Ramadan 2022: ಸಮುದ್ರ ತೀರದಲ್ಲಿ ಸೋಹರ್, ಸಿಂಹಗಳೊಂದಿಗೆ ಇಫ್ತಾರ್: ಈ ಸ್ಥಳದಲ್ಲಿ ರಂಜಾನ್‌ ಗೆ ಭರ್ಜರಿ ತಯಾರಿ..!

ಅಬುಧಾಬಿಯು ಉಪವಾಸದ ಸಂದರ್ಭದಲ್ಲಿ ನಡೆಸುವ ಈ ಕೂಟಗಳನ್ನು ವಿಶೇಷವಾಗಿ ಆಯೋಜಿಸುತ್ತದೆ. ಸಮುದ್ರ ತೀರದಲ್ಲಿ ಅಲ್ಲಲ್ಲೇ ಟೆಂಟ್‌ಗಳನ್ನು ಹಾಕಿ ಸೋಹರ್ ಕೂಟವನ್ನು ಆಯೋಜಿಸಿದರೆ, ಮೃಗಾಲಯದಲ್ಲಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ವಾರಾಂತ್ಯದಲ್ಲಿ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ (Ramdan 2022) ಭಾಗವಾದ ಉಪವಾಸ (Fasting) ಪ್ರಾರಂಭವಾಗಲಿದೆ. ಉಪವಾಸ, ಸಿಹಿ ತಿಂಡಿ ಅಂತ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಭಿನ್ನ-ವಿಭಿನ್ನವಾಗಿ ಈ ಹಬ್ಬ(Festival)ವನ್ನು ಅಲ್ಲಿನ ಸಂಪ್ರದಾಯದನುಸಾರ ಆಚರಿಸುತ್ತಾರೆ. ಹಾಗಾದರೆ ಅಬುಧಾಬಿ(Abu Dhabi )ಯಲ್ಲಿ ಹಬ್ಬದ ಆಚರಣೆ (Festival Celebration) ಹೇಗಿದೆ, ಉಪವಾಸದ ಭಾಗಗಳಾದ ಇಫ್ತಾರ್ (Iftar) ಮತ್ತು ಸೋಹರ್ (Sohar) ಕೂಟ ಹೇಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಅಬುಧಾಬಿ ನಿವಾಸಿಗಳು, ಕುಟುಂಬಗಳು ಮತ್ತು ವ್ಯವಹಾರಗಳು ಪವಿತ್ರ ತಿಂಗಳನ್ನು ಆಚರಿಸಲು ಆಧ್ಯಾತ್ಮಿಕವಾಗಿ ತಯಾರಿ ನಡೆಸುತ್ತಿವೆ.

ಮುಸ್ಲಿಂ ಸಮುದಾಯದಲ್ಲಿ ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಅಬುಧಾಬಿಯು ಉಪವಾಸದ ಸಂದರ್ಭದಲ್ಲಿ ನಡೆಸುವ ಈ ಕೂಟಗಳನ್ನು ವಿಶೇಷವಾಗಿ ಆಯೋಜಿಸುತ್ತದೆ. ಸಮುದ್ರ ತೀರದಲ್ಲಿ ಅಲ್ಲಲ್ಲೇ ಟೆಂಟ್‌ಗಳನ್ನು ಹಾಕಿ ಸೋಹರ್ ಕೂಟವನ್ನು ಆಯೋಜಿಸಿದರೆ, ಮೃಗಾಲಯದಲ್ಲಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುತ್ತಿದೆ.

ಎರಡು ವರ್ಷಗಳ ಬಳಿಕ ಮತ್ತೆ ರಂಜಾನ್ ಕೂಟಗಳು

2 ವರ್ಷಗಳ ಕೋವಿಡ್ ನಿರ್ಬಂಧಗಳ ನಂತರ ಮುಸ್ಲಿಂ ಕುಟುಂಬಗಳು ರಂಜಾನ್ ಸಂಪ್ರದಾಯಗಳಾದ ಇಫ್ತಾರ್ ಮತ್ತು ಸುಹೂರ್ ಅನ್ನು ದೊಡ್ಡ ರೀತಿಯಲ್ಲಿ ಆಚರಿಸಲು ಎದುರು ನೋಡುತ್ತಿವೆ. ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಹಿಂದಿನ 2 ರಂಜಾನ್‌ಗಳಲ್ಲಿ ಕೂಟಗಳನ್ನು, ವಿಶೇಷವಾಗಿ ಇಫ್ತಾರ್‌ ಅನ್ನು ಇಲ್ಲಿ ಕಟ್ಟುನಿಟ್ಟಾಗಿಸಲಾಗಿತ್ತು.

“ಕೋವಿಡ್-19 ಪರಿಸ್ಥಿತಿ ಸುಧಾರಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಬಾರಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ದೊಡ್ಡ ಇಫ್ತಾರ್ ಮತ್ತು ಸೋಹರ್ ಭೋಜನವನ್ನು ಆಯೋಜಿಸಲು ನಾವು ಯೋಜಿಸುತ್ತಿದ್ದೇವೆ” ಎಂದು ಅಬುಧಾಬಿಯ ಮುಸಫ್ಫಾ ಕೈಗಾರಿಕಾ ಪ್ರದೇಶದಲ್ಲಿ ವ್ಯಾಪಾರವನ್ನು ನಡೆಸುತ್ತಿರುವ ಮೊಹಮ್ಮದ್ ಸಲೇಮ್ ಹೇಳಿದರು.

ಇದನ್ನೂ ಓದಿ:  Ramadan 2022: ರಂಜಾನ್ ಸಂದರ್ಭದಲ್ಲಿ ಅರ್ಧಚಂದ್ರದ ಮಹತ್ವ ಹಾಗೂ ಪವಿತ್ರ ತಿಂಗಳಿನ ಆರಂಭ ಹೇಗೆ ಗುರುತಿಸುತ್ತಾರೆ..?

ಔತಣ ಕೂಟ, ಉಡುಗೊರೆ ವಿನಿಮಯ

“ರಂಜಾನ್ ಉಪವಾಸ, ಕುಟುಂಬ ಕೂಟಗಳು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ತಿಂಗಳು. ನಾನು ಇಲ್ಲಿ ಅನೇಕ ಸಂಬಂಧಿಕರನ್ನು ಹೊಂದಿದ್ದೇನೆ ಮತ್ತು ರಂಜಾನ್ ಸಮಯದಲ್ಲಿ ಸಂಪ್ರದಾಯಗಳನ್ನು ಆಚರಿಸಲು ಉತ್ಸುಕರಾಗಿದ್ದೇವೆ ಎನ್ನುತ್ತಾರೆ.

ಐದು ವರ್ಷಗಳಿಂದ ಅಬುಧಾಬಿ ನಿವಾಸಿಯಾಗಿರುವ ಉಗಾಂಡಾದ ವಲಸಿಗ ಹಸನ್ ಮುಲುಂಬಾ ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಲು ಇಫ್ತಾರ್ ಟೆಂಟ್‌ಗಳಿಗೆ ಭೇಟಿ ನೀಡಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

“ನನಗೆ ಇಲ್ಲಿ ಕುಟುಂಬವಿಲ್ಲ ಮತ್ತು ಕೋವಿಡ್ -19 ಕಾರಣದಿಂದಾಗಿ ಈ ಟೆಂಟ್‌ಗಳನ್ನು ನಿಷೇಧಿಸಿದ ಹಿಂದಿನ ಎರಡು ವರ್ಷಗಳನ್ನು ಹೊರತುಪಡಿಸಿ ನಾನು ಯಾವಾಗಲೂ ಇಫ್ತಾರ್ ಟೆಂಟ್ ಗಳಲ್ಲಿ ನನ್ನ ಉಪವಾಸವನ್ನು ಮುರಿಯುತ್ತಿದ್ದೇನೆ. ನಾನು ಯಾವಾಗಲೂ ಗುಂಪಿನಲ್ಲಿ ಉಪವಾಸ ಮುರಿಯುವುದನ್ನು ಆನಂದಿಸುತ್ತೇನೆ. ಇದು ಸಹೋದರತ್ವವನ್ನು ಬಲಪಡಿಸುತ್ತದೆ” ಎಂದು ಮುಲುಂಬಾ ಹೇಳಿದರು.

ವಿವಿಧ ಸ್ಥಳಗಳಲ್ಲಿ ಇಫ್ತಾರ್ ಟೆಂಟ್ ಗಳು

ಅಧಿಕಾರಿಗಳ ಅನುಮೋದನೆಯ ನಂತರ ಮಸೀದಿಗಳು ಮತ್ತು ಜನರ ನಿವಾಸದ ಬಳಿ ಸೇರಿದಂತೆ ಅಬುಧಾಬಿಯ ವಿವಿಧ ಸ್ಥಳಗಳಲ್ಲಿ ಇಫ್ತಾರ್ ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ.

ಅಂಗಡಿಗಳು, ವಿಶೇಷವಾಗಿ ಆಹಾರ ಉತ್ಪನ್ನಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಗಳು ರಂಜಾನ್ ಸಮಯದಲ್ಲಿ ಬೇಡಿಕೆಯನ್ನು ಪೂರೈಸಲು ಆಹಾರ ಪದಾರ್ಥಗಳನ್ನು ಸಂಗ್ರಹಿಸುತ್ತವೆ.
ಅಬುಧಾಬಿಯ ಕೋಸ್ಟ್ ಸ್ಟಾರ್ ಹಣ್ಣುಗಳು ಮತ್ತು ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಲಸಿಗ ರಶೀದ್ ಕುಟ್ಟೋತ್, ಆಹಾರ ಪದಾರ್ಥಗಳ ಬೇಡಿಕೆಯನ್ನು ಪೂರೈಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು. ಸ್ಥಳೀಯ ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿದ ಇವರು "ರಂಜಾನ್ ಮೊದಲ ದಿನಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ವಾರಾಂತ್ಯದಲ್ಲಿ ಸಾಕಷ್ಟು ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿದ್ದೇವೆ" ಎಂದು ಹೇಳಿದರು.

ಅಬುಧಾಬಿಯಲ್ಲಿ ಸೋಹರ್, ಇಫ್ತಾರ್ ಆನಂದಿಸಲು ಸ್ಥಳಗಳು

ಪಾರ್ಕ್ ಹಯಾತ್ ಸಮುದ್ರತೀರದಲ್ಲಿ ಸುಹೂರ್ ಅಬುಧಾಬಿಯಲ್ಲಿ ಪಾರ್ಕ್ ಹಯಾತ್ ಸಮುದ್ರತೀರದಲ್ಲಿ ಸುಹೂರ್ ಕೂಟವನ್ನು ಆಯೋಜಿಸಲಾಗಿದೆ. ಬಿಳಿ ಮರಳು, ಶಾಂತವಾದ ನೀರು ಮತ್ತು ಆಕಾಶದ ನಕ್ಷತ್ರಗಳು ನಿವಾಸಿಗಳನ್ನು ಪಾರ್ಕ್ ಹಯಾತ್ ಕಡೆಗೆ ಸೆಳೆಯುತ್ತಿದೆ. ಅಬುಧಾಬಿ ಹೋಟೆಲ್ ಮತ್ತು ವಿಲ್ಲಾಸ್‌ನಲ್ಲಿ ಐಷಾರಾಮಿ ಬೆಡೋಯಿನ್-ಶೈಲಿಯ ಪೂರ್ವ ರಂಜಾನ್ ಸುಹೂರ್ ಅನುಭವವನ್ನು ನೀಡುತ್ತದೆ.

ರಾತ್ರಿ 9 ರಿಂದ 1ಗಂಟೆಯವರೆಗೆ 'ಸುಹೂರ್ ಆನ್ ದಿ ಬೀಚ್' ಮೆನುವಿನಲ್ಲಿ ಗೌರ್ಮೆಟ್ ಅರೇಬಿಕ್ ಅಥವಾ ಫ್ರೆಂಚ್ ಶೈಲಿಯ ಸುಹೂರ್ ಚಹಾ, ಜೊತೆಗೆ ಅರೇಬಿಕ್ ಸಂಗೀತದೊಂದಿಗೆ ಔದ್ ಅಥವಾ ಖಾನೂನ್ ಪ್ರದರ್ಶನಗಳು ಇರಲಿವೆ.

ಇದನ್ನೂ ಓದಿ:  Ramadan 2022: ರಂಜಾನ್ ಹಬ್ಬಕ್ಕೆ ಯಾವ ದೇಶದಲ್ಲಿ ಯಾವ ಖಾದ್ಯ ಮಾಡ್ತಾರೆ?

ಅಲ್ ಐನ್ ಮೃಗಾಲಯದಲ್ಲಿ ಸಿಂಹಗಳೊಂದಿಗೆ ಇಫ್ತಾರ್

ಅಬುಧಾಬಿ ಅಲ್ ಐನ್ ಮೃಗಾಲಯದಲ್ಲಿ ಸಿಂಹಗಳ ಜೊತೆ ಜನರು ತಮ್ಮ ಉಪವಾಸವನ್ನು ಮುರಿಯಲು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ - ವಿಶೇಷ ಇಫ್ತಾರ್ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಮಾನವ ನಿರ್ಮಿತ ಸಫಾರಿ ಪಾರ್ಕ್‌ನಲ್ಲಿ 'ಇಫ್ತಾರ್ ವಿಥ್ ದಿ ಲಯನ್ಸ್', 30 ದಿನಗಳ ಕಾಲ ಐಷಾರಾಮಿ ಕಾಡು ವ್ಯವಸ್ಥೆಯಲ್ಲಿ 4 ರಿಂದ 12 ಜನರ ಗುಂಪುಗಳಿಗೆ ಇಫ್ತಾರ್ ಕೂಟವನ್ನು ಆಯೋಜಿಸಿದೆ.
Published by:Mahmadrafik K
First published: