Infosys Sudha Murthy: 15 ರೂಪಾಯಿ ಸೀರೆ ಆಸೆಗೆ ಪುಣೆ ತನಕ ಹೋಗಿದ್ರಂತೆ ಸುಧಾ ಮೂರ್ತಿ, ಅವರೇ ಹೇಳಿದ ರೋಚಕ ಕತೆ!

Sudha Murthy Infosys: ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ಕುಟುಂಬದ ಸುಧಾ ಮೂರ್ತಿ ಹೆಚ್ಚು ಮಹತ್ವಾಕಾಂಕ್ಷೆ ಇದ್ದವರಲ್ಲ. ಇಂತಿಷ್ಟು ಓದಬೇಕು, ಇಂಥಾ ಕೆಲಸ ಪಡೆಯಬೇಕು, ನೆಮ್ಮದಿಯ ಬದುಕು ನಡೆಸಬೇಕು ಎನ್ನುವುದಷ್ಟೇ ಆಕೆಯ ಆಶಯವಾಗಿತ್ತು. ಆದ್ರೆ ವಿಧಿಯ ಆಶಯ ಬೇರೆಯೇ ಇತ್ತು.

ಶ್ರೀಮತಿ ಸುಧಾ ಮೂರ್ತಿ

ಶ್ರೀಮತಿ ಸುಧಾ ಮೂರ್ತಿ

  • Share this:
Sudha Murthy Infosys: ಇನ್ಫೋಸಿಸ್ ಫೌಂಡೇಶನ್​ನ ಸುಧಾ ಮೂರ್ತಿ ಅನೇಕರ ಪಾಲಿಗೆ ಅಕ್ಷರಶಃ ಅಮ್ಮನಂಥಾ ಹೆಣ್ಣುಮಗಳು. ಅವರು ಇಂದು ಲೆಕ್ಕವಿಲ್ಲದಷ್ಟು ಜನರಿಗೆ ಸಹಾಯ ನೀಡಿ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡುತ್ತಿದ್ದಾರೆ. ಆದರೆ ಅವರೇ ವಿದ್ಯಾರ್ಥಿಯಾಗಿದ್ದಾಗ ಅಥವಾ ಇನ್ಫೋಸಿಸ್ ಆರಂಭದ ದಿನಗಳಲ್ಲಿ ಬಹಳ ಶ್ರಮವಹಿಸಿ ಬದುಕು ನಡೆಸಿದ್ದಾರೆ. ಅವರ ಅದೇ ಶ್ರದ್ಧೆ ಮತ್ತು ಶ್ರಮ ಅವರನ್ನು ಇಂದು ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ. ಅದೇ ಇಂದು ಅನೇಕರಿಗೆ ಸ್ಫೂರ್ತಿ ಕೂಡಾ ಆಗಿದೆ. ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ಕುಟುಂಬದ ಸುಧಾ ಮೂರ್ತಿ ಹೆಚ್ಚು ಮಹತ್ವಾಕಾಂಕ್ಷೆ ಇದ್ದವರಲ್ಲ. ಇಂತಿಷ್ಟು ಓದಬೇಕು, ಇಂಥಾ ಕೆಲಸ ಪಡೆಯಬೇಕು, ನೆಮ್ಮದಿಯ ಬದುಕು ನಡೆಸಬೇಕು ಎನ್ನುವುದಷ್ಟೇ ಆಕೆಯ ಆಶಯವಾಗಿತ್ತು. ಆದ್ರೆ ವಿಧಿಯ ಆಶಯ ಬೇರೆಯೇ ಇತ್ತು. ಹಾಗಾಗಿ ಆಕೆಯ ಬದುಕಿನ ನಾನಾ ತಿರುವುಗಳು ಇಂದು ಇನ್ಫೋಸಿಸ್ ಮತ್ತು ಇನ್ಫೋಸಿಸ್ ಫೌಂಡೇಶನ್​ನಂಥಾ ಬೃಹತ್ ಸಂಸ್ಥೆಗಳಿಗೆ ಕಾರಣವಾಗಿದೆ.

ಸುಧಾ ಮೂರ್ತಿ (ಆಗಿನ್ನೂ ಸುಧಾ ಕುಲಕರ್ಣಿ) ಟೆಲ್ಕೊ ಸಂಸ್ಥೆಯ ಮೊಟ್ಟಮೊದಲ ಮಹಿಳಾ ಇಂಜಿನಿಯರ್ ಅನ್ನೋದು ಬಹುತೇಕರಿಗೆ ಈಗಾಗಲೇ ಗೊತ್ತಿರೋ ವಿಚಾರ. ಟಾಟಾ ಸಂಸ್ಥೆಯ ಹಿರಿಯ ಜೆಮ್​ಶೆಡ್​ಜಿ ಟಾಟಾಗೆ ಹೆಣ್ಣುಮಕ್ಕಳನ್ನು ನಿಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುವ ಎರಡು ಸಾಲಿನ ಪತ್ರ ಬರೆದಿದ್ದರು ಸುಧಾ ಮೂರ್ತಿ. ಅದಕ್ಕೆ ಉತ್ತರವಾಗಿ ಆಕೆಗೆ ಆ ಕೆಲಸದ ಸಂದರ್ಶನಕ್ಕೆ ಕರೆ ಬಂದಿದ್ದು ಮಾತ್ರವಲ್ಲ, ಅದರ ಪ್ರಯಾಣದ ಖರ್ಚನ್ನೂ ನೀಡುವುದಾಗಿ ಟೆಲ್ಕೊ ತಿಳಿಸಿತ್ತು.

ಹೀಗೆ ಕರೆ ಬಂದು ಆಕೆ ಸಂದರ್ಶನಕ್ಕೆ ಹೋಗಬೇಕಾದ್ದು ಪುಣೆಗೆ. ಅಷ್ಟು ದೂರ ಯಾರು ಹೋಗ್ತಾರೆ ಅಂತ ಉದಾಸೀನ ಮಾಡಿದ್ದವರನ್ನು ಗದರಿ ಹೋಗುವಂತೆ ಹೇಳಿದ್ದರು ಆಕೆಯ ತಂದೆ. ನಿನ್ನ ಪತ್ರಕ್ಕೆ ಅವರು ಉತ್ತರ ನೀಡಿದ್ದಾರೆ. ಬದಲಾವಣೆ ತರುವ ಮನಸ್ಸಿದ್ದರೆ ಅದಕ್ಕೆ ಗೌರವ ಕೊಟ್ಟಾದರೂ ಸಂದರ್ಶನಕ್ಕೆ ಹೋಗು ಎಂದಿದ್ದರಂತೆ ಸುಧಾರ ತಂದೆ ಶ್ರೀ ಕುಲಕರ್ಣಿ.

ಇದನ್ನೂ ಓದಿ: Afghanistan Crisis: ನಮ್ಮ ಕತೆ ಏನಾದ್ರೂ ಆಗ್ಲಿ, ಮಕ್ಕಳಾದರೂ ಬದುಕಲಿ ಎಂದು ತಂತಿ ಬೇಲಿಯಾಚೆ ಮಕ್ಕಳನ್ನು ಸೈನಿಕರೆಡೆಗೆ ದಾಟಿಸುತ್ತಿದ್ದಾರೆ ಅಫ್ಘನ್ ಜನ

ಅಷ್ಟರಲ್ಲಿ ಗೆಳತಿಯರು ಹೇಗೋ ಹೋಗಬೇಕಿರುವುದು ಪುಣೆಗೆ… ಅಲ್ಲಿ 15 ರೂಪಾಯಿಗೆ ಸೊಗಸಾದ ಸೀರೆಗಳು ಸಿಗುತ್ತವೆ, ಹೋಗಿ ಬಾ.. ನಮಗೂ ಸೀರೆ ತೆಗೆದುಕೊಂಡು ಬಾ ಎಂದು ಹಣವನ್ನೂ ನೀಡಿದ್ದರಂತೆ. ಸರಿ, ಸಂದರ್ಶನ ಏನಾಗುತ್ತೋ ಬಿಡುತ್ತೋ ಒಂದಷ್ಟು ಒಳ್ಳೆ ಸೀರೆಗಳನ್ನು ಕಡಿಮೆ ಬೆಲೆಗೆ ತರಬಹುದು ಎನ್ನುವ ಲೆಕ್ಕಾಚಾರ ಮಾಡಿ ಸುಧಾ ಮೂರ್ತಿ ಪುಣೆಗೆ ಹೊರಟರಂತೆ. ಹೀಗೆ ತಾನು ಈ ಎಲ್ಲಾ ಘಟನೆಗಳಿಂದಾಗಿ ಟೆಲ್ಕೊ ಸಂದರ್ಶನವನ್ನು ಅಟೆಂಡ್ ಮಾಡಿದ್ದೆ, ನಂತರ ಆದದ್ದೆಲ್ಲಾ ಇತಿಹಾಸ ಎಂದು ಸ್ಮರಿಸಿಕೊಂಡಿದ್ದಾರೆ ಸುಧಾ ಮೂರ್ತಿ. ಅನೇಕ ಸಂದರ್ಭಗಳಲ್ಲಿ ಬಹಳ ಸಣ್ಣ ಕಾರಣವೊಂದು ಬಹು ದೊಡ್ಡ ತಿರುವು ನೀಡುವ ಸನ್ನಿವೇಶಕ್ಕೆ ನಾಂದಿ ಹಾಡುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಅತ್ಯುತ್ತಮ ಉದಾಹರಣೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: