ಪ್ರಪಂಚದಲ್ಲಿ (World) ಅದೆಷ್ಟೋ ವಿಷಯಗಳು ಚಿತ್ರ ವಿಚಿತ್ರವಾಗಿರುತ್ತೆ. ಕೇಳ್ತಾ ಇದ್ರೆ ಒಮ್ಮೊಮ್ಮೆ ನಗು ಬರುತ್ತೆ ಇನ್ನೂ ಕೆಲವು ಬಾರಿ ಆಶ್ಚರ್ಯವಾಗುವುದಂತೂ ನಿಜ. ಆದ್ರೆ ಇವತ್ತು ವೈರಲ್ ಆಗ್ತಾ ಇರುವಂತಹ ಸುದ್ದಿಯನ್ನು ಕೇಳಿದರೆ ಎಂತವರಿಗಾದರೂ ಆಶ್ಚರ್ಯ ಆಗುತ್ತೆ. ಕಣ್ಣಿನಿಂದ ಕಣ್ಣೀರು ಬರುವುದನ್ನು ಕೇಳಿರುತ್ತೇವೆ. ಬಿಟ್ರೆ ರಕ್ತ ಕಣ್ಣೀರು ಎಂಬ ಮಾತನ್ನು ಕೂಡ ಕೇಳಿರುತ್ತೇವೆ. ಆದ್ರೆ ಈ ಲೋಪ ಮಹಿಳೆಗೆ ಕಣ್ಣಿನಿಂದ ಕಲ್ಲು ಉದುರುತ್ತಾ ಇದೆಯಂತೆ. ಹೌದು, ಖಾಸಗಿ ವಾಹಿನಿಯ ಒಂದು ಸಂದರ್ಶನದಲ್ಲಿ (Interview) ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದಾರೆ ಈಕೆ. ಪ್ರಪಂಚದ ಅದಿಷ್ಟ ಅದ್ಭುತಗಳಲ್ಲಿ ಇದು ಕೂಡ ಒಂದು ಅಂತ ಹೇಳಿದರೆ ತಪ್ಪಾಗಲಾರದು ಅಲ್ವಾ? ಬನ್ನಿ ಈ ಕುರಿತಾದಂತಹ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ.
ಎಡಭಾಗದ ತಲೆ ನೋವು ಆಗಾಗ ಕಾಣಿಸಿಕೊಳ್ಳುತ್ತಾ ಇತ್ತಂತೆ ಈ ಮಹಿಳೆಗೆ. ತಲೆಯಿಂದ ಅದೇನೋ ಉದುರಿ ಮುಖದ ಭಾಗಕ್ಕೆ ಬಂದು ಬೀಳುವ ಹಾಗೆ ಕೂಡ ಒಮ್ಮೊಮ್ಮೆ ಅನಿಸ್ತಾ ಇತ್ತಂತೆ. ಆದರೆ ಒಂದು ದಿನ ಕಣ್ಣು ವಿಪರೀತ ತುರಿಕೆ, ನೋವು ಆರಂಭವಾಯಿತು ಅಂತ ಕಣ್ಣಿನೊಳಗೆ ಬೆರಳು ಹಾಕಿ ನೋಡಿದಾಗ ಕಲ್ಲು ಉದುರಲು ಆರಂಭವಾಯ್ತು ಅಂತೆ.ಅಬ್ಬಬ್ಬಾ ಈ ವಿಷಯವನ್ನ ಕೇಳ್ಬೇಕಾದ್ರೆನೇ ಮೈ ಜುಮ್ ಅನ್ಸುತ್ತೆ! ಇನ್ನು ಆ ಮಹಿಳೆಗೆ ತನ್ನ ಕಣ್ಣಿನಿಂದ ಕಲ್ಲು ಬರುವುದನ್ನ ನೋಡಿ ಹೇಗೆ ಆಗಿರಬಹುದು ಅಲ್ವಾ?
ಈಕೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದವರು. ಮಹಿಳೆಯ ಕಣ್ಣಿನಿಂದ ಹೊರ ಬರುತ್ತಿರುವ ಕಲ್ಲಿನ ಚೂರುಗಳು: ರೋಗಿ ಹೇಳಿದ್ದೇನು? ಈ ಮಹಿಳೆಯ ಹೆಸರು ವಿಜಯ ಅಂತ, ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದವರು. ಮುಖವೆಲ್ಲಾ ಚುಚ್ಚಿದ ರೀತಿ ಅನಿಸಿ ಕಣ್ಣಿನ ಮುಂಭಾಗದಲ್ಲಿ ಕಲ್ಲಿನ ಚೂರಿನ ಹಾಗೆ ಬೀಳಲು ಆರಂಭವಾಗಿದೆ ಇವರಿಗೆ. ಕಳೆದ ಶನಿವಾರ ಮೊದಲು ಹೀಗೆ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಸುಮಾರು 200 ಕ್ಕೂ ಹೆಚ್ಚು ಕಲ್ಲುಗಳು ಕಣ್ಣಿನಿಂದ ಬಿದ್ದಿದೆ. ಈ ವಿಚಾರವನ್ನು ಊರಿನ ಜನರಿಗೆ ಹೇಳಿದರೆ ನಾಟಕ ಆಡುತ್ತಿದ್ದಾರೆ ಎಂದು ಆಡಿಕೊಂಡಿದ್ದಾರೆ. ಕಣ್ಣು ಚೆನ್ನಾಗಿಯೇ ಕಾಣಿಸುತ್ತಿದೆ. ಇನ್ನೇನು ನಾಟಕ ನಿಮ್ಮದು. ಅಂತ ಊರವರು ಕೇಳಿದ್ದಾರೆ.
ಈ ಕಲ್ಲುಗಳನ್ನು ಎಲ್ಲಿಯೂ ಎಸೆಯೂಕ್ಕು ಮನಸ್ಸು ಬರ್ತಾ ಇಲ್ವಂತೆ ಈ ಮಹಿಳೆಗೆ. ವಿಜಯ ಅವರ ತಾಯಿ ಶಿವಮ್ಮ ಮಾತನಾಡಿ, 'ನನ್ನ ಮಗಳಿಗೆ ಇದು ಹೇಗೆ ಆಯಿತು ಎಂಬುದು ಗೊತ್ತಿಲ್ಲ. ಕಳೆದ ಎಂಟು ದಿನಗಳಿಂದ ಎರಡು ಬಾರಿ ಕಲ್ಲಿನ ಚೂರುಗಳು ಉದುರುತ್ತಿವೆ. ಡಾಕ್ಟರ್ ಇದನ್ನು ನೋಡಿ ಆಶ್ಚರ್ಯ ಪಟ್ಟರು. ಬಡವರಿಗೆ ದೇವರು ಈ ರೀತಿಯ ಕಷ್ಟ ಕೊಡಬಾರದು, ಯಾರಾದರೂ ಸಹಾಯ ಮಾಡಿ' ಎಂದು ಕೋರಿದ್ದಾರೆ.
ವೈದ್ಯರಲ್ಲಿ ಈ ಪ್ರಕರಣವನ್ನು ತೋರಿಸಿದಾಗ ಅವರು ಕೂಡ ಆಶ್ಚರ್ಯವಾಗಿದ್ದಾರೆ. ಪರೀಕ್ಷೆಗಳನ್ನು ನಡೆಸಲಾಗಿದೆ ಇನ್ನು ಯಾವುದೇ ರೀತಿಯ ಫಲಿತಾಂಶಗಳು ಬಂದಿಲ್ಲ. ಕಲ್ಲಿನ ಸ್ಯಾಂಪಲ್ಸ್ ಗಳನ್ನು ಕೂಡ ರಿಸರ್ಚ್ ಸೆಂಟರ್ಸ್ ಗಳಿಗೆ ಕಳಿಸಿದ್ದೇವೆ. ನಮಗೂ ಇದಕ್ಕೆ ಯಾವ ಚಿಕಿತ್ಸೆಯನ್ನು ನೀಡಬೇಕೆಂದು ಇನ್ನು ಗೊತ್ತಾಗುತ್ತಿಲ್ಲ ಯಾಕೆಂದರೆ ಇದು ಮೊದಲನೇ ಬಾರಿ ಈ ರೀತಿಯಾದಂತಹ ಕೇಸ್ ಗಳನ್ನು ನಾವು ನೋಡಿದ್ದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಸ್ಮಸ್ ದಿನ ಆಕಾಶದಲ್ಲಿ ಮಿನುಗುವ ತಾರೆ ವಿಶೇಷವಾದದ್ದು ಅಂತೆ!
ಇದಂತೂ ನಿಜವಾಗಿಯೂ ವಿಚಿತ್ರವಾದಂತ ಘಟನೆ ಅಂತಾನೆ ಹೇಳಬಹುದು. ಈ ಹಿಂದೆ ಮಹಿಳೆಗೆ ಒಂದೇ ಕೈಯಲ್ಲಿ ಅತ್ತು ಬೆರಳು ಇರುವುದು ಮತ್ತು ಒಂದೇ ಕಾಲದಲ್ಲಿ ಅತ್ತು ಬೆರಳು ಇರುವ ಸುದ್ದಿ ಸಕ್ಕತ್ ವೈರಲ್ ಆಗಿತ್ತು. ಅದೇ ರೀತಿಯಾಗಿ ಇಲ್ಲೊಂದು ವಿಚಿತ್ರ ಘಟನೆಗೆ ಆದಷ್ಟು ಬೇಗ ಪರಿಹಾರ ಸಿಗಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ