ಬೇಸಿಗೆ ಕಾಲ (Summer Season) ಆರಂಭವಾಗಿದೆ. ಅಬ್ಬಾ ಸಖತ್ ಸೆಖೆ ಅಲ್ವಾ? ಆಗಾಗ ಏನಾದ್ರು ಕುಡಿಯುತ್ತಾ, ತಣ್ಣಗೆ ತಿನ್ನುತ್ತಾ ಇರಬೇಕು ಅಂತ ಅನಿಸೋದು ಸಹಜ. ಅದ್ರಲ್ಲೂ ಐಸ್ಕ್ರೀಮ್ (Ice Cream) ಪ್ರಿಯರನ್ನಂತೂ ಕೇಳೋದೇ ಬೇಡ ಬಿಡಿ. ಒಟ್ಟಿನಲ್ಲಿ ಬೇಸಿಗೆಯಲ್ಲಿ ಏನಾದ್ರು ತಿನ್ನುತ್ತಲೇ ಇರಬೇಕು ಅನಿಸೋದು ಸಹಜನೇ ಬಿಡಿ. AC ಯಲ್ಲಿ ಕೆಲಸ (Work) ಮಾಡುವವರಿಗೆ ಹೊರಗಿನ ಬಿಸಿಲು ತಿಳಿಯೋದಿಲ್ಲ ಬಿಡಿ. ಆದ್ರೆ, ಪಾಪ ಹೊರಗೆ ಬಿಸಿಲಿನಲ್ಲಿ ಕೆಲಸ ಮಾಡೋರು ಇರ್ತಾರೆ ಅಲ್ವಾ? ಅವ್ರು ನಿಜಕ್ಕೂ ಗ್ರೇಟ್ (Great) ಅಂತನೇ ಹೇಳ್ಬೋದು.
ಈ ಸೀಸನ್ನಲ್ಲಿ ನೂತನ ರೀತಿಯಲ್ಲಿ, ಫ್ಲೇವರ್ಸ್ಗಳಲ್ಲಿ ಐಸ್ಕ್ರೀಮ್ಗಳು ಬರುತ್ತಲೇ ಇರುತ್ತದೆ. ಅದೇ ರೀತಿಯಾಗಿ ನಾನ್ವೆಜ್ ಮಿಶ್ರಣದೊಂದಿಗೆ ಐಸ್ಕ್ರೀಮ್ ಬಂದ್ರೆ ಹೇಗಿರುತ್ತೆ ಹೇಳಿ? ನಿಜ ಕಣ್ರೀ, ನಿಮಗೆ ಕೇಳೋಕೆ ಒಂಥರಾ ಅನಿಸಿದ್ರೂ ಕೂಡ ಇದು ಸತ್ಯ.
ಇದು ನಾನವೆಜ್ ಪ್ರಿಯರಿಗಾಗಿ ಹೇಳಲಾಗ್ತಾ ಇದೆ. ಐಸ್ಕ್ರಿಂ ಜೊತೆ ನಾನ್ವೆಜ್ ತಿಂತಾ ಇದ್ರೆ, ಆಹಾ! ಅದ್ರ ಟೇಸ್ಟೇ ಬೇರೆ ಅಲ್ವಾ? ನೀವು ಒಂದು ಬಾರಿ ಈ ಹೊಸ ಸ್ಟೈಲ್ನ ಐಸ್ಕ್ರೀಮ್ ತಿನ್ನಲೇಬೇಕು. ಇಷ್ಟೆಲ್ಲಾ ಹೇಳ್ತಾ ಯಾವುದಪ್ಪಾ ಅದು ಅಂತ ನಿಮಗೆ ಡೌಟ್ ಬರ್ತಾ ಇದ್ಯಾ? ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್.
ಇದನ್ನೂ ಓದಿ: ಭೂಮಿಯ ಮೇಲೆ ನೀರು ಹುಟ್ಟಿಕೊಂಡಿದ್ದು ಹೇಗೆ? ಸಂಶೋಧಕರು ಹೇಳಿದ್ದೇನು?
@MFuturewala ಹೆಸರಿನ ಟ್ವಿಟರ್ ಖಾತೆಯಲ್ಲಿ ತಂದೂರಿ ಐಸ್ ಕ್ರೀಮ್ ರೆಸಿಪಿಯ ವೀಡಿಯೊ ಹಂಚಿಕೊಳ್ಳಲಾಗಿದೆ. ಬೇಸಿಗೆ ಬಿಸಿ ಹೋಗಲಾಡಿಸಲು ಪರ್ಫೆಕ್ಟ್ ಹ್ಯಾಕ್. ಎಲ್ಲರಿಗೂ ಪ್ರೋಟೀನ್ ಭರಿತ ತಂದೂರಿ ಚಿಕನ್ ಐಸ್ ಕ್ರೀಮ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಶೀರ್ಷಿಕೆ ಹಾಕಲಾಗಿದೆ.
Found a perfect hack to beat the summer heat
Presenting protein rich tandoori chicken ice cream for one and all
🥵🥵🥵 pic.twitter.com/d3m97kC2YC
— Mohammed Futurewala (@MFuturewala) April 12, 2023
ಇದನ್ನೂ ಓದಿ: ಈ ಪುಸ್ತಕದ ರಾಶಿಯಲ್ಲಿ ಒಂದು ಮೇಣದ ಬತ್ತಿ ಇದೆ 5 ಸೆಕೆಂಡಿನೊಳಗೆ ಹುಡುಕಿ ನೋಡೋಣ
ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಇಷ್ಟವಾಗಿಲ್ಲ ಈ ರೆಸಿಪಿ : ಈ ವಿಚಿತ್ರ ಆಹಾರ ಸಂಯೋಜನೆಯನ್ನು ನೋಡಿದ ನಂತರ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, ಅಲ್ಲಾ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು, ನಾನು ಕೈಮುಗಿಯುತ್ತಿದ್ದೇನೆ, ಇದನ್ನೆಲ್ಲಾ ನಿಲ್ಲಿಸಿ ಎಂದು ಬರೆದಿದ್ದಾರೆ.
ಅದಕ್ಕಾಗಿಯೇ ಜನರು ಇತ್ತೀಚಿನ ದಿನಗಳಲ್ಲಿ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇದನ್ನು ಹೇಗೆ ಕಾಂಬಿನೇಷನ್ ಮಾಡಿದ್ದೀರಿ ಅಂತಾ ಒಬ್ಬರು ಕೇಳಿದ್ರೆ ಮತ್ತೊಬ್ಬರು ಇದು ಕಾನೂನಿಗೆ ವಿರುದ್ಧವೆಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ