Sudha Murthy: ಈ ವರ್ಷ ಡಿಸೆಂಬರ್ 31ಕ್ಕೆ ಇನ್ಫೋಸಿಸ್ ಫೌಂಡೇಶನ್​ಗೆ ಸುಧಾ ಮೂರ್ತಿ ವಿದಾಯ, ನಿವೃತ್ತಿ ನಂತರದ ಅವರ ಪ್ಲಾನ್​ ಏನು ಗೊತ್ತಾ?

Sudha Murthy: ಮಕ್ಕಳಿಗೆ ಗ್ರಂಥಾಲಯಗಳನ್ನೇ ನಿರ್ಮಿಸಿ ಕೊಡುವುದರಿಂದ ಹಿಡಿದು ದೇವದಾಸಿಯರ ಬದುಕು ಹಸನು ಮಾಡುವ ತನಕ.. ಸುಧಾ ಮೂರ್ತಿಯವರೇ ಹೇಳುವಂತೆ ಆಡು ಮುಟ್ಟದ ಸೊಪ್ಪಿಲ್ಲ, ಇನ್ಫೋಸಿಸ್ ಫೌಂಡೇಶನ್ ಮಾಡದ ಕೆಲಸವಿಲ್ಲ ಎನ್ನುವಂತೆ ಎಲ್ಲೆಡೆ ತನ್ನ ಸಹಾಯಹಸ್ತ ಚಾಚಿದೆ ಈ ಸಂಸ್ಥೆ.

ಸುಧಾ ಮೂರ್ತಿ

ಸುಧಾ ಮೂರ್ತಿ

 • Share this:
  Infosys Foundation: ಒಂದು ಫೌಂಡೇಶನ್​ನಿಂದ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ ಕೀರ್ತಿ ಇನ್ಫೋಸಿಸ್ ಫೌಂಡೇಶನ್​ಗೆ ಇದೆ. ಸುಧಾ ಮೂರ್ತಿ (Sudha Murthy) ಸಾರಥ್ಯದಲ್ಲಿ ಇನ್ಫೋಸಿಸ್ ಫೌಂಡೇಶನ್ ಲೆಕ್ಕವಿಲ್ಲದಷ್ಟು ಜನರ ಬದುಕಿಗೆ ಆಸರೆಯಾಗಿದೆ. ಆದ್ರೆ ತಾನು ಇನ್ನೇನು ಈ ವರ್ಷ ನಿವೃತ್ತಳಾಗ್ತಿದ್ದೇನೆ, ಮತ್ತು ಇನ್ಫೋಸಿಸ್ ಎನ್ನುವ ಸಂಸ್ಥೆ ತನ್ನ ಎರಡನೇ ಮಗು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಸುಧಾ ಮೂರ್ತಿ. ಅಂದ್ಹಾಗೆ 1996ರಲ್ಲಿ ಆರಂಭವಾದ ಇನ್ಫೋಸಿಸ್ ಫೌಂಡೇಶನ್​ಗೆ ಇದು 25 ವಸಂತಗಳನ್ನು ಪೂರೈಸಿದ ಸುಸಂದರ್ಭವೂ ಹೌದು. ನಿವೃತ್ತಿಯ ನಂತರ ತಮ್ಮ ಕುಟುಂಬ ನಡೆಸುವ ಮೂರ್ತಿ ಫೌಂಡೇಶನ್​ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ ಸುಧಾ ಮೂರ್ತಿ.

  ದೂರದ ಗಲ್ಫ್​ನಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯರ ಏರ್ ಟಿಕೆಟ್ ಖರೀದಿಸಿ ಅವರು ಮನೆಗೆ ಮರಳುವ ವ್ಯವಸ್ಥೆ ಮಾಡಿದ್ದಿರಲಿ, ಅಥವಾ ಸಾರ್ವಜನಿಕ ಶೌಚಾಲಯಗಳ ನಿರ್ಮಾಣವಿರಲಿ.. ಮಕ್ಕಳಿಗೆ ಗ್ರಂಥಾಲಯಗಳನ್ನೇ ನಿರ್ಮಿಸಿ ಕೊಡುವುದರಿಂದ ಹಿಡಿದು ದೇವದಾಸಿಯರ ಬದುಕು ಹಸನು ಮಾಡುವ ತನಕ.. ಸುಧಾ ಮೂರ್ತಿಯವರೇ ಹೇಳುವಂತೆ ಆಡು ಮುಟ್ಟದ ಸೊಪ್ಪಿಲ್ಲ, ಇನ್ಫೋಸಿಸ್ ಫೌಂಡೇಶನ್ ಮಾಡದ ಕೆಲಸವಿಲ್ಲ ಎನ್ನುವಂತೆ ಎಲ್ಲೆಡೆ ತನ್ನ ಸಹಾಯಹಸ್ತ ಚಾಚಿದೆ ಈ ಸಂಸ್ಥೆ.

  ತಾನೇ ಒಂದು ಫೌಂಡೇಶನ್ ಆರಂಭಿಸಬೇಕು ಎಂದು ಸುಧಾ ಮೂರ್ತಿಯವರು ನಿರ್ಧರಿಸಿದಾಗ ಪತಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸಂಪೂರ್ಣ ಮನಸ್ಸಿನಿಂದ ಒಪ್ಪಿದ್ರಂತೆ. ಅಷ್ಟರಲ್ಲಿ ಇನ್ಫೋಸಿಸ್ ವತಿಯಿಂದಲೂ ಸಮಾಜಕ್ಕೆ ಸಹಾಯ ಮಾಡಲು ಒಂದು ಫೌಂಡೇಶನ್ ಸ್ಥಾಪಿಸುವ ಯೋಜನೆ ತಯಾರಾಗ್ತಿತ್ತು. ಆದರೆ ಮತ್ತೋರ್ವ ಸಂಸ್ಥಾಪಕ ನಂದನ್ ನಿಲೇಕಣಿ ಎರಡೆರಡು ಫೌಂಡೇಶನ್ ಬೇಡ.. ಇನ್ಫೋಸಿಸ್ ಫೌಂಡೇಶನ್​ನ್ನೇ ಸುಧಾ ನೋಡಿಕೊಳ್ಳಲಿ ಎಂದರಂತೆ. ಇಂಥಾ ಒಂದು ಚರ್ಚೆಯಿಂದ 1996ರಲ್ಲಿ ಇನ್ಫೋಸಿಸ್ ಫೌಂಡೇಶನ್​ನ ಅಧ್ಯಕ್ಷ ಗಾದಿಯಲ್ಲಿ ಸುಧಾ ಮೂರ್ತಿ ಸಮಾಜಸೇವೆಯ ತಮ್ಮ ಕೆಲಸ ಆರಂಭಿಸಿದರು.

  ಇದನ್ನೂ ಓದಿ: ಟಿಎಂಸಿ ಕಚೇರಿಯಲ್ಲಿದ್ದ ಪ್ರೀತಿಯ ಶ್ವಾನದ ಪುಣ್ಯತಿಥಿ: ಕಾಂಗ್ರೆಸ್​ನವರೂ ಬಂದು ಕಂಬನಿ ಮಿಡಿದರು !

  ಈ ವರ್ಷ ಡಿಸೆಂಬರ್ 31ಕ್ಕೆ ತಾನು ಇನ್ಫೋಸಿಸ್ ಫೌಂಡೇಶನ್​ನಿಂದ ನಿವೃತ್ತಿ ಪಡೆಯುವುದಾಗಿ ಸುಧಾ ಮೂರ್ತಿ ಕಳೆದ ವರ್ಷವೇ ಘೋಷಿಸಿದ್ದರು. ನಿವೃತ್ತಿ ನಂತರ ತಾನು ಕುಟುಂಬದ ಮೂರ್ತಿ ಫೌಂಡೇಶನ್​ನ ಮುಖ್ಯಸ್ಥರ ಸ್ಥಾನದಲ್ಲಿ ಕುಳಿತು ಇದೇ ಕೆಲಸ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಅದು ಚಿಕ್ಕ ಫೌಂಡೇಶನ್, ಹಾಗಾಗಿ ಇನ್ಫೋಸಿಸ್ ಫೌಂಡೇಶನ್​ನಂತೆ ದೊಡ್ಡ ಮಟ್ಟಿಗಿನ ಕೆಲಸವನ್ನು ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಸಹಾಯ ಮತ್ತು ಕೆಲಸ ನಿರಂತರವಾಗಿ ಮುಂದುವರೆಯುತ್ತಿರುತ್ತದೆ ಎಂದಿದ್ದಾರೆ ಸುಧಾ ಮೂರ್ತಿ. ತಮ್ಮ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ತಂತಮ್ಮ ಬದುಕಿನಲ್ಲಿ ಅವರ ಪಾಡಿಗೆ ಅವರಿದ್ದಾರೆ. ಒಂದು ಫೌಂಡೇಶನ್​ನ ನೆರವು ಇರಲಿ ಇಲ್ಲದಿರಲಿ ಬದುಕನ್ನು ನೇರಾನೇರ ಭೇಟಿ ಮಾಡುವ, ಎಲ್ಲೆಲ್ಲೋ ಅಲೆದು ಜನರಿಗೆ ನೆವಾಗುವ ಈ ಅವಕಾಶವನ್ನು ತಾನು ನಿರಂತರವಾಗಿ ಮುಂದುವರೆಸುತ್ತೇನೆ ಎಂದಿದ್ದಾರೆ ಸುಧಾ ಮೂರ್ತಿ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: