Viral Video: ಹಸಿದವನಿಗೆ ಸಹಾಯ ಮಾಡಿದ ಸಿಂಗರ್​: ಈಕೆಗೂ ಕಾದಿತ್ತು ಅಚ್ಚರಿ! ಆಮೇಲೆ ಏನಾಯ್ತು?

Instant Good Karma: ಕಸದ ಬುಟ್ಟಿಯಲ್ಲಿ ಆಹಾರಕ್ಕಾಗಿ ಹುಡುಕುತ್ತಿದ್ದ ವ್ಯಕ್ತಿಯೊಬ್ಬನಿಗೆ ಗಾಯಕಿ ಸಹಾಯ ಮಾಡಿದ್ದಾಳೆ. ತನ್ನ ಪ್ರದರ್ಶನವನ್ನು ಮಧ್ಯದಲ್ಲಿಯೇ ನಿಲ್ಲಿಸಲು ಸ್ವಲ್ಪವೂ ಹಿಂದೆ ಮುಂದೆ ನೋಡದ ಗಾಯಕಿ ತನ್ನ ಬ್ಯಾಗ್‌ನಲ್ಲಿದ್ದ ಹಣ ತೆಗೆದು ಆ ವ್ಯಕ್ತಿಗೆ ನೀಡುತ್ತಾರೆ.

ವೈರಲ್​ ಆದ ಗಾಯಕಿ

ವೈರಲ್​ ಆದ ಗಾಯಕಿ

  • Share this:
ಪ್ರಪಂಚದಲ್ಲಿ ಅದೆಷ್ಟೊ ಮಂದಿ ಒಂದೊತ್ತಿನ ಊಟ(Food)ಕ್ಕಾಗಿ ಪರದಾಡುತ್ತಿರುತ್ತಾರೆ. ಇತ್ತ ಅದೆಷ್ಟೊ ಮಂದಿ ಆಹಾರ ಬೆಲೆ ಗೊತ್ತಿಲ್ಲದೇ ವೇಸ್ಟ್​​(Waste) ಮಾಡುತ್ತಿದ್ದಾರೆ. ಹಸಿದವನಿಗೆ ಗೊತ್ತು ಅನ್ನದ ಬೆಲೆ. ಒಂದು ತುತ್ತು ಅನ್ನಕ್ಕಾಗಿ ಆತ ಏನಾದರೂ ಮಾಡಲು ಸಿದ್ಧವಾಗಿರುತ್ತಾನೆ. ಅಸಹಾಯಕ(helpless)ರಿಗೆ ಸಹಾಯ ಮಾಡಿದಾಗ ಸಿಗುವ ನೆಮ್ಮದಿ(Relax) ನಿಜಕ್ಕೂ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಬ ಹಸಿದ ವ್ಯಕ್ತಿ(Hungry Mam)ಗೆ ನೀವು ಊಟ ಕೊಟ್ಟು ಸಹಾಯ ಮಾಡಿದರೆ, ಅದು ಕೋಟಿ ರೂಪಾಯಿ ಕೊಟ್ಟರು ಆ ನೆಮ್ಮದಿ ಸಿಗುವುದಿಲ್ಲ. ಹಣ(Money)ದಿಂದ ಇಂತಹ ಖುಷಿಯನ್ನು ಖಂಡಿತಾ ಕೊಳ್ಳಲಾಗದು. ಹೀಗೆ ಸಹಾಯ ಮಾಡುವ ಹೃದಯವಂತರನ್ನು ನೋಡುವಾಗಲೇ ಮನಸ್ಸು ಖುಷಿಯಿಂದ ಅರಳುತ್ತದೆ. ತಮ್ಮ ಇಂತಹ ಮಾನವೀಯ ನಡೆಯಿಂದಲೇ ಗಮನ ಸೆಳೆದ ಸಾಕಷ್ಟು ಹೃದಯವಂತರಿದ್ದಾರೆ. ತಮ್ಮ ಬಗ್ಗೆ ಯೋಚಿಸದೇ  ಮತ್ತೊಬ್ಬರಿಗೆ ಸಹಾಯ(Help) ಮಾಡುವಂತಹ ಮನಸ್ಸುಳ್ಳ ಹೃದಯಂತು ಅದೆಷ್ಟೊ ಮಂದಿಗೆ ಸ್ಫೂತಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಣಾದಲ್ಲಿ ಮತ್ತೊಂದು ವಿಡಿಯೋ ವೈರಲ್(Viral)​ ಆಗಿದೆ. ಒಬ್ಬರು ಗಾಯಕಿಯ ನಡೆ ಇದೀಗ ಭಾರೀ ಸಂಚಲನ ಮೂಡಿಸಿದೆ.

ಕಸದ ಬುಟ್ಟಿಯಲ್ಲಿ ಆಹಾರ ಹುಡುಕುತ್ತಿದ್ದ ವ್ಯಕ್ತಿ

ವಿದೇಶದಲ್ಲಿ ಈ ಮನಮುಟ್ಟುವ ಘಟನೆ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಗಾಯಕಿಯೊಬ್ಬರು ಪ್ರದರ್ಶನ ನೀಡುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಅಲ್ಲೇ ಪಕ್ಕದಲ್ಲಿದ್ದ ಕಸದ ಬುಟ್ಟಿಯಲ್ಲಿ ಆಹಾರಕ್ಕಾಗಿ ಹುಡುಕುತ್ತಾನೆ. ಇದನ್ನು ನೋಡಿದ ಗಾಯಕಿ ಅರ್ಧದಲ್ಲೇ ತಮ್ಮ ಹಾಡನ್ನು ನಿಲ್ಲಿಸಿ ಆತನನ್ನು ತಡೆಯುತ್ತಾರೆ. ತನ್ನ ಪ್ರದರ್ಶನವನ್ನು ಮಧ್ಯದಲ್ಲಿಯೇ ನಿಲ್ಲಿಸಲು ಸ್ವಲ್ಪವೂ ಹಿಂದೆ ಮುಂದೆ ನೋಡದ ಗಾಯಕಿ `ನಾನು ನಿಮಗೆ ಹಣ ಕೊಡುತ್ತೇನೆ' ಎಂದು ಹೇಳಿ ತನ್ನ ಬ್ಯಾಗ್‌ನಲ್ಲಿದ್ದ ಹಣ ತೆಗೆದು ಆ ವ್ಯಕ್ತಿಗೆ ನೀಡುತ್ತಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್​ ವೈರಲ್​ ಆಗಿದೆ. ಗಾಯಕಿಯ ಸಹಾಯ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ನೋಡೋಕೆ ಸಖತ್​ ಕ್ಯೂಟು, ಕಿರಿಕ್​ ಮಾಡಿದ್ರೆ ಸೇರಿಸ್ತಾಳೆ ಹರಿಶ್ಚಂದ್ರ ಘಾಟು: ಯಾರು ಈ ‘ಮಚ್ಚೇಶ್ವರಿ’?

ತಾಜಾ ಊಟವನ್ನು ತಿನ್ನುವಂತೆ ಹೇಳಿದ ಗಾಯಕಿ

ಇನ್ನೂ ಹಣ ನೀಡಿ ಸುಮ್ಮನಾಗದ ಗಾಯಕಿ, ಆತನಿಗೆ ತಾಜಾ ಆಹಾರ ತಿನ್ನುವಂತೆ ಸಲಹೆ ಮಾಡಿದ್ದಾರೆ. ಆತ ಕೂಡ ಆಕೆಗೆ ಧನ್ಯವಾದ ತಿಳಿಸಿದ್ದಾನೆ. ಲಿವ್ ಹಾರ್ಲ್ಯಾಂಡ್ ಹೀಗೆ  ಸಹಾಯ ಮಾಡಿದ ಗಾಯಕಿ. ಈಕೆ ಸದಾ ಜನನಿಬಿಡ ಪ್ರದೇಶದಲ್ಲಿ ತನ್ನ ಗಾಯನದ ಮೂಲಕ ಅಲ್ಲಿರುವವರನ್ನು ರಂಜಿಸುವ ಕೆಲಸ ಮಾಡುತ್ತಾರೆ. ಅದೇ ರೀತಿ ಈ ಕಾರ್ಯಕ್ರಮವನ್ನು ಕೂಡ ನಡೆಸಿಕೊಡುತ್ತಿದ್ದರು. ಆದರೆ ಕಸದ ಬುಟ್ಟಿಯಲ್ಲಿ ಆಹಾರ  ಹುಡುಕುತ್ತಿದ್ದ ವ್ಯಕ್ತಿಯನ್ನು ಕಂಡು  ಈಕೆಗೆ ಬೇಸರವಾಗಿತ್ತು. ಹೀಗಾಗಿ ತನಗೆ ಜನರು ನೀಡಿದ ಹಣದಲ್ಲೇ ಆತನಿಗೂ ಕೊಟ್ಟು ಕಳಿಸಿದ್ದಾರೆ.

ಇದನ್ನುಓದಿ : ದೇಹದ ಒಂದು ಅಂಗಕ್ಕೆ ರೂಪದರ್ಶಿಯ 13 ಕೋಟಿ ವಿಮೆ

ಸಹಾಯ ಮಾಡಿದ್ದ ಗಾಯಕಿಗೆ ಮತ್ತೊಂದು ಅಚ್ಚರಿ

ಹೀಗೆ ಸಹಾಯ ಮಾಡಿದ್ದ ಲಿವ್ ಅವರಿಗೂ ಅಚ್ಚರಿ ಕಾದಿತ್ತು. ಯಾಕೆಂದರೆ, ಇವರ ಹೃದಯವಂತಿಕೆಯನ್ನು ಗಮನಿಸಿದ್ದ ವ್ಯಕ್ತಿಯೊಬ್ಬರು ಈಕೆ ಅಸಹಾಯಕ ವ್ಯಕ್ತಿಗೆ ನೀಡಿದ್ದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಇವರು ಇಟ್ಟಿದ್ದ ದೇಣಿಗೆ ಬಾಕ್ಸಿಗೆ ಹಾಕಿದ್ದರು. ಆಕೆಯ ಒಳ್ಳೆ ಗುಣವನ್ನು ಕಂಡ ವ್ಯಕ್ತಿಯೊಬ್ಬ ಆಕೆಗೆ ದುಪಟ್ಟು ಹಣವನ್ನು ನೀಡಿದ್ದ. ಇದನ್ನು ಕಂಡ ಲಿವ್​ಗೆ ಆಶ್ಚರ್ಯವಾಗಿತ್ತು. ಹಸಿದವನಿಗೆ ಆಕೆ ಸಹಾಯ ಮಾಡಿದ್ದಳು. ಈಕೆಗೆ ಮತ್ತೊಬ್ಬ ಸಹಾಯ ಮಾಡಿದ್ದಾನೆ. ಈ ವಿಡಿಯೋಗೆ ಇದೀಗ ನೆಟ್ಟಿಗರು ಫಿದಾ ಆಗಿದ್ದಾರೆ. ಆಕೆಯ ಕೆಲಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಹೇಳೋದು, ನಾವು ಒಬ್ಬರಿಗೆ ಸಹಾಯ ಮಾಡಿದರೆ, ಮತ್ತೊಬ್ಬರು ನಮಗೆ ಸಹಾಯ ಮಾಡುತ್ತಾರೆಂದು
Published by:Vasudeva M
First published: