ವೈರಲ್​ ಆದ ಸೆಲೆಬ್ರೆಟಿಗಳ ಚೀಪ್​ಚಾಟ್ಸ್​, ಆನ್​ಲೈನ್​ನಲ್ಲಿ ಹವಾ ಎಬ್ಬಿಸಿದ ಶ್ರೀ ರೆಡ್ಡಿ!


Updated:April 12, 2018, 9:20 PM IST
ವೈರಲ್​ ಆದ ಸೆಲೆಬ್ರೆಟಿಗಳ ಚೀಪ್​ಚಾಟ್ಸ್​, ಆನ್​ಲೈನ್​ನಲ್ಲಿ ಹವಾ ಎಬ್ಬಿಸಿದ ಶ್ರೀ ರೆಡ್ಡಿ!

Updated: April 12, 2018, 9:20 PM IST
ಹೈದರಾಬಾದ್​: ಕೆಲ ದಿನಗಳ ಹಿಂದೆ ಮೂವಿ ಆರ್ಟಿಸಿಸ್ಟ್​ ಅಸೋಸಿಯೇಷನ್​ ಎದುರು ಅರೆ ನಗ್ನವಾಗಿ ಕುಳಿತು ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿ ಕೆಲ ದಿನಗಳ ಹಿಂದೆ ಖ್ಯಾತ ತೆಲುಗು ನಟ ರಾಣಾ ದಗ್ಗುಬಾಟಿಯ ಸೋದರ ಅಭಿರಾಮ್ ದಗ್ಗುಬಾಟಿ ಸೇರಿ ಹಲವರ ಜತೆ ನಡೆಸಿದ್ದ ಚಾಟ್​ಗಳು ವೈರಲ್​ ಆಗಿದೆ.

ಹಿರಿಯ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಹಾಗೂ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಅವರ ತಮ್ಮ ಅಭಿರಾಮ್ ದಗ್ಗುಬಾಟಿ ರೂಪದರ್ಶಿ ಶ್ರೀ ರೆಡ್ಡಿ ಅವರನ್ನು ಚುಂಬಿಸಿರುವ ಫೋಟೋಗಳು ವೈರಲ್ ಆಗಿವೆ.ಸುರೇಶ್​ ಬಾಬು ಅವರ ಮಗ ಅಭಿರಾಮ್​ ನನಗೆ ಮೋಸ ಮಾಡಿದ್ದಾರೆ. ಅವರ ಬಳ ಇರುವ ಸ್ಟುಡಿಯೋ ಸರ್ಕಾರಕ್ಕೆ ಸೇರಿದ್ದು, ಅದನ್ನು ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡಬೇಕು. ಆದರೆ ಅವರ ಮಗ ನನ್ನನ್ನು ಸ್ಟುಡಿಯೋಕೆ ಕರೆದುಕೊಂಡು ಹೋಗಿ ಅಲ್ಲೇ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
Loading...

ಇದೀಗ ಅಭಿರಾಮ್ ಹಾಗೂ ಇತರೆ ನಟರೊಂದಿಗೆ ಅವರು ಮಾಡಿರುವ ಅತ್ಯಂತ ಸೀಕ್ರೆಟ್ಸ್ ಚಾಟ್ಸ್​ಗಳ ಸ್ಕ್ರೀನ್ ಶಾಟ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅತ್ಯಂತ ಖಾಸಗಿ ವಿಚಾರಗಳ ಬಗ್ಗೆ ವಾಟ್ಸಾಪ್​ನಲ್ಲಿ ಚಾಟ್ ಮಾಡಿರುವುದನ್ನು ಶ್ರೀ ರೆಡ್ಡಿ ಸ್ಕ್ರೀನ್ ಶಾಟ್ ತೆಗೆದು ಬಹಿರಂಗ ಮಾಡಿದ್ದಾರೆ.ಇದರ ಬೆನ್ನಲ್ಲೇ ಇಂಡಿಯನ್​ ಐಡಲ್​ ಆಗಿರುವ ಶ್ರೀರಾಮ್​ ಜತೆ ನಡೆಸಿದ್ದಾರೆ ಎನ್ನಲಾದ ಚಾಟ್​ ಕೂಡಾ ಇದೇ ವೇಳೆ ಲೀಕ್​ ಆಗಿದೆ. ಈ ಎಲ್ಲಅ ಚಾಟ್​ಗಲು ಫೆಕ್​ ಎಂಬ ವದಂತಿ ಕೂಡಾ ಇದ್ದು ಯಾವುದು ನಿಜ ಯಾವುದು ಸುಳ್ಳು ಎಂಬುದು ಇನ್ನೂ ನಿರ್ಧಾರವಾಗಬೇಕಷ್ಟೆ.ಇನ್ನು ನಿರ್ಮಾಪಕ ಕೋನ ವೆಂಕಟ್​ ಹೆಸರು ಕುಡಾ ಲೀಕ್​ ಮಾಡಿದ ಶ್ರೀ, ಗೆಸ್ಟ್​ ಹೌಸ್​ನಲ್ಲಿ ತಮ್ಮ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತನಗಾಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಲು ನಟ ಪವನ್​ ಕಲ್ಯಾಣ್​ ಮಧ್ಯ ಪ್ರವೇಶಿಸಬೇಕು ಎಂದಿರುವ ಶ್ರೀ ರೆಡ್ಡಿ ಅವರಿಗೆ ಮಹಿಳಾ ಸಂಘಟನೆಗೂ ಬೆಂಬಲ ನೀಡಿವೆ.
First published:April 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ