• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Optical Illusion: ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ! ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!

Optical Illusion: ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ! ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!

ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ!

ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ!

ಏನಿದು ಆಪ್ಟಿಕಲ್ ಇಲ್ಯೂಷನ್ ಅಂತ ಅನೇಕರ ತಲೆಯಲ್ಲಿ ಪ್ರಶ್ನೆ ಮೂಡಬಹುದು. ಈ ಚಿತ್ರಗಳಲ್ಲಿ ಇನ್ನೊಂದು ಚಿತ್ರ ಅಡಗಿರುತ್ತದೆ ಮತ್ತು ಅದು ನೋಡಿದ ತಕ್ಷಣ ನಮಗೆ ಕಾಣಿಸುವುದಿಲ್ಲ.

  • Trending Desk
  • 2-MIN READ
  • Last Updated :
  • Share this:

ಸಾಮಾನ್ಯವಾಗಿ ನಾವು ಯಾವಾಗಾದರೂ ಯಾವುದಾದರೊಂದು ಹಗ್ಗವನ್ನು ಕತ್ತಲಲ್ಲಿ ನೋಡಿ ಅದನ್ನು ಹಾವು (Snake) ಅಂತ ಅಂದುಕೊಂಡಿರುತ್ತೇವೆ, ಇದನ್ನೇ ನೋಡಿ ಮನ:ಶಾಸ್ತ್ರದಲ್ಲಿ (Psychology) ಭ್ರಮೆ (illusion) ಅಂತ ಹೇಳೋದು. ಆದರೆ ಈಗೆಲ್ಲಾ ಈ ರೀತಿಯ ಭ್ರಮೆಗಳ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಬಂದಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈ ಸಾಮಾನ್ಯವಾದ ಇಲ್ಯೂಷನ್ (ಭ್ರಮೆ) ಈಗ ಆಪ್ಟಿಕಲ್ ಇಲ್ಯೂಷನ್ (Optical Illusion) ಆಗಿ ಬದಲಾಗಿದೆ ಅಥವಾ ಅದರ ಸ್ಥಾನವನ್ನು ತೆಗೆದುಕೊಂಡಿದೆ ಅಂತ ಹೇಳಬಹುದು. ಹೌದು.. ಇತ್ತೀಚೆಗೆ ಈ ಆಪ್ಟಿಕಲ್ ಭ್ರಮೆಗಳ ಚಿತ್ರಗಳು ವ್ಯಕ್ತಿಯ ದೃಶ್ಯ ಶಕ್ತಿ ಎಷ್ಟರ ಮಟ್ಟಿಗೆ ಇದೆ ಅಂತ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಅಂತ ಹೇಳಬಹುದು. ಇವುಗಳು ಪರಿಹರಿಸಲು ರೋಮಾಂಚನಕಾರಿಯಾದ ಕ್ಲಿಷ್ಟಕರ ಸವಾಲುಗಳಾಗಿವೆ.


ಏನಿದು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು?


ಏನಿದು ಆಪ್ಟಿಕಲ್ ಇಲ್ಯೂಷನ್ ಅಂತ ಅನೇಕರ ತಲೆಯಲ್ಲಿ ಪ್ರಶ್ನೆ ಮೂಡಬಹುದು. ಈ ಚಿತ್ರಗಳಲ್ಲಿ ಇನ್ನೊಂದು ಚಿತ್ರ ಅಡಗಿರುತ್ತದೆ ಮತ್ತು ಅದು ನೋಡಿದ ತಕ್ಷಣ ನಮಗೆ ಕಾಣಿಸುವುದಿಲ್ಲ ಅಥವಾ ಅರ್ಥವಾಗುವುದಿಲ್ಲ ಅಂತ ಹೇಳಬಹುದು. ಯಾರಾದರೂ ಆ ಚಿತ್ರದಲ್ಲಿ ಇದನ್ನು ಹುಡುಕು ಅಂತ ಹೇಳಿದಾಗ ನಮ್ಮ ಬುದ್ದಿಶಕ್ತಿ ಜಾಗೃತವಾಗಿ ಅದನ್ನು ಹುಡುಕಲು ಶುರು ಮಾಡುತ್ತೇವೆ. ಆದರೂ ಎಷ್ಟೂ ಜನರಿಗೆ ಆ ಚಿತ್ರವನ್ನು ಹುಡುಕಲು ಸಾಧ್ಯವೇ ಆಗುವುದಿಲ್ಲ.


ಇಲ್ಲಿಯೂ ಸಹ ಅಂತಹದೇ ಒಂದು ಚಿತ್ರ ಇದೆ ನೋಡಿ.. ಅದನ್ನು ನೋಡಿ ನೀವು 10 ಸೆಕೆಂಡುಗಳಲ್ಲಿ ಅದರಲ್ಲಿ ಅಡಗಿರುವ ಪ್ರಾಣಿಯ ಚಿತ್ರವನ್ನು ಹುಡುಕಲು ಸಾಧ್ಯವಾಗುತ್ತದೆಯೇ ಅಂತ ನೋಡಿ.


ಈ ಚಿತ್ರದಲ್ಲಿದೆ ಒಂದು ಪ್ರಾಣಿ


ಈ ವೈರಲ್ ಚಿತ್ರದಲ್ಲಿ ಪ್ರಾಣಿಯನ್ನು ಹುಡುಕಿ!


ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ, ಕೆಲವು ಕ್ರಾಸ್-ಕ್ರಾಸ್ ಮಾದರಿಗಳನ್ನು ತಯಾರಿಸಲಾಗಿದೆ ಮತ್ತು ವಿವಿಧ ಬಣ್ಣಗಳಿಂದ ತುಂಬಲಾಗಿದೆ. ಚಿತ್ರದಲ್ಲಿರುವ ಸುಂದರವಾದ ಬಣ್ಣಗಳಲ್ಲಿ ನಿಮ್ಮ ಕಣ್ಣುಗಳು ಸ್ವಲ್ಪ ಮಟ್ಟಿಗೆ ತಿರುಗಿದಂತೆ ಭಾಸವಾಗಬಹುದು. ಆದರೆ ಅದರ ಹಿಂದೆ ಕುಳಿತಿರುವ ಪ್ರಾಣಿಯನ್ನು ಕಂಡು ಹಿಡಿಯುವುದು ಇಲ್ಲಿ ಒಂದು ಸವಾಲಾಗಿದೆ.


ನೀವು ಅದನ್ನು ನಿಗದಿತ ಅವಧಿಯೊಳಗೆ ಪರಿಹರಿಸಿದರೆ ನಿಮ್ಮ ಬುದ್ದಿವಂತಿಕೆ ಮಟ್ಟ ಎಂದರೆ ಐಕ್ಯೂ ಮಟ್ಟ ಚೆನ್ನಾಗಿದೆ ಅಂತ ಅರ್ಥ. ಆದರೆ ನೀವು ಆ ಪ್ರಾಣಿಯ ಚಿತ್ರ ಕಂಡುಕೊಳ್ಳುವಲ್ಲಿ ವಿಫಲರಾದರೆ, ನೀವು ಇದೇ ರೀತಿಯ ಒಗಟುಗಳನ್ನು ಪರಿಹರಿಸುವ ಮೂಲಕ ನಿಮ್ಮ ಕಣ್ಣುಗಳು ಮತ್ತು ಮನಸ್ಸನ್ನು ಇನ್ನಷ್ಟು ತೀಕ್ಷ್ಣಗೊಳಿಸಿಕೊಳ್ಳಬಹುದು.


ಇದನ್ನೂ ಓದಿ: ವಿಮಾನದಲ್ಲಿ ಮಗು ಹುಟ್ಟಿದ್ರೆ ಲೈಫ್​ ಟೈಮ್​ ಫ್ರೀಯಾಗಿ ಪ್ರಯಾಣಿಸಬಹುದಾ? ಇಲ್ಲಿದೆ ಕಂಪ್ಲೀಟ್​​ ಡೀಟೇಲ್ಸ್


ಅನೇಕ ಜನರು ಚಿತ್ರದಲ್ಲಿರುವ ಪ್ರಾಣಿಯ ನೆರಳನ್ನು ಗುರುತಿಸುತ್ತಾರೆ!


ಮೊದಲಿಗೆ ಪ್ರಾಣಿಯ ನೆರಳನ್ನು ಕಂಡು ಹಿಡಿದು ಅದು ಯಾವ ಪ್ರಾಣಿ ಎಂದು ಅವರು ಗುರುತಿಸಿರಬೇಕು. ಇನ್ನೂ ಕೆಲವರಿಗೆ ಆ ಪ್ರಾಣಿಯ ನೆರಳು ಕಾಣದೆ ಇದ್ದರೆ, ಅವರು ಆ ಪ್ರಾಣಿಯ ನೆರಳನ್ನು ಚಿತ್ರದ ಎಡಭಾಗದಲ್ಲಿ ನೋಡಬಹುದು. ಈ ಚಿತ್ರದಲ್ಲಿ ಹೈಲೈಟ್ ಮಾಡಿ ತೋರಿಸಿರುವ ಆ ಪ್ರಾಣಿಯ ನೆರಳು ಕರಡಿಯದ್ದಾಗಿದೆ.


ಕರಡಿ ನೆರಳು ಇರುವ ಚಿತ್ರ


ಆಪ್ಟಿಕಲ್ ಭ್ರಮೆಯ ಚಿತ್ರಗಳು ಒಬ್ಬರ ಗಮನಿಸುವ ಮತ್ತು ವಿಮರ್ಶಾತ್ಮಕವಾಗಿ ಯೋಚಿಸುವ ಸಾಮರ್ಥ್ಯವನ್ನು ಪರೀಕ್ಷಿಸುವ ಅತ್ಯಂತ ಮೂಲಭೂತ ಮಾರ್ಗಗಳಲ್ಲಿ ಒಂದಾಗಿದೆ. ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇದು ಅತ್ಯುತ್ತಮ ಮಾರ್ಗವಾಗಿದ್ದರೂ, ಮೆನ್ಸಾ ಐಕ್ಯೂ ಚಾಲೆಂಜ್ ನಂತಹ ಸುಧಾರಿತ ವಿಧಾನಗಳು ಐಕ್ಯೂ ಮಟ್ಟವನ್ನು ಸರಿಯಾಗಿ ಪರಿಶೀಲಿಸಲು ನಿಮಗೆ ಸಹಾಯ ಮಾಡುತ್ತದೆ. ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಪರಿಹರಿಸುವ ಏಕೈಕ ಮಂತ್ರ ಎಂದರೆ ಅದು ಚಿತ್ರವನ್ನು ಮೊದಲಿಗೆ ಬಹಳ ಎಚ್ಚರಿಕೆಯಿಂದ ಗಮನಿಸುವುದು.


ಅಂತಹ ಚಿತ್ರಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ ಮತ್ತು ನಾವು ಯಾವ ರೀತಿಯ ಟ್ರಿಕ್ ಗಳನ್ನು ಬಳಸುತ್ತೇವೆ ಎನ್ನುವುದು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ.

Published by:ವಾಸುದೇವ್ ಎಂ
First published: