Landspout Emerged: ಕೆನಡಾದಲ್ಲಿ ನಡೆದ ವಿಚಿತ್ರ ವಿಸ್ಮಯವಿದು! ಅದು ಏನಂಥಾ ನೀವೇ ನೋಡಿ

ಕೆನಡಾದ ಒಂದು ನಗರದ ಚಿಕ್ಕ ಪಟ್ಟಣವಾದ ವಾಟ್ರಸ್ ನಲ್ಲಿ ಒಂದು ಭೂ ಪ್ರದೇಶವು ಕಾಣಿಸಿಕೊಂಡಿದೆ. ಇದೂ ಏಕೆ ಒಮ್ಮೆಲೆಹೊರಹೊಮ್ಮಿದೆ ಎಂದು ಎಲ್ಲರಿಗೂ ಆಶ್ಚರ್ಯವಾಗುತ್ತಿದೆ. ಆ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿವೆ.

ಕೆನಡಾದಲ್ಲಿ ನಡೆದ ಒಂದು ವಿಚಿತ್ರ ವಿಸ್ಮಯ

ಕೆನಡಾದಲ್ಲಿ ನಡೆದ ಒಂದು ವಿಚಿತ್ರ ವಿಸ್ಮಯ

  • Share this:
ಈ ಸೃಷ್ಟಿಯು ಭೂಮಿಯ (Earth) ಮೇಲೆ ಪದೇ- ಪದೇ ಏನೇನೋ ವಿಚಿತ್ರಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಮನುಷ್ಯರಾದ ನಮಗೆಲ್ಲ ಈ ಸೃಷ್ಟಿಯ ಕೌತುಕ ಕೆಲವು ಸಲ ಅರ್ಥವೇ ಆಗದೇ ಹೋಗಬಹುದು. ಈ ಪ್ರದೇಶದಲ್ಲಿ (Area) ಇಂದು ಶಾಂತವಾದ ವಾತಾವರಣ (atmosphere) ಇದೆ ಎಂದು ಅಂದುಕೊಳ್ಳುವಷ್ಟರಲ್ಲಿ ಅಲ್ಲಿ ಬಿರುಗಾಳಿ ಎದ್ದು ಜನಜೀವನ ಅಸ್ತವ್ಯಸ್ತ ಆಗಿರುತ್ತದೆ. ಇಲ್ಲಿ ಈಗ ತುಂಬಾ ಮಳೆ ಆಗಬಹುದು ಎಂದುಕೊಂಡರೆ ಮತ್ತೊಂದು ಕ್ಷಣದಲ್ಲಿ ಮಳೆಯೇ (Rain) ಆಗದೇ ಇರಬಹುದು. ಇವೆಲ್ಲವು ಏಕೆ ನಡೆಯುತ್ತವೆ ಎಂಬುದು ಅಲ್ಪ ಸ್ವಲ್ಪ ನಮಗೆ ತಿಳಿದಿದ್ದರೂ ಕೂಡ ನಮ್ಮ ವಿಜ್ಞಾನಕ್ಕೂ ಕೆಲವು ಸಲ ತಿಳಿಯದ ಮ್ಯಾಜಿಕ್ ಗಳು (Magic) ನಡೆಯುತ್ತವೆ.

ಕೆನಡಾದದ  ವಾಟ್ರಸ್ ನಲ್ಲಿ ಕಾಣಿಸಿಕೊಂಡ ಒಂದು ಭೂ ಪ್ರದೇಶ
ಕೆನಡಾದ ಒಂದು ನಗರದ ಚಿಕ್ಕ ಪಟ್ಟಣವಾದ ವಾಟ್ರಸ್ ನಲ್ಲಿ ಒಂದು ಭೂ ಪ್ರದೇಶವು ಕಾಣಿಸಿಕೊಂಡಿದೆ. ಇದೂ ಏಕೆ ಒಮ್ಮೆಲೆಹೊರಹೊಮ್ಮಿದೆ ಎಂದು ಎಲ್ಲರಿಗೂ ಆಶ್ಚರ್ಯವಾಗುತ್ತಿದೆ. ಆ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿವೆ.

ಇದನ್ನೂ ಓದಿ: Viral Video: ಪಾಂಡಾವನ್ನು ಮಗುವಿನಂತೆ ತಟ್ಟಿ ಮಲಗಿಸಿದ ವ್ಯಕ್ತಿ! ಕ್ಯೂಟ್ ವಿಡಿಯೋ ವೈರಲ್

ಇದು ಸೃಷ್ಟಿಯ ಯಾವ ಅವತಾರ ಎಂದು ಯೋಚಿಸುತ್ತಿರುವಾಗಲೇ ಒಬ್ಬರು ಸುಂಟರಗಾಳಿ ಇರಬಹುದಾ ಎಂದು ಯೋಚಿಸುತ್ತಾರೆ. ಇನ್ನೊಬ್ಬರು ಚಂಡಮಾರುತ ಅಥವಾ ನಿಯಂತ್ರಣ ಇಲ್ಲದ ಹವಾಮಾನವನ್ನು ಊಹಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಸೃಷ್ಟಿಯ ವಿಚಿತ್ರ ನಡೆದಿದೆ ಅದು ಎಲ್ಲಿ ಎಂದು ಹೇಳುತ್ತೆನೆ ಕೇಳಿ.

ಇತ್ತೀಚೆಗೆ ಕೆನಡಾದಲ್ಲಿ, ಒಂದು ನಗರದಲ್ಲಿ ಆ ದಿನ ವಾತಾವರಣ ಎಂದಿನಂತೆ ಶಾಂತವಾಗಿತ್ತು ಆದರೆ ಇದ್ದಕ್ಕಿದ್ದಂತೆ ಒಂದು ಸ್ಥಳದಲ್ಲಿ ಭೂಪ್ರದೇಶವೂ ಕಾಣಿಸಿಕೊಡಿದೆ. ಇದು ಯಾವ ವಾತಾವರಣದ ವೈಪರಿತ್ಯಕ್ಕೆ ನಾಂದಿಯಾಗುತ್ತದೆ ಎಂದು ಇದುವರೆಗೂ ತಿಳಿದು ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಕಾರಣವನ್ನು ವಿಜ್ಞಾನಿಗಳು ಕಂಡು ಹಿಡಿದು ಮಾಹಿತಿಯನ್ನು ಜಗತ್ತಿಗೆ ತಿಳಿಸಿಡಬಹುದೆಂಬ ವಿಶ್ವಾಸವಿದೆ.

ವಿಚಿತ್ರ ಹವಾಮಾನ ವಿದ್ಯಮಾನದ ವಿಡಿಯೋ ವೈರಲ್
ಈ ವಿಚಿತ್ರ ಹವಾಮಾನ ವಿದ್ಯಮಾನದ ವಿಡಿಯೋ ವನ್ನು ಟ್ವಿಟರ್ ನ ಬಳಕೆದಾರರಾದ ಡೌಗ್ಲಾಸ್ ಥಾಮಸ್ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ, ಅವರ ಬಳಕೆದಾರರ ಟ್ವಿಟರ್ ನ ಹೆಸರು (@winstonwildcat) ಎಂದಾಗಿದೆ.

ಈ ವಿಡಿಯೋದಲ್ಲಿ ಏನಿದೆ
ಹಾಗಾದರೆ ಈ ವಿಡಿಯೋದಲ್ಲಿ ಏನಿದೆ ಎಂದು ತಿಳಿಯುವ ಕುತೂಹಲವೇ? ಬನ್ನಿ, ಹಾಗಾದರೆ ಈಗಲೇ ಆ ವಿಡಿಯೋ ಬಗ್ಗೆ ವಿವರಣೆಯನ್ನು ನೀಡುತ್ತೇವೆ. ಸಮುದ್ರ ತೀರದಲ್ಲಿ ತೆಗೆದ ವಿಡಿಯೋದಲ್ಲಿ, ಸೂರ್ಯನು ಸ್ಪಷ್ಟವಾದ ಮೋಡಗಳ ಮೂಲಕ ಹೊಳೆಯುತ್ತಿರುವಾಗ, ಹತ್ತಿರದಲ್ಲಿ ಅಂದರೆ ಸ್ವಲ್ಪ ದೂರದಲ್ಲಿ ಭೂಪ್ರದೇಶ ಕಾಣಿಸಿಕೊಂಡಿದೆ. (ಅದು ಒಂದು ರೀತಿಯ ಸುಂಟರಗಾಳಿ ಆಗಿದೆ.) ಸುಂಟರಗಾಳಿಯ ತರದ ಒಂದು ಭೂಪ್ರದೇಶ ರೂಪುಗೊಳ್ಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:  Viral Video: ಭಾರತೀಯ ವಧುವಿಗಾಗಿ ಈ ವಿದೇಶಿ ವರ ಮಾಡಿದ್ದೇನು ನೋಡಿ



ಈ ವಿಡಿಯೋದಲ್ಲಿ, ಕಡಲತೀರದ ಪ್ರವಾಸಿಗರು ಕುತೂಹಲದಿಂದ ಅಲ್ಲಿ ಸೃಷ್ಟಿಯಾಗುತ್ತಿರುವ ಭೂಪ್ರದೇಶವನ್ನು ನೋಡುತ್ತಿರುವಾಗ ಮಹಿಳೆಯೊಬ್ಬರು "ಓ ಮೈ ಗಾಡ್ ಅದು ಸುಂಟರಗಾಳಿ ಆಗಿದೆ" ಎಂದು ಉದ್ಗರಿಸುವುದನ್ನು ನಾವು ಈ ವಿಡಿಯೋದಲ್ಲಿ ಕೇಳಬಹುದು. ಅಲ್ಲಿ ಆ ಹವಾಮಾನದ ವೈಪರಿತ್ಯವನ್ನು ನೋಡಿದ ಕೂಡಲೇ ಸಮುದ್ರ ತೀರದಲ್ಲಿ ಇರುವ ಜನರೆಲ್ಲ ತಮ್ಮ- ತಮ್ಮ ಬ್ಯಾಗ್ ಗಳನ್ನು ತ್ವರಿತ ಗತಿಯಲ್ಲಿ ಪ್ಯಾಕ್ ಅಪ್ ಮಾಡಿ ಅಲ್ಲಿಂದ ಹೊರಡುವುದಕ್ಕೆ ಮುಂದಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

2,900 ಕ್ಕೂ ಹೆಚ್ಚು ಲೈಕ್‌ಗಳು ಪಡೆದ ವಿಡಿಯೋ
ಈ ವಿಡಿಯೋ ಈಗ ಎಲ್ಲ ಕಡೆಯೂ ಶೇರ್ ಆಗ್ತಿದೆ. ಇದನ್ನು ನೋಡಿದ ಪ್ರತಿಯೊಬ್ಬರು ತುಂಬಾ ಆಶ್ಚರ್ಯದಿಂದ ಈ ವಿಡಿಯೋ ವೀಕ್ಷಿಸುತ್ತಿದ್ದಾರೆ. ಈ ಪೋಸ್ಟ್ ಅನ್ನು ಗುರುವಾರ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಶೇರ್ ಮಾಡಿದ ಈ ವಿಡಿಯೋಗೆ 2,900 ಕ್ಕೂ ಹೆಚ್ಚು ಲೈಕ್‌ಗಳು ಬಂದಿದೆ. ಇನ್ನು ಹೆಚ್ಚು ಲೈಕ್ ಗಳನ್ನು ಈ ವಿಡಿಯೋ ಪಡೆಯುವ ಸಾಧ್ಯತೆ ಇದೆ.
Published by:Ashwini Prabhu
First published: