SSC CGL: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಸಿಜಿಎಲ್‌ ಟೈಯರ್ 2 ಪರೀಕ್ಷೆಯ Key Answer ಪ್ರಕಟ

 ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಸಿಜಿಎಲ್‌ ಟೈಯರ್ 2, 2020 ಪರೀಕ್ಷೆಯ ಸರಿಯಾದ ಉತ್ತರಗಳು ತಾತ್ಕಾಲಿಕವಾಗಿವೆ. ಪರೀಕ್ಷೆಯ ಈ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

website

website

  • Share this:
     ಸಿಬ್ಬಂದಿ ನೇಮಕಾತಿ ಆಯೋಗವು (Staff selection Commission) 2020ನೇ ಸಾಲಿನ ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ ಟೈಯರ್‌ 2 ಪರೀಕ್ಷೆಯನ್ನು (Exam) ನಡೆಸಿತ್ತು. ಈಗ ಆಯೋಗವು ಪರೀಕ್ಷೆಯ ಸರಿ ಉತ್ತರಗಳನ್ನು (Key Answer) ಬಿಡುಗಡೆ ಮಾಡಿದೆ.    ಸದರಿ 2020ನೇ ಸಾಲಿನ ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ ಟೈಯರ್‌ 2 ಪರೀಕ್ಷೆ ಬರೆದ ಅಭ್ಯರ್ಥಿಗಳು ಎಸ್‌ ಎಸ್‌ ಸಿ ವೆಬ್‌ ಸೈಟ್‌ ಗೆ (Website) ಭೇಟಿ ನೀಡಿ ಸರಿಯಾದ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು. ನೀವು ಪರೀಕ್ಷೆಯಲ್ಲಿ ಬರೆದ ಉತ್ತರ ಯಾವುದಾಗಿತ್ತು. ಮತ್ತು ಸರಿಯಾದ ಉತ್ತರ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಸರಿಯಾದ ಉತ್ತರಗಳನ್ನು ಚೆಕ್ (Check) ಮಾಡಿಕೊಳ್ಳುವ ಮೂಲಕ ವೆಬ್ ಸೈಟ್ ನಲ್ಲಿ ಪ್ರಕಟವಾದ ಸರಿಯುತ್ತರಗಳನ್ನೂ ಪರಿಶೀಲಿಸಿ ನೋಡಬಹುದಾಗಿದೆ. ಮುಂದೆ ಅಂತಿಮ ಸರಿಯುತ್ತರಗಳ ಪಟ್ಟಿ ಬಿಡುಗಡೆ ಆಗಲಿದೆ.

    ಪರೀಕ್ಷೆಯ ಸರಿಯಾದ ಉತ್ತರಗಳನ್ನು ಪ್ರಕಟನೆ

    ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಸಿಜಿಎಲ್‌ ಟೈಯರ್ 2, 2020 ಪರೀಕ್ಷೆಯ ಸರಿಯಾದ ಉತ್ತರಗಳನ್ನು ಬಿಡುಗಡೆ ಮಾಡಿದೆ. ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಜನವರಿ 28 ಮತ್ತು ಜನವರಿ 29, 2022 ರಂದು ಎಸ್‌ ಎಸ್‌ ಸಿ ಸಿಜಿಎಲ್‌ ಟೈಯರ್ 2 ಪರೀಕ್ಷೆ ನಡೆಸಿತ್ತು. ಈಗ ಪರೀಕ್ಷೆಯ ಸರಿಯಾದ ಉತ್ತರಗಳನ್ನು ಪ್ರಕಟನೆ ಮಾಡಿದೆ.

    ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

    ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಸಿಜಿಎಲ್‌ ಟೈಯರ್ 2, 2020 ಪರೀಕ್ಷೆಯ ಸರಿಯಾದ ಉತ್ತರಗಳು ತಾತ್ಕಾಲಿಕವಾಗಿವೆ. ಮತ್ತು ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಸಿಜಿಎಲ್‌ ಟೈಯರ್ 2, 2020 ಪರೀಕ್ಷೆಯ ಈ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಫೆಬ್ರವರಿ 15, 2022 ರ ಸಂಜೆ 06 ಗಂಟೆವರೆಗೆ ಆಕ್ಷೇಪಣೆ ಅನ್ನು ಆನ್‌ ಲೈನ್‌ ಮೂಲಕ ಸಲ್ಲಿಕೆ ಮಾಡಬಹುದಾಗಿದೆ. ಎಸ್‌ ಎಸ್‌ ಸಿ ಸಿಜಿಎಲ್‌ ಟೈಯರ್ 2 ಪರೀಕ್ಷೆ ಸರಿ ಉತ್ತರಗಳಿಗೆ ಪ್ರತಿ ಸರಿಯುತ್ತರಕ್ಕೆ 100 ರೂಪಾಯಿ ಪಾವತಿಸಿ, ಆಕ್ಷೇಪಣೆ ಸಲ್ಲಿಕೆ ಮಾಡಬಹುದು.

    ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1.82 ಲಕ್ಷ

    ಎಸ್‌ ಎಸ್‌ ಸಿ ಸಿಜಿಎಲ್‌ ಟೈಯರ್ 2 Answer Key 2020 ಚೆಕ್‌

    ಹಾಗಿದ್ದರೆ  ಎಸ್‌ ಎಸ್‌ ಸಿ ಸಿಜಿಎಲ್‌ ಟೈಯರ್ 2 (SSC CGL Tier 2) Answer Key 2020 ಚೆಕ್‌ ಮಾಡುವುದು ಹೇಗೆ?

    ಮೊದಲು ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಅಧಿಕೃತ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ.

    ವೆಬ್ ಸೈಟ್ ನಲ್ಲಿ ಓಪನ್‌ ಆದ ಪೇಜ್‌ ನಲ್ಲಿ 'Uploading of Tentative Answer Keys along with Candidates Response Sheet of CGL tier 2 2020' ಎಂದು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

    ಈಗ ಮತ್ತೊಂದು ಓಪನ್‌ ಆದ ಪೇಜ್‌ ನಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಪಾಸ್‌ ವರ್ಡ್‌ ನ್ನು ನಮೂದಿಸಿ ಲಾಗಿನ್‌ ಆಗಬೇಕು.

    ಈಗ ನೀವು ಬರೆದಿರುವ ಉತ್ತರಗಳನ್ನು ಆಯೋಗ ಬಿಡುಗಡೆ ಮಾಡಿರುವ ಸರಿಯುತ್ತರಗಳೊಂದಿಗೆ ಚೆಕ್ ಮಾಡಿ. ಇದಕ್ಕಾಗಿ ನೀವು ರೆಸ್ಪಾನ್ಸ್‌ ಶೀಟ್ ಅನ್ನು ಡೌನ್‌ ಲೋಡ್ ಮಾಡಿಕೊಳ್ಳಬಹುದಾಗಿದೆ.

    ಎಸ್‌ ಎಸ್‌ ಸಿ ಸಿಜಿಎಲ್‌ ಟೈಯರ್ 2 (SSC CGL Tier )2 Answer Key 2020 ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆ ಅರ್ಜಿಗಳನ್ನು ಪರಿಶೀಲಿಸಿ, ಅಂತಿಮವಾಗಿ ಸರಿಯುತ್ತರಗಳನ್ನು ಪ್ರಕಟಿಸಲಾಗುತ್ತದೆ. ನಂತರ ಈ ಸರಿಯುತ್ತರಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆ.

    ಇದನ್ನೂ ಓದಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಆನ್ಲೈನ್ ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

    ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಎಸ್‌ಎಸ್‌ಸಿ ಸಿಜಿಎಲ್ 2020 ಟೈಯರ್ 2 ಪರೀಕ್ಷೆಯನ್ನು ಜನವರಿ 28, 29 -2022ರಂದು ನಡೆಸಿತ್ತು. 2020ನೇ ಸಾಲಿನ ಸಿಜಿಎಲ್‌ ಟೈಯರ್ 1 ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮೆರಿಟ್‌ ಲಿಸ್ಟ್‌ನಲ್ಲಿ ಸೆಲೆಕ್ಟ್‌ ಆದ ಅಭ್ಯರ್ಥಿಗಳು ಟೈಯರ್ 2 ಪರೀಕ್ಷೆಗೆ ರಿಜಿಸ್ಟ್ರೇಷನ್‌ ಪಡೆದು ಪರೀಕ್ಷೆ ಬರೆದಿದ್ದರು.
    Published by:renukadariyannavar
    First published: