• Home
  • »
  • News
  • »
  • trend
  • »
  • Video Viral: ಬದುಕು ಕಲಿಸಿದ ಗುರುವಿಗೆ ಕಣ್ಣೀರ ವಿದಾಯ! 30 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಗೆ ಭಾವನಾತ್ಮಕ ಬೀಳ್ಕೊಡುಗೆ

Video Viral: ಬದುಕು ಕಲಿಸಿದ ಗುರುವಿಗೆ ಕಣ್ಣೀರ ವಿದಾಯ! 30 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಗೆ ಭಾವನಾತ್ಮಕ ಬೀಳ್ಕೊಡುಗೆ

ಬೀಳ್ಕೊಡುವ ದೃಶ್ಯ

ಬೀಳ್ಕೊಡುವ ದೃಶ್ಯ

Teacher farewell : ಒಂದು ಶಾಲೆ ಅಥವಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವರವರ ಫೇವರೇಟ್​ ಟೀಚರ್​ ಅಂತ ಇರ್ತಾರೆ. ಅವರು ಅಲ್ಲಿಂದ ರಿಟೈರ್ಡ್​ ಆಗ್ತಾರೆ ಅಂತ ಗೊತ್ತಾದಾಗ ಅದೆಷ್ಟು ನೋವು ಆಗುತ್ತೆ ಅಲ್ವಾ?

  • Share this:

ಅದೆಷ್ಟು ವರ್ಷಗಳು ಓದಿದ್ದರೂ, ವೃತ್ತಿಯನ್ನು ಸಲ್ಲಿಸಿದರೂ ಕೂಡ ಒಂದಲ್ಲಾ ಒಂದು ದಿನ ಆ ಜಾಗದಿಂದ ಹೋಗಲೇಬೇಕಾಗುತ್ತದೆ. ಆ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭ ಅಂದರೆ ಫೇರ್​ವೆಲ್()​, ಸೆಂಡ್​ ಆಫ್​ (Sendoff) ಎಂಬುದನ್ನು ಮಾಡುವುದು ಗೊತ್ತೇ ಇದೆ. ನಿವೃತ್ತಿ ಹೊಂದುವ ಜ್ಯೂನಿಯರ್ಸ್​ ಸೇರಿ ಅವರನ್ನು ಪ್ರೀತಿಯಿಂದ ಬೀಳ್ಕೊಡುಗೆಯನ್ನು ಕೊಡುತ್ತಾರೆ. ಈ ಸಮಯದಲ್ಲಿ ಎಮೋಷ್ನಲ್ (Emotional)​ ಮಾತುಗಳು, ಅವರ ವಿಡಿಯೋ ತುಣುಕು ಮತ್ತು ಫೊಟೋಗಳನ್ನು ತೋರಿಸುವುದು ಭಾವನಾತ್ಮಕವಾಗಿ ತೋರ್ಪಡಿಸುತ್ತದೆ. ಈ ಭಾವನೆಗಳನ್ನು ಹೇಳಲು ಅಸಾಧ್ಯ. ಯಾಕೆಂದರೆ ಸ್ವಲ್ಪ ದಿನಗಳ ಕಾಲ ಇದ್ದರೆ ಒಂದು ರೀತಿಯಾಗಿ ಆ ಸ್ಥಳದ ಮೇಲೆ ಭಾವನೆ ಹುಟ್ಟುಕೊಂಡಿರುತ್ತದೆ. ಇನ್ನು ಹಲವಾರು ವರ್ಷಗಳ ನಂತರ ಬೀಳ್ಕೊಡುಗೆ ಅಂದರೆ ನಿಜಕ್ಕು ತುಂಬಾ ಬೇಸರವಾಗುವ ಸಂಗತಿಯು ಹೌದು.


ಯಾಕೆ ಇಷ್ಟೆಲ್ಲಾ ಹೇಳ್ತಾ ಇರೋದು ಅಂದ್ರೆ ಇಲ್ಲೊಬ್ರು ಲೆಚ್ಚರ್​ ಹಲವಾರು ವರ್ಷಗಳಿಂದ ಕೆಲಸವನ್ನು ಮಾಡಿ ಇದೀಗ ನಿವೃತ್ತಿ ಹೊಂದುತ್ತಾ ಇದ್ದಾರೆ. ಅಂತಹ ಸಮಯದಲ್ಲಿ ಅವರ ನೆಚ್ಚಿನ ವಿದ್ಯಾರ್ಥಿಗಳು ಯಾವ ರೀತಿಯಾಗಿ ಬೀಳ್ಕೊಡುಗೆಯನ್ನು ನೀಡುತ್ತಾರೆ ಎಂಬುದು ವಿಡಿಯೋ ಸಖತ್​ ವೈರಲ್​ ಆಗಿದೆ.


ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಅವರವರಿಗೆ ಇಷ್ಟವಾದ ಶಿಕ್ಷಕರು ಎಂದು ಇರುತ್ತಾರೆ. ಇವರು ಎಮೋಷ್ನಲ್​ ಆಗಿ ಅಟಾಚ್​ ಆಗಿರುತ್ತಾರೆ. ಜೀವನದ ತಪ್ಪುಗಳನ್ನು ಮಾತ್ರ ತಿದ್ದುವುದಲ್ಲದೇ ಒಬ್ಬ ಆಪ್ತಸ್ನೇಹಿತೆಯಾಗಿಯೂ ಇರುವ ಅದಷ್ಟೋ ಶಿಕ್ಷಕರನ್ನು ನಾವು ಸಮಾಜದಲ್ಲಿ ಕಾಣಬಹುದು. ಇದೀಗ ಇಂತಹದ್ದೆ ಓರ್ವ ಶಿಕ್ಷಕಿಯೊಬ್ಬರು 30 ವರ್ಷಗಳ ನಂತರ ನಿವೃತ್ತರಾಗುತ್ತಿದ್ದಂತೆ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ವಿದಾಯ ಹೇಳಿದರು. ವಿಡಿಯೋ ವೈರಲ್ ಆಗಿದೆ.


ಇದನ್ನೂ ಓದಿ: NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬಾಲಕಿ! ಈಕೆಯ ಶ್ರಮದ ಕಥೆ ಏನು ಗೊತ್ತಾ?


ಇದೀಗ ವೈರಲ್ ಆಗಿರುವ ವಿಡಿಯೋವನ್ನು ಗುಡ್ ನ್ಯೂಸ್ ಮೂವ್‌ಮೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಲಾಗಿದೆ. ಸ್ಮಾಲ್​ ಕ್ಲಿಪ್‌ನಲ್ಲಿ, ವಿದೇಶಿ ಭಾಷಾ ಶಿಕ್ಷಕರಾಗಿರುವ ಪ್ರೊಫೆಸರ್ ಲೌರ್ಡೆಸ್ ಅವರು ತಮ್ಮ ತರಗತಿಯಿಂದ ಹೊರಬರುವುದನ್ನು ಕಾಣಬಹುದು. ಅವರ ಆಶ್ಚರ್ಯಕ್ಕೆ, ಪಡಸಾಲೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಿದ್ಯಾರ್ಥಿಗಳ ಗುಂಪು ಅವರನ್ನು ಸ್ವಾಗತಿಸಿತು. ಅವರು ಕೆಳಗೆ ನಡೆದಾಗ ಎಲ್ಲರೂ ಚಪ್ಪಾಳೆ ತಟ್ಟಿದರು.
"ಹ್ಯಾಪಿ ರಿಟೈರ್‌ಮೆಂಟ್: 30 ವರ್ಷಗಳಿಗೂ ಹೆಚ್ಚು ವಿದೇಶಿ ಭಾಷೆಗಳನ್ನು ಕಲಿಸಿದ ನಂತರ, ಅರ್ಹವಾದ ನಿವೃತ್ತಿಯನ್ನು ಆನಂದಿಸಲು ಪ್ರೊಫೆಸರ್ ಲೌರ್ಡೆಸ್ ಸಕ್ರಿಯ ಬೋಧನೆಗೆ ವಿದಾಯ ಹೇಳಿದರು. ಎಲ್ಲದಕ್ಕೂ ಧನ್ಯವಾದಗಳು, ಶಿಕ್ಷಕರೇ!" ಪೋಸ್ಟ್‌ನ ಶೀರ್ಷಿಕೆಯಾಗಿದೆ.


ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಮಿಲಿಯನ್‌ಗಿಂತಲೂ ಹೆಚ್ಚು ಲೈಕ್​ ಗಳಿಸಿತು. ನೆಟಿಜನ್‌ಗಳು ವಿದ್ಯಾರ್ಥಿಗಳ ಹಾವಭಾವವನ್ನು ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಆನೆಮರಿಯನ್ನು ರಕ್ಷಿಸಿದ ಪುಟ್ಟ ಬಾಲಕಿ, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್‌ ವೈರಲ್


"ಇದು ನನ್ನನ್ನು ಕಣ್ಣೀರು ಹಾಕುವಂತೆ ಮಾಡಿತು. ಒಳ್ಳೆಯ ಜನರು ಯಾವಾಗಲೂ ಗುರುತು ಮಾಡುತ್ತಾರೆ ಮತ್ತು ಭಾವನೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಒಂದು ಉತ್ತಮ ಫೇರ್​ವೆಲ್ "​ ಎಂದು ಬಳಕೆದಾರರು ಬರೆದಿದ್ದಾರೆ.


ಬಳಕೆದಾರರ ಕಾಮೆಂಟ್​ಗಳು


ಮತ್ತೊಬ್ಬ ಬಳಕೆದಾರರು, "ಎಷ್ಟು ಸುಂದರವಾಗಿದೆ! ಆ ಎಲ್ಲಾ ಮಕ್ಕಳು  ವಿದಾಯ ಹೇಳುವುದನ್ನು ನೋಡಿ ನನಗೆ ಅಳು ಬರುತ್ತದೆ. ದೇವರು ಅವರನ್ನು ಆಶೀರ್ವದಿಸಲಿ!" ಎಂದು ಬರೆದಿದ್ದಾರೆ.


ಒಟ್ಟಿನಲ್ಲಿ ಈ ವಿಡಿಯೋ ಸಖತ್​ ಎಲ್ಲಾ ಕಡೆನೂ ವೈರಲ್​ ಆಗ್ತಾ, ಭಾವುಕರಾಗ್ತಾ ಇದ್ದಾರೆ ಅಂತಾನೇ ಹೇಳಬಹುದು.

First published: