HOME » NEWS » Trend » STUDY SHOWS WHITEST EVER PAINT COULD HELP COOL HEATING EARTH STG HG

ಮನೆಗಳಿಗೆ ಬಿಳಿ ಬಣ್ಣ ಬಳಿದರೆ ಏನಾಗುತ್ತೆ ಗೊತ್ತಾ? ಈ ಸ್ಟೋರಿ ಓದಿ

ಈ ಹೊಸ ಬಣ್ಣವನ್ನು ವಿಕಿರಣಗಳ ತಂಪಾಗಿಸುವಿಕೆಯ ಸಾಧನವಾಗಿ ಬಳಸಲಾಗುತ್ತದೆ. ಕೆಲವು ಬಳಸಿದ ವಸ್ತುಗಳು ಹೆಚ್ಚು ಸೌರಶಕ್ತಿ ಶಾಖವನ್ನು ಹೊರಸೂಸುತ್ತದೆ. ಆದರೆ ಈ ಬಣ್ಣವು ಎಷ್ಟೇ ಪ್ರಕಾಶಮಾನವಾದ ಶಾಖವನ್ನು ಹೊರಸೂಸಿದರೂ ಅದನ್ನು ಸಂಭಾಳಿಸುವ ಶಕ್ತಿಯೂ ಈ ಬಿಳಿ ಬಣ್ಣಕ್ಕಿದೆ.

news18-kannada
Updated:May 14, 2021, 1:21 PM IST
ಮನೆಗಳಿಗೆ ಬಿಳಿ ಬಣ್ಣ ಬಳಿದರೆ ಏನಾಗುತ್ತೆ ಗೊತ್ತಾ? ಈ ಸ್ಟೋರಿ ಓದಿ
Photo: Google
  • Share this:
ಬಿಳಿ ಬಣ್ಣ ಎಲ್ಲ ಬಣ್ಣಗಳಿಗೆ ಹೊಂದಿಕೊಳ್ಳುವ ಬಣ್ಣ. ಶಾಂತಿ, ಪರಿಶುದ್ಧತೆಯ ಸಂಕೇತವಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಇದೀಗ ಒಂದು ಹೆಜ್ಜೆ ಮುಂದೆ ಸಾಗಿ ಅಲ್ಟ್ರಾ ಬಿಳಿ ಬಣ್ಣವು ಕಟ್ಟಡಗಳು ಹಾಗೂ ಕಟ್ಟಡದ ಮೇಲ್ಛಾವಣಿಯನ್ನು ಸದಾ ತಂಪಾಗಿರಿಸುತ್ತದೆ ಹಾಗೂ ಹವಾನಿಯಂತ್ರಣಕ್ಕೆ ಬೇಕಾದ ಶಕ್ತಿಯ ಅಗತ್ಯಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ ಎಂದು ನ್ಯಾನೋ ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೇ ಮುಂದುವರಿದು ಇದು ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುತ್ತದೆ ಎಂದೂ ತಿಳಿದು ಬಂದಿದೆ.

ಈ ಹೊಸ ಬಣ್ಣವನ್ನು ವಿಕಿರಣಗಳ ತಂಪಾಗಿಸುವಿಕೆಯ ಸಾಧನವಾಗಿ ಬಳಸಲಾಗುತ್ತದೆ. ಕೆಲವು ಬಳಸಿದ ವಸ್ತುಗಳು ಹೆಚ್ಚು ಸೌರಶಕ್ತಿ ಶಾಖವನ್ನು ಹೊರಸೂಸುತ್ತದೆ. ಆದರೆ ಈ ಬಣ್ಣವು ಎಷ್ಟೇ ಪ್ರಕಾಶಮಾನವಾದ ಶಾಖವನ್ನು ಹೊರಸೂಸಿದರೂ ಅದನ್ನು ಸಂಭಾಳಿಸುವ ಶಕ್ತಿಯೂ ಈ ಬಿಳಿ ಬಣ್ಣಕ್ಕಿದೆ. ಸೌರ ಪ್ರತಿಫಲನವು, ಸೌರಶಕ್ತಿಯ ಶಾಖವು ಕುಗ್ಗುವ ಮತ್ತು ಪ್ರತಿಫಲಿಸುವ ಪ್ರತಿಬಿಂಬದ ಅನುಪಾತವು ಶೇ 98ರಷ್ಟು ಹೆಚ್ಚಳವಾಗಿದೆ ಮತ್ತು ಸೌರಶಕ್ತಿಯೂ ಕಡಿಮೆಯಾಗುವ ಸಾಮರ್ಥ್ಯವೂ ಶೇ 95ರಷ್ಟು ಇದೆ ಎಂದು ಹೇಳಿದ್ದಾರೆ. ಅಂದರೆ ಇದು ಶಾಖವನ್ನು ಹೊರಸೂಸುವ ಪ್ರಮಾಣಕ್ಕಿಂತ ಶಾಖವನ್ನು ತಂಪಾಗಿಸುವಲ್ಲಿ ಈ ಅಲ್ಟ್ರಾ ವೈಟ್‌ ಬಣ್ಣ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಬ್ಯಾರಿಯಮ್ ಸಲ್ಫೇಟ್‍ನಿಂದ ನ್ಯಾನೋ ಪಾರ್ಟಿಕಲ್ ಚಿತ್ರ ಹಾಗೂ ನ್ಯಾನೋಕಾಂಪೋಸಿಟ್ ಬಣ್ಣವನ್ನು ನ್ಯಾನೋ ತಂತ್ರಜ್ಞಾನ ಸಂಶೋಧಕರು ಸಂಶೋಧಿಸಿದ್ದಾರೆ. ಇದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಕಾಂಕ್ರೀಟ್ ಕಟ್ಟಡಗಳು ಮತ್ತು ಪಾದಚಾರಿಗಳಿಂದ ದಟ್ಟವಾಗಿ ತುಂಬಿರುವ ನಮ್ಮ ನಗರಗಳು ಶಾಖದ ದ್ವೀಪಗಳಾಗಿವೆ. ನಗರದ ಭೂ ಮೇಲ್ಮೈಗಳು ನಮ್ಮ ಹವಾನಿಯಂತ್ರಣದ ಶಕ್ತಿಯ ಅವಶ್ಯಕತೆಗಳಿಗನುಗುಣವಾಗಿ ಶಾಖವನ್ನು ಹೀರಿಕೊಳ್ಳುತ್ತವೆ ಮತ್ತು ಉಳಿಸಿಕೊಳ್ಳುತ್ತವೆ. ಉದಾಹರಣೆಗೆ, ಕೋಣೆಯನ್ನು ಒಂದು ಡಿಗ್ರಿಗಿಂತ ಕಡಿಮೆ ತಂಪಾಗಿಸಬೇಕಾದರೆ, ಹವಾನಿಯಂತ್ರಣವು ಕಡಿಮೆ ಎಂದರೂ ಶೇಕಡಾ ಆರು ಹೆಚ್ಚು ಶಕ್ತಿಯನ್ನು ಬಯಸುತ್ತದೆ. ವಿಕಿರಣ ಕೂಲಿಂಗ್ ತಂತ್ರಜ್ಞಾನಗಳು, ಸಮರ್ಥ ವಸ್ತುಗಳನ್ನು ಬಳಸಿಕೊಂಡು ಕಟ್ಟಡಗಳನ್ನು ತಂಪಾಗಿರಿಸಬಲ್ಲವು, ಅಲ್ಲದೇ ನಗರದಲ್ಲಿನ ಕಟ್ಟಡಗಳ ಹವಾನಿಯಂತ್ರಣಕ್ಕಾಗಿ ಬೃಹತ್ ಶಕ್ತಿಯ ಅಗತ್ಯಗಳಿಗೆ ಸಮರ್ಪಕ ಹಾಗೂ ಸುಸ್ಥಿರ ಪರಿಹಾರಗಳನ್ನು ಒದಗಿಸಬಹುದು.

ಈ ಬಣ್ಣವು ನಮ್ಮ ಜಗತ್ತಿನ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಿ ಭೂಮಿಯನ್ನು ಸದಾ ತಂಪಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಯುಎಸ್‍ಎಯ ಪರ್ಡ್ಯೂ ವಿಶ್ವವಿದ್ಯಾಲಯದ ವಿಜ್ಞಾನಿ ಕ್ಸಿಯೂಲಿನ್ ರೂವನ್ ಹೇಳಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಮತ್ತು 1000 ಚದರ ಅಡಿಯ ಮೇಲ್ಛಾವಣಿಗೆ ಈ ಬಿಳಿ ಬಣ್ಣ ಬಳಿದರೆ ಇದು 10 ಕಿಲೋವ್ಯಾಟ್ ತಂಪಾಗಿಸುವ ಶಕ್ತಿಯನ್ನು ಹೊರಸೂಸುತ್ತದೆ. ಇದು ಹೆಚ್ಚಿನ ಮನೆಗಳು ಬಳಸುವ ಹವಾನಿಯಂತ್ರಣಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ರೂವನ್ ತಿಳಿಸಿದ್ದಾರೆ.

ಅಲ್ಲದೆ ಇದು ಕಣ್ಣುಗಳಿಗೂ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಏಕೆಂದರೆ ಸೂರ್ಯನ ಬೆಳಕಿನ ಕಿರಣಗಳು ಭೂಮಿಯ ಎಲ್ಲಾ ಭಾಗಗಳಿಗೂ ಹರಡುತ್ತದೆ. ಆದ್ದರಿಂದ ಯಾವುದೇ ನಿರ್ದಿಷ್ಟ ದಿಕ್ಕಿನಲ್ಲಿ ಹೋಗುವ ಶಕ್ತಿಯು ಹೆಚ್ಚು ಪ್ರಬಲವಾಗಿರುವುದಿಲ್ಲ. ಇದು ಪ್ರಕಾಶಮಾನವಾದ ಬಿಳಿ ಬಣ್ಣದ್ದಾಗಿದೆ, ಹಿಮಕ್ಕಿಂತ ಸ್ವಲ್ಪ ಬಿಳಿಯಾಗಿರುತ್ತದೆ ಎಂದೂ ಸಹ ತಿಳಿಸಿದ್ದಾರೆ.

ಗೋಚರಿಸುವ ಸೂರ್ಯನ ಬೆಳಕನ್ನು ಮಾತ್ರವಲ್ಲದೆ ಸೂರ್ಯನಿಂದ ಬರುವ ನೇರಳಾತೀತ ಮತ್ತು ಅತಿಗೆಂಪು ವಿಕಿರಣವನ್ನು ಪ್ರತಿಬಿಂಬಿಸುವಲ್ಲಿ ಬಿಳಿಬಣ್ಣವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಬಿಳಿ ಬಣ್ಣವನ್ನು ಕಾರುಗಳು, ಕಟ್ಟಡಗಳು ಮತ್ತು ಏರೋಸ್ಪೇಸ್ ಉದ್ಯಮಗಳಂತಹ ಹಲವು ಕಡೆ ಬಳಸಬಹುದು.
Youtube Video
ಶತಶತಮಾನಗಳಿಂದಲೂ ಕಟ್ಟಡಗಳನ್ನು ತಂಪಾಗಿಸಲು ಬಿಳಿ ಬಣ್ಣವನ್ನೇ ಬಳಸಲಾಗುತ್ತಿದೆ. ಏಕೆಂದರೆ ಜಾಗತಿಕ ತಾಪಮಾನದಲ್ಲಿ ತಾಪಮಾನವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಈ ಬಿಳಿಬಣ್ಣಕ್ಕಿದೆ. ಈ ಸಂಶೋಧನೆಯು ಭಾರತದ ಅಹಮದಾಬಾದ್ ನಗರ ಹಾಗೂ ಯುಎಸ್‍ಎಯ ನ್ಯೂಯಾರ್ಕಿನಲ್ಲಿಯೂ ಸಾಬೀತಾಗಿದೆ.
First published: May 14, 2021, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories