ಚಿಕ್ಕ ಮಕ್ಕಳು ಚಾಕೋಲೆಟ್(chocolate) ಗಾಗಿ ಹಠ ಮಾಡುವುದನ್ನ ನಾವು ನೋಡಿದ್ದೇವೆ. ಆ ಚಿಕ್ಕ ವಯಸ್ಸಿನಲ್ಲಿ ಏನು ತಿಳಿಯದು ಎಂದು ಎಲರೂ ಸುಮ್ಮನಾಗಿ ಬಿಡುತ್ತಾರೆ. ಅಲ್ಲದೇ ಆ ವಯಸ್ಸಿನಲ್ಲಿ ಎಲ್ಲ ಮಕ್ಕಳು ತಮಗೆ ಬೇಕಿದ್ದು, ಸಿಗಲಿಲ್ಲ ಅಂದರೆ ಹಠ ಹಿಡಿಯುವುದು ಕಾಮನ್. ಇನ್ನೂ ತಿನ್ನುವ ಪದಾರ್ಥಗಳಿಗೆ ಮಕ್ಕಳು ಹಠ ಹಿಡಿಯುವುದು ಹೆಚ್ಚು. ಯಾಕೆಂದರೆ ದೊಡ್ಡವರು ಕೂಡ ಕೆಲವೊಮ್ಮೆ ಮನಸ್ಸಿಗೆ ತಿನ್ನಬೇಕು ಅನ್ನಿಸಿದ್ದನ್ನು, ತಿಂದು ಮುಗಿಸುವವರೆಗೂ ಅವರಿಗೆ ಸಮಾಧಾನವಾಗುವುದಿಲ್ಲ. ಮನುಷ್ಯ ಬದುಕುವುದಾಗಿ ತಿನ್ನಬೇಕು ಹೊರತು, ತಿನ್ನಲು ಬದುಕಬಾರದೆಂದು ಹಿರಿಯರು ಹೇಳಿದ್ದಾರೆ. ಆದರೆ ಉತ್ತರ ಪ್ರದೇಶ(Uttar pradesh)ದಲ್ಲಿ 18 ವರ್ಷದ ಬಾಲಕಿ ಪಿಜ್ಜಾ(Pizza) ಕೊಡಿಸಲಿಲ್ಲ ಎಂಬ ಕಾರಣಕ್ಕೆ ನೇಣಿಗೆ(Hanging death) ಕೊರಳೊಡಿದ್ದಾಳೆ. ಜನರು ಚಿತ್ರ, ವಿಚಿತ್ರವಾಗಿ ತಮ್ಮ ಪ್ರಾಣ ತೆತ್ತುತಿದ್ದಾರೆ. ಈ ಬಾಲಕಿ ಮಾತ್ರ ಪಿಜ್ಜಾಗಾಗಿ ಆತ್ಮಹತ್ಯೆ(Sucide) ಮಾಡಿಕೊಂಡಿರುವುದು ಬಹಳ ಬೇಸರದ ಸಂಗತಿ.
ಪಿಜ್ಜಾ ತಡವಾಗಿದ್ದಕ್ಕೆ ಸೂಸೈಡ್
ಉತ್ತರ ಪ್ರದೇಶದ ಲಲಿತಪುರ(Lalithpur) ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. ಸಣ್ಣ ವಿಚಾರಕ್ಕೆ 18 ವರ್ಷದ ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತನ್ನ ಜೀವವನ್ನೇ ತೆತ್ತಿದ್ದಾಳೆ. ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ವಿದ್ಯಾರ್ಥಿನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸೂಸೈಡ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಕೇಸ್ ಸಂಬಂಧ ತನಿಖೆ ಮುಂದುವರೆಸಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ 25 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ - ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಅಷ್ಟಕ್ಕೂ ಆಗಿದ್ದೇನು?
ತಾಲಬ್ಪುರ ಪ್ರದೇಶದ ನಿವಾಸಿಯಾಗಿರುವ 18 ವರ್ಷದ ಶಿಖಾ ಸೋನಿ, ತನ್ನ ತಾಯಿ ಬಳಿ ಪಿಜ್ಜಾ ತರಿಸುವಂತೆ ಡಿಮ್ಯಾಂಡ್ ಮಾಡಿದ್ದಳು. ಮೊದಲು ಬೇಡವೆಂದಿದ್ದ ತಾಯಿ ನಂತರ ಪಿಜ್ಜಾ ತರಿಸಲು ಒಪ್ಪಿಕೊಂಡಿದ್ದಾರೆ. ಆದರೆ ಕೆಲ ಹೊತ್ತು ಕಾಯುವಂತೆ ಮಗಳಿಗೆ ತಿಳಿಸಿದ್ದಾರೆ. ಒಂದೇ ಸಮನೇ ಹಠ ಮಾಡುತ್ತಿದ್ದ ಶಿಖಾ ಮತ್ತೊಮ್ಮ ತನ್ನ ತಾಯಿ ಬಳಿ ತೆರಳಿ, ಕೂಡಲೇ ಪಿಜ್ಜಾ ತರುವಂತೆ ಹಠ ಹಿಡಿದಿದ್ದಾಳೆ. ತಾಯಿ ಕೂಡ ಸೌಮ್ಯವಾಗಿಯೇ ಪಿಜ್ಜಾ ತರಲು ಸಮಯ ಬೇಕು, ಸ್ವಲ್ಪ ಹೊತ್ತು ಬರುತ್ತೆ ಎಂದು ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಶಿಖಾ ತನ್ನ ರೂಮಿಗೆ ಹೋಗಿ ಬಾಗಿಲನ್ನ ಲಾಕ್ ಮಾಡಿಕೊಂಡಿದ್ದಾಳೆ. ನಂತರ ಇದಕ್ಕಿದ್ದಂತೆ ನೇಣಿಗೆ ಕೊರಳಡ್ಡಿ ಪ್ರಾಣ ಬಿಟ್ಟಿದ್ದಾಳೆ.
ಮಗಳನ್ನ ಕಳೆದುಕೊಂಡು ತಂದೆ ಕಣ್ಣೀರು
ಇನ್ನೂ ಮೃತ ಶಿಖಾ ತಂದೆ ಮೋಹನ್ ಲಾಲ್ ಎಂಬುವವರು ಮಗಳ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪುತ್ರಿ ನರ್ಸಿಂಗ್ ಕೋರ್ಸ್ ಅಭ್ಯಾಸ ಮಾಡುತ್ತಿದ್ದಳು. ಜಿಲ್ಲಾಸ್ಪತ್ರೆಯಲ್ಲಿ ಮೂರು ತಿಂಗಳ ತರಬೇತಿಯನ್ನು ಪಡೆಯುತ್ತಿದ್ದಳು. ತಾಯಿಯ ಬಳಿ ಪಿಜ್ಜಾಗೆ ಬೇಡಿಕೆ ಇಟ್ಟಿದ್ದ ವೇಳೆ ತಾಯಿ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದರು.
ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಬಗ್ಗೆ ಪಕ್ಕಾ ಮಾಹಿತಿ ಬೇಕಾ? ಇಲ್ಲಿವೆ ನಾಲ್ಕು ಅತ್ಯುತ್ತಮ ವೆಬ್ಸೈಟ್ಗಳು
ಇಷ್ಟಕ್ಕೆ ಸಿಟ್ಟಾಗಿದ್ದ ಶಿಖಾ ಕೂಡಲೇ ತನ್ನ ಕೋಣೆಗೆ ತೆರಳಿದ್ದಳು. ಎಷ್ಟು ಹೊತ್ತಾದರೂ ಶಿಖಾ ಕೋಣೆಯಿಂದ ಹೊರಗೆ ಬರಲೇ ಇಲ್ಲ.ಬಳಿಕ ರೂಂ ಬಾಗಿಲು ಹೊಡೆದು, ತೆಗೆದು ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಳು. ಎರಡು ದಿನದ ಹಿಂದೆಯಷ್ಟೇ ಈಕೆಯ ಹುಟ್ಟಹಬ್ಬವಿತ್ತು. ಆಕೆ ಇಷ್ಟ ಪಟ್ಟಂತೆಯೇ ನಾವು ಹುಟ್ಟುಹಬ್ಬವನ್ನ ಆಚರಿಸಿದ್ದೆ ಅಂತ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
ವರದಿ - ವಾಸುದೇವ್.ಎಂ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ