು


ಮೀನು – ಅರ್ಧ ಕೆಜಿ


ನಿಂಬೆ ರಸ - 1 ಟೀಸ್ಪೂನ್


ಕಡಲೇ ಹಿಟ್ಟು: 1 ಕಪ್


ಶುಂಠಿ ಪೇಸ್ಟ್ - 1 ಟೀಸ್ಪೂನ್


ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಸ್ಪೂನ್


ಹಸಿರು ಮೆಣಸಿನಕಾಯಿ ಪೇಸ್ಟ್ - 1/2 ಟೀಸ್ಪೂನ್


ಕೊತ್ತಂಬರಿ ಬೀಜ- 1/2 ಕಪ್ ( ಪುಡಿ ಮಾಡಿರುವುದು)


ಅರಿಶಿನ ಪುಡಿ - ¼  1 ಟೇಬಲ್ ಸ್ಪೂನ್


ಜೀರಿಗೆ ಪುಡಿ - 1 ಟೇಬಲ್ ಸ್ಪೂನ್


ಗರಂ ಮಸಾಲ - 1/2 ಟೀಸ್ಪೂನ್


ಕೊತ್ತಂಬರಿ ಸೊಪ್ಪು - 1 ಕಪ್


ಈರುಳ್ಳಿ - 1 ಕಪ್


ಉಪ್ಪು - ರುಚಿಗೆ ತಕ್ಕಂತೆ


ಎಣ್ಣೆ – ಫ್ರೈ ಮಾಡಲು


ಇದನ್ನೂ ಓದಿ: ಯಾವಾಗಲೂ ಕೀಮಾ ಉಂಡೆ ಸಾರು ಮಾಡುವುದಕ್ಕಿಂತ ಕೀಮಾದಲ್ಲಿ ಈ 5 ಅಡುಗೆ ಮಾಡಿ


ಮೊದಲು ಮೀನುಗಳನ್ನು  ಸರಿಯಾಗಿ ತೊಳೆದು  ಚನ್ನಾಗಿ ಒಣಗಿಸಿ. ನಂತರ ಮ್ಯಾರಿನೇಷನ್ ಬೌಲ್ ತೆಗೆದುಕೊಂಡು, ಮೀನು, ಉಪ್ಪು ಮತ್ತು ನಿಂಬೆ ರಸ ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣಗಳು ಮೀನಿನೊಂದಿಗೆ ಸರಿಯಾಗಿ ಬೆರೆಯಬೇಕು.


ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿ. ಚನ್ನಾಗಿ ಮೀನುಗಳನ್ನು Fry ಮಾಡಬೇಕು.  ಫ್ರೈ ಆದ ಮೀನು ತಣ್ಣಗಾದ ನಂತರ ಅದರಿಂದ ಮೂಳೆಗಳು ಇಲ್ಲದ  ಭಾಗವನ್ನು ಬೇರೆ ಮಾಡಿ. ಅಂದರೆ ಮೀನಿನಿಂದ ಮೂಳೆಯನ್ನು ಬೇರ್ಪಡಿಸಿ.


ನಂತರ ಒಂದು ಬಟ್ಟಲಿನಲ್ಲಿ ಈ ಮೀನುಗಳನ್ನು ಹಾಕಿ ಅದನ್ನು ಪುಡಿಮಾಡಿ. ಅದಕ್ಕೆ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್, ಪುಡಿ ಮಾಡಿದ ಧನಿಯಾವನ್ನು ಪೂರ್ತಿಯಾಗಿ ಹಾಕಿ. ಜೊತೆಗೆ  ಅರಿಶಿನ ಪುಡಿ, ಜೀರಾ ಪುಡಿ, ಗರಂ ಮಸಾಲ, ಉಪ್ಪು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.  ಸರಿಯಾಗಿ ಮಿಶ್ರಣವಾದ ಮೇಲೆ 30 ನಿಮಿಷಗಳ ಕಾಲ  ಹಾಗೆಯೇ ಬಿಡಿ. ಹಾಗೆ ಬಿಡುವುದರಿಂದ ಮಸಾಲೆಗಳ ಮಿಶ್ರಣ ಸರಿಯಾಗಿ ಆಗುತ್ತದೆ.


30 ನಿಮಿಷಗಳ ನಂತರ ಅದಕ್ಕೆ ಕಡಲೇ ಹಿಟ್ಟು ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ. ಅದನ್ನು ಚನ್ನಾಗಿ ಮಿಶ್ರಣ ಮಾಡಿ.


ಹಾಗೆಯೇ , ಮತ್ತೊಮ್ಮೆ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಕಬಾಬ್ ಗೋಲ್ಡನ್  ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ  ಸಣ್ಣ ಉರಿಯಲ್ಲಿ ಚನ್ನಾಗಿ ಫ್ರೈ ಮಾಡಿ. ಹೀಗೆ ಚನ್ನಾಗಿ ಫ್ರೈ ಆದ ಕಬಾಬ್ ಅನ್ನು ಟೊಮೋಟೊ ಸಾಸ್ ಜೊತೆ ಮನೆಯವರಿಗೆ ಸವಿಯಲು ನೀಡಿ.

Published by:Sandhya M
First published: