ATM ಮಷಿನ್‌ನಿಂದ ಬಂದ ತನ್ನದಲ್ಲದ 40,000 ರೂ. ಹಣವನ್ನು ಹಿಂತಿರುಗಿಸಿದ ಬಾಲಕ: ಪ್ರಾಮಾಣಿಕತೆಗೆ ಪ್ರಶಂಸೆಯ ಸುರಿಮಳೆ

11 ವರ್ಷದ ಜ್ಯಾಕ್ ಎಂಬ ಬಾಲಕನೊಬ್ಬ ನಗದು ಎಟಿಎಂ ಯಂತ್ರದ ಮೂಲಕ ನಿರೀಕ್ಷೆಗೂ ಮೀರಿ ಹೊರ ಬಂದ ಸಾವಿರಾರು ರೂಪಾಯಿಗಳನ್ನು ಹಸ್ತಾಂತರಿಸಿದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ.

Photo: News18 English

Photo: News18 English

  • Share this:
ಇಂದಿನ ದುನಿಯಾದಲ್ಲಿ ಪುಕ್ಕಟೆ ಹಣ ಸಿಕ್ಕರೆ ಕಣ್ಣು ಬಾಯಿ ಬಿಡುತ್ತಾರೆ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಹಳೆಯ ಮಾತು ಇಂದಿನ ಸ್ವಾರ್ಥ ತುಂಬಿದ ಯುಗದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಇದರ ಮಧ್ಯೆ ಕೆಲವರು ತಮ್ಮ ನಿಸ್ವಾರ್ಥದ ಮೂಲಕ ಉತ್ತಮ ಅರ್ಥಪೂರ್ಣ ಜೀವನ ಸಾಗಿಸುತ್ತಾರೆ. ಅದರಲ್ಲೂ ನಿಷ್ಕಳಂಕ ಮನಸ್ಸಿನ ಮಕ್ಕಳಿಂದ ದೊಡ್ಡವರು ನೀತಿ ಪಾಠ ಕಲಿಯುವಂತಹ ನಿದರ್ಶನಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಈಗ ಇಂಗ್ಲೆಂಡ್ ನಲ್ಲಿ ನಡೆದ ಘಟನೆಯು ನೆಟ್ಟಿಗರ ಗಮನ ಸೆಳೆದಿದೆ. ಈಗ ಇಂಗ್ಲೆಂಡ್‌ನಲ್ಲಿ ನಡೆದ ಘಟನೆಯು ನೆಟ್ಟಿಗರ ಗಮನ ಸೆಳೆದಿದೆ.

11 ವರ್ಷದ ಜ್ಯಾಕ್ ಎಂಬ ಬಾಲಕನೊಬ್ಬ ನಗದು ಎಟಿಎಂ ಯಂತ್ರದ ಮೂಲಕ ನಿರೀಕ್ಷೆಗೂ ಮೀರಿ ಹೊರ ಬಂದ ಸಾವಿರಾರು ರೂಪಾಯಿಗಳನ್ನು ಹಸ್ತಾಂತರಿಸಿದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ವಾಯುವ್ಯ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಗರದ ಬಾಲಕನೊಬ್ಬ ಸೂಪರ್‌ ಮಾರ್ಕೆಟ್‌ನಲ್ಲಿದ್ದ ಎಟಿಎಂನಿಂದ ಹೊರ ಬಂದ ನೂರಾರು ಪೌಂಡ್‌ಗಳನ್ನು ಹಿಂದಿರುಗಿಸಿದ್ದಕ್ಕೆ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಬಾಲಕನು ಹಣ ತೆಗೆದುಕೊಳ್ಳುವ ಎಟಿಎಂ ಮೆಷಿನ್‌ನಲ್ಲಿ ವಿತ್‌ಡ್ರಾ ಮಾಡದಿದ್ದರೂ ನೂರಾರು ಪೌಂಡ್ ನೋಟುಗಳನ್ನು ಹೊರಹಾಕಿದ ನಗದು ಯಂತ್ರದಿಂದ ಬೆಚ್ಚಿಬಿದ್ದ ಜ್ಯಾಕ್, ತಕ್ಷಣವೇ ಅಲ್ಲಿಯೇ ಇದ್ದ ಕ್ಲೀನರ್ ಮತ್ತು ಸೆಕ್ಯುರಿಟಿ ಗಾರ್ಡ್ ಅನ್ನು ಕರೆದನು. ಸಂಗ್ರಹಿಸಿದ ಅವರು, ಆ 400 ಪೌಂಡ್‌ ನಗದನ್ನು, ಅಲ್ಲಿಯೇ ಎಟಿಎಂ ಯಂತ್ರವನ್ನು ಬಳಸಿದ್ದ ಮಹಿಳೆಗೆ ಹಿಂತಿರುಗಿಸಲಾಯಿತು. ಆ ಮಹಿಳೆ ಎಟಿಂಎ ಮಷಿನ್‌ನಿಂದ ಹಣ ಬರಲಿಲ್ಲ ಎಂದು ದೂರಿದ್ದಳು. ಆದರೆ ಹಣ ತಡವಾಗಿ ಬಂದಿದ್ದು, ಈ ಘಟನೆಗೆ ಕಾರಣ ಎನ್ನಲಾಗಿದೆ.

ಘಟನೆಯ ನಂತರ ಸುದ್ದಿವಾಹಿನಿಗೆ ಮಾತನಾಡಿದ ಬಾಲಕನು, ಎಟಿಎಂ ಔಟ್‌ ಆಫ್‌ ಆರ್ಡರ್‌ ಆಗಿದೆ ಎಂದು ಕುತೂಹಲದಿಂದ ಮೆಷಿನ್‌ನಲ್ಲಿದ್ದ ಒಂದೆರಡು ಗುಂಡಿಗಳನ್ನು ಒತ್ತಿದೆ. ತಕ್ಷಣ ಎಟಿಎಂ ಬೀಪ್ ಶಬ್ದ ಮಾಡುತ್ತಾ ಸಾಕಷ್ಟು ಹಣ ಹೊರ ಬರಲು ಪ್ರಾರಂಭಿಸಿತು ಮತ್ತು ಇದು ಒಂದು ರೀತಿಯ ಮ್ಯಾಜಿಕ್ ಎಂದು ಬಾಲಕನು ಭಾವಿಸಿದನು. ನಂತರ ಜ್ಯಾಕ್ ತನ್ನ ತಾಯಿಗೆ ಫೋನ್ ಮಾಡಿ ಸೂಪರ್ ಮಾರ್ಕೆಟ್‌ನಲ್ಲಿ ಆದ ಘಟನೆ ಬಗ್ಗೆ ಹೇಳಿದನು ಮತ್ತು ಎಟಿಎಂ ಬಗ್ಗೆ ಗಾರ್ಡ್‌ಗೆ ದೂರು ನೀಡಿದ ವ್ಯಕ್ತಿಯನ್ನು ಹುಡುಕಲು ಬಾಲಕನ ತಾಯಿ ಫೇಸ್‌ಬುಕ್‌ನಲ್ಲಿ ಮನವಿ ಮಾಡಿದಳು.

ನಂತರ ಮಹಿಳೆ ಹಣದ ವಾರಸುದಾರರನ್ನು ಸಂಪರ್ಕಿಸಿ, ಹಣವನ್ನು ಅವರಿಗೆ ಹಸ್ತಾಂತರಿಸಲಾಯಿತು. ಜ್ಯಾಕ್ ಅವರ ತಾಯಿ ತನ್ನ ಮಗನ ಪ್ರಾಮಾಣಿಕತೆಯಿಂದ ಪ್ರಭಾವಿತರಾದ ಅಪರಿಚಿತರು ಈಗ ಕ್ರೌಡ್‌ಸೋರ್ಸಿಂಗ್‌ ಮೂಲಕ ಬಾಲಕನಿಗೆ ಹಣವನ್ನು ಸಂಗ್ರಹಿಸುತ್ತಿದ್ದಾರೆ. "ಪ್ರಾಮಾಣಿಕ ಹುಡುಗನಾಗಿರುವುದಕ್ಕಾಗಿ" ಅವರು ಜ್ಯಾಕ್‌ಗೆ ಟ್ರೀಟ್‌ ಕೊಡಲು ನಿಧಿಸಂಗ್ರಹಣೆ ಪುಟವನ್ನು ರಚಿಸಿದ್ದಾರೆ. ಆದರೆ, ಆ ನಿಧಿಯ ಸಂಘಟಕರು ಜ್ಯಾಕ್ ಅವರ ಕುಟುಂಬದ ಇಚ್ಛೆಯಂತೆ ಸಂಗ್ರಹಿಸಿದ ಎಲ್ಲಾ ಹಣವನ್ನು ಹಿಂದಿರುಗಿಸಲಾಗುತ್ತಿದೆ ಎಂದು ಹೇಳಲಾಗಿದೆ.

"ದೊಡ್ಡ ಪ್ರಮಾಣದ ನಗದನ್ನು ನೋಡಿದ ತನಗೆ ಯಾವುದೇ ರೀತಿಯ ಹಣದ ಆಸೆ ಬರಲಿಲ್ಲ. ನಾನು ಕಳ್ಳತನ ಮಾಡುವ ವ್ಯಕ್ತಿ ಅಲ್ಲ. ನಾನು ಮೂರ್ಖನಲ್ಲ ಮತ್ತು ನಾನು ಅಂತಹ ಹಣವನ್ನು ತೆಗೆದುಕೊಳ್ಳುವುದಿಲ್ಲ. ಇದು ದೊಡ್ಡ ಅಪರಾಧವಾಗಬಲ್ಲದು" ಎಂದು ಬಾಲಕನು ಹೇಳಿದನು.

ತನ್ನ ಮಗನ ಪ್ರಾಮಾಣಿಕತೆಗೆ ಅವನ ತಾಯಿಯು ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಮಕ್ಕಳಿಗೆ ಒಳ್ಳೆಯ ಗುಣ ಮತ್ತು ಭವಿಷ್ಯ ರೂಪಿಸುವುದರಲ್ಲಿ ಹೆತ್ತವರ ಪಾತ್ರ ಪ್ರಮುಖವಾಗಿರುತ್ತದೆ. ಇಲ್ಲಿ ಜ್ಯಾಕ್ ನ ಪ್ರಾಮಾಣಿಕ ಗುಣಕ್ಕೆ ಅವನ ಹೆತ್ತವರಿಗೂ ಆ ಪ್ರಶಂಸೆ ಸಲ್ಲಬೇಕು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಸುದ್ದಿಯು, ಜ್ಯಾಕ್‌ನ ಪ್ರಾಮಾಣಿಕತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ದೊಡ್ಡವರು ಹೇಳೋದು "ಮಕ್ಕಳು ದೇವರ ಸಮಾನ" ಅಂತ!
First published: