ನಿಮ್ಮ ಜೀವನದಲ್ಲಿ ಮೊದಲ ಬಾರಿಗೆ ರುಚಿ (Taste) ನೀಡಿದ ಖಾದ್ಯದ ಅನುಭವ (Feel) ಹೇಗಿರುತ್ತೆ ಅನ್ನೋದನ್ನ ಪದಗಳಿಂದ ಹೇಳಲು ಸಾಧ್ಯವಿಲ್ಲ. ಆ ರುಚಿ ಸವಿದ ತಕ್ಷಣ ಉಂಟಾಗುವ ಅನಂದಕ್ಕೆ (Happy) ಒಂದು ಕ್ಷಣ ನಿಮ್ಮನ್ನ ನೀವೇ ಮೈ ಮರೆಯುತ್ತೀರಿ. ಈ ಕ್ಷಣದಲ್ಲಿ ಮತ್ತೆ ಮತ್ತೆ ಆ ಖಾದ್ಯವನ್ನು (Food) ಸವಿಬೇಕು ಅಂತ ಮನಸ್ಸು ಹೇಳುತ್ತಿರುತ್ತದೆ. ಇತ್ತೀಚೆಗೆ ಅಳಿಲು (Squirrel) ಬಾದಾಮಿ (Almonds) ತಿನ್ನುವ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ಈ ಅಳಿಲು ಮೊದಲ ಬಾರಿಗೆ ಬಾದಾಮಿಯ ರುಚಿಯನ್ನು ನೋಡಿದೆ.
@buitengebieden ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಅದ್ಭುತವಾದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಅಳಿಲು ಮೊದಲ ಬಾರಿಗೆ ಬಾದಾಮಿ ತಿನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಬಾದಾಮಿ ರುಚಿ ನೋಡಿದ ಅಳಿಲು
ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೈಯಲ್ಲಿ ಸಾಕಷ್ಟು ಬಾದಾಮಿಯನ್ನು ಹಿಡಿದು ಅಳಿಲಿನ ಮುಂದೆ ಇಟ್ಟಿದ್ದಾರೆ. ಅಳಿಲು ಬಾದಾಮಿಯನ್ನು ಎತ್ತಿಕೊಂಡು ನಿಧಾನವಾಗಿ ತಿನ್ನುತ್ತದೆ, ಅದು ತಿಂದ ತಕ್ಷಣ ಅದರ ರುಚಿಯನ್ನು ನೀಡುತ್ತದೆ. ನಂತರ ಕೆಲವೇ ಕ್ಷಣಗಳಲ್ಲಿ ಎಲ್ಲ ಬಾದಾಮಿಯನ್ನು ತಿನ್ನಲು ಪ್ರಾರಂಭಿಸುತ್ತದೆ
ಇದನ್ನೂ ಓದಿ: Viral News: 16 ವರ್ಷದ ಬಳಿಕ ಮದುವೆ ಗೌನ್ ಗೆ ಬೆಂಕಿ ಇಟ್ಟ ಮಹಿಳೆ: ಕಾರಣ ಕೇಳಿದ ಬಳಿಕ ಜನರ ಪ್ರತಿಕ್ರಿಯೆ ಹೀಗಿತ್ತು
ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಗಳಲ್ಲಿ, ಇವು ಬಾದಾಮಿ ತಿನ್ನುವ ಚಿಪ್‌ಮಂಕ್ ಗಳು, ಅಳಿಲುಗಳಲ್ಲ ಎಂದು ಹೇಳಿದ್ದಾರೆ. ಇವುಗಳು ಅಳಿಲುಗಳ ಜಾತಿಗೆ ಸೇರಿವೆ. ಟ್ವಿಟ್ಟರ್ ನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
20 ಲಕ್ಷಕ್ಕೂ ಅಧಿಕ ವ್ಯೂವ್
ಈ ವಿಡಿಯೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಅಳಿಲುಗಳಿಗೆ ಬಾದಾಮಿಯನ್ನು ಎಂದಿಗೂ ನೀಡಬಾರದು ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ ಏಕೆಂದರೆ ಅವುಗಳು ಹೈಡ್ರೋಸಯಾನಿಕ್ ಆಮ್ಲವನ್ನು ಹೊಂದಿರುತ್ತವೆ. ಅದು ಅವುಗಳನ್ನು ಅನಾರೋಗ್ಯಕ್ಕೆ ಕಾರಣವಾಗಬಹುದು. ಒಬ್ಬ ವ್ಯಕ್ತಿಯು ವೀಡಿಯೊದ ವಿಶ್ವಾಸಾರ್ಹತೆಯನ್ನು ಸಹ ಪ್ರಶ್ನಿಸಿದ್ದಾರೆ.
Squirrel tastes almonds for the first time.. 😅 pic.twitter.com/MLmOxaGdsl
— Buitengebieden (@buitengebieden) April 30, 2022
ಇದನ್ನೂ ಓದಿ: Bike Stunt: ಚಲಿಸುತ್ತಿರುವ ಬೈಕ್ ಮೇಲೆ ಅಜ್ಜನ ಡೇಂಜರಸ್ ಸ್ಟಂಟ್! "ಇದೇನು ಶೋಕಿ ಬಂತು ನಿಂಗೂ" ಎಂದ್ರು ವಿಡಿಯೋ ನೋಡಿದ ಜನ
ಮನೆಯಲ್ಲಿ ಮೀನಿನ ಅಡುಗೆ ಮಾಡಿದ್ರೆ ಅದರ ಪರಿಮಳ ಎಲ್ಲೆಡೆ ಪಸರಿಸುತ್ತದೆ. ಈ ಪರಿಮಳ ಅರಸಿ ಗಲ್ಲಿಗಳಲ್ಲಿರೋ ಬೆಕ್ಕುಗಳು ಮನೆಗೆ ಬರುತ್ತವೆ. ಆದ್ರೆ ಕೆಲದಿನಗಳಿಂದ ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.
ಮೀನು ನೋಡಿದ್ರೆ ವಾಂತಿ
ಈ ಬೆಕ್ಕಿನ ವಿಡಿಯೋ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಶೇರ್ ಆಗುತ್ತಿದೆ. ಈ ಸಾಕು ಬೆಕ್ಕು ತನ್ನ ಮಾಲೀಕರ ವರ್ತನೆಗಳಿಂದ ಬೇಸರಗೊಂಡಂತೆ ಕಾಣುತ್ತಿದೆ. ಪದೇ ಪದೇ ಮೀನು ತೆಗೆದುಕೊಂಡು ಹೋಗಿ ಬೆಕ್ಕಿನ ಮುಂದೆ ಇರಿಸಲಾಗುತ್ತಿದೆ. ಅದೇಕೇ ಏನೋ ಗೊತ್ತಿಲ್ಲ. ಈ ಬೆಕ್ಕು ಮಾತ್ರ ಮೀನು ನೋಡಿದರೆ ವಾಂತಿ ಬರುವ ರೀತಿಯಲ್ಲಿ ಬಾಯಿಯನ್ನು ತೆಗೆಯುತ್ತದೆ.
ಈ ಬೂದು ಬೆಕ್ಕಿನ ವಿಡಿಯೋಗಳ ಮೂಲಕ ಮಹಿಳೆ ಕೂಡ ಫೇಮಸ್ ಆಗಿದ್ದಾಳೆ. ಬೆಕ್ಕಿಗೆ ಸ್ನಾನ ಮಾಡುವುದರಿಂದ ಹಿಡಿದು ಆರೈಕೆ ಮಾಡುವವರೆಗೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೆ, ಮಹಿಳೆ ತನ್ನ ಬೆಕ್ಕಿಗೆ ಬಣ್ಣಬಣ್ಣದ ಬಟ್ಟೆಗಳನ್ನು ಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ