• Home
  • »
  • News
  • »
  • trend
  • »
  • Moon: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?

Moon: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?

ಚಂದ್ರ

ಚಂದ್ರ

ರಾತ್ರಿ ಹೊತ್ತು ನಮಗೆಲ್ಲಾ ಬೆಳಕು ನೀಡುವ ಚಂದ್ರನ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಅದರಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಚಂದ್ರನ ಮೂಲವು ಸುಮಾರು ನಾಲ್ಕೈದು ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ್ದು, ಮಂಗಳನಂತಹ ವಸ್ತುವು ಭೂಮಿಗೆ ಡಿಕ್ಕಿ ಹೊಡೆದ ನಂತರ ಈ ತುಣುಕುಗಳಿಂದ ಚಂದ್ರನು ರೂಪುಗೊಂಡನು ಎನ್ನಲಾಗಿದೆ. ಆದಾಗ್ಯೂ ಸಹ ಈ ನೈಸರ್ಗಿಕ ಉಪಗ್ರಹದ ಮೂಲದ ಬಗ್ಗೆ ಇನ್ನೂ ಕೆಲವು ಬಗೆಹರಿಯಲಾಗದ ಕಗ್ಗಂಟುಗಳಿವೆ.

ಮುಂದೆ ಓದಿ ...
  • Share this:

ಭೂಮಿಯಿಂದ (Earth) ಸುಮಾರು 3,84,400 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಚಂದ್ರನು (Moon) ಭೂಮಿಯ ನೈಸರ್ಗಿಕ ಉಪಗ್ರಹ ಮತ್ತು ಭೂಮಿಯ ಏಕೈಕ ಉಪಗ್ರಹ. ರಾತ್ರಿ ಹೊತ್ತು ನಮಗೆಲ್ಲಾ ಬೆಳಕು (Light) ನೀಡುವ ಚಂದ್ರನ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಅದರಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಚಂದ್ರನ ಮೂಲವು ಸುಮಾರು ನಾಲ್ಕೈದು ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ್ದು, ಮಂಗಳನಂತಹ ವಸ್ತುವು ಭೂಮಿಗೆ ಡಿಕ್ಕಿ ಹೊಡೆದ ನಂತರ ಈ ತುಣುಕುಗಳಿಂದ ಚಂದ್ರನು ರೂಪುಗೊಂಡನು ಎನ್ನಲಾಗಿದೆ. ಆದಾಗ್ಯೂ ಸಹ ಈ ನೈಸರ್ಗಿಕ ಉಪಗ್ರಹದ (Natural satellite) ಮೂಲದ ಬಗ್ಗೆ ಇನ್ನೂ ಕೆಲವು ಬಗೆಹರಿಯಲಾಗದ ಕಗ್ಗಂಟುಗಳಿವೆ.


"ಚಂದ್ರನನ್ನು ಕೇವಲ ಗಂಟೆಗಳಲ್ಲಿ ರಚಿಸಲಾಗಿದೆ, ಶತಮಾನಗಳಲ್ಲ"
ಇತ್ತೀಚೆಗೆ ಚಂದ್ರನ ಮೂಲದ ಬಗ್ಗೆ ಸಂಶೋಧಕರು ಹೊಸ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದಾರೆ. ಅದೇನೆಂದರೆ, ಭೂಮಿ ಮತ್ತು ಥಿಯಾ ಎಂದು ಕರೆಯಲ್ಪಡುವ ಮಂಗಳದ ಗಾತ್ರದ ಕಾಯದ ಮಧ್ಯೆ ಘರ್ಷಣೆ ಉಂಟಾದ ನಂತರ ಅದರಿಂದುಂಟಾದ ಪರಿಣಾಮದಿಂದಾಗಿ ಚಂದ್ರನು ತಕ್ಷಣವೇ ತನ್ನ ಕಕ್ಷೆಯಲ್ಲಿ ಸೇರಿಕೊಂಡಿತು ಎಂದಿದೆ ಆ ಹೊಸ ಪ್ರಸ್ತಾವನೆ. ಅಂದರೆ ಚಂದ್ರ ಕೇವಲ ಗಂಟೆಗಳಲ್ಲಿ ರಚನೆಯಾಗಿದೆ, ಈ ಪ್ರಕ್ರಿಯೆ ಶತಮಾನಗಳನ್ನು ತೆಗೆದುಕೊಂಡಿಲ್ಲ ಎಂದಿದೆ ಹೊಸ ಪ್ರಸ್ತಾವನೆ.


ಡರ್ಹಾಮ್ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಫಾರ್ ಕಂಪ್ಯೂಟೇಶನಲ್ ಕಾಸ್ಮಾಲಜಿಯ ಸಂಶೋಧಕರು ಈ ಘಟನೆಯನ್ನು ಅತ್ಯಧಿಕ-ರೆಸಲ್ಯೂಶನ್ ಸಿಮ್ಯುಲೇಶನ್‌ಗಳ ಮೂಲಕ ರಚಿಸಿದ್ದಾರೆ.


ಇದನ್ನೂ ಓದಿ:  Galaxy Smartphone: ಕಣ್ಣಿನ ಕಾಯಿಲೆ ಪತ್ತೆಹಚ್ಚಲು ಸ್ಯಾಮ್​ಸಂಗ್‌ ಹಳೇ ಸ್ಮಾರ್ಟ್‌ ಫೋನ್ ಬಳಕೆ! ಹೇಗೆ ಅಂತೀರಾ ಇಲ್ಲಿದೆ ನೋಡಿ


ಈ ವಿಡಿಯೋ ರಚನೆಯಲ್ಲಿ ಭೂಮಿ ಮತ್ತು ಥಿಯಾದಿಂದ ವಸ್ತುವನ್ನು ನೇರವಾಗಿ ಕಕ್ಷೆಗೆ ಉಡಾಯಿಸಿದ ಕೆಲವೇ ಗಂಟೆಗಳಲ್ಲಿ ಚಂದ್ರನು ರಚನೆಯಾಗುವುದನ್ನು ತೋರಿಸಿದೆ. ಸಿಮ್ಯುಲೇಶನ್‌ ಎಂದರೆ ವಾಸ್ತವದಂತೆಯೆ ಕೃತ್ರಿಮವಾಗಿ ಸೃಷ್ಟಿಸುವ ವ್ಯವಸ್ಥೆ. ಇದು ತಂತ್ರಾಂಶ ಅಭಿವೃದ್ಧಿಯಲ್ಲಿ ಹೆಚ್ಚು ಉಪಯುಕ್ತವಾಗಿದೆ.


ಸೂಪರ್ಕಂಪ್ಯೂಟರ್ ಸಿಮ್ಯುಲೇಶನ್ ಅಭಿವೃದ್ಧಿ
ಚಂದ್ರನ ಮೂಲವನ್ನು ಅಧ್ಯಯನ ಮಾಡಲು ಸಂಶೋಧಕರು ಸೂಪರ್ಕಂಪ್ಯೂಟರ್ ಸಿಮ್ಯುಲೇಶನ್ಗಳನ್ನು ಅಭಿವೃದ್ಧಿಪಡಿಸಿದರು. ಇದು ಸುಮಾರು 4.5 ಶತಕೋಟಿ ವರ್ಷಗಳ ಹಿಂದಿನ ಪ್ರಕ್ರಿಯೆ. ವಿಭಿನ್ನ ಪ್ರಭಾವದ ಕೋನಗಳು, ವೇಗಗಳು, ಗ್ರಹಗಳ ತಿರುಗುವಿಕೆ, ದ್ರವ್ಯರಾಶಿಗಳು ಮತ್ತು ಹೆಚ್ಚಿನವುಗಳಲ್ಲಿ ನೂರಾರು ಘರ್ಷಣೆಗಳನ್ನು ಚಲಾಯಿಸಲು SWIFT ಮುಕ್ತ-ಮೂಲ ಕೋಡ್‌ನಲ್ಲಿ ಸಿಮ್ಯುಲೇಶನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.


ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್‌ನಲ್ಲಿ ಪ್ರಕಟ
ಸಂಶೋಧನೆಗಳನ್ನು ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್‌ನಲ್ಲಿ ಪ್ರಕಟಿಸಲಾಗಿದೆ, ಇದು ದೈತ್ಯ ಪರಿಣಾಮಗಳು ತಕ್ಷಣವೇ ಚಂದ್ರನಿಗೆ ಸಮಾನ ದ್ರವ್ಯರಾಶಿ ಮತ್ತು ಕಬ್ಬಿಣದ ಅಂಶವನ್ನು ಹೊಂದಿರುವ ಉಪಗ್ರಹವನ್ನು ಭೂಮಿಯ ರೋಚೆ ಮಿತಿಯಿಂದ ದೂರದ ಕಕ್ಷೆಗೆ ಇರಿಸಬಹುದು ಎಂದು ಹೇಳಿದೆ. ಮಿತಿಯು ಆಕಾಶಕಾಯದಿಂದ ದೂರವಾಗಿದ್ದು, ಅದರೊಳಗೆ ಎರಡನೇ ಆಕಾಶಕಾಯವನ್ನು ತನ್ನದೇ ಆದ ಗುರುತ್ವಾಕರ್ಷಣೆಯ ಬಲದಿಂದ ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು ಎಂದಾಗಿದೆ.


ಬಗೆಹರಿಯದ ಒಗಟು
ಮೇಲೆ ಹೇಳಿದಂತೆ ಹಿಂದೆ ಚಾಲ್ತಿಯಲ್ಲಿರುವ ಸಿದ್ಧಾಂತಗಳು ಚಂದ್ರನ ಗುಣಲಕ್ಷಣಗಳ ಕೆಲವು ಅಂಶಗಳನ್ನು ವಿವರಿಸಬಹುದಾದರೂ, ಚಂದ್ರನ ಸಂಯೋಜನೆಯು ಭೂಮಿಗೆ ಏಕೆ ಹೋಲುತ್ತದೆ ಎಂಬುದು ರಹಸ್ಯವಾಗಿದೆ. ಹೊಸ ಅಧ್ಯಯನವು ಚಂದ್ರನ ವಿಕಾಸಕ್ಕೆ ಸಂಭವನೀಯ ಆರಂಭಿಕ ಸ್ಥಳಗಳ ಸಂಪೂರ್ಣ ಹೊಸ ಶ್ರೇಣಿಯನ್ನು ಒದಗಿಸಿದೆ. ಸಂಶೋಧಕರ ಈ ಸಂಶೋಧನೆ ಚಂದ್ರನನ್ನು ತಕ್ಷಣವೇ ಕಕ್ಷೆಗೆ ಇರಿಸಲಾಗಿದೆ ಎಂದು ಪ್ರತಿಪಾದಿಸುತ್ತದೆ.


ಈ ಹಿಂದೆ ಎಲ್ಲಾ ಹೇಳಿರುವಂತೆ ಮಂಗಳನಂತಹ ವಸ್ತುವು ಭೂಮಿಗೆ ಡಿಕ್ಕಿ ಹೊಡೆದ ನಂತರ ಈ ತುಣುಕುಗಳಿಂದ ಚಂದ್ರನು ರೂಪುಗೊಂಡನು ಮತ್ತು 100 ದಶಲಕ್ಷ ವರ್ಷಗಳ ನಂತರ, ಕರಗಿದ ಶಿಲಾಪಾಕವು ಸ್ಫಟಿಕೀಕರಣಗೊಂಡು ಚಂದ್ರನ ಹೊರಪದರವನ್ನು ರೂಪಿಸಿತು ಎನ್ನಲಾಗಿದೆ.


ಇದನ್ನೂ ಓದಿ:  Viral News: ಸತ್ತ ಕೀಟ ಮತ್ತೆ ಜೀವಂತ! ಈ ವಿಚಿತ್ರ ಸಂಗತಿಯ ಹಿಂದಿನ ಸತ್ಯ ಇಲ್ಲಿದೆ


"ಈ ಕಂಪ್ಯೂಟೇಶನಲ್ ಶಕ್ತಿಯು ಕಡಿಮೆ-ರೆಸಲ್ಯೂಶನ್ ಸಿಮ್ಯುಲೇಶನ್‌ಗಳು ದೊಡ್ಡ-ಪ್ರಮಾಣದ ಘರ್ಷಣೆಗಳ ಪ್ರಮುಖ ಅಂಶಗಳನ್ನು ಕಳೆದುಕೊಳ್ಳಬಹುದು ಎಂದು ಬಹಿರಂಗಪಡಿಸಿತು, ಹಿಂದಿನ ಅಧ್ಯಯನಗಳಲ್ಲಿ ಸಾಧ್ಯವಾಗದ ರೀತಿಯಲ್ಲಿ ಗುಣಾತ್ಮಕವಾಗಿ ಹೊಸ ನಡವಳಿಕೆಗಳು ಹೊರಹೊಮ್ಮುವುದನ್ನು ನೋಡಲು ನಮಗೆ ಅವಕಾಶ ಮಾಡಿಕೊಡುತ್ತದೆ. ಆರಂಭಿಕ ಚಂದ್ರನ ಕಕ್ಷೆ ಮತ್ತು ಆಂತರಿಕ ಗುಣಲಕ್ಷಣಗಳನ್ನು ಇನ್ನೂ ಹೆಚ್ಚಿನದಾಗಿ ತೋರಿಸುತ್ತದೆ" ಎಂದು ನಾಸಾದ ಏಮ್ಸ್ ಸಂಶೋಧನಾ ಕೇಂದ್ರದ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಜಾಕೋಬ್ ಕೆಗೆರ್ರಿಸ್ ಹೇಳಿದ್ದಾರೆ.


ಹೊಸ ಸಿಮ್ಯುಲೇಶನ್, ಭೂಮಿಯ ಸಮಭಾಜಕದಿಂದ ದೂರದಲ್ಲಿರುವ ಚಂದ್ರನ ಓರೆಯಾದ ಕಕ್ಷೆಯಂತಹ ಪರಿಹರಿಸಲಾಗದ ರಹಸ್ಯಗಳನ್ನು ವಿವರಿಸುತ್ತದೆ ಅಥವಾ ಸಂಪೂರ್ಣವಾಗಿ ಕರಗದ ಆರಂಭಿಕ ಚಂದ್ರನನ್ನು ಸಹ ಉತ್ಪಾದಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಚಂದ್ರನ ಬಗ್ಗೆ ಸರಳವಾಗಿ ಕಲಿಯುವುದರ ಹೊರತಾಗಿ, ಈ ಅಧ್ಯಯನಗಳು ನಮ್ಮ ಸ್ವಂತ ಭೂಮಿಯು ಇಂದಿನ ಜೀವನ-ಆಧಾರಿತ ಪ್ರಪಂಚವಾಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಹತ್ತಿರವಾಗಬಹುದು ಎಂದು ನಾಸಾ ಹೇಳಿದೆ.

Published by:Ashwini Prabhu
First published: