Aati Celebration: ಆಟಿಯ ಕೆಸರಡೊಂಜಿ ದಿನ: ಮನರಂಜನೆ ಮಾತ್ರವಲ್ಲ, ಆರೋಗ್ಯಕ್ಕೂ ಬೆಸ್ಟ್​ ಈ ಆಚರಣೆ!

ಅರೇ ಇದೇನಪ್ಪ ಕೆಸರಡೊಂಜಿ ದಿನ ಅಂತ ಯೋಚನೆ ಮಾಡ್ತಾ ಇದ್ರೆ ಇದರ ಅರ್ಥ ಇಷ್ಟೆ.. ಕೆಸರಲ್ಲಿ ಒಂದು ದಿನ ಅಂತ. ಚೆನ್ನಾಗಿ ಹದ ಮಾಡಿದ ಗದ್ದೆಯಲ್ಲಿ ನನ್ನ ಸಹಪಾಠಿಗಳ ಜೊತೆಗೂಡಿ ಚಿಕ್ಕ ಮಕ್ಕಳಂತೆ ಕುಣಿದು ಗಮ್ಮತ್ತು ಮಾಡಿದ ಆ ದಿನ ಎಂದಿಗೂ ಮರೆಯಲಾರದ ದಿನ.

ಆಟಿಯ ಕೆಸರಡೊಂಜಿ ದಿನ

ಆಟಿಯ ಕೆಸರಡೊಂಜಿ ದಿನ

 • Share this:
  ಮಂಗಳೂರು(ಅ.07): ತುಂಬಾ ವರ್ಷಗಳ ಹಿಂದೆ ನನ್ನ ದೊಡ್ಡಪ್ಪನ ಜೊತೆ ಸೇರಿ ನಮ್ಮದೇ ಗದ್ದೆಯಲ್ಲಿ ಭತ್ತ ಬಿತ್ತಿದ ನೆನಪು ಇವತ್ತು ಮತ್ತೆ ಮರುಕಳಿಸುತ್ತಿದೆ. ಚಿಕ್ಕಂದಿನಿಂದ ಹಳ್ಳಿಯಲ್ಲಿಯೇ ಬೆಳೆದರೂ ಕೂಡ ಕಲಿಕೆಯ ದೃಷ್ಟಿಯಿಂದ ಸುಂದರವಾದ ನಮ್ಮೂರನ್ನು ತೊರೆಯಬೇಕಾಯಿತು. ಆದ್ರೆ ಅನೇಕ ವರ್ಷಗಳ ನಂತರ ಮತ್ತೆ ಇವತ್ತು ಅದೇ ಹಳೆ ನೆನಪು ಮರಳಿದೆ. ಆ ಚಿಕ್ಕವಯಸ್ಸಿನ ಮಣ್ಣಾಟ, ನೀರಾಟ ಎಲ್ಲವೂ ನನ್ನ ಪಾಲಿಗೆ ದೊರಕಿದೆ. ಸಾಮಾನ್ಯವಾಗಿ ಹಲವರಿಗೆ ತಿಳಿದಿರುವ ಹಾಗೆ ದಕ್ಷಿಣ ಕನ್ನಡದಲ್ಲಿ ಆಟಿ ಹಬ್ಬ ಆಚರಣೆ ಇದೆ. ಇದರ ಜೊತೆಗೆ ಕೆಸರಡೊಂಜಿ ದಿನ ಎಂಬ ವಿಶೇಷವಾದ ಆಚರಣೆಯೂ ಇದೆ.

  ಇದನ್ನೂ ಓದಿ:  Aati Kalenja: ಸಂಕಷ್ಟ ದೂರಮಾಡುತ್ತೆ ಆಟಿ ಕಳೆಂಜ! ರೋಗರುಜಿನ ದೂರ ಮಾಡುವ ನಂಬಿಕೆ

  ಅರೇ ಇದೇನಪ್ಪ ಕೆಸರಡೊಂಜಿ ದಿನ ಅಂತ ಯೋಚನೆ ಮಾಡ್ತಾ ಇದ್ರೆ ಇದರ ಅರ್ಥ ಇಷ್ಟೆ.. ಕೆಸರಲ್ಲಿ ಒಂದು ದಿನ ಅಂತ. ಚೆನ್ನಾಗಿ ಹದ ಮಾಡಿದ ಗದ್ದೆಯಲ್ಲಿ ನನ್ನ ಸಹಪಾಠಿಗಳ ಜೊತೆಗೂಡಿ ಚಿಕ್ಕ ಮಕ್ಕಳಂತೆ ಕುಣಿದು ಗಮ್ಮತ್ತು ಮಾಡಿದ ಆ ದಿನ ಎಂದಿಗೂ ಮರೆಯಲಾರದ ದಿನ. ಹೇಗೆ ಚಿಕ್ಕ ಮಗು ತನ್ನ ತಾಯಿಯ ಮಡಿಲಲ್ಲಿ ಯಾವ ಚಿಂತೆಯೂ ಇಲ್ಲದೇ ಆಟವಾಡುತ್ತದೋ ಅದೇ ರೀತಿಯಲ್ಲಿ ಭೂಮಿತಾಯಿಯ ಮಡಿಲಲ್ಲಿ ನಾವೆಲ್ಲರೂ ಪುಟ್ಟ ಕಂದಮ್ಮರಂತೆ ಲೋಕದ ಪ್ರಜ್ಞೆಯಿಲ್ಲದೇ ಮಣ್ಣಿನಲ್ಲಿ ಆಟವಾಡಿದ ಆ ದಿನವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ ಹೀಗೆ ಅದೆಷ್ಟೋ ಆಟಗಳಿಗೆ, ಮೋಜಿಗೆ ಆ ದಿನ ಸಾಕ್ಷಿಯಾಗಿತ್ತು.  ಒಬ್ಬರ ಮೇಲೊಬ್ಬರು ಮಣ್ಣೆರೆಚುವುದು, ಒಬ್ಬರ ಕಾಲನ್ನೊಬ್ಬರೆಳೆಯುವುದು, ಸದ್ದೇ ಇಲ್ಲದೇ ಹಿಂಬದಿಯಿಂದ ಬಂದು ಅಡಿಯಿಂದ ಮುಡಿಯ ವರೆಗೂ ಕೆಸರು ಮಯ ಮಾಡುವುದಯ ಹೀಗೆ ಪದವಿ ಹಾಗು ನಾವು ಸ್ನಾತಕೋತ್ತರ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎನ್ನುತಾ ಮಾಡಿದ ಗಮ್ಮತ್ತು ಎಷ್ಟು ಕೊಟ್ಟರೂ ಮತ್ತೊಮ್ಮೆ ಸಿಗದು. ಮೂಲತಃ ಮಲೆನಾಡಿನವಳಾದ ನನಗೆ ಗದ್ದೆಯ ಪರಿಚಯವಿದ್ದರೂ, ಈ ರೀತಿ ಗದ್ದೆಯಲ್ಲಿಯೇ ಮೈ ಕೈ ಕೆಸರು ಮಾಡಿಕೊಂಡು ಆಟವಾಡುವ ಬಗೆ ತಿಳಿದಿರಲಿಲ್ಲ. ಆದರೂ ಚಿಕ್ಕಂದಿನಲ್ಲಿ ಮಣ್ಣಾಟ ಆಡಿದ ಬಳಿಕ ಮತ್ತೆ ಆ ಕಡೆಗೆ ತಲೆ ಹಾಕಿರಲಿಲ್ಲ. ಇದೀಗ ಆಟಿಯ ಕೆಸರಡೊಂಜಿ ದಿನ ಮತ್ತೆ ಬಾಲ್ಯದ ನೆನಪನ್ನು ಮರಳಿ ನೀಡಿದೆ.

  ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ಈ ಆಟಿ ಹಬ್ಬ ಮತ್ತು ಕೆಸರಡೊಂಜಿ ದಿನಕ್ಕೆ ಅದರದ್ದೇ ಆದ ಮಹತ್ವವಿದೆ. ಮಣ್ಣಿನ ಕೆಲವು ಔಷದೀಯ ಗುಣಗಳು ಚರ್ಮರೋಗವನ್ನು ದೂರ ಮಾಡುತ್ತದೆ. ಇನ್ನು ಆಟಿಯಲ್ಲಿನ ವಿಶೇಷವಾದ ವಿಧ ವಿಧವಾದ ಖಾದ್ಯಗಳು ರೋಗ ರುಜಿನಗಳಿಂದ ದೂರವಿರಿಸುತ್ತದೆ.

  ಇದನ್ನೂ ಓದಿ:  Aati Amavasya: ತುಳುನಾಡಿನಲ್ಲಿ ಆಟಿ ಅಮವಾಸ್ಯೆಯಂದು ಕುಡಿಯುವ ಪಾಲೆದ ಕಷಾಯದ ಗುಟ್ಟೇನು?

  ಸಾವಿರ ಸಾವಿರ ಕೊಟ್ಟು ಮಡ್ ಥೆರಪಿ ಮಾಡಿಸಿಕೊಳ್ಳುವ ಈ ಕಾಲದಲ್ಲಿ ಒಂದು ರೂಪಾಯಿಯೂ ನೀಡದೇ ಮಣ್ಣಿನಲ್ಲಿಯೇ ಮಸ್ತಿ ಮಾಡಿದ ನಾವೇ ಪುಣ್ಯವಂತರು. ಈ ಎಲ್ಲಾ ಖುಷಿಯನ್ನು ವರ್ಣಿಸುವ ಶಕ್ತ ಪದಗಳು ದೊರೆಯುತ್ತಿಲ್ಲ ಆದರೆ ಮನಸ್ಸು ಅದರ ಸಂಪೂರ್ಣ ಖುಷಿಯನ್ನು ಅನುಭವಿಸುವಲ್ಲಿನ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಆರೋಗ್ಯದ ದೃಷ್ಟಿಯಿಂದಲೂ ಮನರಂಜನಾ ದೃಷ್ಟಿಯಿಂದಲೂ ಕೆಸರಡೊಂಜಿ ದಿನ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ.

  ಭಾರತಿ ಹೆಗಡೆ, ಶಿರಸಿ
  Published by:Precilla Olivia Dias
  First published: