ಕೊರೊನಾ ಕಾಲಘಟ್ಟದಲ್ಲಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸಾಕಷ್ಟು ಕಂಪನಿಗಳು ನಷ್ಟ ಅನುಭವಿಸಿವೆ ಎಂಬ ಸುದ್ದಿಯನ್ನು ಓದಿರುತ್ತೀರಾ. ಅಲ್ಲದೆ, ಸಾಕಷ್ಟು ಸ್ಟಾರ್ಟ್ಅಪ್ ಕಂಪನಿಗಳು ಹೂಡಿಕೆಗಾಗಿ ಪರದಾಡುತ್ತಿವೆ. ಆದರೆ ಇಲ್ಲಿ ನಾವು ಹೇಳಲು ಹೊರಟಿರುವ ಕತೆ ಒಂದು ಯಶಸ್ವಿ ಸ್ಟಾರ್ಟ್ಅಪ್ ಕಂಪನಿಯದ್ದು. ಅದೂ ನಮ್ಮ ದೇಶದ ಕಂಪನಿ. ದಪ್ಪಗಿದ್ದಕ್ಕಾಗಿ ಕಾಲೇಜಿನಲ್ಲಿ ನಾಚಿಕೆಪಡುತ್ತಿದ್ದ ಯುವಕ ವಿಕ್ರಮ್ ಮೆಹ್ತಾ ಈಗ ಕೋಟ್ಯಧಿಪತಿ. 6 ವರ್ಷಗಳ ಹಿಂದೆ ವೆಡ್ಡಿಂಗ್ ಮತ್ತು ಈವೆಂಟ್ಸ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಪ್ರಾರಂಭಿಸುವಾಗ ವಿಕ್ರಮ್ ಬಳಿ ಕೇವಲ 30,000 ರೂ. ಹಣ, ಕ್ಷೇತ್ರದಲ್ಲಿ ಅವರ ಅನುಭವ, ಒಬ್ಬ ಸಿಬ್ಬಂದಿ ಮತ್ತು ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಮಾತ್ರ. ಅಂತಹ ಅಂಜಿಕೆಯ ಹುಡುಗ ಆರಂಭಿಸಿದ ಕಂಪನಿಗೆ ಅದೇನು ಅದೃಷ್ಟನೋ.. ಅದ್ಯಾವ ದೇವರು ಒಲಿದರೋ ಗೊತ್ತಿಲ್ಲ. ಆರೇ ವರ್ಷಗಳಲ್ಲಿ ಈಗ 2 ಕೋಟಿ ಆದಾಯ ಗಳಿಸಿದೆ ಈ ವೆಡ್ಡಿಂಗ್ ಮತ್ತು ಈವೆಂಟ್ಸ್ ಮ್ಯಾನೇಜ್ಮೆಂಟ್ ಕಂಪನಿ.
ಅಲ್ಲದೆ, ಮೊದಲ ವರ್ಷದಲ್ಲೇ 10 ಲಕ್ಷ ರೂ.ಗಳ ಆದಾಯ ಗಳಿಸಿದ ಕಂಪನಿ 2020 ರಲ್ಲಿ 2 ಕೋಟಿ ರೂ. ಆದಾಯ ಗಳಿಸಿದೆ. ಕಂಪನಿಯು ವಹಿವಾಟಿನ ದೃಷ್ಟಿಯಿಂದ ಮಾತ್ರವಲ್ಲದೆ, ಅವರು ನಿರ್ವಹಿಸಿದ ಘಟನೆಗಳ ಪ್ರಮಾಣ ಮತ್ತು ಭವ್ಯತೆಯಲ್ಲೂ ವೇಗವಾಗಿ ಬೆಳೆಯಿತು.
"ನಾವು ಶ್ರೀಲಂಕಾ, ಥೈಲ್ಯಾಂಡ್, ಮಲೇಷ್ಯಾ, ಹಾಂಗ್ ಕಾಂಗ್, ದುಬೈ, ಗೋವಾ, ಜೈಪುರ, ಮಸ್ಸೂರಿ, ಬೆಂಗಳೂರು, ಕೇರಳ ಮತ್ತು ಚೆನ್ನೈನಲ್ಲಿ ವಿವಾಹಗಳನ್ನು ಮಾಡಿದ್ದೇವೆ" ಎಂದು ವಿಕ್ರಮ್ ಹೇಳುತ್ತಾರೆ. ಅಮೆರಿಕದ ಓರ್‌ಲ್ಯಾಂಡೋದಲ್ಲಿರುವ ಡಿಸ್ನಿಲ್ಯಾಂಡ್‌ನಲ್ಲಿ ಸಹ 2018 ರಲ್ಲಿ ಈ ಕಂಪನಿ ಡ್ರೀಮ್ ವೆಡ್ಡಿಂಗ್ ಅನ್ನು ಆಯೋಜಿಸಿತ್ತು.
ಸಿದ್ಧಾಚಲ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಮತ್ತು ಬಾಂದ್ರಾ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ ಈ ವ್ಯವಹಾರವು ಒಂದು ವರ್ಷದಲ್ಲಿ ಸುಮಾರು 17-18 ಡೆಸ್ಟಿನೇಷನ್ ವೆಡ್ಡಿಂಗ್‌ಗಳನ್ನು ಆಯೋಜಿಸುತ್ತದೆ. ಅಲ್ಲದೆ, ಈ ಮದುವೆಗಳಿಗೆ ಅಂದಾಜು 4 ಕೋಟಿ ರೂ. ವೆಚ್ಚ ಮಾಡುತ್ತದೆ.
ಸದ್ಯ ಐದು ಫುಲ್‌ಟೈಮ್ ಉದ್ಯೋಗಿಗಳು, 17-18 ಸೀಸನಲ್ ಉದ್ಯೋಗಿಗಳನ್ನು ಹೊಂದಿರುವ ಕಂಪನಿ, ವಿವಾಹಗಳನ್ನು ಆಯೋಜಿಸುವ ವೇಳೆ ಫ್ರೀಲ್ಯಾನ್ಸರ್‌ಗಳನ್ನು ನೇಮಿಸಿಕೊಳ್ಳುತ್ತದೆ. ಮುಂಬೈಯಲ್ಲಿ ಹುಟ್ಟಿ ಬೆಳೆದ 37 ವರ್ಷದ ವಿಕ್ರಮ್ 2003 ರಲ್ಲಿ ಆಂಡ್ರ್ಯೂಸ್ ಶಾಲೆಯಿಂದ 12ನೇ ತರಗತಿ ಮುಗಿಸಿ ನಂತರ ಮಿಥಿಬಾಯಿ ಕಾಲೇಜಿನಿಂದ ಬಿ. ಕಾಮ್ ವ್ಯಾಸಂಗ ಮಾಡಿದರು. ಆ ವೇಳೆ ಬಾಲಿವುಡ್ ಸೆಲೆಬ್ರಿಟಿಗಳಾದ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ಆತನ ಸೀನಿಯರ್‌ಗಳಾಗಿದ್ದರು.
ನಾನು ಶಾಲೆಯಲ್ಲಿ ತುಂಬಾ ವಿಭಿನ್ನ ವ್ಯಕ್ತಿ. ಶಾಲೆಯಲ್ಲಿ ಎಲ್ಲರಿಗಿಂತ ಹೆಚ್ಚು ದಪ್ಪಗಿದ್ದೆ. ಆದರೂ, ನನ್ನ ಅತ್ಯುತ್ತಮ ಸಂವಹನ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದೆ ಎಂದು ವಿಕ್ರಮ್ ಹೇಳಿಕೊಂಡಿದ್ದಾನೆ. ಶಾಲೆಯಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರೂ, ಕಾಲೇಜಿನಲ್ಲಿ ಮಾತ್ರ ಆತನಿಗೆ ಗೆಳೆಯರ ಕೊರತೆ ಇತ್ತು. ಆತ ಸಣ್ಣಗಾದ ಬಳಿಕ ಕೆಲ ಗೆಳೆಯರಾದರೂ, ವಿಕ್ರಮ್ ಶಾಲಾ ಸ್ನೇಹಿತರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ. ಬಿ.ಕಾಂ ಮುಗಿದ ನಂತರ ಆತ ಎಂ.ಕಾಂಗೆ ಸೇರಿಕೊಂಡರು ಮತ್ತು ಈವೆಂಟ್‌ಗಳಲ್ಲಿ ಅರೆಕಾಲಿಕ ಕೆಲಸ ಮಾಡಲು ಪ್ರಾರಂಭಿಸಿದ.
700 ರೂಗಳಿಗೆ ಫ್ಲೈಯರ್‌ಗಳನ್ನು ಕೊಡುವುದು ಆತನ ಮೊದಲ ಕೆಲಸವಾಗಿತ್ತು. ನಂತರ ಸೋನಮ್ ಕಪೂರ್ ಸೆಲೆಬ್ರಿಟಿಯಾದ ನ್ಯೂ ಇಯರ್ ಪಾರ್ಟಿಯೊಂದರಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಮಾಡಿದ್ದನ್ನು ಹೇಳಿಕೊಂಡಿದ್ದಾರೆ ವಿಕ್ರಮ್. ಆತನನ್ನು ಪಾಲುದಾರರಾಗಿ ಸಂಘಟಕರು ಆಹ್ವಾನಿಸಿದರೂ, ವಿಕ್ರಮ್ ಆ ಪ್ರಸ್ತಾಪ ಒಪ್ಪದೆ ಹೊಸ ಕಂಪನಿಯನ್ನೇ ಪ್ರಾರಂಭಿಸಿದ. ಕೇವಲ 23 ವರ್ಷಕ್ಕೆ ಆರಂಭವಾದದ್ದು ರೆಡ್ ಓಂ ಎಂಟರ್‌ಟೈನ್‌ಮೆಂಟ್.
ವಿಕ್ರಮ್ ಜತೆಗೆ ಸಪ್ನಾ ಲಲ್ಲಾ ಎಂಬ ಪಾರ್ಟ್‌ನರ್ ಇದ್ದು, ಇವರಿಬ್ಬರು ಬಾರ್ ಕ್ಲಬ್‌ಗಳಲ್ಲಿ ಅಂತಾರಾಷ್ಟ್ರೀಯ ಡಿಜೆಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿದರು. 2009 ರ ಹೊತ್ತಿಗೆ, ರೆಡ್ ಒಎಂ ವಾರ್ಷಿಕ ಆದಾಯ 1 ಕೋಟಿ ರೂ. ತಲುಪಿತು. ಈ ಕಂಪನಿ ಶಾರುಖ್ ಖಾನ್ ಲಾಂಚ್ ಪಾರ್ಟಿಯನ್ನು ನಿರ್ವಹಿಸಿದೆ, ಹೃತಿಕ್ ರೋಶನ್ ಮತ್ತು ಸಂಜಯ್ ದತ್ ಅವರ ಈವೆಂಟ್‌ಗಳನ್ನು ಸಹ ನಿರ್ವಹಿಸಿದೆ. ಅವಾರ್ಡ್ ಶೋಗಳನ್ನೂ ಸಹ ನಡೆಸಿತ್ತು.
ಆದರೆ, 2013 ರಲ್ಲಿ ಬದಲಾದ ಟ್ರೆಂಡ್‌ನಂತೆ ರೆಡ್ ಓಂ ತೊರೆದ ವಿಕ್ರಮ್, ಗೋವಾದಲ್ಲಿ ಸನ್ ಬರ್ನ್ ಉತ್ಸವವನ್ನು ಆಯೋಜಿಸುತ್ತಿದ್ದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಾದ ಪರ್ಸೆಪ್ಟ್ ಕಂಪನಿಗೆ ಸಿಇಒ ಆಗಿ ಸೇರಿಕೊಂಡರು. ಈ ಸಮಯದಲ್ಲಿ ಅವರ ತಂದೆ ಇತರರಿಗಾಗಿ ಕೆಲಸ ಮಾಡುವ ಬದಲು ಸ್ವಂತ ಕಂಪನಿಯನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು.
ನಂತರ ಅದೃಷ್ಟವೆಂಬಂತೆ ಬ್ಯಾಂಕಾಂಕ್‌ನಲ್ಲಿ ಸ್ನೇಹಿತನ ಸಹೋದರಿಯ ಮದುವೆ ಆಯೋಜಿಸಲು ವಿಕ್ರಮ್‌ಗೆ ಆಹ್ವಾನ ಬಂತು. ಕೇವಲ ಇಬ್ಬರ ಸಹಾಯದೊಂದಿಗೆ ಇಡೀ ಈವೆಂಟ್ ಅನ್ನು ನಿರ್ವಹಿಸಿದ್ದರು ವಿಕ್ರಮ್. ಬಳಿಕ ಕೇವಲ ಇಬ್ಬರ ತಂಡ ಉದಯಪುರದ ಪ್ರಸಿದ್ಧ ಜಗ್‌ಮಂದಿರ ಅರಮನೆಯಲ್ಲಿ ವಿವಾಹವನ್ನು ಆಯೋಜಿಸಲಾಗಿತ್ತು. ನಂತರ ಆಲಿಬಾಗ್‌ನಲ್ಲಿ ಮತ್ತೊಂದು ವಿವಾಹವ್ನನೂ ಆಯೋಜಿಸಲಾಯ್ತು. ಅಂತಿಮವಾಗಿ 2014 ರಲ್ಲಿ ಎಂಪೈರ್ ಈವೆಂಟ್ ಕಂಪನಿ ಪ್ರಾರಂಭಿಸಿದರು ವಿಕ್ರಮ್.
ಹವಾಮಾನದಿಂದ ಮದುವೆಯ ಕಾರ್ಯಕ್ರಮಗಳು ಹಾಳಾಗಬಹುದು. ಈ ಹಿನ್ನೆಲೆ ಬ್ಯಾಕಪ್ ಪ್ಲ್ಯಾನ್ ಇರಬೇಕು ಎನ್ನುತ್ತಾರೆ ವಿಕ್ರಮ್. ಮಳೆಯಿಂದಾದ ತೊಂದರೆಗಳು, ಟ್ಯಾಕ್ಸಿ ಚಾಲಕರ ಪ್ರತಿಭಟನೆಯಿಂದ ಅತಿಥಿಗಳನ್ನು ತಾವೇ ಕರೆತಂದಿದ್ದು, ಕುಡುಕ ಅತಿಥಿಗಳು, ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರು - ಹೀಗೆ ಅನೇಕ ಸವಾಲುಗಳು ಎದುರಾಗುತ್ತದೆ. ಅಲ್ಲದೆ, ಕುಟುಂಬ ಸದಸ್ಯರೊಂದಿಗೆ ವ್ಯವಹರಿಸುವುದು ಅತಿ ದೊಡ್ಡ ಸವಾಲು ಎಂದೂ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದಾರೆ ವಿಕ್ರಮ್.
ಆದರೆ, ವಧು - ವರರನ್ನು ಸಂತೋಷವಾಗಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಮದುವೆಯ ದಿನದ ಅವರ ಕನಸು ನನಸು ಮಾಡಲು ಗಮನ ಹರಿಸುತ್ತೇನೆ. ಪ್ರತಿ ಮದುವೆಯಲ್ಲಿ, ವಧುವಿನ ಪ್ರವೇಶವು ಅತ್ಯಂತ ಸುಮಧುರ ಕ್ಷಣವಾಗಿದೆ ಮತ್ತು ನಾನು ಅದನ್ನು ಖಚಿತಪಡಿಸಿಕೊಳ್ಳುತ್ತೇನೆ. ಪ್ರತಿ ಮದುವೆಗೂ ಇದು ವಿಶಿಷ್ಟವಾಗಿರುವಂತೆ ನಾನು ಖಚಿತಪಡಿಸಿಕೊಳ್ಳುತ್ತೇನೆ ಎಂದೂ ವಿಕ್ರಮ್ ಹೇಳಿಕೊಂಡಿದ್ದಾರೆ.
ಎಂಪೈರ್ ಕಂಪನಿಯು ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಮತ್ತು ELLE ನಿಯತಕಾಲಿಕೆಯು ಏಷ್ಯಾದ ಅತ್ಯುತ್ತಮ ವಿವಾಹ ಯೋಜಕರಲ್ಲಿ ಈ ಕಂಪನಿಗೆ 2ನೇ ಸ್ಥಾನ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ