Viral Video Of Dudhsagar: ಸ್ವರ್ಗ ಭೂಮಿಯನ್ನು ಭೇಟಿಯಾದಂತಿದೆ, ದೂಧ್ ಸಾಗರ್ ಜಲಪಾತದ ಮೋಹಕ ದೃಶ್ಯ!

ಭಾರತದ ಅತೀ ಎತ್ತರದ ಮತ್ತು ಸುಂದರವಾದ ಜಲಪಾತಗಳಲ್ಲಿ ಒಂದಾದ ದೂಧ್ ಸಾಗರ ಜಲಪಾತವು ಮಾನ್ಸೂನ್​​ನಲ್ಲಿ ತನ್ನ ಸೌಂದರ್ಯವನ್ನು ಹೆಚ್ಚಿಸಿದೆ. ಇಲ್ಲಿನ ಮನಮೋಹಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೂಧ್ ಸಾಗರ್

ದೂಧ್ ಸಾಗರ್

  • Share this:
ಭಾರತವು ಅನೇಕ ರೀತಿಯ ವಿಸ್ಮಯಗಳಿಗೆ, ಅದ್ಭುತವಾದ ಸ್ಥಳಗಳಿಗೆ (Beautiful Places) , ಭವ್ಯವಾದ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಸಿದ್ದ ಸ್ಥಳಗಳು, ಪ್ರಕೃತಿ ಸೌಂದರ್ಯ, ದೇಶ ವಿದೇಶದ ಜನರನ್ನು ಆಕರ್ಷಿಸುತ್ತದೆ. ಮಾನ್ಸೂನ್ ಮಳೆಯು ಭಾರತದ ಕೆಲ ಭಾಗಗಳಿಗೆ ವಿನಾಶಿನಿಯಂತಿದ್ದರೂ ಇನ್ನೂ ಕೆಲವು ಭಾಗಗಳಲ್ಲಿ ಪ್ರಕೃತಿಯ ಸೌಂದರ್ಯವನ್ನು (Nature Beauty) ಮತ್ತಷ್ಟು ಹೆಚ್ಚಿಸಿದೆ. ಭಾರತದ (India) ಪ್ರಸಿದ್ಧ (Famous) ಮತ್ತು ಸುಂದರವಾದ ಜಲಪಾತಗಳ್ಳಿ (Water Falls) ಒಂದು ಧೂದ್ ಸಾಗರ (Dudhsagar) ಜಲಪಾತ ಮಾನ್ಸೂನ್ (Manson) ನಲ್ಲಿ ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿನ ಮನಮೋಹಕ ದೃಶ್ಯ ತುಂಬಾನೇ ಹರಿದಾಡುತ್ತಿದೆ. ಭಾರತದ ಪ್ರಕೃತಿಯ ಸೊಬಗನ್ನು ಈ ದೃಶ್ಯ ಮತ್ತಷ್ಟು ಹೆಚ್ಚಿಸಿದೆ.

ಮಾಂಡೋವಿ ನದಿ ಧೂದ್ ಸಾಗರದ ಮೂಲ
ಕರ್ನಾಟಕ ಗೋವಾ ಮತ್ತು ಬೆಳಗಾವಿ ನಡುವಿನ ರೈಲು ಮಾರ್ಗದಲ್ಲಿರುವ ಈ ಜಲಪಾತವು ವರ್ಷವಿಡೀ ಭೇಟಿ ನೀಡಲು ಅತ್ಯಂತ ಸುಂದರವಾದ ಜಲಪಾತವಾಗಿದೆ. ಇದು ಮಾಂಡೋವಿ ನದಿಯಿಂದ ಹುಟ್ಟುತ್ತದೆ. ಮತ್ತು ಇಲ್ಲಿ ನೀರು 1,017 ಅಡಿ ಎತ್ತರದಲ್ಲಿ ಹರಿಯುತ್ತದೆ. ಸರಾಸರಿ 30 ಮೀಟರ್ ಅಗಲವಿದೆ.

ಇದನ್ನೂ ಓದಿ: Jog Falls Viral Video: ಇದು ನಯಾಗರ ಅಲ್ಲ, ಜೋಗ! ಅದ್ಭುತ ವೈರಲ್ ವಿಡಿಯೋ ನೋಡಿ

ಹಾಲಿನ ನೊರೆಯಂತೆ ಹರಿಯುವ ನೀರು
ಗೋವಾದ ದೂಧ್ ಸಾಗರ ಜಲಪಾತವು ದೇಶದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇಲ್ಲಿ ಎತ್ತರದಿಂದ ಹರಿಯುವ ನೀರು ಹಾಲಿನ ನೊರೆಯಂತೆ ಕಾಣುವುದರಿಂದ ಇದಕ್ಕೆ ಹಾಲಿನ ಜಲಪಾತ (ದೂಧ್ ಸಾಗರ) ಎಂದು ಕರೆಯುತ್ತಾರೆ.

ವೈರಲ್ ಆಯಿತು ಜಲಪಾತದ ಮನಮೋಹಕ ದೃಶ್ಯ
ಮಾನ್ಸೂನ್ ಮಳೆಯು ದೂಧ್ ಸಾಗರ ಜಲಪಾತದ ಸೌಂದರ್ಯದ ಹೆಚ್ಚಳಕ್ಕೆ ಕಾರಣವಾಗಿದೆ. ಮತ್ತು ಇಲ್ಲಿ ನೀರು ಹರಿಯುವ ದೃಶವು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಹರಿದಾಡುತ್ತಿದ್ದು. ನೋಡುಗರ ಮನಸ್ಸನ್ನು ಸೆಳೆಯುತ್ತಿದೆ.

ಜಲಪಾತದ ಮನಮೋಹಕ ದೃಶ್ಯವನ್ನು ಹಂಚಿಕೊಂಡ ಭಾರತೀಯ ಅರಣ್ಯಾಧಿಕಾರಿ
ದೂಧ್ ಸಾಗರ ಜಲಪಾತದಲ್ಲಿ ನೀರು ಹರಿಯುತ್ತಿರುವ ದೃಶ್ಯವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. " ಮಾನ್ಸೂನ್ ಗೋವಾವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮತ್ತು ಇದು ನಿಜವಾಗಿಯೂ ಪಶ್ಚಿಮ ಘಟ್ಟಗಳ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಬರೆದು ಕೊಂಡಿದ್ದಾರೆ. ಮತ್ತು "ಇನ್ ಕ್ರೆಡಿಬಲ್ ಇಂಡಿಯಾ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಜಲಪಾತದ ದೃಶ್ಯವನ್ನು ಕಂಡು ಮನಸೋತ ಸೋಶಿಯಲ್ ಮೀಡೀಯಾ ಬಳಕೆದಾರರು
ವೀಡಿಯೋವನ್ನು ನೋಡಿದ ಜನ ಇದು "ಅದ್ಭುತವಾದ ನೋಟ, ಇಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಜಲಪಾತದ ನೀರಿನ ಹನಿಗಳಿಂದ ಸುಂದರವಾದ ಅನುಭವ ಪಡೆಯುತ್ತೀರಿ " ಎಂದರು. ಇನ್ನೂ ಕೆಲವರು ಈ ಮೊದಲು ಈ ಸ್ಥಳಕ್ಕೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡರು. ಮತ್ತೆ ಜಲಪಾತಕ್ಕೆ ಭೇಟಿ ನೀಡಿದಾಗ ಸೆರೆ ಹಿಡಿದ ಹಳೆಯ ವೀಡಿಯೋಗಳನ್ನು, ಫೋಟೋಗಳನ್ನು ಹಂಚಿಕೊಂಡರು.

ಒಂದು ವಾರದ ಹಿಂದೆ ಜಲಪಾತದ ದೃಶ್ಯವನ್ನು ಹಂಚಿಕೊಂಡಿದ್ದ ಕೇಂದ್ರಸಚಿವ
ಕೇಂದ್ರ ಸಚಿವ ಕಿಶನ್ ರೆಡ್ಡಿ ಸಾಮಾಜಿಕ ಜಾಲತಾಣ ಫ್ಲಾಟ್ಫಾರ್ಮ್ "ಕೂ" ನಲ್ಲಿ ಜಲಪಾತದ ಸುಂದರ ವೀಡಿಯೋವಂದನ್ನು ಹಂಚಿಕೊಂಡಿದಗದ್ದರು ಮತ್ತು ಅದಕ್ಕೆ "ಹೆವೆನ್ ಕೀಟ್ಸ್ ಅರ್ಥ್!" ಎಂಬ ಶೀರ್ಷಿಕೆಯನ್ನು ನೀಡಿದ್ದರು. ಮರೆಯಲಾಗದ ನೆನಪುಗಳಿಗಾಗಿ ಇಲ್ಲಿಗೆ ಭೇಟಿ ನೀಡಿ ಎಂದಿದ್ದಾರೆ.

ಇದನ್ನೂ ಓದಿ: Rainbow Video: ನಯಾಗರ ಜಲಪಾತದಲ್ಲಿ ಕಾಮನಬಿಲ್ಲಿನ ಮೋಹಕ ದೃಶ್ಯ! ವಿಡಿಯೋ ವೈರಲ್

ಮಾನ್ಸೂನ್ ನಲ್ಲಿ ಚಾರಣ ಹೋಗುಗವವರಿಗೆ ದೂಧ್ ಸಾಗರ್ ಒಂದು ಪ್ರಸಿದ್ಧ ಸ್ಥಳವಾಗಿದೆ.  ಇಲ್ಲಿನ ಮನಮೋಹಕ ದೃಶ್ಯ ಭಾರತದ ಪ್ರಕೃತಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.  ಸೋಶಿಯಲ್ ಮೀಡಿಯಾದಲ್ಲಿ ಪ್ರಕೃತಿ ಸೌಂದರ್ಯವನ್ನು ಅನುಭವಿಸುವವರಿಗೆ ಇಂತಹ ವೀಡೀಯೋಗಳು ಮನಸೆಳೆಯುತ್ತದೆ.
Published by:Nalini Suvarna
First published: