• Home
 • »
 • News
 • »
 • trend
 • »
 • Cryptocurrency: ಕ್ರಿಪ್ಟೊ ಪ್ರಪಂಚದಲ್ಲಿನ ನಿಮ್ಮ ಪ್ರಯಾಣಕ್ಕೆ ಸಿದ್ಧರಾಗಿ, ಈಗಲೇ!

Cryptocurrency: ಕ್ರಿಪ್ಟೊ ಪ್ರಪಂಚದಲ್ಲಿನ ನಿಮ್ಮ ಪ್ರಯಾಣಕ್ಕೆ ಸಿದ್ಧರಾಗಿ, ಈಗಲೇ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ರಿಪ್ಟೊಗಳೇ ಮುಂದಿನ ಭವಿಷ್ಯ ಎಂಬುದನ್ನು ನೀವು ತಿಳಿದುಕೊಂಡರೆ ಮುಗಿಯಿತು, ಆಗ ನಿಮ್ಮಷ್ಟಕ್ಕೆ ನೀವೇ ಅವುಗಳೆಡೆಗೆ ಆಕರ್ಷಿತರಾಗುತ್ತೀರಿ.

 • Share this:

  Cryptocurrency Investment: ನೀವು ಎಲ್ಲವನ್ನೂ ಗಮನಿಸುತ್ತೀರಿ ಎಂದು ಪರಿಗಣಿಸುವುದಾದರೆ, ಇತ್ತೀಚಿನ ದಿನಗಳಲ್ಲಿ ನೀವು ಕ್ರಿಪ್ಟೊಕರೆನ್ಸಿ, ಬಿಟ್‌ಕಾಯಿನ್ ಮತ್ತು ನಾನ್-ಫಂಜಿಬಲ್ ಟೋಕನ್‌ಗಳ (NFT) ಬಗ್ಗೆ ಕೇಳಿರುತ್ತೀರಿ ಎಂಬುದರ ಬಗ್ಗೆ ಅನುಮಾನವೇ ಇಲ್ಲ. ಆದರೆ ನಮ್ಮಲ್ಲಿ ಹಲವರು ಈ ಹಂತದ ಪರಿಜ್ಞಾನವನ್ನು ಮಾತ್ರ ಹೊಂದಿದ್ದೇವೆ ಎಂಬುದೂ ಸಹ ಅಷ್ಟೇ ನಿಜ. ನೀವು ಈಗಾಗಲೇ ಈ ಹಂತದ ಜ್ಞಾನವನ್ನು ಹೊಂದಿರುವುದರಿಂದ, ಭಾರತದಲ್ಲಿ ಕ್ರಿಪ್ಟೊಕರೆನ್ಸಿಗಳನ್ನು ಬಳಸಿ ಟ್ರೇಡಿಂಗ್ ಮಾಡುವುದನ್ನು ನಿಷೇಧಿಸಿಲ್ಲ ಹಾಗೂ ನೀವು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಟ್ರೇಡಿಂಗ್ ಮಾಡಬಹುದು ಎಂಬುದನ್ನೂ ಸಹ ತಿಳಿದಿರಬೇಕು. 


  Paypal, Visa ಮತ್ತು Mastercard ಗಳಂತಹ ಹಣಕಾಸು ಸಂಸ್ಥೆಗಳು ಮತ್ತು El Salvador ನಂತಹ ರಾಷ್ಟ್ರಗಳು ಕ್ರಿಪ್ಟೊಕರೆನ್ಸಿಯನ್ನು ಎಷ್ಟು ವ್ಯಾಪಕವಾಗಿ ಅಳವಡಿಸಿಕೊಂಡಿವೆ ಎಂಬುದನ್ನು ನಾವು ಗಮನಿಸಬೇಕಿದೆ. ಕ್ರಿಪ್ಟೊ ಪ್ರಪಂಚದಲ್ಲಿ ನಿಮ್ಮ ಪ್ರಯಾಣ ಆರಂಭಿಸಲು ಮತ್ತು ಅವಕಾಶಗಳ ಅಲೆಯಲ್ಲಿ ಸವಾರಿ ಮಾಡಲು ಇದು ಸರಿಯಾದ ಸಮಯವಾಗಿದೆ.


  ನಿಮಗೆ ಕ್ರಿಪ್ಟೊ ಏಕೆ ಬೇಕು


  ವಾಸ್ತವವನ್ನು ಒಪ್ಪಿಕೊಳ್ಳೋಣ ಮತ್ತು ಕಳೆದುಕೊಳ್ಳುವ ಭೀತಿಯೂ (FOMO) ಸಹ ವಾಸ್ತವವೇ ಎಂಬುದನ್ನು ಅರಿಯೋಣ. ಕಳೆದ ದಶಕದಲ್ಲಿ ಯಾರಾದರೂ ಮಾಡಿರುವ ಅತ್ಯುತ್ತಮ ಹೂಡಿಕೆಗಳಲ್ಲಿ ಬಿಟ್‌ಕಾಯಿನ್ ಸಹ ಒಂದು ಎಂಬುದನ್ನು ಒಪ್ಪಿಕೊಳ್ಳಬೇಕು. ಒಂದು ವೇಳೆ ನೀವು 2010ರಲ್ಲಿ 10,000 ರೂಪಾಯಿಗಳ ಮೌಲ್ಯದ ಬಿಟ್‌ಕಾಯಿನ್ ಖರೀದಿಸಿದ್ದರೆ, ಏಳು ವರ್ಷಗಳ ನಂತರ, ಅಂದರೆ, 2017ರಲ್ಲಿ 66 ಕೋಟಿ ರೂಪಾಯಿಗಳ ಸುಪ್ಪೊತ್ತಿಗೆಯಲ್ಲಿ ಕುಳಿತಿರುತ್ತಿದ್ದಿರಿ. ಇದು ಕೇವಲ ಏಳು ವರ್ಷಗಳಲ್ಲಿ ಶೇಕಡಾ 66,00,000 ಹೆಚ್ಚಳವಾಗಿದೆ ಮತ್ತು ಜುಲೈ 2017ರಲ್ಲಿ 1 ಬಿಟ್‌ಕಾಯಿನ್ ಬೆಲೆ 2779 ಅಮೆರಿಕನ್ ಡಾಲರ್ ಆಗಿತ್ತು.


  2017 ರಿಂದಲೂ ಬಿಟ್‌ಕಾಯಿನ್‌ನ ಬೆಲೆ ಇನ್ನಷ್ಟು ಗಗನಮುಖಿಯಾಗಿದ್ದು, ಪ್ರಸ್ತುತ ಒಂದು ಬಿಟ್‌ಕಾಯಿನ್ 46,000 ಅಮೆರಿಕನ್ ಡಾಲರ್‌ಗಿಂತಲೂ (34.46 ಲಕ್ಷ ರೂಪಾಯಿಗಳು) ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆಬೇರೆ ಯಾವುದಾದರೂ ಹಣಕಾಸು ಹೂಡಿಕೆಗಳ ದರ ಈ ರೀತಿ ಏರಿಕೆ ಕಂಡಿರುವುದನ್ನು ಒಂದು ವೇಳೆ ನೀವು ತೋರಿಸಿದರೆ ನಾವು ಈಗಿಂದೀಗಲೇ ನಮ್ಮ ಮಾತುಗಳನ್ನು ಹಿಂದೆಗೆದುಕೊಳ್ಳುತ್ತೇವೆ. 


  ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ, ಡಿಸೆಂಬರ್ 2025ರ ವೇಳೆಗೆ ಪ್ರತಿ ಬಿಟ್‌ಕಾಯಿನ್‌ನ ಬೆಲೆ 318417 ಅಮೆರಿಕನ್ ಡಾಲರ್‌ಗೆ (2.36 ಕೋಟಿ ರೂಪಾಯಿ) ತಲುಪಬಹುದು ಎಂದು ಹಣಕಾಸು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ! ಮೊದಲ ಬಾರಿಯ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಲು ಇದೊಂದು ಶುಭಸೂಚಕವಾಗಿದ್ದು, ಈಗಲೂ ಅವರು ಬಿಟ್‌ಕಾಯಿನ್ ಬೆಳವಣಿಗೆಯ ಹಾದಿಯ ಒಂದು ಭಾಗವಾಗಬಹುದು. ನಾವೀಗ ಅದರ ವಿವರಗಳನ್ನು ನೋಡೋಣ.


  ಕ್ರಿಪ್ಟೊಕರೆನ್ಸಿ: ಆರಂಭಿಸುವುದು ಹೇಗೆ


  ನೀವು ಈಗ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವುದನ್ನು ಪ್ರಾರಂಭಿಸಲು ನಿರ್ಧರಿಸಿರುವಿರಿ, ಈ ಹೊಸ ಸ್ವತ್ತಿನ ವರ್ಗಕ್ಕೆ ನಿಮ್ಮನ್ನು ಯಾವುದು ಆಕರ್ಷಿಸುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಮೂಲತಃ, ಕ್ರಿಪ್ಟೊಗಳೇ ಮುಂದಿನ ಭವಿಷ್ಯ ಎಂಬುದನ್ನು ನೀವು ತಿಳಿದುಕೊಂಡರೆ ಮುಗಿಯಿತು, ಆಗ ನಿಮ್ಮಷ್ಟಕ್ಕೆ ನೀವೇ ಅವುಗಳೆಡೆಗೆ ಆಕರ್ಷಿತರಾಗುತ್ತೀರಿ.


  ಒಮ್ಮೆ ನೀವು ದೃಢ ನಿರ್ಧಾರ ತೆಗೆದುಕೊಂಡ ನಂತರ, ಯಾವ ಕ್ರಿಪ್ಟೊದಲ್ಲಿ ಹೂಡಿಕೆ ಮಾಡಬೇಕು ಮತ್ತು ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದನ್ನು ನೀವು ಆಯ್ಕೆ ಮಾಡಬೇಕು. ಜನಪ್ರಿಯ ಆಯ್ಕೆಗಳಾದ ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ಗಳನ್ನು ಪ್ರಯತ್ನಿಸಿ ಆದರೆ, ಇತರ ಜನಪ್ರಿಯ ಕಾಯಿನ್‌ಗಳ ಹೋಲಿಕೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬೆಳವಣಿಗೆಯಾಗುವ ಸಾಧ್ಯತೆಗಳನ್ನು ಹೊಂದಿರುವ, ಅಷ್ಟೇನೂ ಜನಪ್ರಿಯವಲ್ಲದ ಕಾಯಿನ್‌ಗಳ ಮೇಲೆಯೂ ಒಂದು ಕಣ್ಣಿಟ್ಟಿರಿ.


  ಹಣ ಹೂಡಿಕೆ ಮಾಡಬೇಕೆಂದರೆ, ಮೊದಲು ಭಾರತದಲ್ಲಿನ ಕ್ರಿಪ್ಟೊ ವಿನಿಮಯ ಸೇವೆ ಒದಗಿಸುವ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು, ನಂತರ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ವಿನಿಮಯ ಸಂಸ್ಥೆಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿ, ಈಗ ನಿಮ್ಮ ಮೊದಲ ಕ್ರಿಪ್ಟೊ ಖರೀದಿಸಿ. ಹಲವಾರು ಕಾರಣಗಳಿಗಾಗಿ ಬಿಟ್‌ಕಾಯಿನ್ ವಿನಿಮಯ ಆ್ಯಪ್ Zebpay ಅನ್ನು ನಾವು ನಿಮಗೆ ಶಿಫಾರಸು ಮಾಡುತ್ತೇವೆ, ಯಾಕೆಂದರೆ ವಾಸ್ತವದಲ್ಲಿ ಇದು ಭಾರತದ ಅತ್ಯಂತ ಹಳೆಯ ಮತ್ತು ಅತಿ ಹೆಚ್ಚು ಪರಿಗಣಿಸಲ್ಪಡುವ ಕ್ರಿಪ್ಟೊ ವಿನಿಮಯ ಸಂಸ್ಥೆಯಾಗಿದೆ.


  ಇದು ತನ್ನ ವಿಶೇಷತೆ ಮತ್ತು ಸರಳತೆಯಿಂದಾಗಿ ನಮ್ಮನ್ನು ಹೆಚ್ಚು ಪ್ರಭಾವಿಸಿದೆ, ಅಲ್ಲದೆ, ಕೆಲವು ಅನನ್ಯ ವೈಶಿಷ್ಟ್ಯತೆಗಳನ್ನು ಹೊಂದಿರುವುದರಿಂದ ಸುಲಭವಾಗಿ ಇದನ್ನು ಶಿಫಾರಸು ಮಾಡಬಹುದು. ಉದಾಹರಣೆಗೆ Zebpay Earn ವೈಶಿಷ್ಟ್ಯವನ್ನೇ ತೆಗೆದುಕೊಳ್ಳಿ. ನೀವು ಕ್ರಿಪ್ಟೊವನ್ನು ಹೊಂದಿರುವುದಕ್ಕಾಗಿಯೇ ಇದು ನಿಮಗೆ ಗಳಿಕೆಯ ಅವಕಾಶವನ್ನು ನೀಡುತ್ತದೆ – ಬಹುತೇಕ ನಿಮ್ಮ ಕ್ರಿಪ್ಟೊ ಉಳಿತಾಯಗಳ ಮೇಲೆ ಬಡ್ಡಿದರವನ್ನು ಪಡೆದಂತೆ. ನೀವು ಯಾವ ಕಾಯಿನ್‌ಗಳನ್ನು ಹೊಂದಿರುವಿರಿ ಎಂಬುದನ್ನು ಆಧರಿಸಿ, ಶೇಕಡಾ 1 ರಿಂದ ಶೇಕಡಾ 7.5ರವರೆಗಿನ ಲಾಭಾಂಶ ಪಡೆಯಬಹುದು. ಹೀಗೆ ಕುಳಿತಲ್ಲೇ ಕ್ರಿಪ್ಟೊವನ್ನು ಗಳಿಸುವುದು ಎಂದಿಗೂ ಸುಲಭವಲ್ಲ.


  ಮೊದಲ ಬಾರಿಯ ಕ್ರಿಪ್ಟೊ ಹೂಡಿಕೆದಾರರಾಗಿ ನೀವು ತಿಳಿದಿರಬೇಕಾದ ಅಂಶಗಳು


  ಮೊದಲ ಬಾರಿಗೆ ಕ್ರಿಪ್ಟೊದಲ್ಲಿ ಹೂಡಿಕೆ ಮಾಡುವಾಗ ಹೆಚ್ಚುವರಿ ಸಂಪನ್ಮೂಲವನ್ನಾಗಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ


  1 - ಪ್ರಾರಂಭದಲ್ಲಿ ನಿಮ್ಮ ಪೋರ್ಟ್‌ಫೋಲಿಯೊದ ಅಲ್ಪ ಮೊತ್ತವನ್ನು ಮಾತ್ರ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿ. ನಿಮ್ಮಿಂದ ಭರಿಸಲಾರದಂತಹ, ನಷ್ಟವಾಗುವಷ್ಟು ಮೊತ್ತವನ್ನು ಯಾವ ಕಾರಣಕ್ಕೂ ಹೂಡಿಕೆ ಮಾಡಬೇಡಿ.


  2 – ನೀವು ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಬೇಕು ಎಂದರೆ ಸಾವಿರಾರು ರೂಪಾಯಿಗಳ ಅಗತ್ಯವಿಲ್ಲ. ಅತ್ಯಂತ ಕಡಿಮೆ ಮೊತ್ತವಾದ 100 ರೂಪಾಯಿಯಿಂದ ಸಹ ಹೂಡಿಕೆ ಮಾಡುವ ಆಯ್ಕೆಯನ್ನು ಸಾಮಾನ್ಯವಾಗಿ ವಿನಿಮಯ ಸಂಸ್ಥೆಗಳು ನೀಡುತ್ತವೆ. ಈ ರೀತಿ ಹೂಡಿಕೆ ಮಾಡುವ ಮೂಲಕ, ಇಡೀ ಕಾಯಿನ್‌ ಬದಲಿಗೆ ನೀವು ಬಿಟ್‌ಕಾಯಿನ್‌ನಂತಹ ಯಾವುದೇ ಕ್ರಿಪ್ಟೊದ ಒಂದು ಭಾಗವನ್ನು ಖರೀದಿಸಬಹುದು.


  3 – ಸರ್ಕಾರ ರೂಪಿಸುವ ನಿಯಮಾವಳಿಗಳು ಮತ್ತು ವಿದ್ಯಮಾನಗಳ ಬಗ್ಗೆ ಗಮನವಿರಲಿ. ಭಾರತದಲ್ಲಿ ಕ್ರಿಪ್ಟೊಗಳನ್ನು ನಿಷೇಧಿಸಿಲ್ಲವಾದರೂ ಗೊಂದಲ ಮೂಡಿಸುವ ಸಾಕಷ್ಟು ತಪ್ಪು ಮಾಹಿತಿಗಳು ಇವೆ. ಇತ್ತೀಚಿನ ಮಾಹಿತಿಯೊಂದಿಗೆ ಅಪ್‌ ಟು ಡೇಟ್ ಆಗಿರಲು ಸೂಕ್ತವಾದ ಗುಂಪುಗಳನ್ನು, ಫೋರಮ್‌ಗಳನ್ನು ಮತ್ತು ಸುದ್ದಿ ಮೂಲಗಳನ್ನು ಅನುಸರಿಸಿ.


  4– ಯಾವುದೋ ಒಂದು ಸಂಗತಿ ನಿಜವಾಗಿರುವುದು ಅತ್ಯಂತ ಒಳ್ಳೆಯದಾದರೆ, ಬಹುಶಃ ಅದು ನಿಜವೇ ಆಗಿರಬಹುದು ಎಂಬ ಸಾರ್ವಕಾಲಿಕ ಮಾತನ್ನು ನೆನಪಿಡಿ. ಕೆಲವು ಕ್ರಿಪ್ಟೊ ವಿನಿಮಯ ಸಂಸ್ಥೆಗಳು ನಂಬಲಸಾಧ್ಯವಾದ ಲಾಭಾಂಶವನ್ನು ನೀಡುವುದಾಗಿ ಹೇಳುತ್ತವೆ, ಒಂದು ವೇಳೆ ಕ್ರಿಪ್ಟೊಕರೆನ್ಸಿಗಳು ಕುಸಿತಕ್ಕೆ ಒಳಗಾದರೆ, ಆಗ ನೀವು ಎಲ್ಲವನ್ನೂ ಒಂದೇ ಸಲಕ್ಕೆ ಕಳೆದುಕೊಳ್ಳುವಿರಿ. ಹಾಗಾಗಿ, ಚಿರಪರಿಚಿತವಾಗಿರುವ ZebPay ಅಂತಹ ಕ್ರಿಪ್ಟೊ ವಿನಿಮಯ ಸಂಸ್ಥೆಗಳ ಮೇಲೆ ವಿಶ್ವಾಸವಿಡಿ. 


  ಹಕ್ಕು ನಿರಾಕರಣೆ: ಕ್ರಿಪ್ಟೊಕರೆನ್ಸಿಗಳು ಅನಿಯಂತ್ರಿತ ಡಿಜಿಟಲ್ ಸ್ವತ್ತುಗಳಾಗಿವೆ ಮತ್ತು ಅವುಗಳನ್ನು ಕಾನೂನುರೀತ್ಯ ಚಲಾವಣೆ ಮಾಡಲು ಆಗುವುದಿಲ್ಲ. ಹೂಡಿಕೆಯ ನಂತರದ ಗಳಿಕೆಯ ಪ್ರದರ್ಶನವು ಭವಿಷ್ಯದ ಫಲಿತಾಂಶಗಳನ್ನು ಖಚಿತಪಡಿಸುವುದಿಲ್ಲ. ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ/ಟ್ರೇಡಿಂಗ್ ಮಾಡುವುದು ಮಾರುಕಟ್ಟೆ ಮತ್ತು ಕಾನೂನು ಅಪಾಯಗಳಿಗೆ ಒಳಪಟ್ಟಿದೆ.

  Published by:Soumya KN
  First published: