Viral Video: ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲುಗಳು, ನಮಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ ಎಂದ ನೆಟ್ಟಿಗರು!

ಪ್ರಾಣಿ ಮತ್ತು ಮನುಷ್ಯನ ಸ್ನೇಹವನು ತೋರಿಸುವ ವಿಡಿಯೋಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಅದೇ ರೀತಿ ಜಾಗಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬನ ಹಿಂದೆ ಅನೇಕ ಅಳಿಲುಗಳು ಓಡುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕಿಂದರಿ ಜೋಗಿಯ ಬಳಿಯಾದರೂ ಇಲಿಗಳಿಗೆ ಮೋಡಿ ಮಾಡಲು ಕಿಂದರಿ ಇತ್ತು, ಈ ಪುಣ್ಯಾತ್ಮ ಅದ್ಹೇಗಪ್ಪಾ ಅಳಿಲುಗಳಿಗೆ ಮೋಡಿ ಮಾಡಿದ್ದಾನೆ ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲು ಸೇನೆ

ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲು ಸೇನೆ

  • Share this:
ಕಿಂದರಿ ಜೋಗಿಯ ಹಿಂದೆ ಓಡಿ ಬರುವ ಇಲಿಗಳ (Rat) ಕಥೆ ನಿಮಗೆಲ್ಲಾ ಗೊತ್ತೇ ಇದೆ. ಹಾಗೆಯೇ ಮನುಷ್ಯನ (Man) ಹಿಂದೆ ಅಳಿಲುಗಳು (Squirrel) ಸಾಲಾಗಿ ಓಡಿ ಬಂದರೆ ಹೇಗಿರುತ್ತದೆ? ಸಾಧ್ಯವೇ ಇಲ್ಲ, ಅಳಿಲುಗಳು ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ಓಡಿ ಹೋಗುತ್ತವೆ, ಹಾಗಿರುವಾಗ ಮನುಷ್ಯರ ಹಿಂದೆ ಓಡಿ ಬರುವುದು? ಅದು ಒಂದಲ್ಲ , ಎರಡಲ್ಲ ಹಲವಾರು ಅಳಿಲುಗಳು? ಅಸಾಧ್ಯ ಎನ್ನುತ್ತೀರಾ? ಆದರೆ ಮನುಷ್ಯರು ಮತ್ತು ಪ್ರಾಣಿಗಳ (Animals) ನಡುವಿನ ಒಡನಾಟದ ಬಗ್ಗೆ ಅಷ್ಟು ಸುಲಭವಾಗಿ ತೀರ್ಮಾನಕ್ಕೆ ಬರುವ ಹಾಗಿಲ್ಲ. ಅಳಿಲುಗಳ ಮಾತು ಹಾಗಿರಲಿ, ಎಷ್ಟೋ ಬಾರಿ ಹುಲಿ (Tiger) ಸಿಂಹಗಳು (Lion) ಕೂಡ ಮನುಷ್ಯರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಳ್ಳುವುದುಂಟು.

ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬರುವ ಅನೇಕ ವಿಡಿಯೋಗಳು ಅದಕ್ಕೆ ಸಾಕ್ಷಿ ಎಂಬಂತಿವೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸ್ನೇಹ ಸಂಬಂಧ ನೋಡುಗರಿಗೆ ಯಾವಾಗಲೂ ಖುಷಿ ನೀಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಅಂತಹ ವಿಡಿಯೋಗಳು ಕಂಡು ಬಂದರೆ, ಅದನ್ನು ನೋಡಿಯೇ ಮುಂದಿನ ಕೆಲಸದಲ್ಲಿ ತೊಡಗುವ ಪ್ರಾಣಿ ಪ್ರಿಯರು ಹಲವರಿದ್ದಾರೆ.

ಜಾಗಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬನ ಹಿಂದೆ ಅಳಿಲುಗಳು
ಪ್ರಾಣಿ ಮತ್ತು ಮನುಷ್ಯನ ಸ್ನೇಹವನು ತೋರಿಸುವ ವಿಡಿಯೋಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಅದೇ ರೀತಿ ಜಾಗಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬನ ಹಿಂದೆ ಅನೇಕ ಅಳಿಲುಗಳು ಓಡುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕಿಂದರಿ ಜೋಗಿಯ ಬಳಿಯಾದರೂ ಇಲಿಗಳಿಗೆ ಮೋಡಿ ಮಾಡಲು ಕಿಂದರಿ ಇತ್ತು, ಈ ಪುಣ್ಯಾತ್ಮ ಅದ್ಹೇಗಪ್ಪಾ ಅಳಿಲುಗಳಿಗೆ ಮೋಡಿ ಮಾಡಿದ್ದಾನೆ ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

 ಇದನ್ನೂ ಓದಿ:  Lion And Dog: ಕಾಡಿನಿಂದ ನಾಡಿಗೆ ಬಂದ ಸಿಂಹಕ್ಕೆ ನಾಯಿ ಬೆಸ್ಟ್​ಫ್ರೆಂಡ್, ಪ್ರಾಣಿಗಳ ಗೆಳೆತನ ನೋಡಿ ನೆಟ್ಟಿಗರು ಫಿದಾ

ಟ್ವಿಟ್ಟರ್ ಬಳಕೆದಾರ ಅಲಿಸೋನ್ ಕ್ಯಾಮರೋನ್ ಪೋಸ್ಟ್ ಮಾಡಿರುವ ಈ ವಿಡಿಯೋಗೆ “ತನ್ನ ಹಿಂದೆ ಒಣ ಬೀಜಗಳನ್ನು ಎಸೆಯುತ್ತಾ ಸಾಗುವ ಜಾಗರ್ ಅನ್ನು ಮತ್ತು ಅದನ್ನು ಗುರುತಿಸಿ, ಅಳಿಲುಗಳು ಆತನನ್ನು ಹಿಂಬಾಲಿಸುವ ದೃಶ್ಯವನ್ನು ಕೊನೆಗೂ ನಾನು ಸೆರೆ ಹಿಡಿದಿದ್ದೇನೆ” ಎಂದು ಅಡಿ ಬರಹವನ್ನು ಕೂಡ ನೀಡಿದ್ದಾರೆ.

ಇದು ಅತ್ಯಂತ ಕಡಿಮೆ ಅವಧಿಯ ವಿಡಿಯೋ ಆಗಿದ್ದರೂ, ನಿಮ್ಮ ಮನಸ್ಸನ್ನು ಗೆಲ್ಲುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. ಪಾರ್ಕ್ ಒಂದರಲ್ಲಿ ಜಾಗಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬನನ್ನು ಪುಟಾಣಿ ಅಳಿಲುಗಳು ಒಟ್ಟಾಗಿ ಹಿಂಬಾಲಿಸಿಕೊಂಡು ಹೋಗುವುದನ್ನು ಕಂಡಾಗ ನಿಜಕ್ಕೂ ಸೋಜಿಗವಾಗುತ್ತದೆ.

ಸೋಷಿಯಲ್ ಮೀಡಿಯಾದಲ್ಲಿಈ ವೈರಲ್ ಆದ ವಿಡಿಯೋ
ಈ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ದಿನದಿಂದ ಇದುವರೆಗೆ ಈ ವಿಡಿಯೋ, 8.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಈ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಜೊತೆಗೆ ಅದು 31,000 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಗಳಿಸಿದೆ ಕೂಡ. ಮನುಷ್ಯ ಮತ್ತು ಅಳಿಲುಗಳ ಒಡನಾಟದ ಅಪರೂಪದ ಈ ವಿಡಿಯೋಗೆ ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ.ಟ್ವಿಟ್ಟರ್ ನಲ್ಲಿ ಹರಿದುಬಂದ ಕಾಮೆಂಟ್ ಗಳು
“ಇದು ಅದ್ಭುತವಾಗಿದೆ. ಅವುಗಳು ಒಣ ಬೀಜಗಳ ಹಿಂದೆ ಬಿದ್ದಿದ್ದರೂ, ಆತನನ್ನು ಕೂಡ ಗುರುತಿಸುತ್ತವೆ ಎಂದು ನನಗೆ ಅನಿಸುತ್ತದೆ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ನೀಡಿರುವ ಪ್ರತಿಕ್ರಿಯೆಗೆ ಅಲಿಸೋನ್ ಕ್ಯಾಮರೋನ್ “ಅವುಗಳು ಅವನನ್ನು ಗುರುತಿಸುತ್ತವೆ, ಏಕೆಂದರೆ ಅಲ್ಲಿ ಹಲವಾರು ಜಾಗರ್‍ಗಳಿದ್ದರೂ ಅಳಿಲುಗಳು ಅವರೆಲ್ಲರನ್ನು ನಿರ್ಲಕ್ಷಿಸುತ್ತವೆ. ಈ ಮನುಷ್ಯ ಪ್ರತ್ಯಕ್ಷವಾದ ಕೂಡಲೇ ಅವುಗಳೆಲ್ಲವು ಹೊರ ಬರುತ್ತವೆ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:   Viral Video: ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಕುರ್ಚಿ ಮೇಲೆ ಮಲಗಿರುವುದು ಮನುಷ್ಯನಲ್ಲ! ಇದು ತುಂಟ ನಾಯಿಯ ದರ್ಬಾರ್

“ಹಾಂ, ನನಗೆ ನೆನಪಿದೆ, ನಾನು ಮತ್ತು ಅಮ್ಮ ಲಂಡನ್‍ಗೆ ಹೋಗಿದ್ದಾಗ, ಪಾರ್ಕ್ ಒಂದರ ಬೆಂಚ್ ಮೇಲೆ ಕುಳಿತು ಸ್ಯಾಂಡ್‍ವಿಚ್ ತಿನ್ನುತ್ತಿದ್ದೆವು. ಅಳಿಲುಗಳಿಗೆ ಸಣ್ಣ ತುಂಡುಗಳನ್ನು ಎಸೆಯುವ ಬದಲು, ನಾನು ಅವುಗಳನ್ನು ಅಮ್ಮನ ಶೂಗಳ ಒಳಗೆ ಹಾಕಿದ್ದೆ. ಹಾಗಾಗಿ ಅಳಿಲುಗಳು ಹತ್ತಿರ ಬಂದಿದ್ದವು” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಬರೆದುಕೊಂಡಿದ್ದಾರೆ. “ಸಾಧ್ಯವೇ ಇಲ್ಲ!!! ನನಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಅದು ನಿಜಕ್ಕೂ ಅದ್ಭುತವಾಗಿದೆ . . .ನನಗೆ ಇಷ್ಟವಾಯಿತು. ಜೀವನದಲ್ಲಿ ಲೆಕ್ಕಕ್ಕೆ ಬರುವ ಸರಳ ಸಂಗತಿಗಳು ಇವು” ಎಂದು ಇನ್ನೊಬ್ಬರು ಪ್ರಶಂಸಿಸಿದ್ದಾರೆ.
Published by:Ashwini Prabhu
First published: