ಅದ್ಧೂರಿ ರಾಷ್ಟ್ರೀಯ ದಿನ ಆಚರಿಸಿ ಗಿನ್ನೆಸ್ ದಾಖಲೆ ಬರೆದ ಸೌದಿ ಅರೇಬಿಯಾ

news18
Updated:September 24, 2018, 3:37 PM IST
ಅದ್ಧೂರಿ ರಾಷ್ಟ್ರೀಯ ದಿನ ಆಚರಿಸಿ ಗಿನ್ನೆಸ್ ದಾಖಲೆ ಬರೆದ ಸೌದಿ ಅರೇಬಿಯಾ
news18
Updated: September 24, 2018, 3:37 PM IST
-ನ್ಯೂಸ್ 18 ಕನ್ನಡ

ಸೌದಿ ಅರೇಬಿಯಾ ದೇಶವು 88ನೇ ರಾಷ್ಟ್ರೀಯ ದಿನವನ್ನು ಭಾನುವಾರ(ಸೆ.23) ಆಚರಿಸಿತು. ಈ ಬಾರಿಯ ರಾಷ್ಟ್ರೀಯ ದಿನವನ್ನು ಅದ್ಧೂರಿಯಾಗಿ ಆಚರಿಸಿದ ಸೌದಿ ಸರ್ಕಾರ ತನ್ನ ವಿಜೃಂಭನೆಯಿಂದಲೇ ವಿಶ್ವ ದಾಖಲೆ ನಿರ್ಮಿಸಿದೆ. ಈ ದಿನದ ಪ್ರಯುಕ್ತ ಪ್ರಮುಖ ನಗರಗಳ ಬಾನಂಗಳದಲ್ಲಿ ಪಟಾಕಿಗಳ ಮೂಲಕ ಚಿತ್ತಾರ ಮೂಡಿಸಿದ್ದು ವಿಶೇಷವಾಗಿತ್ತು. 9 ಲಕ್ಷ ಪಟಾಕಿಗಳನ್ನು ಮತ್ತು 300 ಡ್ರೋನ್​ಗಳನ್ನು ಬಳಸಿ ಆಕಾಶವನ್ನು ವರ್ಣರಂಜಿತಗೊಳಿಸಲಾಗಿತ್ತು. ರಾಜಧಾನಿ ರಿಯಾದ್ ಸೇರಿದಂತೆ 20 ನಗರಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತೈಲೋತ್ಪನ್ನದ ಶ್ರೀಮಂತ ರಾಷ್ಟ್ರದ ಈ ಅದ್ಧೂರಿ ಆಚರಣೆಯಿಂದ ಎರಡು ಗಿನ್ನೆಸ್ ದಾಖಲೆಗಳು ಸೌದಿ ಪಾಲಾಗಿದೆ.ಸೌದಿ ಅರೇಬಿಯಾದ ರಾಷ್ಟ್ರ ಧ್ವಜವನ್ನು 300 ಡ್ರೋನ್​ಗಳಲ್ಲಿಂದ ಲೇಸರ್​ ಲೈಟ್​ ಚಿಮ್ಮಿಸುವ ಮೂಲಕ ಬಾನಂಗಳದಲ್ಲಿ ಸೃಷ್ಟಿಸಲಾಗಿತ್ತು. 400 ಮೀಟರ್ ಉದ್ದ ಮತ್ತು 350 ಮೀಟರ್ ಅಗಲದಲ್ಲಿ ಮೂಡಿಬಂದ ಈ ಹಸಿರು ಧ್ವಜದಲ್ಲಿ ಸೌದಿಯ ರಾಷ್ಟ್ರ ಚಿಹ್ನೆ ಕತ್ತಿ ಮತ್ತು ಶಹದಾ( ಅರೆಬಿಕ್ ಬರಹ) ಮೂಡಿಸಿರುವುದು ಎಲ್ಲರನ್ನು ಆಕರ್ಷಿಸಿತು.


ಈ ಧ್ವಜದ ಹಿನ್ನಲೆಯಲ್ಲಿ ಪಟಾಕಿಗಳ ಬಾಣ ಬಿರುಸುಗಳೊಂದಿಗೆ ಚಿತ್ತಾರ ಮೂಡಿಸಿ ರಾಷ್ಟ್ರೀಯ ದಿನದ ಮೆರುಗನ್ನು ಹೆಚ್ಚಿಸಲಾಗಿತ್ತು. ಇಂತಹದೊಂದು ಅದ್ಧೂರಿ ರಾಷ್ಟ್ರೀಯ ದಿನಾಚರಣೆ ಇದೇ ಮೊದಲಾಗಿದ್ದು, ಅದುವೇ ಈಗ ಗಿನ್ನೆಸ್ ದಾಖಲೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮುಂಬರುವ ಸೌದಿ ಹಬ್ಬಗಳನ್ನು ಅದ್ಧೂರಿಯಾಗಿ ಆಯೋಜಿಸಲು ಸೌದಿ ಅಧಿಕಾರಿಗಳು ಮುಂದಾಗಿದ್ದಾರೆ.

First published:September 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...