Sudha Mahalingam: ವಯಸ್ಸೆಂದರೆ ಬರೀ ಸಂಖ್ಯೆಯಷ್ಟೇ..ಸೋಲೋ ಟ್ರಾವೆಲರ್ ಸುಧಾ ಮಹಾಲಿಂಗಂ ಸಾಹಸಗಾಥೆ

Sudha Mahalingam: ಸುಧಾ ಭಾರತದ 16 ನಗರಗಳಿಗೆ ಹಾಗೂ 18 ದೇಶಗಳಿಗೆ ಪ್ರಯಾಣಿಸಿದ್ದರು. ಹೀಗೆ ತಾನು ಮಾಡುತ್ತಿದ್ದ ಬ್ಯುಸಿನೆಸ್ ಜರ್ನಲಿಸ್ಟ್ ಕೆಲಸವನ್ನು ತ್ಯಜಿಸಿ ದೇಶ ಸುತ್ತುವ ಹವ್ಯಾಸ ಬೆಳೆಸಿಕೊಂಡರು. ಪ್ರಯಾಣ ಸಮಯದಲ್ಲಿ ಅನೇಕ ಸವಾಲುಗಳನ್ನು ಸುಧಾ ಎದುರಿಸಿದ್ದಾರೆ.

ಸುಧಾ  ಮಹಾಲಿಂಗಂ

ಸುಧಾ ಮಹಾಲಿಂಗಂ

  • Share this:

ಬೆಂಗಳೂರಿನ 70ರ ಹರೆಯದ ಸುಧಾ ಮಹಾಲಿಂಗಂ(Sudha Mahalingam) ತಮ್ಮ ಇಳಿಹರೆಯದಲ್ಲೂ 20ರ ಉತ್ಸಾಹಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ಬದುಕಿನ ಹಲವಾರು ವರ್ಷಗಳನ್ನು ಪ್ರವಾಸಲ್ಲಿಯೇ(Travel) ಕಳೆದಿರುವ ಸುಧಾ ದ್ವೀಪ ಪ್ರದೇಶಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಸ್ಕೈ ಡೈವಿಂಗ್, ಸೀ ಡೈವಿಂಗ್ ನಡೆಸಿದ್ದಾರೆ. ಗಲ್‌ಪಾಗೋಸ್ ದ್ವೀಪಗಳು, ಆಸ್ಟ್ರೇಲಿಯಾದ ಕಡಿದಾದ ಗುಡ್ಡ ಪ್ರದೇಶಗಳಲ್ಲಿ ಸ್ಕೈ ಡೈವಿಂಗ್, ರಷ್ಯಾ, ಕಜಕಿಸ್ತಾನ ಹಾಗೂ ಮಯನ್ಮಾರ್ ಪ್ರದೇಶಗಳಲ್ಲಿ ಹಲವಾರು ಸಾಹಸಗಳನ್ನು ನಡೆಸಿದ್ದಾರೆ. ಈ ಎಲ್ಲಾ ಸಾಹಸಗಳನ್ನು ಒಂಟಿಯಾಗಿ ನಡೆಸಿದ್ದು ತನ್ನ ಸಂಗಾತಿ ಎಂದರೆ ನನ್ನ ಬ್ಯಾಕ್‌ಪ್ಯಾಕ್‌ ಇದರೊಂದಿಗೆ ನಾನು ದೇಶವಿದೇಶಗಳನ್ನು ಸುತ್ತಿರುವೆ ಎಂದು ಸುಧಾ ಹೇಳುವ ಮಾತು ಬೆಕ್ಕಸ ಬೆರಗಾಗಿಸುತ್ತದೆ.


ಸಣ್ಣ ವಯಸ್ಸಿನಿಂದ ನನಗೆ ಪ್ರವಾಸವೆಂದರೆ ತುಂಬಾ ಇಷ್ಟ. ಆದರೆ ಆ ಸಮಯದಲ್ಲಿ ಅಷ್ಟೆಲ್ಲಾ ದೇಶ ಸುತ್ತಲು ಹಣವಿರಲಿಲ್ಲ. ಪ್ರವಾಸಿ ನಿಯತಕಾಲಿಕೆಗಳನ್ನು ನೋಡಿ ಅದರಲ್ಲಿದ್ದ ಫೋಟೋಗಳನ್ನು ಆಸ್ವಾದಿಸುತ್ತಿದ್ದೆ. ಆದರೆ ಆ ಸ್ಥಳಗಳಿಗೆ ಹೋಗಬೇಕೆನ್ನುವ ನನ್ನ ಹಂಬಲ ಹಾಗೆಯೇ ಉಳಿದಿತ್ತು ಎಂದು ಸುಧಾ ಕೊಂಡೆ ನಾಸ್ಟ್ ಟ್ರಾವೆಲರ್ ನಿಯತಕಾಲಿಕೆಗೆ ಅನುಭವ ಹೇಳಿಕೊಂಡಿದ್ದಾರೆ. 25ರ ಹರೆಯದಲ್ಲೇ ವಿವಾಹವಾದ ಸುಧಾ ಮೊದಲ ಬಾರಿಗೆ ಏಕಾಂಗಿಯಾಗಿ 32 ದಿನದ ಕೈಲಾಸ ಮಾನಸ ಸರೋವರ ಟ್ರೆಕ್ಕಿಂಗ್ ಮಾಡಿದ್ದಾರೆ.


ಮೊದಲ ಸೋಲೋ ಟ್ರಿಪ್:


ಪತಿ ಸಿವಿಲ್ ಸೇವೆಯಲ್ಲಿ ಉದ್ಯೋಗದಲ್ಲಿದ್ದರಿಂದ ಪತಿಯೊಂದಿಗೆ ಸುಧಾ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಿದ್ದರು. ತನ್ನ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಸುಧಾ ಸೋಲೋ ಪ್ರಯಾಣ ನಡೆಸಿದರು. ಫಿನ್‌ಲ್ಯಾಂಡ್, ನಾರ್ವೆ, ಡೆನ್ಮಾರ್ಕ್ ಹಾಗೂ ಬರ್ಲಿನ್‌ಗೆ ಪ್ರಯಾಣಿಸಿದರು.


ಸುಧಾ ಭಾರತದ 16 ನಗರಗಳಿಗೆ ಹಾಗೂ 18 ದೇಶಗಳಿಗೆ ಪ್ರಯಾಣಿಸಿದ್ದರು. ಹೀಗೆ ತಾನು ಮಾಡುತ್ತಿದ್ದ ಬ್ಯುಸಿನೆಸ್ ಜರ್ನಲಿಸ್ಟ್ ಕೆಲಸವನ್ನು ತ್ಯಜಿಸಿ ದೇಶ ಸುತ್ತುವ ಹವ್ಯಾಸ ಬೆಳೆಸಿಕೊಂಡರು. ಪ್ರಯಾಣ ಸಮಯದಲ್ಲಿ ಅನೇಕ ಸವಾಲುಗಳನ್ನು ಸುಧಾ ಎದುರಿಸಿದ್ದಾರೆ. ಒಮ್ಮೊಮ್ಮೆ ತನ್ನ ಕುಟುಂಬವನ್ನು ಮರಳಿ ನೋಡುವುದಿಲ್ಲವೋ ಎಂಬ ಭಯ ಕೂಡ ಆವರಿಸಿತ್ತು ಎಂಬುದನ್ನು ಸುಧಾ ನೆನಪಿಸಿಕೊಳ್ಳುತ್ತಾರೆ.


ಇದನ್ನೂ ಓದಿ: ಲೈವ್‌ ಟೆಲಿಕ್ಯಾಸ್ಟ್‌ ವೇಳೆ ಹವಾಮಾನಶಾಸ್ತ್ರಜ್ಞರ ಕೈಯಲ್ಲಿ ಸ್ಫೋಟಗೊಂಡ ಅಗ್ನಿಶಾಮಕ ಯಂತ್ರ.

ವಯಸ್ಸಾಯಿತೆಂದು ಹೆಜ್ಜೆ ಹಿಂದಿಡಲಿಲ್ಲ:


ಸುಧಾಗೆ ವಯಸ್ಸು ಎನ್ನುವುದು ಕೇವಲ ಅಂಕೆಯಾಗಿದೆ. ನನಗೆ ವಯಸ್ಸಾಗಿದೆ. ಈ ಸಾಹಸಗಳನ್ನು ನಾನು ಮಾಡಬಹುದೇ ಎಂದು ನಾನು ಯೋಚಿಸುವುದಿಲ್ಲ. ಗುರಿಯಿಟ್ಟುಕೊಂಡೇ ನಾನು ಮುಂದುವರಿಯುತ್ತೇನೆ ಎಂಬುದು ಸುಧಾ ಅಭಿಪ್ರಾಯವಾಗಿದೆ. ಪ್ರಯಾಣ ಸಮಯದಲ್ಲಿ ಯಾರೂ ನನ್ನ ವಯಸ್ಸಿನ ಬಗ್ಗೆ ಕೇಳುವುದಿಲ್ಲ. ಇನ್ನು ಸುಧಾ ಮಕ್ಕಳು ವಿದೇಶದಲ್ಲಿ ನೆಲೆಸಿದ್ದು ತಾಯಿಯ ಈ ಸಾಹಸಕ್ಕೆ ಅವರದ್ದು ಬೆಂಬಲ ಇದೆ ಎಂದು ಸುಧಾ ಹೇಳುತ್ತಾರೆ.


ಹೆಚ್ಚು ಜನಪ್ರಿಯವಲ್ಲದ ಸ್ಥಳಗಳಿಗೆ ಭೇಟಿ:


ಸುಧಾ ಮಹಾಲಿಂಗಂ ಪ್ರವಾಸಕ್ಕೆ ಆಯ್ಕೆಮಾಡಿಕೊಳ್ಳುವುದೇ ಯಾರೂ ಹೋಗದ ಸ್ಥಳವನ್ನು ಎಂದರೆ ನೀವು ನಂಬಲೇಬೇಕು. ಅಲ್ಲಿನ ಸಂಸ್ಕೃತಿ ಹಾಗೂ ಆ ಸ್ಥಳದ ಆಕರ್ಷಣೆ ಸುಧಾರನ್ನು ಹೆಚ್ಚು ಸೆಳೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಆಕೆ ಇರಾನ್‌ಗೆ ಹತ್ತು ಬಾರಿ ಪ್ರವಾಸ ಮಾಡಿದ್ದಾರೆ. ಅಲ್ಲಿನ ಕೆಲವೊಂದು ಬುಡಕಟ್ಟು ಸ್ಥಳಗಳಿಗೆ ಆಕೆ ಪ್ರಯಾಣಿಸಿದ್ದಾರೆ.


ಇದನ್ನೂ ಓದಿ: ನೆಚ್ಚಿನ ನಟನ ಹಾಡು ಕೇಳಬೇಕೆಂಬ ಖೈದಿಯ ಆಸೆ ಈಡೇರಿಸಿದ ನ್ಯಾಯಾಧೀಶರು: ಆದರೂ ಹಾಡು ಕೇಳದ ಖೈದಿ..!

ರಸ್ತೆ ಪ್ರವಾಸ ಮಾಡುವುದು ಎಂದರೆ ಸುಧಾಗೆ ತುಂಬಾ ಇಷ್ಟವಾಗಿದ್ದು ಗೋವಾ, ಲೇಪಾಕ್ಷಿ ಹಂಪಿ ಹೀಗೆ ಹಲವಾರು ಸ್ಥಳಗಳಿಗೆ ರಸ್ತೆ ಪ್ರವಾಸ ಕೈಗೊಂಡಿದ್ದಾರೆ. ಏಕಾಂಗಿಯಗಿ ಈ ಸ್ಥಳಗಳನ್ನು ಸುತ್ತಿದ್ದಾರೆ ಅಲ್ಲಿನ ಸಂಸ್ಕೃತಿಗಳನ್ನು ಅರಿತುಕೊಂಡಿದ್ದಾರೆ. ಶಾಲೆ ಕಾಲೇಜಿಗೆ ಹೋಗುವುದು, ಉದ್ಯೋಗ ಪಡೆಯುವುದು, ವಿವಾಹ ಮಕ್ಕಳನ್ನು ಹೊಂದುವುದು ಹೀಗೆ ನಮ್ಮ ಬದುಕು ಇಷ್ಟಕ್ಕೆ ಸೀಮಿತವಾಗಿರಬಾರದು. ನಾವು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳುವುದೇ ನಮ್ಮ ಜೀವನ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಸುಧಾ ಹೇಳಿದ್ದಾರೆ.


First published: