VIDEO: ವಿಶ್ವ ವಿಸ್ಮಯ: ಅಸ್ಸಾಂನಲ್ಲಿ ಕಾಣಿಸಿಕೊಂಡ ಮನುಷ್ಯನ ಮುಖವನ್ನು ಹೋಲುವ ವಿಚಿತ್ರ ಜೀವಿ..!

ಈ ಸಣ್ಣ ಜೀವಿಯು ಅಸ್ಸಾಂನ ಕೊಲಿಯಬರ್​​ನಲ್ಲಿ ಕಾಣಿಸಿಕೊಂಡಿದ್ದು, ಜೇಡರ ಹುಳದಂತೆ ಇದು ಹೆಜ್ಜೆ ಹಾಕುತ್ತಿರುವುದರಿಂದ ಜೇಡರ ವರ್ಗಕ್ಕೆ ಸೇರಿದ ಜೀವಿ ಎಂದು ಊಹಿಸಲಾಗಿದೆ.

zahir | news18
Updated:January 7, 2019, 7:57 PM IST
VIDEO: ವಿಶ್ವ ವಿಸ್ಮಯ: ಅಸ್ಸಾಂನಲ್ಲಿ ಕಾಣಿಸಿಕೊಂಡ ಮನುಷ್ಯನ ಮುಖವನ್ನು ಹೋಲುವ ವಿಚಿತ್ರ ಜೀವಿ..!
.
zahir | news18
Updated: January 7, 2019, 7:57 PM IST
ಮಾನವನ ಊಹೆಗೂ ನಿಲುಕದ ಅನೇಕ ಜೀವಿಗಳು ಈ ಭೂಮಂಡಲದಲ್ಲಿವೆ. ಹಾಗೆಯೇ ಅನ್ಯಗ್ರಹ ಜೀವಿಗಳ ಕುರಿತಾದ ಸದ್ದು ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಅದೇ ರೀತಿ ಇದೀಗ ಮತ್ತೊಂದು ವಿಚಿತ್ರ ಜೀವಿಯೊಂದು ಕಾಣಿಸಿಕೊಂಡಿದೆ. ಜೇಡ ಪ್ರಭೇದಕ್ಕೆ ಸೇರಿರಬಹುದಾದ ಈ ಜೀವಿಯ ಮುಖವು ಮಾನವನ ಮುಖವನ್ನು ಹೋಲುವಂತಿರುವುದೇ ಅಚ್ಚರಿ.

ಈ ಸಣ್ಣ ಜೀವಿಯು ಅಸ್ಸಾಂನ ಕೊಲಿಯಬರ್​​ನಲ್ಲಿ ಕಾಣಿಸಿಕೊಂಡಿದ್ದು, ಜೇಡರ ಹುಳದಂತೆ ಇದು ಹೆಜ್ಜೆ ಹಾಕುತ್ತಿರುವುದರಿಂದ ಜೇಡರ ವರ್ಗಕ್ಕೆ ಸೇರಿದ ಜೀವಿ ಎಂದು ಊಹಿಸಲಾಗಿದೆ. ತಮಾಷೆಯ ವಿಚಾರವೆಂದರೆ ಕೊಲಿಯಬರ್​ನ ಜನರು ಕೂಡ ಈ ಜೀವಿಗೆ ಸ್ಪೈಡರ್​ಮ್ಯಾನ್​ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: LICಯ ನೂರಾರು ಪಾಲಿಸಿಗಳು ಬಂದ್​: ಪಾಲಿಸಿದಾರನು ಮುಂದೇನು ಮಾಡಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಮನುಷ್ಯನ ಅಥವಾ ಏಲಿಯನ್​ಗಳ ಮುಖವನ್ನು ಹೋಲುವಂತಿರುವ ಈ ಜೀವಿಯ  ಕಣ್ಣು, ಮೂಗು, ಬಾಯಿ ಒಂದೇ ಕಡೆ ಇರುವುದರಿಂದ ಮಾನವನ ಮುಖವನ್ನು ಹೋಲುತ್ತಿದೆ. ಈ ಜೀವಿಯ ವೀಡಿಯೊ ಇದೀಗ ಭಾರೀ ವೈರಲ್​ ಆಗಿದ್ದು, ಆದರೆ ಈ ಜೀವಿಯ ಅಸಲಿ ಹೆಸರೇನು, ಯಾವ ಜಾತಿಗೆ ಸೇರಿದ ಹುಳ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಒಟ್ಟಿನಲ್ಲಿ ಸ್ಪೈಡರ್​ಮ್ಯಾನ್​ ಎಂಬುದು ಕಲ್ಪನೆಯನ್ನು ನಿಜ ಎಂಬಂತೆ ಬಿಂಬಿಸುವ ಹೊಸದೊಂದು ಜೀವಿ ಕಾಣಿಸಿಕೊಂಡಿದ್ದು ಅಚ್ಚರಿ ಎನ್ನಲೇಬೇಕು.

ಇದನ್ನೂ ಓದಿ: ಹೊಸ ವರ್ಷದಲ್ಲಿ ಮತ್ತೆ ಪೆಟ್ರೋಲ್​-ಡೀಸೆಲ್ ದರದಲ್ಲಿ ಹೆಚ್ಚಳ

First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...