Memory Power: ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು SSLC ಮಕ್ಕಳಿಗೆ ವಿಶೇಷ ತರಬೇತಿ, ದಾವಣಗೆರೆಯಲ್ಲಿ ಟ್ರೈನಿಂಗ್ ಶುರು

Training to Improve Memory Skills: 1 ವಾರದ ಕಾಲ ವಸತಿ ಕಲ್ಪಿಸಲಾಗಿದ್ದು, ಅವರ ಏಕಾಗ್ರತೆ, ಗ್ರಹಿಸುವ ಶಕ್ತಿ, ಜ್ಞಾಪಕ ಶಕ್ತಿ ಹಾಗೂ ಸ್ಮರಣಶಕ್ತಿ ಹೆಚ್ಚಿಸಲು ಪಾಠ ಹೇಳಿಕೊಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಓದುವ ವೇಗವನ್ನು ಹೆಚ್ಚಿಸುವುದು ಸಹ ಆ ತರಬೇತಿ ಕೇಂದ್ರದ ಉದ್ದೇಶವಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Board Exams: ಕರ್ನಾಟಕದ ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯನ್ನು ಬಹು ಮುಖ್ಯವಾದ ಪರೀಕ್ಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿಯ ನಂತರ ಕಲೆ (Arts), ವಿಜ್ಞಾನ (Science) ಹಾಗೂ ಕಾಮರ್ಸ್‌ (Commerce) ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡುವುದರಿಂದ ಈ ಪರೀಕ್ಷೆ ಮುಖ್ಯ ಎನಿಸಿಕೊಂಡಿದೆ. ಇಂತಹ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸಾಕಷ್ಟು ಧೈರ್ಯ ಹಾಗೂ ಮನೋಸ್ಥೈರ್ಯದ ಅಗತ್ಯವಿರುತ್ತದೆ. ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಯಷ್ಟೇ ಮುಖ್ಯವಾದ ಪರೀಕ್ಷೆಗೆ ಹಾಜರಾಗುವ ಅಗಾಧ ಒತ್ತಡ (Pressure) ಎದುರಿಸುವಾಗ ಸರಿಯಾದ ಉತ್ತರ ನೆನಪಿಸಿಕೊಳ್ಳುವ ಸಾಮರ್ಥ್ಯವು (Memory Power) ಒಂದು ಕೌಶಲ್ಯವಾಗಿದ್ದು (Skill), ಅದರ ಮೌಲ್ಯವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳಲಾಗುವುದಿಲ್ಲ.

ಈ ಹಿನ್ನೆಲೆ ದಾವಣಗೆರೆಯ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಕೊಂಡಜ್ಜಿ ಗ್ರಾಮದ 13 ಎಕರೆ ವಿಸ್ತೀರ್ಣದ MSS ತರಬೇತಿ ಕೇಂದ್ರದಲ್ಲಿ 1 ವಾರದ ಕಾಲ ವಸತಿ ಕಲ್ಪಿಸಲಾಗಿದ್ದು, ಅವರ ಏಕಾಗ್ರತೆ, ಗ್ರಹಿಸುವ ಶಕ್ತಿ, ಜ್ಞಾಪಕ ಶಕ್ತಿ ಹಾಗೂ ಸ್ಮರಣಶಕ್ತಿ ಹೆಚ್ಚಿಸಲು ಪಾಠ ಹೇಳಿಕೊಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಓದುವ ವೇಗವನ್ನು ಹೆಚ್ಚಿಸುವುದು ಸಹ ಆ ತರಬೇತಿ ಕೇಂದ್ರದ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಾತನಾಡಿದ MSS ತರಬೇತಿ ಕೇಂದ್ರದ ನಿರ್ದೇಶಕ ಡಾ.ಜಯಂತ್, ‘’ಇಂತಹ ತರಬೇತಿ ನೀಡುವುದು ದಾವಣಗೆರೆಯ ಶ್ರೀ ಸಿದ್ದಗಂಗಾ ಶಾಲೆಯ ಸಂಸ್ಥಾಪಕ ಎಂ.ಎಸ್.ಶಿವಣ್ಣ ಅವರ ಕನಸಾಗಿತ್ತು’’ ಎಂದು ಹೇಳಿದರು.

ಇದೇ ತಿಂಗಳಲ್ಲಿ ಆರಂಭವಾದ ತರಬೇತಿ

ಅಲ್ಲದೆ, ಅವರು ಈ ಕೇಂದ್ರವನ್ನು ಸ್ಥಾಪಿಸಿದರು ಮತ್ತು ರಾಜ್ಯದಾದ್ಯಂತದ ವಿದ್ಯಾರ್ಥಿಗಳು ಈ ಕೌಶಲ್ಯಗಳನ್ನು ಕಲಿಯುವ ಮೂಲಕ ಪ್ರಯೋಜನ ಪಡೆಯಬೇಕೆಂದು ಬಯಸಿದ್ದರು. ಈ ಹಿನ್ನೆಲೆ ಈ ವರ್ಷದ ಮಕ್ಕಳ ದಿನಾಚರಣೆಯಾದ ನವೆಂಬರ್ 14 ರಂದು ಪ್ರಾರಂಭವಾದ ನಮ್ಮ ತರಬೇತಿ ಶಿಬಿರಕ್ಕೆ ಒಬ್ಬ ಹುಡುಗ ಮತ್ತು ಹುಡುಗಿಯನ್ನು ಕಳುಹಿಸುವಂತೆ ನಾವು ರಾಜ್ಯದಾದ್ಯಂತದ ಶಾಲೆಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇವೆ ಎಂದೂ ಡಾ. ಜಯಂತ್ ಹೇಳಿದರು.

ಇದನ್ನೂ ಓದಿ: Memory Boost Foods: ನಿಮ್ಮ ಮೆಮೋರಿ ಪವರ್ ಜಾಸ್ತಿ ಆಗ್ಬೇಕು ಅಂದ್ರೆ ಈ ಆಹಾರಗಳನ್ನು ಸೇವಿಸಿ

ಬ್ಯಾಚ್​ಗಳಲ್ಲಿ ವಿದ್ಯಾರ್ಥಿಗಳಿಗೆ ಟ್ರೈನಿಂಗ್

ನಾವು ಒಂದು ವಾರದವರೆಗೆ 80 ಬ್ಯಾಚ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇವೆ ಮತ್ತು ಇದು 4 ತಿಂಗಳವರೆಗೆ ಮುಂದುವರಿಯುತ್ತದೆ. ಈ ಕೌಶಲ್ಯಗಳು ವಿದ್ಯಾರ್ಥಿಗಳನ್ನು ಭಯವಿಲ್ಲದೆ ಪ್ರಮುಖ ಪರೀಕ್ಷೆ ಎದುರಿಸಲು ಸಜ್ಜುಗೊಳಿಸುತ್ತವೆ ಎಂದೂ ಅವರು ಹೇಳಿದರು.

ಅಲ್ಲದೆ, ಈ ಬಗ್ಗೆ ಮಾತನಾಡಿದ ದಾವಣಗೆರೆಯ ಸಿದ್ದಗಂಗಾ ಶಾಲೆಯ ಮುಖ್ಯಸ್ಥ ಜಸ್ಟಿನ್ ಡಿಸೋಜಾ, ‘10‍‍‍‍X ಪ್ಲಸ್ ತರಬೇತಿ ಶಿಬಿರ’ (10X Plus Training Camp) ಎಂದು ಕರೆಯಲಾಗುತ್ತಿದೆ. "ನಾವು ಕಳೆದ ವರ್ಷ ಈ ವಿಧಾನಗಳನ್ನು ಬಳಸಿಕೊಂಡು ನಮ್ಮ ಶಾಲೆಯ 230 ಮಕ್ಕಳಿಗೆ ತರಬೇತಿ ನೀಡಿದ್ದೇವೆ ಮತ್ತು ಅದು ತುಂಬಾ ಪರಿಣಾಮಕಾರಿ ಎಂದು ಕಂಡುಕೊಂಡಿದ್ದೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Memory Loss: ಸರಿಯಾಗಿ ನಿದ್ದೆ ಮಾಡದಿದ್ರೆ ನೆನಪಿನ ಶಕ್ತಿ ಕಳ್ಕೋತಿರಾ, ಹುಷಾರ್..!

ಮೆದುಳನ್ನು ಚುರುಕುಗೊಳಿಸುವ ತಂತ್ರಗಳು

ಹಾಗೆ, ಕಾರ್ಯಕ್ರಮ ಸಂಯೋಜಕ ಡಿ.ಎಸ್.ಹಿರೇಮಠ ಈ ಬಗ್ಗೆ ಮಾತನಾಡಿದ್ದು, ಮೆದುಳು ಕ್ರಿಯಾಶೀಲವಾಗಲು ನೆರವಾಗುವ ವಿವಿಧ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಿದ್ದಾರೆ ಎಂದೂ MSS ತರಬೇತಿ ಕೇಂದ್ರದ ಈ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
Published by:Soumya KN
First published: