ಹೊಸ ಹೊಸ ರೆಸಿಪಿಗಳನ್ನು (New Recipe) ಮಾಡಿ, ಅದರ ವಿಡಿಯೋಗಳನ್ನು (Video) ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಪೋಸ್ಟ್ ಮಾಡುವುದು ಈ ದಿನಗಳಲ್ಲಿ ಒಂದು ಟ್ರೆಂಡ್ (Trend) ಆಗಿದೆ. ಕೇವಲ ಅಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಅಂತರ್ಜಾಲದಲ್ಲಿ (Internet), ನೋಡುಗರಿಗೆ ವಾಂತಿ (Vomit) ಬರಿಸುವಂತ ಚಿತ್ರವಿಚಿತ್ರ ರೆಸಿಪಿಗಳ ವಿಡಿಯೋಗಳ ಖಜಾನೆಯೇ ಇದೆ. ಕೆಲವರಿಗೆ ವಿಡಿಯೋ ಮಾಡುವ ಗೀಳೋ ಅಥವಾ ವೈರಲ್ (Viral) ಆಗಬೇಕೆಂಬ ದುರಾಸೆಯೋ, ಇಲ್ಲಾ ಹೇಗಾದರೂ ಗ್ರಾಹಕರನ್ನು ಸೆಳೆಯಬೇಕೆಂಬ ಚಟವೋ ಗೊತ್ತಿಲ್ಲ, ತಲೆ ಬುಡವಿಲ್ಲದ ರೆಸಿಪಿಗಳ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದನ್ನು ರುಚಿ (Taste) ನೋಡಿ, ಇಷ್ಟವಾದಂತೆ ನಟಿಸುವ ಭೂಪರೂ ಇದ್ದಾರೆನ್ನಿ.
ಮಕ್ಕಳಿಂದ ಹಿಡಿದು ಮುದುಕರಾದಿಯಾಗಿ ಎಲ್ಲರಿಗೂ ಅಚ್ಚುಮೆಚ್ಚಿನ ತಿನಿಸು ವಿದ್ಯಾರ್ಥಿಗಳ, ಅವಿವಾಹಿತರ, ದಿಢೀರ್ ಅಡುಗೆ ಪ್ರಿಯರ, ಅಡುಗೆ ಮಾಡಲು ಸೋಮಾರಿತನ ಇರುವವರ ಮತ್ತು ಮಕ್ಕಳಿಂದ ಹಿಡಿದು ಮುದುಕರಾದಿಯಾಗಿ ಎಲ್ಲರಿಗೂ ಅಚ್ಚುಮೆಚ್ಚು ಎನಿಸಿಕೊಂಡಿರುವ ಮ್ಯಾಗಿಯಂತೂ ಸದಾ ಒಂದಲ್ಲ ಒಂದು ಪ್ರಯೋಗಕ್ಕೆ ಒಳಗಾಗುತ್ತಲೇ ಇರುತ್ತದೆ.
ವೈರಲ್ ಆದ ಪೇಸ್ಟ್ರೀ ಮ್ಯಾಗಿಯ ರೆಸಿಪಿ
ಅಡುಗೆಯ ಅ ಆ ಇ ಈ ಗೊತ್ತಿಲ್ಲದವರು ಕೂಡ ಮಾಡಬಹುದಾದ ಮ್ಯಾಗಿಯ ವಿಭಿನ್ನ ರೆಸಿಪಿಗಳ ವಿಡಿಯೋಗಳು ಅಂತರ್ಜಾಲದಲ್ಲಿ ದಂಡಿಯಾಗಿ ಸಿಗುತ್ತವೆ. ಇದೀಗ, ಪೇಸ್ಟ್ರೀ ಮ್ಯಾಗಿಯ ರೆಸಿಪಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ಕಂಡ ಮ್ಯಾಗಿ ಪ್ರೀಯರು ಕುಪಿತರಾಗಿದ್ದಾರೆ.
ಇದನ್ನೂ ಓದಿ: Burger Man: 32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್
ಆ ವಿಡಿಯೋದಲ್ಲಿನ ದೃಶ್ಯ ಹೀಗಿದೆ
ಒಲೆಯ ಮೇಲೆ ಪ್ಯಾನ್ ಇಟ್ಟು, ಅದಕ್ಕೆ ಎಣ್ಣೆ ಹಾಕಿ, ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಲಾಗುತ್ತದೆ. ಬಳಿಕ ಪೇಸ್ಟ್ರೀ ತುಂಡೊಂದನ್ನು ಅದಕ್ಕೆ ಹಾಕಿ ನೀರು ಸುರಿಯಲಾಗುತ್ತದೆ. ಆ ನಂತರ ಅವೆಲ್ಲವನ್ನು ಚೆನ್ನಾಗಿ ಮಿಶ್ರ ಮಾಡುತ್ತಾರೆ. ಆ ಮಿಶ್ರಣ ಒಮ್ಮೆ ಕುದಿ ಬಂದ ಮೇಲೆ, ಎಲ್ಲರ ಮೆಚ್ಚಿನ ಟು ಮಿನಿಟ್ಸ್ ಮ್ಯಾಗಿ ಮತ್ತು ಅದರ ಮಸಾಲೆಯನ್ನು ಸೇರಿಸಲಾಗುತ್ತದೆ. ಎಲ್ಲನ್ನು ಬೇಯಿಸಿದ ಬಳಿಕ, ತಯಾರಾಗುವ ಪೇಸ್ಟ್ರೀ ಮ್ಯಾಗಿಯನ್ನು, ಬೌಲ್ ಒಂದಕ್ಕೆ ಹಾಕಿ ತಿನ್ನಲು ಕೊಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಮ್ಯಾಗಿ ನೋಡಲು, ಅಸಲಿ ಮ್ಯಾಗಿಯ ಬಣ್ಣದಲ್ಲಿರದೆ, ಚಾಕೋಲೇಟ್ ಕರಿಯಂತೆ ಕಾಣುತ್ತದೆ.
Today’s special pastry maggi ☺️🙏🏻pic.twitter.com/NGHCuvUXKF
— sha (@aokeasha) May 16, 2022
ವಿಡಿಯೋಗೆ ತಮ್ಮ ಅಸಮಾಧಾನವನ್ನು ವ್ಯಕ್ತಡಿಸಿ ಪ್ರತಿಕ್ರಿಯೆ ನೀಡಿದ ಜನ
ತನ್ನ ವಿಶೇಷ ಮತ್ತು ಸ್ಪೈಸಿ ರುಚಿಯ ಕಾರಣದಿಂದ ಎಲ್ಲರ ಮನಗೆದ್ದಿರುವ ಮ್ಯಾಗಿಯನ್ನು ಸಿಹಿಯಾದ ಪೇಸ್ಟ್ರೀ ಜೊತೆ ಸೇರಿಸಿ ಬೇಯಿಸಿರುವ ಈ ವಿಡಿಯೋ, ನೆಟ್ಟಿಗರಿಗೆ ಕೊಂಚವೂ ಇಷ್ಟವಾಗಿಲ್ಲ. ಅಸಂಖ್ಯ ಮಂದಿ ನೆಟ್ಟಿಗರು, ಈ ವಿಡಿಯೋಗೆ ತಮ್ಮ ಅಸಮಾಧಾನವನ್ನು ವ್ಯಕ್ತಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಬಹಳಷ್ಟು ಮಂದಿ, ಪ್ರತಿಕ್ರಿಯೆಯ ಜೊತೆ ಉಗುಳುವ ಇಮೋಜಿಗಳನ್ನು ಕೂಡ ಹಾಕಿದ್ದಾರೆ.
“ಈ ಜಗತ್ತಿಗೆ ಏನಾಗಿದೆ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದರೆ, “ಮುಂದಿನದ್ದು ವಿಷದ ಮ್ಯಾಗಿ ಮತ್ತು ನಾನೇ ಅದನ್ನು ಮಾಡುತ್ತೇನೆ” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. “ಇದನ್ನು ತಿಂದ ಬಳಿಕ ನೀವಿನ್ನೂ ಬದುಕಿದ್ದೀರಾ? “ ಎಂದು ಒಬ್ಬರು ಪ್ರಶ್ನಿಸಿದ್ದರೆ, “ಅರೇ ಏನಪ್ಪಾ ಇದು? “ ಎಂದು ಮತ್ತೊಬ್ಬರು ಕೇಳಿದ್ದಾರೆ.
ವೈರಲ್ ಆದ ಮ್ಯಾಂಗೋ ಮ್ಯಾಗಿಯ ವಿಡಿಯೋ
ಕೆಲವು ಸಮಯದ ಮೊದಲು ಮ್ಯಾಂಗೋ ಮ್ಯಾಗಿ ರೆಸಿಪಿಯ ವಿಡಿಯೋವೊಂದು ಇಂಟರ್‍ನೆಟ್‍ನಲ್ಲಿ ಹರಿದಾಡಿತ್ತು. ಆ ವಿಡಿಯೋದಲ್ಲಿ ಮಹಿಳೆಯೊಬ್ಬಳು, ಪ್ಯಾನ್ ಒಂದರಲ್ಲಿ ಮ್ಯಾಗಿ ಮ್ಯಾಜಿಕ್ ಮಸಾಲ ಮತ್ತು ನೀರು ಹಾಕಿ ಎಂದಿನಂತೆ ಮ್ಯಾಗಿ ತಯಾರಿಸುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಅದಕ್ಕೆ ಸ್ಲೈಸ್ ( ಮ್ಯಾಂಗೋ ಪಾನೀಯ) ಸುರಿಯುತ್ತಾಳೆ. ಅಷ್ಟೇ ಅಲ್ಲ, ಅದರ ಮೇಲೆ ಮಾವಿನ ಹಣ್ಣಿನ ತುಂಡುಗಳನ್ನು ಇಟ್ಟು, ಬಿಸಿ ಇರುವಾಗಲೇ ಸೇವಿಸಲು ಕೊಡುತ್ತಾಳೆ.
ಇದನ್ನೂ ಓದಿ: Indian Street Food: ಈ ಮಹಿಳೆ ಮಾಡಿದ್ದು ಅಂತಿಂಥಾ ಮ್ಯಾಗಿ ಅಲ್ಲ, ಇದು ಮ್ಯಾಂಗೋ ಮ್ಯಾಗಿ!
ಮ್ಯಾಗಿ, ಮಸಾಲೆಗಳು, ಇನ್‍ಸ್ಟಂಟ್ ಸೂಪ್‍ಗಳು ಮತ್ತು ನೂಡಲ್ಸುಗಳ ಒಂದು ಬ್ರಾಂಡ್ ಆಗಿದ್ದು, 1800ನೇ ಇಸವಿಯ ಉತ್ತರಾರ್ಧದಲ್ಲಿ ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ಆರಂಭಗೊಂಡಿತು. 1947 ರಲ್ಲಿ ನೆಸ್ಲೆ ಕಂಪೆನಿ ಈ ಬ್ರಾಂಡ್ ಅನ್ನು ಖರೀದಿಸಿತು. ಇನ್‍ಸ್ಟಂಟ್ ಮ್ಯಾಗಿ ನೂಡಲ್ಸ್ ಬ್ರಾಂಡ್ ಭಾರತದಲ್ಲಿ ಮಾತ್ರವಲ್ಲ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ್, ಸಿಂಗಾಪುರ್, ಮಲೇಶಿಯಾ, ಪಾಪುವಾ ನ್ಯೂ ಗೀನಿ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್ ನಲ್ಲೂ ಕೂಡ ಬಳಕೆಯಲ್ಲಿದ್ದು, ಅತ್ಯಂತ ಜನಪ್ರಿಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ