Astronomers: ಆಸ್ಟ್ರೇಲಿಯಾದಲ್ಲಿ ತಿರುಗುವ ವಸ್ತು ನೋಡಿದ ಜನರಿಗೆ ಟೆನ್ಷನ್, ಏಲಿಯನ್ ಅಂತಿದ್ದಾರೆ ಹಲವರು!

ಆಸ್ಟ್ರೇಲಿಯಾ ಸಂಶೋಧಕರ ಕಣ್ಣಿಗೆ ಮಿಲ್ಕಿ ವೇಯಲ್ಲಿ ತಿರುಗುವ ವಸ್ತುವೊಂದು ಬಿದ್ದಿದ್ದು, ಅಂತಹ ವಸ್ತುವನ್ನು ಈವರೆಗೆ ಯಾವುದೇ ಅಂತರಿಕ್ಷ ಯಾನಿಗಳು ಕಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
1990ರ ದಶಕದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ (Space Sector) ಹೆಚ್ಚು ಚರ್ಚೆಗೀಡಾಗಿದ್ದು ಹಾರುವ ತಟ್ಟೆಗಳು. ಹಲವಾರು ಪೈಲಟ್‍ಗಳು, ಕೆಲವು ರೈತರು ತಾವು ಹಾರುವ ತಟ್ಟೆಯನ್ನು ಕಂಡಿರುವುದಾಗಿ ಹೇಳಿಕೊಂಡಿದ್ದರೂ, ಅದಿನ್ನೂ ವೈಜ್ಞಾನಿಕ  ಸಂಶೋಧನೆಗಳಲ್ಲಿ (Scientific Research) ದೃಢಪಟ್ಟಿಲ್ಲ. ಹಾಗೆಯೇ ಆಕಾಶದಲ್ಲಿ(Aircraft Flying) ಹಾರುತ್ತಿದ್ದ ಹಲವಾರು ವಿಮಾನಗಳು ಸುಳಿವನ್ನೂ ನೀಡದೆ ನಾಪತ್ತೆಯಾಗಿದ್ದರೂ, ಈ ನಿಗೂಢ (Mysterious Cases) ನಾಪತ್ತೆ ಪ್ರಕರಣಗಳನ್ನು ಭೇದಿಸಲು ಯಾವುದೇ ವೈಜ್ಞಾನಿಕ ಸಂಶೋಧನೆಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಹಾರುವ ತಟ್ಟೆ ಈಗಲೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರದ ಪಾಲಿಗೆ ಬಿಡಿಸಲಾಗದ ಒಗಟಾಗಿಯೇ ಉಳಿದಿದ್ದು, ಹಲವರ ಪಾಲಿಗೆ ದಂತಕತೆಯಾಗಿಯೂ ಬದಲಾಗಿದೆ.

ಮಿಲ್ಕಿ ವೇ ಪತ್ತೆ
ಈ ನಡುವೆ ಆಸ್ಟ್ರೇಲಿಯಾ ಸಂಶೋಧಕರ ಕಣ್ಣಿಗೆ ಮಿಲ್ಕಿ ವೇಯಲ್ಲಿ ತಿರುಗುವ ವಸ್ತುವೊಂದು ಬಿದ್ದಿದ್ದು, ಅಂತಹ ವಸ್ತುವನ್ನು ಈವರೆಗೆ ಯಾವುದೇ ಅಂತರಿಕ್ಷ ಯಾನಿಗಳು ಕಂಡಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಪದವಿಪೂರ್ವ ಪ್ರಬಂಧ ಮಂಡನೆಯ ತಯಾರಿಯಲ್ಲಿದ್ದ ವಿಶ್ವವಿದ್ಯಾಲಯ ವಿದ್ಯಾರ್ಥಿಯೊಬ್ಬನ ಗಮನಕ್ಕೆ ಈ ವಸ್ತು ಬಂದಿದ್ದು, ಪ್ರತಿ ಗಂಟೆಗೆ ಮೂರು ಬಾರಿ ಭಾರಿ ಪ್ರಮಾಣದ ರೇಡಿಯೋ ತರಂಗವನ್ನು ಸ್ಫೋಟಿಸಿರುವುದು ಅನುಭವಕ್ಕೆ ಬಂದಿದೆ.

ವಿದ್ಯಾರ್ಥಿಯು ಈ ಆವಿಷ್ಕಾರವನ್ನು ತಮ್ಮ ಗಮನಕ್ಕೆ ತಂದ ನಂತರ ಅಂತರಿಕ್ಷ ಭೌತಿಕ ತಜ್ಞ ನತಾಶಾ ಹರ್ಲಿ-ವಾಕರ್ ಅವರು ಮುರ್ಷಿಸನ್ ವೈಡ್‍ಫೀಲ್ಡ್‍ ಅರ್ರೆ ಎಂದು ಕರೆಸಿಕೊಳ್ಳುವ ಪೂರ್ವ ಆಸ್ಟ್ರೇಲಿಯಾದ ಹಿಂತೀರದತ್ತ ಟೆಲಿಸ್ಕೋಪ್ ಹಿಡಿದು ತನಿಖೆ ನಡೆಸಿದ್ದಾರೆ. ಆಗ ಪ್ರತಿ 18.18 ನಿಮಿಷಕ್ಕೆ ಈ ತರಂಗವು ಗಡಿಯಾರದಂತೆ ಕಾರ್ಯನಿರ್ವಹಿಸುವುದು ಕಂಡು ಬಂದಿದೆ.

ಇದನ್ನೂ ಓದಿ: NASA: ಏಲಿಯನ್‌ಗಳನ್ನು ಎದುರಿಸಲು ಮನುಷ್ಯರನ್ನು ರೆಡಿ ಮಾಡೋಕೆ ಅರ್ಚಕರನ್ನು ನೇಮಿಸಿದ ನಾಸಾ

ಭೂತದಂತೆ ಕಂಡ ವಸ್ತು
ಬ್ರಹ್ಮಾಂಡದಲ್ಲಿರುವ ಪಲ್ಸರ್‌ನಂತಹ ಇತರೆ ವಸ್ತುಗಳೂ ಮೇಲಿನಂತೆಯೇ ಕಾರ್ಯಾಚರಣೆ ಶುರು ಮಾಡುವುದು ಹಾಗೂ ಸ್ಥಗಿತಗೊಳಿಸುವುದು ಮಾಡುತ್ತವೆ. ಆದರೆ, ಪ್ರತಿ 18.18 ನಿಮಿಷಕ್ಕೆ ತರಂಗ ಹೊಮ್ಮಿಸುವ ವಸ್ತುವನ್ನು ತಾನು ಈವರೆಗೆ ಗಮನಿಸಿಯೇ ಇಲ್ಲ ಎನ್ನುತ್ತಾರೆ ಹರ್ಲಿ-ವಾಕರ್. ಅಂತರಿಕ್ಷ ಯಾನಿಗಳ ಪಾಲಿಗೆ ಈ ವಸ್ತು ಭೂತದಂತೆ ಕಾಣಿಸುತ್ತಿದೆ” ಎಂದು ಹೇಳಿರುವ ಹರ್ಲಿ-ವಾಕರ್, “ಯಾಕೆಂದರೆ, ಅಂತರಿಕ್ಷದಲ್ಲಿ ಈ ರೀತಿ ವರ್ತಿಸುವ ಯಾವುದೇ ವಸ್ತುಗಳು ಕಂಡು ಬಂದಿಲ್ಲ” ಎಂದು ಹೇಳಿದ್ದಾರೆ.

ಇದೀಗ ಸಂಶೋಧಕರ ತಂಡವು ತಾವು ಏನನ್ನು ಪತ್ತೆ ಹಚ್ಚಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅಧ್ಯಯನಕ್ಕೆ ಮುಂದಾಗಿದೆ. ಈ ಹಿಂದಿನ ವರ್ಷಗಳ ದತ್ತಾಂಶವನ್ನು ಮರುಪರಿಶೀಲಿಸಿದಾಗ ಕೆಲವು ಅಂಶಗಳು ದೃಢಪಟ್ಟಿವೆ: ಭೂಮಿಯಿಂದ ನಾಲ್ಕು ಸಾವಿರ ಜ್ಯೋತಿರ್‌ ವರ್ಷದಷ್ಟು ದೂರವಿರುವ ವಸ್ತು ಅತ್ಯಂತ ಪ್ರಕಾಶಮಾನವಾಗಿರುತ್ತದೆ ಮತ್ತು ಅತ್ಯಂತ ಬಲಿಷ್ಠ ಅಯಸ್ಕಾಂತೀಯ ಬಯಲನ್ನು ಹೊಂದಿರುತ್ತದೆ.

ಶ್ವೇತ ಕ್ಷುದ್ರ ಗ್ರಹ
ಹೀಗಿದ್ದೂ ಹಲವಾರು ನಿಗೂಢಗಳನ್ನು ಇನ್ನೂ ಭೇದಿಸಬೇಕಿದೆ. ನೀವು ಎಲ್ಲ ಬಗೆಯ ಲೆಕ್ಕಾಚಾರಗಳನ್ನು ಮಾಡಿದರೂ, ಅವುಗಳಿಗೆ ಪ್ರತಿ 20 ನಿಮಿಷಕ್ಕೊಮ್ಮೆ ಈ ಬಗೆಯ ರೇಡಿಯೋ ತರಂಗಗಳನ್ನು ಹೊಮ್ಮಿಸುವ ಇಂಧನವಿರುವುದಿಲ್ಲ” ಎನ್ನುತ್ತಾರೆ ಹರ್ಲಿ-ವಾಕರ್. ಇದು ಖಂಡಿತ ಸಾಧ್ಯವಿಲ್ಲ”. ಸಂಶೋಧಕರು ವ್ಯಾಖ್ಯಾನಿಸುವಂತಹ ವಸ್ತು ಇರಬಹುದಾದರೂ, “ಅತಿ ವಿಸ್ತಾರ ಅವಧಿಯ ಅಯಸ್ಕಾಂತೀಯ ವಸ್ತವನ್ನು ಅವರು ಈವರೆಗೆ ಕಂಡಿದ್ದೇ ಇಲ್ಲ. ಆ ವಸ್ತು ನಾಶಗೊಂಡಿರುವ ನಕ್ಷತ್ರದಿಂದ ಹೊರ ಚಿಮ್ಮಿರುವ ಶ್ವೇತ ಕ್ಷುದ್ರ ಗ್ರಹವೂ ಆಗಿರಬಹುದು.

ಇದನ್ನೂ ಓದಿ: ಅಪರೂಪದ ರೇಡಿಯೊ ಸ್ಟಾರ್ಸ್ ಪತ್ತೆಹಚ್ಚಿದ ಅಸ್ಸಾಂನ ಬರ್ನಾಲಿ ದಾಸ್; ಏನಿದು ರೇಡಿಯೋ ಸ್ಟಾರ್

ಏಲಿಯನ್ ಎಂದು ಪರಿಗಣನೆ
ಆದರೆ, ಅದು ಅಸಹಜ ಸಂಗತಿ ಕೂಡಾ. ನಾವು ಶ್ವೇತ ಕ್ಷುದ್ರಗ್ರಹದ ಬಗ್ಗೆ ತಿಳಿದಿದ್ದೇವಾದರೂ, ಅದು ಇದರಷ್ಟು ಪ್ರಭಾವಶಾಲಿಯಾಗಿರಲಿಲ್ಲ” ಎನ್ನುತ್ತಾರೆ ಹರ್ಲಿ-ವಾಕರ್. ಖಂಡಿತ, ಇದು ನಾವು ಈವರೆಗೆ ಊಹಿಸಿರದ ವಸ್ತುವಾಗಿರಬಹುದು. ಇದು ಸಂಪೂರ್ಣವಾಗಿ ಹೊಸ ರೂಪದ ವಸ್ತುವೇ ಆಗಿರಬಹುದು. ಬಾಹ್ಯಾಕಾಶದಿಂದ ಹೊಮ್ಮುತ್ತಿರುವ ಇಂತಹ ಬಲಿಷ್ಠ ಹಾಗೂ ಸ್ಥಿರ ರೇಡಿಯೋ ತರಂಗಗಳು ಬೇರೆ ಗ್ರಹದ ಜೀವಿಗಳಿಂದ ಆಗಿರಬಹುದುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರ್ಲಿ-ವಾಕರ್, “ಅದನ್ನು ಏಲಿಯನ್ ಎಂದೇ ಪರಿಗಣಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಆದರೆ, ಸಂಶೋಧಕರ ತಂಡವು ವಿಸ್ತಾರ ವಲಯದ ತರಂಗಾಂತರಗಳನ್ನು ಈ ರೇಡಿಯೋ ತರಂಗಗಳು ಹೊಮ್ಮಿಸುತ್ತಿರುವುದನ್ನು ಗಮನಿಸಿದ್ದಾರೆ. ಇದರರ್ಥ ಈ ಕ್ರಿಯೆಯು ನೈಸರ್ಗಿಕವಾದುದೇ ಹೊರತು ಕೃತಕ ತರಂಗಗಳಲ್ಲ” ಎಂದು ಅಭಿಪ್ರಾಯ ಪಡುತ್ತಾರೆ ಹರ್ಲಿ-ವಾಕರ್.
Published by:vanithasanjevani vanithasanjevani
First published: