School Uniform ಬಗ್ಗೆ ಈ ಅಧ್ಯಯನದ ಫಲಿತಾಂಶ ಅಚ್ಚರಿ ಮೂಡಿಸುತ್ತದೆ; ಕಾರಣ ನೋಡಿ!

ಅಂಗನವಾಡಿಯಿಂದ ಹಿಡಿದು ಐದನೇ ತರಗತಿಯವರೆಗೆ ಸುಮಾರು 6000 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿ ಈ ತಂಡವು ಅಧ್ಯಯನ ಮಾಡಿರುವ ಬಗ್ಗೆ ವರದಿಯಾಗಿದೆ. ಇದರ ಫಲಿತಾಂಶವು ನಿಜಕ್ಕೂ ಅಚ್ಚರಿಪಡಿಸುವಂಥದ್ದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಾಲೆಯ ಪರಿಸರದಲ್ಲಿ ಪ್ರತಿ ಮಕ್ಕಳಲ್ಲೂ ಸಮಾನತೆಯ (Equality) ಭಾವ ಇರಲಿ ಎಂಬ ದೂರದೃಷ್ಟಿಯನ್ನು ಹೊಂದಿರುವ ಸಮವಸ್ತ್ರ (Uniform) ಧರಿಸುವಿಕೆ ಸಾಕಷ್ಟು ದೇಶಗಳಲ್ಲಿ ಜನಪ್ರಿಯವಾಗಿದೆ. ಅದರಲ್ಲೂ ಅಮೆರಿಕ ಹಾಗೂ ಜಪಾನ್ ದೇಶಗಳಲ್ಲಿ ಸಮವಸ್ತ್ರದ ಜನಪ್ರಿಯತೆ ಹೆಚ್ಚುತ್ತಲೆ ಇರುವುದನ್ನು ಗಮನಿಸಬಹುದು. ಆದರೆ, ಹಿಂದೊಮ್ಮೆ ಯಾರೂ ಚಕಾರವನ್ನು ಎತ್ತಲಾರದಂತಹ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯೋಚನಾ ಲಹರಿಯಲ್ಲಿ ಇತ್ತೀಚೆಗೆ ಹಲವು ಬದಲಾವಣೆಗಳಾಗುತ್ತಿರುವುದನ್ನು ಗಮನಿಸಬಹುದು.

ಸಮಾನತೆಯ ಸಂಕೇತ ಈ ಸಮವಸ್ತ್ರ

ಕೆಲ ಸಮಯದಿಂದಿಚೆಗೆ ಶಾಲಾ ಸಮವಸ್ತ್ರಗಳ ಮೇಲೆ ಸಾಮಾಜಿಕ ಪ್ರಭಾವ ಬೀರತೊಡಗಿದೆ. ಅದರಲ್ಲೂ ವಿಶೇಷವಾಗಿ ಲಿಂಗ ಸಮಾನತೆಗೆ ಸಂಬಂಧಿಸಿದಂತೆ. ಪ್ರಸ್ತುತ ಫ್ರಾನ್ಸ್ ಅಂತಹ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ಬರುತ್ತಿರುವ ಸಮಯದಲ್ಲಿ ಹಲವು ಅಭ್ಯರ್ಥಿಗಳು ಮತ್ತೆ ಶಾಲೆಗಳಲ್ಲಿ ಸಮವಸ್ತ್ರದ ಪರಿಪಾಠ ತರುವುದಾಗಿ ಘೋಷಣೆಗಳನ್ನು ಮಾಡುತ್ತಿದ್ದಾರೆ. ಇರಬಹುದಾಗಿರುವ ಕೆಲವು ಅಸಮಾನತೆಗಳನ್ನು ತೆರವು ಮಾಡುದಾಗಿ ಹೇಳುತ್ತಿದ್ದಾರೆ. ಅವರು ಹೇಳುವ ಪ್ರಕಾರ, ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದರಿಂದ ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಈ ವಿಷಯ ವೈಜ್ಞಾನಿಕವಾಗಿ ಒಪ್ಪಬಲ್ಲದ್ದಾಗಿದೆಯೆ..?

ಅಧ್ಯಯನ ಹೇಳುವುದು ಬೇರೆ

ಇದಕ್ಕೆ ಸಂಬಂಧಿಸಿದಂತೆ, ಅಮೆರಿಕದ ಓಹಿಯೊ ಸ್ಟೇಟ್ ವಿವಿಯ ಪ್ರೊಫೆಸರ್ ಆಗಿರುವ ಆರ್ಯ ಅನ್ಸಾರಿ ಅವರ ನೇತೃತ್ವದಲ್ಲಿ ಅಮೆರಿಕದ ವಿಜ್ಞಾನಿಗಳ ತಂಡವೊಂದು ಅಧ್ಯಯನ ನಡೆಸಿರುವ ಬಗ್ಗೆ ವರದಿಯಾಗಿದೆ. ಈ ತಂಡವು ಸಮವಸ್ತ್ರ ಧಾರಣೆ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಸಂಗತಿಯ ಮೇಲೆ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಅವರು ಸಮವಸ್ತ್ರದಿಂದ ಮಕ್ಕಳ ಹಾಜರಾತಿ, ಆತಂಕದ ಸ್ಥಿತಿ, ವಾಪಸ್ಸಾತಿ, ಹಿಂಸೆ, ಹಚ್ಚಿಕೊಳ್ಳುವಿಕೆ ಹೀಗೆ ಹಲವು ಸಾಮಾಜಿಕ ಗುಣಲಕ್ಷಣಗಳುಳ್ಳ ಅಂಶಗಳು ಯಾವ ರೀತಿ ಪ್ರಭಾವ ಬೀರಬಹುದೆಂದು ವಿಶ್ಲೇಷಿಸಿದ್ದಾರೆ.

ಇದನ್ನು ಓದಿ: ಸಮಂತಾರಂತೆ ಸ್ವಿಟ್ಜರ್ಲೆಂಡ್‌ನಲ್ಲಿ ಮಜಾ ಮಾಡಬೇಕಾ..? ಈ ಸ್ಥಳಗಳಿಗೆ ಮಿಸ್ ಮಾಡದೇ ಹೋಗಿ..!

ಅಚ್ಚರಿ ಪಡಿಸಿದ ಫಲಿತಾಂಶ

ಅಂಗನವಾಡಿಯಿಂದ ಹಿಡಿದು ಐದನೇ ತರಗತಿಯವರೆಗೆ ಸುಮಾರು 6000 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿ ಈ ತಂಡವು ಅಧ್ಯಯನ ಮಾಡಿರುವ ಬಗ್ಗೆ ವರದಿಯಾಗಿದೆ. ಇದರ ಫಲಿತಾಂಶವು ನಿಜಕ್ಕೂ ಅಚ್ಚರಿಪಡಿಸುವಂಥದ್ದಾಗಿದೆ. ಈ ಸಮೀಕ್ಷಾಧ್ಯಯನದ ಫಲಿತಾಂಶದ ಪ್ರಕಾರ ಸಮವಸ್ತ್ರ ಧರಿಸುವಿಕೆ ಯಾವುದೇ ಮಕ್ಕಳ ಮೇಲೆ ಯಾವುದೇ ರೀತಿಯಲ್ಲಿ ಯಾವ ಪರಿಣಾಮಗಳನ್ನು ಬೀರಿಲ್ಲ ಎಂಬ ಅಂಶ ಹೊರಬಿದ್ದಿದೆ. ಆದಾಗ್ಯೂ ವಿಜ್ಞಾನಿಗಳು ಹೇಳುವಂತೆ ಸಮವಸ್ತ್ರ ಕಡ್ಡಾಯವಿರುವ ಶಾಲೆಗಳಲ್ಲಿ ಕಡಿಮೆ ಆದಾಯವಿರುವ ಮಕ್ಕಳ ಹಾಜರಾತಿಯಲ್ಲಿ 'ಸ್ವಲ್ಪ ಮಟ್ಟಿನ ಸುಧಾರಣೆ' ಕಂಡುಬಂದಿದೆ. ಆದರೆ ಆ ವ್ಯತ್ಯಾಸವೆಂದರೆ ಒಂದು ವರ್ಷದಲ್ಲಿ ಒಂದು ದಿನಕ್ಕಿಂತ ಕಡಿಮೆ ಸಮಯದ ವ್ಯತ್ಯಾಸ.

ಇದನ್ನು ಓದಿ: Dosa ಪ್ರಿಯರಿಗೆ ಬಂಪರ್​ ಚಾನ್ಸ್​; ದೋಸೆ ಜೊತೆ 71 ಸಾವಿರ ರೂ ಬಹುಮಾನ ಕೂಡ; ಇಲ್ಲಿದೆ ನೋಡಿ ಮಾಹಿತಿ

ಹೆಚ್ಚಿನ ಧನಾತ್ಮಕ ಪರಿಣಾಮ ಹೊಂದಿಲ್ಲ

ಈ ಅಧ್ಯಯನದಲ್ಲಿ ಯಾವುದೇ ಗಮನಾರ್ಹ ಧನಾತ್ಮಕ ಪರಿಣಾಮ ಕಂಡುಬರದೆ ಹೋದರೂ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕೆಲವು ನ್ಯೂನತೆಗಳು ಕಂಡು ಬಂದಿರುವುದಾಗಿ ಅಧ್ಯಯನದ ವರದಿ ಹೇಳಿದೆ. ಪ್ರತಿನಿತ್ಯ ಸಮವಸ್ತ್ರ ಧರಿಸುವ ಮಕ್ಕಳು ಶಾಲೆಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಅಷ್ಟೊಂದು ಭಾವನೆಯನ್ನು ವ್ಯಕ್ತಪಡಿಸಲಿಲ್ಲ. ಆದರೆ, ತಮ್ಮ ಇಚ್ಛೆಗೆ ತಕ್ಕಂತೆ ವಸ್ತ್ರ ಧರಿಸಿ ಶಾಲೆಗೆ ಬರುವ ಮಕ್ಕಳು ಶಾಲೆಯೊಂದಿಗೆ ಸ್ವಲ್ಪ ಹೆಚ್ಚಿನ ಭಾವನಾತ್ಮಕ ಸಂಬಂಧ ಹೊಂದಿರುವ ಬಗ್ಗೆ ತೋರ್ಪಡಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ಅವರಲ್ಲಿರುವ ದತ್ತಾಂಶದಿಂದಾಗಿ ಈ ನಿರ್ದಿಷ್ಟ ಬದಲಾವಣೆಗೆ ಏನು ಕಾರಣ ಎಂಬುದನ್ನು ಹೇಳಲು ಸಾಧ್ಯವಿಲ್ಲ, ಆದರೆ, ಸಮುದಾಯದ ಭಾವನೆ ಮೂಡಿಸಬೇಕಾಗಿದ್ದ ಸಮವಸ್ತ್ರ ಧಾರಣೆ ಇದಕ್ಕೆ ತದ್ವಿರುದ್ಧವಾಗಿದೆ.

ಯುವ ಸಮುದಾಯದವರಿಗೆ ಅವರದ್ದೇ ಆದ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಪ್ರಾಥಮಿಕವಾಗಿ ಕಾರ್ಯ ನಿರ್ವಹಿಸುತ್ತದೆ ಅವರು ತೊಡುವ ಬಟ್ಟೆ. ಹಾಗಾಗಿ, ಸಂಶೋಧಕರ ಪ್ರಕಾರ, ಸಮವಸ್ತ್ರ ಧರಿಸಿದಾಗ ಪ್ರತಿ ಮಕ್ಕಳು ವೈಯಕ್ತಿಕವಾಗಿ ತಮ್ಮನ್ನು ತಾವು ವ್ಯಕ್ತಪಡಿಸುವ ಭಾವನೆಯಲ್ಲಿ ಅಡಚಣೆಯಾದಂತಾಗಿ ಅವರಲ್ಲಿ ಸಮುದಾಯಪರ ಭಾವನೆ ಕಡಿಮೆಯಾಗುವ ಸಾಧ್ಯತೆಯಿರುವುದಾಗಿ ಹೇಳುತ್ತಾರೆ. ಈ ಅಧ್ಯಯನವು ಕೊನೆಯದಾಗಿ ತನ್ನ ತೀರ್ಪಿನಲ್ಲಿ ಸಮವಸ್ತ್ರವು ಮಕ್ಕಳ ನಡತೆ ಹಾಗೂ ಸಂವಹನದಲ್ಲಿ ಸುಧಾರಣೆ ತರಲು ಪರಿಣಾಮಕಾರಿಯಾದ ಅಸ್ತ್ರವಾಗಿ ಕಂಡುಬರುವುದಿಲ್ಲ ಎಂದು ಹೇಳಿದೆ.
Published by:Seema R
First published: