news18-kannada Updated:December 29, 2020, 2:09 PM IST
ವೈರಲ್ ಆದ ಫೋಟೋ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾರಿ ಚಾಲೆಂಜ್ ತುಂಬಾನೇ ವೈರಲ್ ಆಗಿತ್ತು. ಇನ್ನು, ಕೆಲವರು ನಮ್ಮ ಬಗ್ಗೆ ಏನನ್ನಿಸುತ್ತದೆ ಅನ್ನೋದನ್ನು ಸೀಕ್ರೆಟ್ ಆಗಿ ಹೇಳುವ ಟಾಸ್ಕ್ ಕೂಡ ನೀಡಿದ್ದರು. ಈ ಎಲ್ಲ ಚಾಲೆಂಜ್ಗಳನ್ನು ಪೂರ್ಣಗೊಳಿಸೋದು ತುಂಬಾನೇ ಸುಲಭ ಎನ್ನಿ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚಾಲೆಂಜ್ ಆರಂಭವಾಗಿದ್ದು, ಇದು ಅನೇಕರ ತಲೆಗೆ ಹುಳಬಿಟ್ಟಂತಾಗಿದೆ.
ಹೌದು, ಟ್ವಿಟ್ಟರ್ನಲ್ಲಿ ಮಹಿಳೆ ಓರ್ವಳು ಗಾರ್ಡನ್ ಚಿತ್ರ ಹಾಕಿದ್ದಾರೆ. ಈ ಚಿತ್ರದಲ್ಲಿ ಪಗ್ ನಾಯಿಯೊಂದಿದ್ದು, ಅದನ್ನು ಗುರುತಿಸುವಂತೆ ಸೂಚಿಸಿದ್ದಾರೆ! ಅಷ್ಟೇ ಅಲ್ಲ ಪಗ್ ಗಂಡ ತಕ್ಷಣ ಯಾರೂ ಅದನ್ನು ಪೋಸ್ಟ್ ಮಾಡಬೇಡಿ. ಬದಲಿಗೆ, ನನ್ನ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿ ಎಂದು ಕೋರಿದ್ದರು. ಪಗ್ ನಾಯಿ ಕಂಡು ಹಿಡಿಯುವ ಚಾಲೆಂಜ್ ತುಂಬಾನೇ ವೈರಲ್ ಆಗಿದೆ. ಈ ಟ್ವೀಟ್ ಲಕ್ಷಾಂತರ ಬಾರಿ ರಿಟ್ವೀಟ್ ಕೂಡ ಆಗಿದೆ.
120 ಹೆಂಡತಿಯರಿಗೆ ಒಬ್ಬನೇ ಗಂಡ, 203 ಮಕ್ಕಳಿಗೆ ಒಬ್ಬನೇ ತಂದೆ!
ಅನೇಕರು ಪಗ್ ನಾಯಿ ಕಂಡು ಹಿಡಿಯಲಾಗದೆ ಸೋತಿದ್ದಾರೆ. ಅಷ್ಟೇ ಅಲ್ಲ, ಬಹುದುಶಃ ಈ ಫೋಟೋ ಕ್ಲಿಕ್ ಮಾಡಿದ್ದ ಪಗ್ ಇರಬಹುದು. ಹೀಗಾಗಿ ನಾಯಿ ಕಾಣುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಸುದ್ದಿ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Published by:
Vinay Bhat
First published:
December 29, 2020, 2:09 PM IST