Dog Feeder: ಬೀದಿ ನಾಯಿಗಳ ಹಸಿವು ನೀಗಿಸಲು ವಿದ್ಯಾರ್ಥಿಗಳು ಮಾಡಿದ ಐಡಿಯಾ ನೋಡಿ

ಡಾಗ್ ಫೀಡರ್

ಡಾಗ್ ಫೀಡರ್

ಆಗಸ್ಟ್ 26 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಶ್ವಾನಗಳ ದಿನಾಚರಣೆಯ ಸಂದರ್ಭದಲ್ಲಿ, ಶಿವ ನಾಡರ್ ಶಾಲೆಯ ಮೂವರು ಪ್ರತಿಭಾವಂತ 10ನೇ ತರಗತಿಯ ವಿದ್ಯಾರ್ಥಿಗಳು ಬೀದಿನಾಯಿಗಳ ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಕೃತಕ ಬುದ್ದಿಮತ್ತೆ ಎಂದರೆ ಎಐ ಶಕ್ತವಾದ ಪರಿಹಾರವನ್ನು ಅಭಿವೃದ್ಧಿಪಡಿಸಿದರು.

ಮುಂದೆ ಓದಿ ...
  • Share this:

ಮನೆಯಲ್ಲಿ ಸಾಕಿಕೊಂಡ ನಾಯಿಗಳು (Pet Dogs) ಸಮಯಕ್ಕೆ ಸರಿಯಾಗಿ ಊಟ (Food) ಮಾಡಿವೆಯೋ ಇಲ್ಲವೋ, ಬಾಯಾರಿಕೆ ಆದಾಗ ನೀರು ಕುಡಿದಿವೆಯೋ ಇಲ್ಲವೋ ಅಂತ ನೋಡಲು ಅದನ್ನು ಸಾಕಿಕೊಂಡಿರುವ ಮನೆಯವರು ಇರುತ್ತಾರೆ. ಆದರೆ ಈ ಬೀದಿಯಲ್ಲಿ ಓಡಾಡುವಂತಹ ನಾಯಿಗಳಿಗೆ (Street Dogs) ಹಸಿವಾದರೋ ಕೇಳೋರಿಲ್ಲ ಮತ್ತು ಬಾಯಾರಿಕೆ ಆದರೂ ನೀರು ಕೊಡುವವರಿಲ್ಲ. ನಾವು ರಸ್ತೆಯಲ್ಲಿ ಹೋಗುವಾಗ ಈ ಬೀದಿ ನಾಯಿಗಳು ರಸ್ತೆಯ ಬದಿಯಲ್ಲಿ ಬಿದ್ದದ್ದನ್ನು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತವೆ ಮತ್ತು ರಸ್ತೆಯ ಮೇಲೆ ನಿಂತ ನೀರನ್ನು ಬಾಯಾರಿಕೆ ಆದಾಗ ಕುಡಿಯುತ್ತಿರುತ್ತವೆ.  ಆದರೆ ಕೆಲವು ಸಂದರ್ಭಗಳಲ್ಲಿ ಕೆಲವು ನಾಯಿಗಳಿಗೆ ತುಂಬಾನೇ ಹೊಟ್ಟೆ ಹಸಿವಾದಾಗ (Hungry) ಅದಕ್ಕೆ ತಿನ್ನಲು ಬೇಕಾದಷ್ಟು ಆಹಾರ ಸಿಗುವುದಿಲ್ಲ. 


ಸ್ಟೇಟ್ ಆಫ್ ಪೆಟ್ ಹೋಮ್ಲೆಸ್ ಇಂಡೆಕ್ಸ್ ವರದಿ 2021ರ ದತ್ತಾಂಶವು ಭಾರತದ ಬೀದಿಗಳಲ್ಲಿ 80 ಮಿಲಿಯನ್ ಬೆಕ್ಕುಗಳು ಮತ್ತು ನಾಯಿಗಳು ಮನೆಯಿಲ್ಲದೇ ಮತ್ತು ಯಾರು ಕಾಳಜಿ ವಹಿಸುವವರಿಲ್ಲದೆ ಓಡಾಡುತ್ತಿವೆ ಅಂತ ತೋರಿಸಿದೆ.


ಬೀದಿಯಲ್ಲಿ ಓಡಾಡಿಕೊಂಡಿರುವ ಪ್ರಾಣಿಗಳ ಮೇಲೆಯೂ ಪರಿಣಾಮ ಬೀರಿದ ಕೋವಿಡ್
ಇದರಲ್ಲಿ ಕೆಲವೇ ಕೆಲವು ಪ್ರತಿಶತದಷ್ಟು ಪ್ರಾಣಿಗಳು ನಿಯಮಿತವಾಗಿ ಆಹಾರ ಪಡೆಯುತ್ತವೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯಂತೂ ಇವುಗಳಿಗೆ ಅನ್ನ ಹಾಕುವವರು ಯಾರು ಇರದೆ, ಇವುಗಳ ಪರಿಸ್ಥಿತಿ ತುಂಬಾನೇ ಹದಗೆಟ್ಟಿತು. ಕೋವಿಡ್ ಸಾಂಕ್ರಾಮಿಕ ರೋಗವು ಜಗತ್ತನ್ನು ಅಪ್ಪಳಿಸಿದಾಗ, ಅದರ ಪರಿಣಾಮವು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ, ಪ್ರಾಣಿಗಳು, ವಿಶೇಷವಾಗಿ ಬೀದಿಯಲ್ಲಿ ಓಡಾಡಿಕೊಂಡಿರುವ ಪ್ರಾಣಿಗಳ ಮೇಲೆ ಸಹ ತುಂಬಾನೇ ಪರಿಣಾಮ ಬೀರಿದವು.


ಬೀದಿನಾಯಿಗಳ ಹಸಿವಿನ ಸಮಸ್ಯೆ ನೀಗಿಸಲು ಹೊಸ ಪರಿಹಾರ
ಪ್ರತಿ ವರ್ಷ ಆಗಸ್ಟ್ 26 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಶ್ವಾನಗಳ ದಿನಾಚರಣೆಯ ಸಂದರ್ಭದಲ್ಲಿ, ಶಿವ ನಾಡರ್ ಶಾಲೆಯ ಮೂವರು ಪ್ರತಿಭಾವಂತ 10ನೇ ತರಗತಿಯ ವಿದ್ಯಾರ್ಥಿಗಳು ಬೀದಿನಾಯಿಗಳ ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಕೃತಕ ಬುದ್ದಿಮತ್ತೆ ಎಂದರೆ ಎಐ ಶಕ್ತವಾದ ಪರಿಹಾರವನ್ನು ಅಭಿವೃದ್ಧಿಪಡಿಸಿದರು. ಕೈಗೆಟುಕುವ ದರದಲ್ಲಿ ಲಭ್ಯವಿರುವ ಈ ಸಾಧನವನ್ನು ಎನ್‌ಜಿಒ, ಪ್ರಾಣಿ ಆಶ್ರಯ ಮನೆಗಳು ಮತ್ತು ವಸತಿ ಸಂಕೀರ್ಣಗಳು ಅಥವಾ ಸೊಸೈಟಿಗಳು ನಾಯಿ ಊಟವನ್ನು ಸ್ವಯಂಚಾಲಿತಗೊಳಿಸಲು ಇದನ್ನು ಬಳಸಬಹುದು.
ವಿದ್ಯಾರ್ಥಿ ಅನ್ವೇಷಕರಾದ ಶಾಂತನು ಮುಖರ್ಜಿ, ಏಕಾಂಶ್ ಅಗರವಾಲ್ ಮತ್ತು ಅರಿಜಿತ್ ಸಿನ್ಹಾ ಅವರು ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಮುಚ್ಚಿದ ರೆಸ್ಟೋರೆಂಟ್ ಗಳು ಬೀದಿ ನಾಯಿಗಳ ಮೇಲೆ ಹೇಗೆ ಪರಿಣಾಮ ಬೀರಿರುತ್ತವೆ ಅಂತ ತಿಳಿದುಕೊಂಡು ಆತಂಕಗೊಂಡರು. ಅನೇಕ ಸಾಮಾನ್ಯ ಜನರು ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಾರೆ, ಆದರೆ ಅವರು ತಮ್ಮ ಸುತ್ತಮುತ್ತಲಿನ ಹೆಚ್ಚಿನ ಸಂಖ್ಯೆಯ ನಾಯಿಗಳಿಗೆ ಆಹಾರವನ್ನು ಪೂರೈಸಲು ಸಾಧ್ಯವಾಗುವುದಿಲ್ಲ.


‘ಡಾಗ್ ಫೀಡರ್’ ಸಾಧನ ಹೇಗೆ ಕಾರ್ಯನಿರ್ವಹಿಸುತ್ತದೆ?
ತಮ್ಮ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದು, ಈ ಯುವ ವಿದ್ಯಾರ್ಥಿಗಳು ಬೀದಿ ನಾಯಿಗಳು ಹಸಿವಿನಿಂದ ಬಳಲುವುದನ್ನು ತಡೆಯಲು ‘ಡಾಗ್ ಫೀಡರ್’ ಸಾಧನವನ್ನು ಅಭಿವೃದ್ಧಿಪಡಿಸಿದರು. ಸ್ಮಾರ್ಟ್ ಫೀಡರ್, ನಾಯಿಯನ್ನು ಗುರುತಿಸಲು ಇನ್-ಬಿಲ್ಟ್ ಕ್ಯಾಮೆರಾ ಮತ್ತು ಸಂವೇದಕವನ್ನು ಹೊಂದಿದೆ. ಫೀಡರ್ ನೊಳಗಿನ ಎಐ-ಶಕ್ತ ತಂತ್ರಜ್ಞಾನವು ಒಂದು ನಿರ್ದಿಷ್ಟ ಪ್ರಮಾಣದ ನಾಯಿ ಆಹಾರದ ವಿತರಣೆಯನ್ನು ಪ್ರಚೋದಿಸುತ್ತದೆ, ಅದು ಕಂಟೇನರ್ ನಿಂದ ಕೆಳಗೆ ಇರಿಸಲಾದ ಟ್ರೇಗೆ ಜಾರುತ್ತದೆ.


ಇದನ್ನೂ ಓದಿ:  YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ


ಮೂವರು ವಿದ್ಯಾರ್ಥಿಗಳನ್ನು ಒಳಗೊಂಡ ‘ವಾಯ್ಸ್ ಫಾರ್ ದಿ ವಾಯ್ಸ್ ಲೆಸ್’ ತಂಡವು ಬೀದಿ ನಾಯಿಗಳು ಹಸಿವಿನಿಂದ ಬಳಲುವುದನ್ನು ತಡೆಯಲು ಎಐ-ಶಕ್ತವಾದ ‘ನಾಯಿ ಫೀಡರ್’ ಸಾಧನವನ್ನು ವಿನ್ಯಾಸಗೊಳಿಸಿದೆ.


ಸಾಧನದ ಅಲ್ಗೊರಿದಮ್, ಕ್ಯಾಮೆರಾದಿಂದ ಲೈವ್ ವೀಡಿಯೋ ಫೀಡ್ ಅನ್ನು ಸೆರೆ ಹಿಡಿಯುತ್ತದೆ ಮತ್ತು ಪ್ರಕ್ರಿಯಗೊಳಿಸುತ್ತದೆ ಮತ್ತು ನಂತರ 'ಕಂಪ್ಯೂಟರ್ ದೃಷ್ಟಿ' ಯನ್ನು ಬಳಸಿಕೊಂಡು ನಾಯಿಯ ಇರುವಿಕೆಯನ್ನು ಕಂಡು ಹಿಡಿಯುತ್ತದೆ, ಇದು ನಂತರ ಅದರ ಸಾಮೀಪ್ಯದಲ್ಲಿರುವ ನಾಯಿಯನ್ನು ಪತ್ತೆ ಹಚ್ಚಿ ಗುರುತಿಸಲು ಸ್ವಯಂ ಪ್ರೋಗ್ರಾಂ ಅನ್ನು ಒಳಗೊಂಡಿದೆ.


ವಿದ್ಯಾರ್ಥಿಗಳು ಈ ಸಾಧನವನ್ನು ತಯಾರಿಸಲು ಏನು ಪ್ರೇರಣೆ?
ಈ ಬಗ್ಗೆ ವಿದ್ಯಾರ್ಥಿಗಳನ್ನು ಕುರಿತು ಈ ಸಾಧನವನ್ನು ನಿರ್ಮಿಸಲು ಪ್ರೇರಣೆ ಏನು ಎಂದು ಕೇಳಿದಾಗ, 'ಜಸ್ಟಿಸ್ ಫಾರ್ ಬ್ರುನೋ’ ಆಂದೋಲನ ಅಂತ ಈ ವಿದ್ಯಾರ್ಥಿಗಳು ಪ್ರತಿಕ್ರಯಿಸಿದ್ದಾರೆ. ಆದರೆ ಏನಿದು ‘ಜಸ್ಟಿಸ್ ಫಾರ್ ಬ್ರುನೋ’ ಚಳುವಳಿ? ಕೆಲವು ತಿಂಗಳ ಹಿಂದೆ, ಕೇರಳದ ಆದಿಮಲಥುರಾ ಕಡಲತೀರದಲ್ಲಿ ಮೂವರು ಯುವಕರು ಬ್ರೂನೋ ಎಂಬ ನಾಯಿಗೆ ಭಯಾನಕ ಕೃತ್ಯವನ್ನು ಎಸಗಿದ್ದರು.


ಡಾಗ್ ಫೀಡರ್


"ಈ ಆಂದೋಲನವು ರಾಷ್ಟ್ರವ್ಯಾಪಿ ಪ್ರಾಣಿಗಳ ಮೇಲಾಗುತ್ತಿರುವ ಕ್ರೌರ್ಯ ಮತ್ತು ಅವು ಹಸಿವಿನಿಂದ ಪರಿತಪಿಸುವ ಸ್ಥಿತಿಯನ್ನು ನಮ್ಮ ಗಮನಕ್ಕೆ ತಂದಿತು. ನಮ್ಮ ಶಾಲಾ ಆವರಣದ ಹೊರಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ನಾಯಿಯನ್ನು ನಾವು ಕಂಡುಕೊಂಡಾಗ ಮತ್ತೊಂದು ಪ್ರಚೋದಕ ಘಟನೆ ನಡೆಯಿತು, ಆ ನಾಯಿ ಸರಿಯಾಗಿ ನಡೆದಾಡಲು ಸಹ ಹೆಣಗಾಡುತ್ತಿತ್ತು" ಎಂದು ಅರಿಜಿತ್ ಹೇಳುತ್ತಾರೆ. "ನಾಯಿ ಅಪೌಷ್ಟಿಕತೆಯನ್ನು ನಿವಾರಿಸಲು ನಮ್ಮ ಈ ಸಾಧನವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಲು ಇದು ನಮಗೆ ಅಂತಿಮ ಉತ್ತೇಜನವನ್ನು ನೀಡಿತು" ಎಂದು ಅವರು ಹೇಳುತ್ತಾರೆ.


ಶಾಲೆಯಲ್ಲಿನ ಐಟಿ ಶಿಕ್ಷಕರು ವಿದ್ಯಾರ್ಥಿಗಳ ಆಲೋಚನೆಗಳನ್ನು ವಾಸ್ತವಕ್ಕೆ ತರಲು ಯುವ ಮನಸ್ಸುಗಳಿಗೆ ಮಾರ್ಗದರ್ಶನ ನೀಡಿದರು ಮತ್ತು ಎಐ-ಎನೇಬಲ್ಡ್ ಡಾಗ್ ಫೀಡರ್ ತಯಾರಾಯ್ತು. ಇದರ ಹಿಂದಿನ ಮುಖ್ಯ ಉದ್ದೇಶವೆಂದರೆ ಅದು ಯಾವುದೇ ನಾಯಿ ಹಸಿವಿನಿಂದ ಬಳಲಬಾರದು ಎಂದಾಗಿದೆ, ಏಕೆಂದರೆ ತೀವ್ರ ಹಸಿವಿನಿಂದ ಬಳಲುತ್ತಿರುವ ನಾಯಿಗಳು ದಾರಿಹೋಕರಿಗೆ ಸಂಭಾವ್ಯವಾಗಿ ಹಾನಿಕಾರಕವಾಗಬಹುದು ಮತ್ತು ಅವುಗಳ ಆರೋಗ್ಯ ಸಹ ಹದಗೆಡಬಹುದು.


ಒಬ್ಬ ಸಾಮಾನ್ಯ ವ್ಯಕ್ತಿಯು ಈ ‘ ಡಾಗ್ ಫೀಡರ್’ ಅನ್ನು ಹೇಗೆ ಬಳಸಬಹುದು?
ಎಐ-ಸಕ್ರಿಯಗೊಳಿಸಿದ ಸಾಧನವು ಕೃತಕ ಬುದ್ಧಿವಂತ ಕ್ರಮಾವಳಿಗಳನ್ನು ಹೊಂದಿದೆ, ಇದು ಬಳಕೆದಾರರ ಕಡೆಯಿಂದ ಹೆಚ್ಚಿನ ಪ್ರಯತ್ನವಿಲ್ಲದೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಒಮ್ಮೆ ಈ ಸಾಧನವನ್ನು ಸಾರ್ವಜನಿಕ ಪ್ರದೇಶಗಳಲ್ಲಿ, ಮೂಲಭೂತವಾಗಿ ಗೇಟೆಡ್ ಸಮುದಾಯಗಳಲ್ಲಿ ಸ್ಥಾಪಿಸಿದ ನಂತರ, ನಾಯಿ ಪ್ರಿಯರು ಬೀದಿ ನಾಯಿಗಳಿಗೆ ಆಹಾರ ನೀಡಲು ಅದನ್ನು ಸುಲಭವಾಗಿ ಬಳಸಬಹುದು.


ಇದನ್ನೂ ಓದಿ:  Zomato: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಝೊಮ್ಯಾಟೋ, ಎಲ್ಲಿಂದ ಏನ್ ಬೇಕಾದ್ರೂ ಆರ್ಡರ್​ ಮಾಡಿ!


"ನಾಯಿಯ ಆಹಾರವನ್ನು ಮರುಪೂರಣ ಮಾಡುವ ಮೂಲಕ ಅವರು ಕೊಡುಗೆ ನೀಡಬಹುದು, ಏಕೆಂದರೆ ಸಾಧನವು ಮುಂದೆ ನಾಯಿಯನ್ನು ಪತ್ತೆ ಹಚ್ಚಿದಾಗ ಸ್ವಯಂಚಾಲಿತವಾಗಿ ಆಹಾರವನ್ನು ವಿತರಿಸುತ್ತದೆ. ನಂತರದ ಹಂತದಲ್ಲಿ ಕಸ್ಟಮೈಸ್ ಮಾಡಿದ ಆವೃತ್ತಿಯನ್ನು ಅಭಿವೃದ್ಧಿಪಡಿಸಲು ನಾವು ಯೋಜಿಸಿದ್ದೇವೆ, ಇದನ್ನು ತಮ್ಮ ಸಾಕುಪ್ರಾಣಿಗಳಿಗೆ ಬಳಸಲು ಬಯಸುವ ನಾಯಿ ಪೋಷಕರಿಗಾಗಿ ವಿನ್ಯಾಸಗೊಳಿಸಬಹುದು" ಎಂದು ಏಕಾಂಶ್ ಅವರು ವಿವರಿಸುತ್ತಾರೆ.


ಮೊಬೈಲ್ ಅಪ್ಲಿಕೇಶನ್ ನೊಂದಿಗೆ ಸಾಧನದಲ್ಲಿ ಡಿಸ್ಪೆನ್ಸಿಂಗ್, ರಿಮೋಟ್ ಆಕ್ಸೆಸ್ ಇತ್ಯಾದಿಗಳ ನಡುವಿನ ಮಧ್ಯಂತರಗಳಂತಹ ಕೆಲವು ಸೆಟ್ಟಿಂಗ್ ಗಳನ್ನು ಹಸ್ತಚಾಲಿತವಾಗಿ ಕಾನ್ಫಿಗರ್ ಮಾಡಲು ಅವರಿಗೆ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.


ಟಾರ್ಗೆಟ್ ಗ್ರಾಹಕರು ಯಾರು ಮತ್ತು ಈ ಸಾಧನದ ಮಾರುಕಟ್ಟೆಯ ಬೆಲೆ ಏನು?ಬೀದಿ ನಾಯಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಪ್ರಾಣಿಗಳ ಆಶ್ರಯಗಳು, ಸಂಸ್ಥೆಗಳು ಮತ್ತು ಎನ್‌ಜಿಒ ಗಳನ್ನು ಗ್ರಾಹಕರನ್ನಾಗಿ ಮಾಡಿಕೊಳ್ಳುವ ಗುರಿಯನ್ನು ಈ ವಿದ್ಯಾರ್ಥಿಗಳು ಹೊಂದಿದ್ದಾರೆ. ಇದಲ್ಲದೆ, ಅವರು ಗುರಿಯಾಗಿಸಲು ಬಯಸುವ ಮುಂದಿನ ಗುಂಪು ನಾಯಿ ಪ್ರಿಯರು.


ಸ್ವಯಂಚಾಲಿತ ‘ನಾಯಿ ಫೀಡರ್’ ನ ಭವಿಷ್ಯದ ಮೂಲ ಮಾದರಿ ಆವೃತ್ತಿಗಳು ಒಂಟಿ ಅಥವಾ ಕೆಲಸ ಮಾಡುವ ನಾಯಿ ಪೋಷಕರ ಅಗತ್ಯತೆಗಳನ್ನು ಪೂರೈಸುತ್ತವೆ ಎಂದು ಅವರು ಹೇಳಿದರು.


ಅವರು ವಿನ್ಯಾಸಗೊಳಿಸಿದ ಮೂಲ ಮಾದರಿಯ ಬೆಲೆ ಸುಮಾರು 5000 ರೂಪಾಯಿ. ಆದಾಗ್ಯೂ, ತಂತ್ರಜ್ಞಾನ, ಗಾತ್ರ, ವಸ್ತು ಮತ್ತು ವಿನ್ಯಾಸದಂತಹ ಹಲವಾರು ಅಂಶಗಳನ್ನು ಪರಿಗಣಿಸಿದ ನಂತರ, ಅಂತಿಮ ಬೆಲೆ ಸುಮಾರು 9000 ಅಥವಾ 10,000 ರೂಪಾಯಿ ಆಗಿರಬಹುದು.


ಅಂತಾರಾಷ್ಟ್ರೀಯ ಶ್ವಾನ ದಿನದಂದು ವಿದ್ಯಾರ್ಥಿಗಳಿಂದ ಒಂದು ಸಲಹೆ
"ಮಾನವರಾದ ನಾವು ನಮಗೆ ಹೊಟ್ಟೆ ಹಸಿವಾದಾಗ ನಾವು ಹೇಳಿಕೊಳ್ಳುವ ಸಾಮರ್ಥ್ಯವನ್ನು ಆ ದೇವರು ನಮಗೆ ನೀಡಿದ್ದಾನೆ, ಆದರೆ ಪ್ರಾಣಿಗಳಿಗೆ ಆ ಸಾಮರ್ಥ್ಯವಿಲ್ಲ. ದುರದೃಷ್ಟವಶಾತ್, ನಾಯಿಗಳು ಮತ್ತು ಇತರ ಪ್ರಾಣಿಗಳು ಅಷ್ಟು ಸವಲತ್ತುಗಳನ್ನು ಹೊಂದಿಲ್ಲ" ಎಂದು ಶಾಂತನು ಹೇಳುತ್ತಾರೆ.


ಇದನ್ನೂ ಓದಿ:  Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ


"ಆದ್ದರಿಂದ, ಬೀದಿ ನಾಯಿಗಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ಸೂಕ್ಷ್ಮ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ನಾವು ಅಂತರರಾಷ್ಟ್ರೀಯ ಶ್ವಾನ ದಿನವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ನಾಯಿಗಳಿಗೆ ಆಲಿಸುವ ಕಿವಿಗಳಾಗಲು ನಾವು ಪ್ರಯತ್ನಿಸಬೇಕು ಮತ್ತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವುಗಳಿಗೆ ಅವಕಾಶ ನೀಡಬೇಕು" ಎಂದು ಅವರು ಹೇಳುತ್ತಾರೆ.

top videos
    First published: